ಜಿದ್ದಿಗೆ ಬಿದ್ದಿರುವ ಲೋಕಲ್ ಪಾಲಿಟಿಕ್ಸ್
Team Udayavani, Dec 11, 2020, 5:00 PM IST
ತುಮಕೂರು: ಹಳ್ಳಿ ರಾಜಕೀಯಕ್ಕೆ ಅಖಾಡ ಸಿದ್ಧವಾಗಿದ್ದು ತುಮಕೂರು ತಾಲೂಕಿನಲ್ಲಿ ಡಿ.22 ರಂದು ನಡೆಯಲಿರುವ ಚುನಾವಣೆಗೆ ತಾಲೂಕು ಆಡಳಿತ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಗ್ರಾಪಂ ಚುನಾವಣೆಗೆ ಪಕ್ಷ ರಾಜಕಾರಣ ಇಲ್ಲದಿದ್ದರೂ ಪಕ್ಷ ಸಂಘಟನೆಗೆ ಮತ್ತು ಮುಂದಿನ ಚುನಾವಣೆಗೆ ಈ ಸ್ಥಳೀಯ ಚುನಾವಣೆ ದಿಕ್ಸೂಚಿ ಆಗಲಿರುವ ಹಿನ್ನೆಲೆಯಲ್ಲಿ ಹಳ್ಳಿ ರಾಜಕೀಯ ಮೂರು ಪಕ್ಷಗಳಿಗೂ ಪ್ರತಿಷ್ಠೆಯಾಗಿದೆ. ತುಮಕೂರು ತಾಲೂಕಿನಲ್ಲಿ 41 ಗ್ರಾಪಂಗಳಿದ್ದು, 2,36,139 ಮತದಾರರು746 ಸದಸ್ಯರನ್ನು ಆಯ್ಕೆಮಾಡಬೇಕಾಗಿದೆ. ಗ್ರಾಪಂ ಚುನಾವಣೆಗೆ ನಾಮಪತ್ರ ಸಲ್ಲಿಕೆಕಾರ್ಯ ಆರಂಭವಾಗಿದೆ.
ರಾಜಕಿಯ ಪಕ್ಷಗಳಿಗೆ ಪ್ರತಿಷ್ಠೆ: ಗ್ರಾಪಂ ಚುನಾವಣೆಯಲ್ಲಿ ಪಕ್ಷ ರಾಜಕಾರಣ ಇರುವುದಿಲ್ಲ. ಪಕ್ಷಗಳ ಸಿಂಬಲ್ ಇರುವುದಿಲ್ಲ, ಆದರೆ ತಮ್ಮ ತಮ್ಮಪಕ್ಷಗಳ ಬೆಂಬಲಿಗರನ್ನು ಚುನಾವಣೆಗೆ ನಿಲ್ಲಿಸಿ ರಾಜಕೀಯ ಪಕ್ಷಗಳುಗ್ರಾಪಂ ಮಟ್ಟದಲ್ಲಿ ತಮ್ಮ ನೆಲೆಯನ್ನುಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದೆ. ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಮತ್ತುಬಿಜೆಪಿ ಜಿಲ್ಲಾ ಅಧ್ಯಕ್ಷ ಮಾಜಿ ಶಾಸಕ ಬಿ.ಸುರೇಶ್‌ಗೌಡರ ನಡುವಿನ ಚುನಾವಣೆ ರೀತಿಯಲ್ಲಿ ಈಕ್ಷೇತ್ರದಲ್ಲಿ ಚುನಾವಣಾ ರಣಕಣ ರಂಗೇರಿದೆ. ಕಾಂಗ್ರೆಸ್ ಈ ಇಬ್ಬರು ನಾಯಕರ ಜಿದ್ದಾಜಿದ್ದಿನನಡುವೆ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ತೀವ್ರ ಯತ್ನದಲ್ಲಿ ಇಲ್ಲಿಯ ಕಾಂಗ್ರೆಸ್ ಮುಖಂಡ ರಾಯಸಂದ್ರ ರವಿಕುಮಾರ್ ಮುಂದಾಗಿದ್ದಾರೆ.
ತನ್ನ ನೆಲೆ ಗಟ್ಟಿಗೊಳಿಸಲು ಜೆಡಿಎಸ್ ಯತ್ನ: ಕ್ಷೇತ್ರದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಶಾಸಕ ಡಿ.ಸಿ.ಗೌರಿಶಂಕರ್ ಪಕ್ಷದ ತಾಲೂಕು ಅಧ್ಯಕ್ಷ ಹಾಲನೂರು ಅನಂತ ಕುಮಾರ್ ಸೇರಿದಂತೆ ಜೆಡಿಎಸ್ ಪಕ್ಷದ ಮುಖಂಡರು ಗ್ರಾಪಂ ಮಟ್ಟದಲ್ಲಿ ಸಭೆಗಳನ್ನು ನೆಡೆಸಿ ವಿದ್ಯಾವಂತರನ್ನು ಜತೆಗೆ ಗೆಲ್ಲುವ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಈ ಚುನಾವಣೆಯನ್ನು ಶಾಸಕ ಡಿ.ಸಿ.ಗೌರಿಶಂಕರ್ ತೀವ್ರ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಸೋಲಿಸಲುಕಾರ್ಯತಂತ್ರ ಎಣೆದಿದ್ದಾರೆ.
ಸ್ಥಾನ ಉಳಿಸಿ ಕೊಳ್ಳಲು ಬಿಜೆಪಿ ಕಸರತ್ತು: ಗ್ರಾಮಾಂತರ ಕ್ಷೇತ್ರದಲ್ಲಿ ಹಳ್ಳಿ ರಾಜಕೀಯದಲ್ಲಿ ಪ್ರಾಬಲ್ಯ ಸಾಧಿಸಿಕೊಂಡು ಬರುತ್ತಿದ್ದ ಬಿಜೆಪಿಗೆ ಈಚುನಾವಣೆಪ್ರತಿಷ್ಠೆಯಾಗಿದೆ.ಹಾಲಿಶಾಸಕರಎದುರುಸೆಣಸಿ ತಮ್ಮ ಬೆಂಬಲಿಗ ಅಭ್ಯರ್ಥಿಗಳನ್ನು ಗ್ರಾಪಂ ನಲ್ಲಿ ಅಧಿಕ ಸಂಖ್ಯೆಯಲ್ಲಿ ಗೆಲ್ಲಿಸಬೇಕು ತಮ್ಮ ಸ್ಥಾನ ವನ್ನು ತಾವು ಉಳಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್ ಗೌಡ ತೀವ್ರ ಪ್ರಯತ್ನ ನಡೆಸುತ್ತಿದ್ದು, ಜಿಪಂ ಉಪಾಧ್ಯಕ್ಷೆ ಶಾರದಾನರಸಿಂಹಮೂರ್ತಿ, ಜಿ.ಪಂ.ಸದಸ್ಯ ವೈ.ಎಚ್. ಹುಚ್ಚಯ್ಯ ಸೇರಿದಂತೆ ಹಲವು ಮುಖಂಡರು ಪಕ್ಷಸಂಘಟನೆಗೆ ಒತ್ತು ನೀಡುತ್ತಿದ್ದಾರೆ.
ಜೆಡಿಎಸ್-ಬಿಜೆಪಿ ಮಣಿಸಲು ಕಾಂಗ್ರೆಸ್ ಸಿದ್ಧತೆ: ಗ್ರಾಮಾಂತರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಅಬ್ಬರದ ನಡುವೆಯೇ ತನ್ನ ನೆಲೆಯನ್ನುಕಂಡುಕೊಳ್ಳಲು ಯತ್ನ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ಈ ಹಳ್ಳಿ ಪಾಲಿಟಿಕ್ಸ್‌ನಲ್ಲಿ ಸಕ್ರಿಯವಾಗಿದೆ ಕಾಂಗ್ರೆಸ್ ಮುಖಂಡ ರಾಯಸಂದ್ರ ರವಿಕುಮಾರ್ ನೇತೃತ್ವದಲ್ಲಿ ಗ್ರಾಮಾಂತರ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಈ ಸಂಬಂಧ ನಾಗವಲ್ಲಿಯಲ್ಲಿ ಕಾಂಗ್ರೆಸ್ ಮುಖಂಡರ ಸಭೆ ನಡೆಸಿ ಪಕ್ಷದ ಪ್ರಮುಖ ನಾಯಕರನ್ನು ಕರೆಸಿ ಪಕ್ಷ ಸಂಘಟನೆಗೆ ಒತ್ತು ನೀಡಿದ್ದಾರೆ.
41 ಗ್ರಾಪಂಗಳಲ್ಲಿ ಚುನಾವಣೆ :
ತಾಲೂಕಿನ41 ಗ್ರಾಪಂಗಳ ಸದಸ್ಯ ಸ್ಥಾನಕ್ಕೆ ಡಿ.22ರಂದು ಚುನಾವಣಾ ಮತದಾನ ನಡೆಯಲಿದ್ದು,50 ಆಕ್ಸಿಲರಿ ಮತಗಟ್ಟೆ ಸೇರಿ ಒಟ್ಟು365 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ತಾಲೂಕು ಚುನಾವಣಾಧಿಕಾರಿ ಯೂ ಆಗಿರುವ ತಹಶೀಲ್ದಾರ್ ಮೋಹನ್ ತಿಳಿಸಿದರು. 746 ಸದಸ್ಯ ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಮಸ್ಟರಿಂಗ್, ಡಿಮಸ್ಟರಿಂಗ್ ಹಾಗೂ ಮತ ಎಣಿಕೆಯನ್ನು ನಗರದ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ನಡೆಸಲಾಗುವುದು. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಂದ ನಾಮಪತ್ರ ಸ್ವೀಕರಿಸಿದ ಬಗ್ಗೆ ಪ್ರತಿದಿನ ಆಯಾ ಗ್ರಾಪಂ ಸೂಚನಾ ಫಲಕದಲ್ಲಿ ಮಧ್ಯಾಹ್ನದ ನಂತರ ಪ್ರಕಟಿಸಲಾಗುವುದು. ಮಾಹಿತಿಗೆ 0816-2278496 ಸಂಪರ್ಕಿಸಲು ತಿಳಿಸಿದ್ದಾರೆ.
ಗ್ರಾಪಂ ಚುನಾವಣೆಗೆ ಡಿ.ಸಿ.ಗೌರಿಶಂಕರ್ ಮಾರ್ಗದರ್ಶನದಲ್ಲಿ ಎಲ್ಲಾ ರೀತಿಯಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುತ್ತಾರೆ.ಕಾರಣ ಕ್ಷೇತ್ರದಲ್ಲಿ ಗೌರಿಶಂಕರ್ ಮಾಡಿರುವ ಅಭಿವೃದ್ಧಿಕೆಲಸಗಳು ನಮಗೆ ವರದಾನವಾಗಲಿದೆ. – ಹಾಲನೂರು ಅನಂತಕುಮಾರ್, ಜೆಡಿಎಸ್ ತಾಲೂಕು ಅಧ್ಯಕ್ಷ
ಗ್ರಾಮಾಂತರ ಕ್ಷೇತ್ರದಲ್ಲಿ ಈ ಬಾರಿಯ ಗ್ರಾಪಂ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನುಕಾಂಗ್ರೆಸ್ ಪಕ್ಷ ಪಡೆಯಬೇಕು ಎಂದು ಎಲ್ಲಾ ರೀತಿಯ ಸಿದ್ಧತೆ ಮಾಡಿದ್ದೇವೆ. ಧ್ವನಿ ಇಲ್ಲದ ಅತೀ ಹಿಂದುಳಿದ 100 ಜನರಿಗೆ ರಾಜಕೀಯ ಅಸ್ಥಿತ್ವ ಕೊಡುವ ಪ್ರಯತ್ನ ಮಾಡುತ್ತಿದ್ದೆವೆಯುವಕರಿಗೆ, ವಿದ್ಯಾವಂತರಿಗೆ ಪಕ್ಷ ನಿಷ್ಠರನ್ನು ಬೆಂಬಲಿಸಿ ಗೆಲ್ಲಿಸುವ ಉದ್ದೇಶ ಹೊಂದಿದ್ದೇವೆ ಈ ಸಂಬಂಧ ನಾಗವಲ್ಲಿಯಲ್ಲಿ ಕಾಂಗ್ರೆಸ್ ಮುಖಂಡರ ಸಭೆ ನಡೆಸಿದ್ದೇವೆ. – ರಾಯಸಂದ್ರ ರವಿಕುಮಾರ್, ಗ್ರಾಮಾಂತರಕ್ರಾಂಗ್ರೆಸ್ ಮುಖಂಡ
– ಚಿ.ನಿ.ಪುರುಷೋತ್ತಮ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere: ವಿದ್ಯೆಯ ಸಾಧನೆಗೆ ಸಾಧಿಸುವ ಗುರಿ ಒಂದೇ ಮುಖ್ಯ
ಜಟ್ಟಿ ಅಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಗಂಗಾದೇವಿ ಅಧ್ಯಕ್ಷೆ
Koratagere: ಮದ್ಯಪಾನದಿಂದ ಕುಟುಂಬದಲ್ಲಿ ದಿನ ಅಶಾಂತಿ ಉಂಟಾಗಿ ನೆಮ್ಮದಿ ಇಲ್ಲದಂತಾಗಿದೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ
Shirva ಹಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.