ವಚನ ಭ್ರಷ್ಟತೆ ಮತ್ತು ಒಳಸಂಚು ಕಲಿಸಿದ್ದೇ ಕುಮಾರಸ್ವಾಮಿ: ಕೆ.ಎನ್.ರಾಜಣ್ಣ
Team Udayavani, Dec 20, 2020, 1:00 PM IST
ತುಮಕೂರು: ಎಚ್.ಡಿ. ಕುಮಾರಸ್ವಾಮಿಯವರು ಒಳಸಂಚು ಶಾಲೆಯ ಪ್ರಿನ್ಸಿಪಾಲ್, ನಾವೆಲ್ಲ ಸ್ಟೂಡೆಂಟ್ಸ್! 20-20 ಸರಕಾರದಲ್ಲಿ 20 ತಿಂಗಳು ಅಧಿಕಾರ ಅನುಭವಿಸಿ, ಯಡಿಯೂರಪ್ಪಗೆ ಅಧಿಕಾರ ಬಿಟ್ಟು ಕೊಡಬೇಕಿತ್ತು. ಆದರೆ ಕೊಡಲಿಲ್ಲ. ವಚನ ಭ್ರಷ್ಟತೆ ಪ್ರಾರಂಭದ ಇತಿಹಾಸ ಇದು. ಸಮಾಜಕ್ಕೆ ವಚನ ಭ್ರಷ್ಟತೆ ಮತ್ತು ಒಳ ಸಂಚನ್ನು ಕಲಿಸಿದ್ದೇ ಅವರು ಎಂದು ಕೆ.ಎನ್. ರಾಜಣ್ಣ ಕಿಡಿಕಾರಿದರು.
ನಗರದಲ್ಲಿ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಶಾಸಕ ಕೆ.ಎನ್. ರಾಜಣ್ಣ ಮತ್ತು ಜೆಡಿಎಸ್ ಶಾಸಕ ಎಸ್.ಆರ್. ಶ್ರೀನಿವಾಸ್ ಜಂಟಿ ಸುದ್ದಿಗೋಷ್ಠಿ ನಡೆಸಿದರು.
ಕುಮಾರ ಸ್ವಾಮಿ ಅವರು ಸಿದ್ದರಾಮಯ್ಯನವರ ಬಗ್ಗೆ ನೀಡಿರುವ ಹೇಳಿಕೆ ಖಂಡನೀಯ. ಸಿದ್ಧರಾಮಯ್ಯ ಬಗ್ಗೆ ಅವಹೇಳನಕಾರಿ ಹೇಳಿಕೆ ಸರಿಯಲ್ಲ. ಮುಂದಿನ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ಬರುವವರು ಇದ್ದಾರೆ, ಕಾಂಗ್ರೆಸಿಂದ ಹೋಗುವವರೂ ಇದ್ದಾರೆ ಎಂದು ಕೆ.ಎನ್. ರಾಜಣ್ಣ ಹೇಳಿದರು.
ಇದನ್ನೂ ಓದಿ:ಈ ಬಿಕ್ಕಟ್ಟಿಗೆ ಸಿಎಂ ಯಡಿಯೂರಪ್ಪ, ಸಚಿವ ಸುರೇಶ್ ಕುಮಾರ್ ಹೊಣೆ: ಸಿದ್ದರಾಮಯ್ಯ
2013 ರಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ಪರಮೇಶ್ವರ್ ಸೋತಿದ್ದರು. ಆಗ ಜನ ಬದಲಾವಣೆ ಬಯಸಿ ಮತ್ತೊಬ್ಬರಿಗೆ ಅವಕಾಶ ಕೊಟ್ಟಿದ್ದರು ಅಷ್ಟೇ. ಈ ಬಾರಿ ಪರಮೇಶ್ವರ್ ಗೆದ್ದಿದ್ದಾರೆ, ಕುಮಾರಸ್ವಾಮಿ ಬಂದು ಗೆಲ್ಲಿಸಿದ್ದಾರಾ ಎಂದು ಪ್ರಶ್ನಿಸಿದರು.
ದೇವೇಗೌಡರ ಋಣ ತೀರಿಸುವ ಆಸೆ ಇತ್ತು. ಆದರೆ ಚುನಾವಣೆಗೆ ನಿಂತಾಗ ಒಮ್ಮೆ ಮನೆಗೆ ಬಂದು ಮಾತಾಡಿಲ್ಲ, ಕೊನೇ ಪಕ್ಷ ಕರೆ ಮಾಡಿ ಕರೆದಿದ್ದರೂ ಅವರು ಇದ್ದಲ್ಲಿಗೆ ಹೋಗಿ ಮಾತನಾಡುತ್ತಿದ್ದೆ. ಅವರೇ ವೋಟ್ ಕೇಳದಿದ್ದಾಗ ಯಾರಿಗೆ ವೋಟ್ ಹಾಕೋದು? ಅವರು ಮನೆಗೆ ಬಂದು ಕೇಳಿದ್ದರು. ಹಾಗಾಗಿ ಬಸವರಾಜ್ ಗೆ ಬೆಂಬಲ ನೀಡಿದ್ದೆವು. ಬಸವರಾಜ್ ಗೆ ಬೆಂಬಲ ನೀಡಿದ್ದೆವೆಯೇ ಹೊರತು ಬಿಜೆಪಿಗೆ ಅಲ್ಲ ಎಂದರು.
ಪತ್ರಿಕಾಗೋಷ್ಠಿಗೆ ಜೆಡಿಎಸ್ ಶಾಸಕ ಎಸ್.ಆರ್. ಶ್ರೀನಿವಾಸ್ ಉಪಸ್ಥಿತಿಗೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಪಕ್ಷಕ್ಕೆ ಮೀರಿದ ಸ್ನೇಹ ವಿಶ್ವಾಸ ನಮ್ಮದು ಎಂದರು.
ಶಾಸಕ ಎಸ್.ಆರ್ ಶ್ರೀನಿವಾಸ್ ಮಾತನಾಡಿ, ನಾಯಕರು ಒಳಗೊಂದು ಹೊರಗೊಂದು ಮಾತನಾಡಬಾರದು. ಒಳ ಒಪ್ಪಂದ ಸತ್ಯ. ನಾನು ಆಡಿದ ಮಾತಿಗೆ ಬದ್ಧ. ನಾನು ಜೆಡಿಎಸ್ ನಲ್ಲೇ ಇರುತ್ತೇನೆ. ಹಿಂದಿನಿಂದಲೂ ರಾಜಣ್ಣ ಅವರ ಮೇಲೆ ಗೌರವವಿದೆ. ಅವರು ಗಾಡ್ ಫಾದರ್. ಪಕ್ಷೇತರನಾಗಿ ನಿಂತಾಗ ಗೆಲ್ಲಲು ಸಹಕಾರ ನೀಡಿದ್ದರು ಎಂದರು
ಬಿಜೆಪಿ ಸರಕಾರ ಬೀಳಲು ಬಿಡಲ್ಲ ಎಂದು ನಮ್ಮ ನಾಯಕರೇ ಹೇಳಿದ್ದಾರೆ. ಇನ್ನು 2.5ವರ್ಷ ಸರಕಾರ ಬೀಳಲ್ಲ, ಮಧ್ಯಂತರ ಚುನಾವಣೆ ಬರಲ್ಲ. ಆದರೆ, ಬಿಜೆಪಿಗೆ ನನ್ನ ಬೆಂಬಲವಿಲ್ಲ. ಮುಖ್ಯಮಂತ್ರಿ ಬದಲಾವಣೆ ವಿಚಾರ ಬಿಜೆಪಿಯರವನ್ನೇ ಕೇಳಬೇಕು. ಜೆಡಿಎಸ್ -ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡರೆ ನಾನು ಬಿಜೆಪಿ ಜೊತೆ ಹೋಗಲ್ಲ ಅದಕ್ಕೆ ನನ್ನ ವಿರೋಧವಿದೆ ಎಂದರು.
ಶ್ರೀನಿವಾಸ್ ಕಾಂಗ್ರೆಸ್ ಗೆ?
ತುಮಕೂರು ಜಿಲ್ಲೆಯಲ್ಲಿ ಶೀಘ್ರ ರಾಜಕೀಯ ಬದಲಾವಣೆಗಳಾಗುವುದು ಖಚಿತವಾಗಿದೆ. ಹಲವು ರಾಜಕಾರಣಿಗಳು ಕಾಂಗ್ರೆಸ್ ಗೆ ಬರುವುದು ಖಚಿತಗೊಂಡಿದೆ. ಪ್ರಾರಂಭಿಕವಾಗಿ ಎಸ್.ಆರ್ ಶ್ರೀನಿವಾಸ್ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದಾರೆ. ಮುಂದೆ ಇನ್ನೂ ಹಲವರು ಸೇರುವ ಸಾಧ್ಯತೆಯಿದೆ. ಆದರೆ ಶ್ರೀನಿವಾಸ್ ಮಾತ್ರ ನಾನು ಇನ್ನೂ ಜೆಡಿಎಸ್ ಬಿಟ್ಟಿಲ್ಲ ಎನ್ನುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
High Court: ಕ್ರಿಮಿನಲ್ ಕೇಸ್ ಡೈರಿ ಪ್ರತೀ ಪುಟಕ್ಕೆ ಸಹಿ:ಅರ್ಜಿ ವಜಾಗೊಳಿಸಿದ ಹೈಕೋರ್ಟ್
Bengaluru: ಸುವರ್ಣ ಸಂಭ್ರಮದಲ್ಲಿ ರಾಜ್ಯೋತ್ಸವ ವೈಭವ
Bengaluru: ಕೇಂದ್ರದ ತೆರಿಗೆ ಅನ್ಯಾಯ ಮಧ್ಯೆಯೂ ಅಭಿವೃದ್ಧಿ: ಸಿಎಂ
MUST WATCH
ಹೊಸ ಸೇರ್ಪಡೆ
Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
Parkala; ಅಂಗಡಿಯಲ್ಲಿ ಅಕ್ರಮವಾಗಿ ಪಟಾಕಿ ಮಾರುತ್ತಿದ್ದ ಮಾಲಕ ಅರೆಸ್ಟ್
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
Digil Movie: ದೈವ ಮತ್ತು ಮಂಗಳಮುಖಿಯ ಕಥೆ ಹೇಳಲು ಹೊರಟ ಚೇತನ್ ಮುಂಡಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.