ಜಿಲ್ಲೆಗೆ ಅನುಕೂಲವಾಗುವ ಯೋಜನೆ ಸಿಗುವುದೇ?
Team Udayavani, Feb 1, 2019, 7:04 AM IST
ಮೋದಿ ಸರ್ಕಾರದ ವಿತ್ತ ಸಚಿವ ಪಿಯೂಷ್ ಗೋಯಲ್ ಮಂಡಿಸುತ್ತಿರುವ ಮಧ್ಯಂತರ ಬಜೆಟ್ ಭಾರಿ ಕುತೂಹಲ ಮೂಡಿಸಿದೆ. ಸ್ಮಾರ್ಟ್ ಸಿಟಿಯಾಗಿ ಘೋಷಣೆಯಾಗಿರುವ ತುಮಕೂರಿನಲ್ಲಿ ಸ್ಮಾರ್ಟ್ ಸಿಟಿ ಕೆಲಸಗಳಿಗೆ ಚಾಲನೆ ದೊರೆತಿದೆ. ಕೇಂದ್ರದಲ್ಲಿ ಚುನಾವಣೆ ಹೊಸ್ತಿಲು ಇರುವಾಗ ಕಲ್ಪತರು ನಾಡಿಗೆ ಹಲವು ಯೋಜನೆ ಮುಂಜೂರಾಗುವ ನಿರೀಕ್ಷೆ ಇದೆ.
ಸಾಮಾನ್ಯ ಬಜೆಟ್‌ನಲ್ಲಿಯೇ ರೈಲ್ವೆ ಬಜೆಟ್ ಮಂಡನೆಯಾಗುತ್ತಿದೆ. ಕೈಗಾರಿಕಾ ಕ್ಷೇತ್ರದಲ್ಲಿ ಬೆಂಗಳೂರು ಬಿಟ್ಟರೆ ಎರಡನೇ ಸ್ಥಾನದಲ್ಲಿ ಮುನ್ನುಗ್ಗುತ್ತಿರುವ ತುಮಕೂರು ಜಿಲ್ಲೆಯಲ್ಲಿನ ರೈಲ್ವೆ ಯೋಜನೆಗಳ ವೇಗಕ್ಕೆ ಒತ್ತು ಕೊಡುತ್ತಾರಾ? ಮಂದಗತಿಯಲ್ಲಿರುವ ಹಲವು ಹಳೆಯ, ಹೊಸ ರೈಲ್ವೆ ಯೋಜನೆಗಳಿಗೆ ಈ ಬಜೆಟ್‌ನಲ್ಲಿ ಅನುಕೂಲವಾಗಲಿದೆಯೇ? ಕುತೂಹಲ ಮೂಡಿದೆ.
ತುಮಕೂರು: ಕೈಗಾರಿಕಾ ಕ್ಷೇತ್ರದಲ್ಲಿ ಪ್ರಗತಿಯ ದಾಪುಗಾಲು ಹಾಕುತ್ತಾ ದೇಶದ ಗಮನ ಸೆಳೆಯು ತ್ತಿರುವ ತುಮಕೂರು ಜಿಲ್ಲೆಗೆ ಕೇಂದ್ರ ಸರಕಾರ ಎಚ್.ಎ.ಎಲ್ ಮತ್ತು ಸೋಲಾರ್ ಪಾರ್ಕ್ ಹಾಗೂ ಸ್ಮಾಟ್ ಸಿಟಿ, ಕೈಗಾರಿಕಾ ಕಾರಿಡಾರ್ ಘೋಷಣೆ ಮಾಡುವ ಮೂಲಕ ದೇಶದ ಗಮನ ಸೆಳೆದಿರುವ ಕಲ್ಪತರು ನಾಡಿಗೆ ಈ ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವ ಪಿಯೂಷ್ ಗೋಯಲ್ ಹೊಸ ಯೋಜನೆ ಘೋಷಿಸುತ್ತಾರೆಯೇ?
ಹಳೆಯ ಯೋಜನೆಗಳ ಚಾಲನೆಗೆ ಒತ್ತು ನೀಡುತ್ತಾರೆಯೇ? ನಿರೀಕ್ಷೆಯ ಲ್ಲಿದ್ದಾರೆ ಜಿಲ್ಲೆಯ ಜನ. ಪ್ರತಿವರ್ಷ ಕೇಂದ್ರ ಬಜೆಟ್ ನಲ್ಲಿ ರೈಲ್ವೆ ಬಜೆಟ್ ಮಂಡನೆ ಯಾದ ಮೇಲೆ ಸಾಮಾನ್ಯ ಬಜೆಟ್ ಮಂಡನೆ ಯಾಗುತ್ತಿತ್ತು, ಆದರೆ ಇದು ಮೂರನೇ ಬಾರಿಗೆ ಸಾಮಾನ್ಯ ಬಜೆಟ್ ಜೊತೆಯಲ್ಲಿ ರೈಲ್ವೆ ಬಜೆಟ್ ಸೇರಿಸಿ ಮಂಡನೆ ಯಾಗುತ್ತಿದೆ. ಜಿಲ್ಲೆಗೆ ಕಳೆದ 2009-10 ರಲ್ಲಿ ಮಂಜೂರಾದ ಹಲವು ರೈಲ್ವೆ ಯೋಜನೆಗಳು ಇಂದಿಗೂ ಕಾರ್ಯಗತವಾಗಿಲ್ಲ, ಕಳೆದ ರೈಲ್ವೆ ಬಜೆಟ್‌ನಲ್ಲಿ ಮಂಡಿಸಿದ್ದ ಯೋಜನೆಗಳು ನಿಂತಲ್ಲೇ ನಿಂತಿವೆ.
ಹೀಗಿರುವಾಗ ಈಗ ಮಂಡಿಸಲಿರುವ ಬಜೆಟ್‌ನಲ್ಲಿ ಕಲ್ಪತರು ನಾಡಿಗೆ ರೈಲ್ವೆ ಯೋಜನೆಯಲ್ಲಿ ಏನು ಕೊಡುಗೆ ನೀಡ ಬಹುದು ಎಂಬ ಕುತೂಹಲವಿದೆ. ಈವರೆಗೂ ರೈಲ್ವೆ ಬಜೆಟ್‌ನಲ್ಲಿ ಮಂಡನೆಯಾಗಿ ರುವ ಹಲವು ಯೋಜನೆಗಳು ಇನ್ನೂ ಪೂರ್ಣ ಗೊಂಡಿಲ್ಲ. ಕಳೆದ 2009- 10ರಲ್ಲಿ ರೈಲ್ವೆ ಬಜೆಟ್‌ನಲ್ಲಿ ಘೋಷಣೆಯಾಗಿದ್ದ ತುಮ ಕೂರು-ದಾವಣಗೆರೆ ಮತ್ತು ತುಮಕೂರು- ರಾಯದುರ್ಗ ರೈಲು ಮಾರ್ಗಗಳು ಇನ್ನೂ ಮಂದಗತಿಯಲ್ಲಿಯೇ ಇದೆ.
ಕೇಂದ್ರ ಸರ್ಕಾರ ರೈಲ್ವೆ ಬಜೆಟ್‌ನಲ್ಲಿ ಹಲವಾರು ಯೋಜನೆಗಳನ್ನು ಘೋಷಣೆ ಮಾಡುತ್ತದೆ. ಆದರೆ ಆ ಯೋಜನೆಗಳು ಎಷ್ಟರ ಮಟ್ಟಿಗೆ ಕಾರ್ಯ ಗತವಾಗಿವೆ ಎನ್ನುವುದನ್ನು ತುಲನೆ ಮಾಡಿದರೆ ಯೋಜನೆಗಳು ಕಾರ್ಯಗತವಾಗದೇ ನಿಂತಲ್ಲೇ ನಿಂತಿರುತ್ತವೆ ಎನ್ನುವುದಕ್ಕೆ ಜಿಲ್ಲೆಗೆ ಬಜೆಟ್‌ನಲ್ಲಿ ಮಂಜೂರಾಗಿರುವ ಯೋಜನೆಗಳೇ ಸಾಕ್ಷಿಯಾಗಿವೆ. ತುಮಕೂರು-ದಾವಣಗೆರೆ ರೈಲು ಮಾರ್ಗ, ರಾಯದುರ್ಗ-ತುಮಕೂರು ಮಾರ್ಗದ ಯೋಜನೆಗಳು ಇನ್ನೂ ಪೂರ್ಣಗೊಂಡಿಲ್ಲ. ಈ ಯೋಜನೆ ಅನುಷ್ಠಾನಕ್ಕೆ ಹಣಕಾಸಿನ ಕೊರತೆಯಿಲ್ಲ. ಹಣದ ಕೊರತೆ ಇಲ್ಲದಿದ್ದರೂ ಕೆಲಸ ಮಂದಗತಿ ಯಲ್ಲಿ ನಡೆಯುತ್ತಿದೆ.
ರೈಲ್ವೆ ಯೋಜನೆಗೆ ಅಗತ್ಯವಾಗಿ ರಾಜ್ಯ ಸರ್ಕಾರ ಹೆಚ್ಚು ಆಸಕ್ತಿ ವಹಿಸಿ ಭೂಸ್ವಾಧೀನ ಮಾಡಿಕೊಡ ಬೇಕು, ಈಗ ಅಲ್ಲಲ್ಲಿ ಭೂ ಸ್ವಾಧೀನ ವಾಗಿದೆ. ಕಾಮಗಾರಿ ಈಗ ಚುರುಕಾಗುತ್ತಿದೆ. ತುರುವೇಕೆರೆ- ಚಿಕ್ಕನಾಯಕನಹಳ್ಳಿ-ಹುಳಿಯಾರು ಮಾರ್ಗವಾಗಿ ಮಂಜೂರಾಗಿದ್ದ ರೈಲ್ವೆ ಯೋಜನೆ ಇನ್ನೂ ಯಾವುದೇ ಹಂತದಲ್ಲೂ ಕಾರ್ಯಾರಂಭ ವಾಗಿಲ್ಲ, ಜಿಲ್ಲೆಯ ಮಟ್ಟಿಗೆ ಅಗತ್ಯವಾಗಿದ್ದ ಯೋಜನೆ ಗಳು ಮಂಜೂ ರಾಗಿವೆ. ಆದರೆ ಅವು ಕಾರ್ಯ ಗತವಾಗದೇ ಇರುವುದು ನಿರಾಶೆ ಮೂಡಿದ್ದು, ಈ ವರ್ಷದ ರೈಲ್ವೆ ಬಜೆಟ್‌ನಲ್ಲಿ ಯಾವ ಯೋಜನೆಗೆ ಯಾವ ರೀತಿ ಹಣ ಮೀಸಲಿಡುವರು, ಯಾವ ಯೋಜನೆ ಶೀಘ್ರ ಕಾರ್ಯಪ್ರವೃತ್ತಿಗೆ ಚಾಲನೆ ದೊರೆಯುವುದು ಕಾದು ನೋಡಬೇಕಾಗಿದೆ.
* ಚಿ.ನಿ. ಪುರುಷೋತ್ತಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.