ದಂಡ ವಿಧಿಸಿ ನಕಲಿ ರಸೀದಿ ಕೊಟ್ಟರು!
Team Udayavani, Nov 8, 2020, 5:48 PM IST
ಬರಗೂರು: ಗ್ರಾಮೀಣ ರೈತನೋರ್ವ ಮುಖಕ್ಕೆ ಟವಲ್ ಹಾಕಿಕೊಂಡು ಸಂಚರಿಸಿದರೂ ಮಾಸ್ಕ್ ಹಾಕಿಲ್ಲವೆಂಬ ನೆಪ ವೊಡ್ಡಿ ಬಲವಂತವಾಗಿ 100ರೂ. ದಂಡವಿಧಿಸಿ ನಕಲಿ ರಸೀದಿ ಕೊಟ್ಟು ಅಮಾನವೀಯ ರೀತಿಯಲ್ಲಿ ನಡೆದು ಕೊಂಡ ಶಿರಾ ನಗರ ಸಭೆ ಅಧಿಕಾರಿಗಳ ವಿರುದ್ಧ ಹಳ್ಳಿಗರು ಪ್ರಶ್ನೆಗಳ ಸುರಿಮಳೆ ಗರೆದಿದ್ದಾರೆ.
ಇತ್ತೀಚೆಗೆ ನಡೆದ ಶಿರಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿ ಎಸ್, ಬಿಜೆಪಿ ನಡೆಸಿದ ಸಮಾವೇಶ ಮತ್ತು ರೋಡ್ ಶೋ ರ್ಯಾಲಿ ವೇಳೆ ಸುಮಾರು 40ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಅವರಲ್ಲಿ ಸಾಕಷ್ಟು ಮಂದಿ ಮಾಸ್ಕ್ ಧರಿಸದೆ, ಅಂತರ ಕಾಯ್ದು ಕೊಳ್ಳದೆ ಕೋವಿಡ್ ನಿಯಮ ಗಾಳಿಗೆ ತೂರಿದ್ದರು. ಈ ವೇಳೆ ನಗರ ಸಭೆಯಾಗಲಿ, ಸರ್ಕಾರವಾಗಲಿ ಕ್ರಮ ಕೈಗೊಳ್ಳಲಿಲ್ಲ.ಆದರೂ, ಚುನಾವಣೆ ನಂತರದ ದಿನಗಳಲ್ಲಿ ಶಿರಾ ತಾಲೂ ಕಿನ ಅಗ್ರಹಾರದ ಗ್ರಾಮೀಣ ರೈತ ನೋರ್ವ ಬೈಕ್‌ನಲ್ಲಿ ಶಿರಾ ನಗರಕ್ಕೆ ತೆರಳಿದ ವೇಳೆ ಮುಖಕ್ಕೆ ಟವಲ್ ಸುತ್ತಿಕೊಂಡು ಪ್ರಯಾಣಿಸುತ್ತಿದ್ದರೂ ಶಿರಾ ನಗರ ಸಭೆ ಅಧಿಕಾರಿಗಳು ಅನಧಿಕೃತ ರಶೀದಿ ನೀಡಿ ದಂಡ ಹಾಕಿದ್ದಾರೆ. ನನ್ನ ಹತ್ತಿರ ಹಣ ಇರಲಿಲ್ಲ. ಪರಿಪರಿಯಾಗಿ ಬೇಡಿಕೊಂಡರೂಒಪ್ಪಲಿಲ್ಲ.ಪರಿಚಯ ಸ್ಥರಿಂದ ಹಣಪಡೆದು ದಂಡಕಟ್ಟಿದ್ದೇನೆ. ನನಗೆ ಆದ ಸ್ಥಿತಿ ಯಾರಿಗೂ ಬರಬಾರದು ಎಂದು ಅಗ್ರಹಾರ ರೈತ ರಾಜಣ್ಣ ತಿಳಿಸಿದ್ದಾರೆ.
ನಗರಸಭೆ ಅಧಿಕಾರಿಗಳು ದಂಡ ಹಾಕಿ ನೀಡಿರುವ ರಶೀದಿ ಜೆರಾಕ್ಸ್ ಪ್ರತಿಯಾಗಿದ್ದು ಯಾವುದೇ ಅಧಿಕೃತ ರಸೀದಿ ಅಲ್ಲ. ರಸೀದಿಯಲ್ಲಿ ಸೀಲು ಇಲ್ಲದೆ, ಕೇವಲ ಯಾರೋ ಅಧಿಕಾರಿಯ ಸಹಿ ಇದೆ.ರಸೀದಿ ಯಲ್ಲಿನ ಕ್ರಮ ಸಂಖ್ಯೆ 17 ಎಂದು ಕೈ ಬರ ವಣಿ ಗೆಯಲ್ಲಿ ಬರೆಯ ಲಾಗಿದೆ. ಇದು ವರೆಗೂ ದಂಡ ವಿಧಿಸಿರು ವುದು 17 ಜನಕ್ಕೆ ಮಾತ್ರವಾ ಎಂಬ ಪ್ರಶ್ನೆ ಉದ್ಭವಿಸಿದೆ.
ಅಧಿಕಾರಿಗಳ ವಿರುದ್ಧ ಕಿಡಿ:ಟವಲ್ ಸುತ್ತಿಕೊಂಡಿದ್ದರೂ ದಂಡ ವಿಧಿಸಿ ಕ್ರಮ ಸಂಖ್ಯೆ 17 ಎಂದು ನಮೂ ದಾಗಿರುವ ರಶೀದಿ ಕೊಟ್ಟು ವಂಚಿಸುತ್ತಿ ರುವ ನಗರ ಸಭೆ ಅಧಿಕಾರಿಗಳನ್ನು ಸಂಬಂಧಪಟ್ಟ ಜನಪ್ರತಿನಿದಿಗಳು, ಸರ್ಕಾರಗಳು ಪ್ರಶ್ನಿಸಬೇಕಿದೆ ಎಂದು ಅಗ್ರಹಾರ ರೈತ ರಾಜಣ್ಣ ಮನವಿ ಮಾಡಿದ್ದಾರೆ.
–ವೀರಭದ್ರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere: ಸಂಕ್ರಾಂತಿ ಹಬ್ಬಕ್ಕೆ ಹಸುಗಳಿಗೆ ಪೂಜೆ
ತುಮಕೂರು ಅಥವಾ ನೆಲಮಂಗಲ ಸಮೀಪವೇ ಮತ್ತೊಂದು ಏರ್‌ಪೋರ್ಟ್ ಆಗಲಿ: ವಿ.ಸೋಮಣ್ಣ
Finance Debt: ಫೈನಾನ್ಸ್ ಸಾಲ ವಸೂಲಿಗೆ ಹೆದರಿ ಊರನ್ನೇ ಬಿಟ್ಟರು!
Irrigation Development: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ: ವಿ.ಸೋಮಣ್ಣ
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
MUST WATCH
ಹೊಸ ಸೇರ್ಪಡೆ
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
Ban: ಏರ್ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್ ಬಳಕೆ ನಿಷೇಧ: ಪಾಲಿಕೆ ಆದೇಶ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
EV: ಇವಿ ಬಳಕೆಗೆ ಉತ್ತೇಜನ: ದೇಶದಲ್ಲೇ ನಂಬರ್ 1 ಸ್ಥಾನ ಪಡೆದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.