ಗೋಡೆ ಮೇಲೆ ಜನಾಕರ್ಷಿಸುವ ಚಿತ್ತಾರ

ಶತಮಾನ ಕಂಡ ಶಾಲೆ ಗೋಡೆಯ ಮೇಲೆಕಲಾವಿದ® ‌ಕುಂಚದಿಂದ ಅರಳಿರುವ ಚಿತ್ರಗಳು

Team Udayavani, Dec 16, 2020, 5:28 PM IST

ಗೋಡೆ ಮೇಲೆ ಜನಾಕರ್ಷಿಸುವ ಚಿತ್ತಾರ

ತುಮಕೂರು: ಚಿತ್ರಕಲೆ ಅನ್ನೋದು ಒಂದೇ ನೋಟಕ್ಕೆ ಎಂಥವರನ್ನೂ ಸೆಳೆದು ಬಿಡುತ್ತೆ, ಅದಲ್ಲೂ ಕಲಾವಿದ ಕುಂಚದಲ್ಲಿ ಅರಳುವ ಚಿತ್ರಗಳು ಸುಂದರವಾಗಿದ್ದರೆ ನೋಡುಗರನ್ನು ತನ್ನತ್ತ ಸೆಳೆಯುತ್ತದೆ. ಶತಮಾನಕಂಡಿರುವ ಶಾಲೆಯ ಗೋಡೆಯ ಮೇಲೆ ಕಲಾವಿದನ ಕುಂಚದಿಂದ ಅರಳಿರುವ ಚಿತ್ತಾರಗಳು ಜನರನ್ನು ಆಕರ್ಷಿಸುತ್ತಿವೆ.

ನಗರದ ಎಂಪ್ರಸ್‌ ಶಾಲೆಯ ಗೋಡೆ ಮೇಲೆಹಾಗೂ ಶಾಲಾ ಕೊಠಡಿ ಒಳಗೆ ಅರಳಿರುವ ಚಿತ್ರಗಳನ್ನು ನೋಡಿದ್ರೆ ಸಾಕು ಎಂಥವರು ತಲೆ ದೂಗದೇ ಇರಲಾರರು. ನಗರದ ಎಂಪ್ರಸ್‌ ಶಾಲೆಯಲ್ಲಿಶಾಲಾ ಕೊಠಡಿ ಹಾಗೂ ಗೋಡೆಯ ಮೇಲೆ ವಿವಿಧ ರೀತಿಯ ಬಣ್ಣದಚಿತ್ತಾರ ನೋಡುಗರ ಕಣ್ಣಿಗೆ ಹಬ್ಬದಂತೆ ಭಾಸವಾಗುತ್ತವೆ. ಇಲ್ಲಿನ ಯುಕೆಜಿ, ಎಲ್‌ಕೆಜಿ ಮಕ್ಕಳಿಗಾಗಿ ಬಣ್ಣದ ಲೋಕವನ್ನೇ ಸೃಷ್ಟಿಸಲಾಗಿದೆ. ಮಕ್ಕಳಿಗೆ ಇಷ್ಟವಾಗುವ ರೀತಿಯ ಚಿತ್ರಗಳನ್ನೇ ಬರೆಯಲಾಗಿದ್ದು, ಇವು ಮಕ್ಕಳ ಕಲಿಕಾ ಆಸಕ್ತಿ ಹೆಚ್ಚಿಸಲಿವೆ.

ಮಕ್ಕಳ ಕಣ್ಣಿಗೆ ಹಬ್ಬ: ಚಿತ್ರಕಲಾ ಶಿಕ್ಷಕರ ತಂಡಇಲ್ಲಿನ ಶಾಲೆ ಗೋಡೆಗಳ ಮೇಲೆ ವಿಶೇಷ ಚಿತ್ರಗಳನ್ನು ಬರೆದಿದ್ದಾರೆ, ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲಿವೆ. ಗಣಿತದ ಆಯಾಮ ರಚನೆ, ಹಣ್ಣು, ತರಕಾರಿ ರಾರಾಜಿಸುತ್ತಿವೆ,ಪ್ರಾಣಿಪಕ್ಷಿಗಳು ಹಾರುತ್ತಿವೆಯೋನೋ ಎಂಬಂತೆ ಭಾಸವಾಗುವ ಚಿತ್ರಗಳು, ಓಡುತ್ತಿರುವ ರೈಲು,ಸೂರ್ಯನ ಉದಯ, ಪ್ರಕೃತಿ ಸೌಂದರ್ಯ, ಶಾಲಾ ಮೈದಾನ, ಹಾರುವ ಚಿಟ್ಟೆಗಳು,ಮಿಕ್ಕಿ ಮೌಸ್‌, ಛೋಟಾ ಭೀಮ್‌ ಸೇರಿದಂತೆ ವಿವಿಧಚಿತ್ರಗಳು ಶಾಲಾಗೋಡೆಗಳ ಮೇಲೆ ಅರಳಿ ನಿಂತಿವೆ.

ಮಕ್ಕಳ ಕಲಿಕೆಗೆ ಅನುಕೂಲವಾಗಲು ಸ್ಲೇಟ್‌ಗಳ ಮಾದರಿ ಚಿತ್ರ ಬರೆಯಲಾಗಿದ್ದು, ಅಲ್ಲಿಯೇ ಎಲ್‌ಕೆಜಿ,ಯುಕೆಜಿ ಮಕ್ಕಳಿಗೆ ಬರೆಯುವ ವ್ಯವಸ್ಥೆ ಕಲ್ಪಿಸಲಾಗಿದೆ. ಇಷ್ಟೆಲ್ಲಾ ಚಿತ್ರಗಳು ಚಿತ್ರಕಲಾ ಶಿಕ್ಷಕರಾದ ರವೀಶ್‌ಕೆ.ಎಂ., ಜಿಎಚ್‌ಎಸ್‌ ನೇರಳೇಕೆರೆ, ರಂಗಸ್ವಾಮ್ಯಯ್ಯ ಜಿಎಚ್‌ಎಸ್‌ ಚೇಳೂರು, ಇಂದ್ರಕುಮಾರ್‌ ಜಿಎಚ್‌ ಎಸ್‌ ಹೆಬ್ಬೂರು, ಆನಂದ್‌ ಜಿಎಚ್‌ಎಸ್‌ ಕೊಂಡ್ಲಿ,ವೇಣುಗೋಪಾಲ್‌ ಜಿಎಚ್‌ಎಸ್‌ ಶೇಷೇನಹಳ್ಳಿ ಹಾಗೂ ಹೀನಾ ಕೌಸರ್‌ ಜೆಜಿಜಿಸಿ ತುಮಕೂರು ಇವರ ಕೈಚಳಕದಲ್ಲಿ ಅರಳುತ್ತಿದ್ದು, ಮಕ್ಕಳ ‌ ಪಾಲಿಗೆ ಬಹು ಉಪಯುಕ್ತವಾಗಲಿದೆ.

ಮಕ್ಕಳಿಗೆ ಅನುಕೂಲ: ಕೋವಿಡ್ ಕಾರಣದಿಂದ ಎಲ್‌ ಕೆಜಿ, ಯುಕೆಜಿ ಶಾಲೆ ಆರಂಭವಾಗಿಲ್ಲ, ಇದರ ನಡುವೆ ಚಿತ್ರಕಲಾ ಶಿಕ್ಷಕರು ಮುಂದೆ ಶಾಲೆ ಆರಂಭವಾಗುವವ ವೇಳೆಗೆ ಉತ್ತಮ ಚಿತ್ರ ಬರೆದರೆ ಮಕ್ಕಳಿಗೆ ಅನುಕೂಲ ಆಗಲಿದೆ ಎಂದು ನಿರ್ಧರಿಸಿ ಚಿತ್ತಾರ ಮೂಡಿಸಿದ್ದಾರೆ. ಚಿತ್ರಕಲಾ ಶಿಕ್ಷಕರ ಕಾರ್ಯಕ್ಕೆ ಎಂಪ್ರಸ್‌ ಕಾಲೇಜಿನ ಪ್ರಾಶುಪಾಲ ಕೆ.ಎಸ್‌.ಸಿದ್ದಲಿಂಗಪ್ಪ, ಉಪ ಪ್ರಾಶುಪಾಲ ಎಸ್‌.ಕೃಷಪ್ಪ ಹಾಗೂ ಶಿಕ್ಷಣಇಲಾಖೆ ಸಹಕಾರ ನೀಡಿದೆ.

ಶಿಕ್ಷಕ ವೃಂದವೇ ಮೆಚ್ಚುಗೆ: ಒಟ್ಟಾರೆ ತುಮಕೂರು ಜಿಲ್ಲಾ ಚಿತ್ರ ಕಲಾ ಸಂಘಹಾಗೂ ಚಿತ್ರಕಲಾ ಶಿಕ್ಷಕರ ತಂಡಇಡೀ ಶಾಲೆಯಲ್ಲಿ 50ಕ್ಕೂ ಹೆಚ್ಚು ಮಕ್ಕಳಿಗೆ ಮುದ್ದುಎನಿಸುವ ಚಿತ್ರಗಳನ್ನು ಬರೆದಿದ್ದಾರೆ, ಬಣ್ಣದಲ್ಲಿಕಂಗೊಳಿಸುತ್ತಿರುವ ಶಾಲಾ ಆವರಣವನ್ನು ನೋಡಿದರೆ ಆನಂದ, ಚಿತ್ರಕಲಾ ಶಿಕ್ಷಕರ ಕಾರ್ಯಕ್ಕೆ ಇಡೀ ಶಿಕ್ಷಕ ವೃಂದವೇ ಮೆಚ್ಚುಗೆ ವ್ಯಕ್ತಪಡಿಸಿದೆ.

ಶಾಲಾ ಕೊಠಡಿಹಾಗೂ ಗೋಡೆ ಮೇಲೆ ಚಿತ್ರಕಲೆಬರೆದಿರುವುದರಿಂದ ಪುಟಾಣಿ ಮಕ್ಕಳು ಕಲಿಕೆಯಲ್ಲಿ ಆಸಕ್ತಿ ಹೊಂದಲಿದ್ದಾರೆ. ಅಲ್ಲದೆ
ಚಿತ್ರಗಳು ಮಕ್ಕಳಿಗೆಇಷ್ಟವಾಗಲಿವೆ, ಆ ಚಿತ್ರಗಳು ಯಾವು,ಅದರ ಹೆಸರೇನು ಎಂಬುದನ್ನು ಮಕ್ಕಳಿಗೆ ಟೀಚರ್‌ಗಳು ತಿಳಿಸಿಕೊಡಲು ಅನುಕೂಲವಾಗಲಿದೆ. ಸರ್ಕಾರಿ ಶಾಲೆಯಲ್ಲಿಚಿತ್ರ ಬರೆಯಲು ತುಂಬಾ ಖುಷಿಯಾಯಿತು,ಯಾವ ಖಾಸಗಿ ಶಾಲೆಗೂ ಕಮ್ಮಿಇಲ್ಲ ಎಂಬಂತೆ ಎಂಪ್ರಸ್‌ನಲ್ಲಿನ ಎಲ್‌ಕೆಜಿ,ಯುಕೆಜಿ ಶಾಲೆ ಬಣ್ಣದಿಂದ ಕಂಗೊಳಿಸುತ್ತಿದೆ, ಇದು ನಮಗೆ ಹೆಮ್ಮೆಯ ಸಂಗತಿ. -ರವೀಶ್‌ಕೆ.ಎಂ., ಚಿತ್ರಕಲಾ ಶಿಕ್ಷಕ, ಜಿಎಚ್‌ಎಸ್‌ ನೇರಳೇಕೆರೆ

ಟಾಪ್ ನ್ಯೂಸ್

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Perth test: Jasprit Bumrah’s bowling style in doubt: What is the controversy?

Perth test: ಜಸ್ಪ್ರೀತ್‌ ಬುಮ್ರಾ ಬೌಲಿಂಗ್‌ ಶೈಲಿ ಅನುಮಾನ: ಏನಿದು ವಿವಾದ?

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

6-1

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು

Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

1

Arrested: ಉದ್ಯಮಿ ಅಪಹರಣ: ಪ್ರೇಯಸಿ ಸೇರಿ 7 ಮಂದಿ ಸೆರೆ

8-madikeri

Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.