ಹಿಂದೂ, ಮುಸ್ಲಿಂ ಭಾವೈಕ್ಯತೆ ಉರೂಸ್
Team Udayavani, Feb 26, 2019, 7:36 AM IST
ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ಹಿಂದೂ ಮುಸ್ಲಿಮರು ಒಂದೇ ಕುಟುಂಬದಂತೆ ಕೂಡಿ ತಾತಯ್ಯನವರ ಉತ್ಸವ ಆಚರಿಸುತ್ತಿದ್ದಾರೆ. ಸೋಮವಾರದಿಂದ ಆರಂಭವಾಗಿರುವ ಈ ಉರೂಸ್‌ನಲ್ಲಿ ಹಿಂದೂ, ಮುಸ್ಲಿಂ ಎಂಬ ಭೇದ ಭಾವವಿಲ್ಲದೆ ಎಲ್ಲರೂ ಒಟ್ಟಾಗಿ ತಾತಯ್ಯನವರ ಸೇವೆ ಮೂರು ದಿನಗಳು ನಡೆಸುತ್ತಾರೆ.
ಈ ಜಾತ್ರೆಗೆ ಅಕ್ಕ ಪಕ್ಕದ ಊರುಗಳಲ್ಲದೇ ಆಂಧ್ರಪ್ರದೇಶ, ಮಹಾರಾಷ್ಟ್ರ, ಬೀದರ್, ಕಲುºರ್ಗಿ, ವಿಜಯಪುರಗಳಿಂದ ಸಾವಿರಾರು ಹಿಂದೂ ಮುಸ್ಲಿಂ ಭಾಗವಹಿಸುತ್ತಾರೆ. ಪಟ್ಟಣ ಸಿಂಗಾರವಾಗಿದ್ದು, ಹಿಂದೂ ಮುಖಂಡರೇ ತಾತಯ್ಯನ ಸಂಪೂರ್ಣ ಉತ್ಸವದ ಜವಾಬ್ದಾರಿ ನೋಡಿಕೊಳ್ಳುವುದು ಇಲ್ಲಿನ ವಿಶೇಷವಾಗಿದೆ.
ಸೌಹಾರ್ದ ತಾಣ: ತಾತಯ್ಯ ಎಂದು ಪ್ರಸಿದ್ಧಿ ಹೊಂದಿರುವ ಮೊಯೂದ್ದೀನ್ ಖಾದ್ರಿಯವರು ದೈವಸಂಭೂತರು. ಈ ಭಾಗದಲ್ಲಿ ಸೂಫಿ ಪರಂಪರೆಯನ್ನು ಸಮರ್ಥವಾಗಿ ಬೇರೂರುವಂತೆ ಮಾಡಿದವರು. ಪವಾಡ ಪುರುಷ ತಾತಯ್ಯನಿಗೆ ಹರಕೆ ಹೊತ್ತು ಕಡ್ಲೆ ಸಕ್ಕರೆ ಪೂಜೆ ಮಾಡಿಸಿ ತಿದ್ದಿದರೆ (ಹಂಚಿದರೆ) ನಮ್ಮ ಕಷ್ಟಗಳು ಪರಿಹಾರವಾಗುತ್ತದೆ. ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ಬಲವಾದ ನಂಬಿಕೆ ಭಕ್ತರಲ್ಲಿದೆ.
ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ: ಸೋಮವಾರ ಮುಸ್ಲಿಮರು ನಗರದ ಪ್ರಮುಖ ಬೀದಿಗಳಲ್ಲಿ ತಾತಯ್ಯನವರ ಕುದುರೆ ಹಾಗೂ ವಿದ್ಯುತ್ ದೀಪಗಳಿಂದ ಅಲಂಕೃತವಾಗಿರುವ ಹೂವಿನ ಮಂಟಪದಲ್ಲಿ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಮಾಡಿದರು ಹಾಗೂ ಗೋರಿಯ ಮುಂದೆ ನಾಮಾಜ್ ಮಾಡಲಾಯಿತು.
ಎರಡನೇ ದಿನವಾದ ಮಂಗಳವಾರ ಪಟ್ಟಣದ ಹೈಸ್ಕೂಲ್ ಮೈದಾನದಲ್ಲಿ ಖವ್ವಾಲಿ ನಡೆಯಲಿದೆ.
ಮೂರನೇ ದಿನ ಕನ್ನಡ ರಸಮಂಜರಿ ಕಾರ್ಯಕ್ರಮವನ್ನು ವಿವಿಧ ರಾಜಕೀಯ ಮುಖಂಡರು ಆಯೋಜಿಸಿದೆ. ಈ ಉರೂಸ್ ಪ್ರಯುಕ್ತ ಸರ್ಕಸ್, ವಿನೋದ ಆಟಗಳು ಸಾಹಸ ಕ್ರೀಡೆಗಳು, ಮಕ್ಕಳ ಆಟ ಸಾಮಗ್ರಿ, ಗೃಹ ಉಪಯೋಗಿ ವಸ್ತುಗಳ ಮಳಿಗೆಗಳು ಹಾಗೂ ಕಾರ್ ರೇಸ್, ಮ್ಯಾಜಿಕ್ ವೀಲ್, ಕೊಲಂಬಸ್, ಕ್ರೀಡೆಗಳಿಗಾಗಿ ಮಂಡ್ಯ ಹಾಗೂ ತಿಪಟೂರು ಭಾಗಗಳಿಂದ ಬಂದಿರುವ ಕಂಪನಿಗಳು ದೊಡ್ಡ ಯಂತ್ರಗಳನ್ನು ಆಳವಡಿಸಿಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.