ಶುಕ್ರವಾರ ರಾಜ್ಯಾದ್ಯಂತ ಏಕಕಾಲದಲ್ಲಿ ಬಿಡುಗಡೆಯಾಗುತ್ತಿದೆ ಹುಲಿಬೇಟೆ…
Team Udayavani, Jan 4, 2023, 9:33 PM IST
ಕೊರಟಗೆರೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹುಲಿಬೇಟೆ ಚಿತ್ರತಂಡವು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಿತ್ರತಂಡವು ಸುಮಾರು ನಾಲ್ಕು ವರ್ಷಗಳ ಹಿಂದೆ ಚಿತ್ರ ಸಂಪೂರ್ಣಗೊಳ್ಳಬೇಕಿತ್ತು ಕೊರೊನಾ ಎಂಬ ಮಹಾಮಾರಿಯಿಂದ ಹುಲಿ ಬೇಟೆ ಚಿತ್ರೀಕರಣ ಅರ್ಧಕ್ಕೆ ನಿಲ್ಲಿಸಲಾಗಿತ್ತು ಇದೀಗ ಚಿತ್ರೀಕರಣ ಸಂಪೂರ್ಣ ಮುಕ್ತಾಯವಾಗಿದ್ದು ಇದೇ ಶುಭ ಶುಕ್ರವಾರದಂದು ರಾಜ್ಯಾದ್ಯಂತ ಏಕಕಾಲದಲ್ಲಿ 30 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
ಸ್ಥಳೀಯ ಪ್ರತಿಭೆಗಳು ನಿರ್ಮಿಸಿ ನಟಿಸಿರುವ ಈ ಚಿತ್ರವನ್ನು ಚಿತ್ರಮಂದಿರದಲ್ಲೇ ನೋಡಿ ಸ್ಥಳೀಯ ಪ್ರತಿಭೆಗಳನ್ನು ಅರಸಿ ಆಶೀರ್ವದಿಸಿ ಎಂದು ಚಿತ್ರತಂಡದ ಕಲಾವಿದರು ಕೇಳಿಕೊಂಡರು.
ಹುಲಿ ಬೇಟೆ ಚಿತ್ರದ ನಾಯಕ ವಿಶ್ವನಾಥ್ ಚೌಹಾಣ್ ಮಾತನಾಡಿ. ಹುಲಿ ಬೇಟೆ ಚಿತ್ರವು ರಾಯರ ಸನ್ನಿಧಾನದಲ್ಲಿ ಮುಹೂರ್ತವನ್ನು ಮುಗಿಸಿ ಕೊರಟಗೆರೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಚಿತ್ರೀಕರಿಸಿದ್ದು ಹುಲಿ ಬೇಟೆ ಚಿತ್ರವು ತುಂಬಾ ಅದ್ಭುತವಾಗಿ ಮೂಡಿ ಬಂದಿದ್ದು ಈ ಚಿತ್ರವು ಸಂಪೂರ್ಣ ಸಾಂಸಾರಿಕ ಹಾಗೂ ಪ್ರೀತಿ ವಾತ್ಸಲ್ಯದ ಚಿತ್ರವಾಗಿದ್ದು ಚಿತ್ರ ನೋಡುವ ವೀಕ್ಷಕರಿಗೆ ಸಂಪೂರ್ಣ ಇಷ್ಟವಾಗುತ್ತದೆ.ಎಲ್ಲರೂ ಚಿತ್ರಮಂದಿರದಲ್ಲಿ ಚಿತ್ರವನ್ನು ನೋಡಿ ಸ್ಥಳೀಯ ಪ್ರತಿಭೆಗಳನ್ನು ಅರಸಿ ಆಶೀರ್ವದಿಸಿ ಎಂದು ಕೇಳಿಕೊಂಡರು.
ಹುಲಿ ಬೇಟೆ ಚಿತ್ರದ ಸಂಪೂರ್ಣ ಚಿತ್ರೀಕರಣ ಮಾಡಿದ ಛಾಯಾಗ್ರಾಹಕ ಧನಪಾಲ್ ರಾಜ್ ಮಾತನಾಡಿ ಈ ಚಿತ್ರವು ಕರ್ನಾಟಕದ ವಿವಿಧ ಪ್ರಕೃತಿಯ ಸೊಬಗಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಿದ್ದು ಸುಂದರವಾಗಿ ಮೂಡಿ ಬಂದಿದೆ ಇದೆಲ್ಲದಕ್ಕೂ ಮಿಗಿಲಾದದ್ದು ಚಲನಚಿತ್ರ ನಟ ಮಾಸ್ಟರ್ ಆನಂದ್ ರವರು 11 ದಿನಗಳ ಕಾಲ ಯಾವುದೇ ಸಂಭಾವನೆ ತೆಗೆದುಕೊಳ್ಳದೆ ಕನ್ನಡದ ಪ್ರತಿಭೆಗಳು ಬೆಳೆಯಬೇಕು ಎನ್ನುವ ಉದ್ದೇಶದಿಂದ ಉಚಿತವಾಗಿ ಒಂದು ಅದ್ಭುತವಾದ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಇನ್ನು ಈ ಚಿತ್ರದಲ್ಲಿ ಅಭಿನಯಿಸಿರುವ ಪ್ರತಿಭೆಗಳು ಸಂಪೂರ್ಣ ಹೊಸಬರ ತಂಡ ವಾಗಿದ್ದು ಈ ಒಂದು ಪ್ರತಿಭೆಗಳ ತಂಡವು ಬೆಳೆಯಬೇಕು ಅದರ ಜೊತೆಗೆ ಹುಲಿ ಬೇಟೆ ಚಿತ್ರವು ಯಶಸ್ವಿಯಾಗಬೇಕು ಆದ್ದರಿಂದ ಕರುನಾಡಿನ ಕನ್ನಡ ಚಿತ್ರದ ಪ್ರೇಮಿಗಳು ಆರಾಧಕರು ಈ ಚಿತ್ರವನ್ನು ಚಿತ್ರಮಂದಿರಗಳಲ್ಲಿ ನೋಡಿ ಅರಸಿ ಆಶೀರ್ವದಿಸಿ ಎಂದು ಕೇಳಿಕೊಂಡರು..
ಕೊರಟಗೆರೆಯ ಸ್ಥಳೀಯ ಪ್ರತಿಭೆ ಹೈಯತ್ ಖಾನ್ ಮಾತನಾಡಿ ಅನೇಕ ವರ್ಷಗಳಿಂದಲೂ ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿಕೊಂಡು ಬಂದಿದ್ದೇನೆ. ಇದೀಗ ಹುಲಿ ಬೇಟೆ ಎನ್ನುವ ಚಲನಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ ಹುಲಿ ಬೇಟೆ ಚಿತ್ರವು ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ತಾಲೂಕಿನ ಪ್ರತಿಭೆಗಳು ರಾಜ್ಯ ಮಟ್ಟದಲ್ಲಿ ಹೆಸರು ಮಾಡಲು ಹೊರಟಿದ್ದೇವೆ ಹುಲಿ ಬೇಟೆ ಚಿತ್ರವನ್ನು ತಾವೆಲ್ಲರೂ ಚಿತ್ರಮಂದಿರದಲ್ಲಿ ಬಂದು ನೋಡಿ ಪ್ರೋತ್ಸಾಹಿಸಿ ಎಂದು ಕೇಳಿಕೊಳ್ಳುತ್ತೇನೆ ಎಂದರು.
ಈ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಒತ್ತ ನಿರ್ದೇಶಕ ರಾಜ್ ಬಹದ್ದೂರ್ ಎನ್ನುವರು ಕನ್ನಡ ಚಿತ್ರರಂಗದಲ್ಲಿ ಸುಮಾರು 20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದ ಅವರು ಈ ಚಿತ್ರವು ನಮ್ಮ ಕರುನಾಡಿನ ವಿಶೇಷ ಸ್ಥಳಗಳಾದ ಯಾದಗಿರಿ ಶಹಪುರ್ ರಾಯಚೂರು, ಬೆಂಗಳೂರು, ತುಮಕೂರು ಸೇರಿದಂತೆ ಕೊರಟಗೆರೆಯ ಸುಪ್ರಸಿದ್ಧ ಕ್ಷೇತ್ರಗಳಾದ ಗೊರವನಹಳ್ಳಿ ಸಿದ್ದರಬೆಟ್ಟ ನವಿಲುಕುರಿಕೆ ಸೇರಿದಂತೆ ಅನೇಕ ಪ್ರವಾಸಿಗರ ತಾಣದಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ. ಹುಲಿ ಬೇಟೆ ಚಿತ್ರ ತಂಡದ ನಾಯಕ ನಟ ವಿಶ್ವನಾಥ್ ಚೌಹಾಣ್, ನಿರ್ದೇಶಕ ನಿರ್ಮಾಪಕ ರಾಜ್ ಬಹದ್ದೂರ್, ಧನಪಾಲ್ ರಾಜ್, ಪೋಷಕ ಪಾತ್ರದಲ್ಲಿ ಅಭಿನಯಿಸುತ್ತಿರುವ ಆಯತ್ ಖಾನ್ ಸೇರಿದಂತೆ ಅನೇಕರು ಹಾಜರಿದ್ದರು.
ಇದನ್ನೂ ಓದಿ: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೊಸಪೇಟೆ ಭೇಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.