ಉದ್ಘಾಟನೆಯಾಗದ ವಸತಿ ಸಮುಚ್ಛಯ
Team Udayavani, Oct 14, 2019, 4:42 PM IST
ತಿಪಟೂರು: ಸರ್ಕಾರ ಪೊಲೀಸರಿಗೆ ಉತ್ತಮ ಸೌಲಭ್ಯ ನೀಡಲು ತಿಪಟೂರು ನಗರದ ಪೊಲೀಸ್ ಕ್ವಾಟ್ರಸ್ ಬಳಿ ಸುಮಾರು 3.60 ಕೋಟಿ ರೂ. ವೆಚ್ಚದಲ್ಲಿ ಕಾವೇರಿ ಹಾಗೂ ಹೇಮಾವತಿ ವಸತಿ ಸಮುಚ್ಛಯ ನಿರ್ಮಿಸಿದ್ದು, ಒಟ್ಟು 24 ಮನೆಗಳುಳ್ಳ ಸಮುತ್ಛಯಗಳು ನಿರ್ಮಾಣಗೊಂಡು ವರ್ಷ ಕಳೆದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ.
ಸರ್ಕಾರದ ಆಶಯದಂತೆ ಉದ್ಘಾಟನೆಗೊಂಡು ಪೊಲೀಸರಿಗೆ ಸೂರು ಒದಗಿಸಬೇಕಿದ್ದ ಸಮುಚ್ಛಯಗಳು ಖಾಲಿಬಿದ್ದಿವೆ. ಪೊಲೀಸ್ ಸಿಬ್ಬಂದಿ ವಾಸವಾಗಿರುವ ಮನೆಗಳು ವಾಸಕ್ಕೆ ಯೋಗ್ಯವಲ್ಲದ ಸ್ಥಿತಿಯಲ್ಲಿ ಮಳೆ ಬಂತೆಂದರೆ ಸೋರುವ ಸೂರು ಬಿರುಕು ಬಿಟ್ಟ ಗೋಡೆಗಳ ಮನೆಯಲ್ಲಿ ಇಲಿ ಹಾವುಗಳ ಕಾಟದ ನಡುವೆಯೇ ವಾಸ ಮಾಡಬೇಕಿದೆ.
ಪೊಲೀಸ್ ಇಲಾಖೆಯ ಮೇಲಧಿಕಾರಿಗಳು ಸಿಬ್ಬಂದಿ ಸಮಸ್ಯೆ ಅರಿತು ನಿರ್ಮಾಣವಾಗಿರುವ ವಸತಿ ಸಮುತ್ಛಯಉದ್ಘಾಟನೆ ಮಾಡಿ ಸಿಬ್ಬಂದಿ ವಾಸಕ್ಕೆ ನೀಡಬೇಕಿದೆ. 30-40 ವರ್ಷದ ಹಿಂದೆ ನಿರ್ಮಿಸಿರುವ ಮನೆಗಳಲ್ಲಿ ಪೊಲೀಸರು ವಾಸವಿದ್ದು, ಅವುಗಳು ಶಿಥಿಲವಾಗಿವೆ. ಮಳೆಗಾಲದಲ್ಲಿ ಛಾವಣಿ ಸೋರುತ್ತಿವೆ. ಬಿರುಕು ಬಂದಿರುವ ಗೋಡೆ, ಇಲಿ-ಹಾವುಗಳ ಕಾಟದಿಂದ ವಾಸಿಸಲು ಭಯವಾಗುತ್ತದೆ. ಈ ಬಗ್ಗೆ ಮೇಲಧಿಕಾರಿಗಳ ಬಳಿ ಹೇಳಿಕೊಳ್ಳಲು ಆಗುವುದಿಲ್ಲ ಎಂದು ಹೇಳುತ್ತಾರೆ ಹೆಸರು ಹೇಳಲಿಚ್ಛಿಸದ ಅಧಿಕಾರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kunigal: ಬೈಕ್, ಕ್ಯಾಂಟರ್ ಮುಖಾಮುಖಿ ಢಿಕ್ಕಿ; ಇಬ್ಬರು ಸ್ಥಳದಲ್ಲೇ ಮೃತ್ಯು
Gubbi: ಮೀಟರ್ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಬೇಸತ್ತು ಪೌರ ಕಾರ್ಮಿಕ ಆತ್ಮಹತ್ಯೆ
Koratagere: ವೃದ್ದೆ ಮೇಲೆ ಕೆಎಸ್ಆರ್ಟಿಸಿ ಬಸ್ ಹರಿದು ಸಾವು
Hunasur: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ತಿಪಟೂರಿನ ಮಹಿಳೆ!
Kunigal: ಅಪ್ರಾಪ್ತೆಯ ಅಪಹರಣ, ಲೈಂಗಿಕ ದೌರ್ಜನ್ಯ; ಗುಜರಾತ್ ನಲ್ಲಿ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.