ಮರ ಕಿತ್ತು ಸಸಿ ನೆಡುವ ಅರಣ್ಯಾಧಿಕಾರಿಗಳು!
ರಾಮಪ್ಪನಕೆರೆ ಸುತ್ತಮುತ್ತಲ ನೂರಾರು ಎಕರೆ ಅರಣ್ಯದಲ್ಲಿ ಮರಗಳು ನಾಶ | ಆರೋಪ ತಳ್ಳಿ ಹಾಕಿದ ಅಧಿಕಾರಿಗಳು
Team Udayavani, Feb 17, 2021, 4:55 PM IST
ಹುಳಿಯಾರು: ಹೋಬಳಿಯ ದಸೂಡಿ ಸಮೀಪದ ರಾಮಪ್ಪನಕೆರೆ ಸುತ್ತಮುತ್ತಲ ನೂರಾರು ಎಕರೆಅರಣ್ಯದಲ್ಲಿ ಅರಣ್ಯಾಧಿಕಾರಿಗಳೇ ಮರಗಳನ್ನು ಕಡಿದು ಅದೇ ಸ್ಥಳದಲ್ಲಿ ಪುನಹ ಅರಣ್ಯೀಕರಣ ಮಾಡಲು ಹೊರಟಿದ್ದಾರೆ ಎಂದು ಗಾಣಧಾಳು ಗ್ರಾಮಸ್ಥರು ಆರೋಪಿಸಿದ್ದಾರೆ.
ಪ್ರಾಣಿ ಪಕ್ಷಿಗಳಿಗೆ ಹಣ್ಣು ಸಿಗುತ್ತಿತ್ತು: ಬುಕ್ಕಾಪಟ್ಟಣ ವಲಯ ಅರಣ್ಯ ಪ್ರದೇಶಕ್ಕೆ ಸೇರಿದ ದಸೂಡಿ ಸರ್ಕಾರಿಸರ್ವೆ ನಂಬರ್ 100, 101, 104, 106 ರಲ್ಲಿ ಸುಮಾರು290 ಎಕರೆ ಅರಣ್ಯದಲ್ಲಿ ಈ ಹಿಂದೆ ಜಾಣೆ, ಕಮರಸೇರಿದಂತೆ ಅನೇಕಗಿಡಗಳನ್ನು ಅರಣ್ಯ ಇಲಾಖೆನೆಟ್ಟು 5-6 ವರ್ಷ ಟ್ಯಾಂಕರ್‌ಗಳಲ್ಲಿ ನೀರುಣಿಸಿಬೆಳೆಸಿತ್ತು. ಆದರೆ, ಈಗ ಈ ಎಲ್ಲಾ ಮರಗಳುಹೆಮ್ಮರವಾಗಿ ಬೆಳೆದು ಪ್ರಾಣಿ ಪಕ್ಷಿಗಳಿಗೆ ನೆರಳು, ಹಣ್ಣು ನೀಡುತ್ತಿರುವ ಸಂದರ್ಭದಲ್ಲಿ ನಿರ್ದಾಕ್ಷಿಣ್ಯವಾಗಿ ಕಡಿದು ಧರೆಗುರುಳಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಾವಿರಾರು ಮರಗಳು ನಾಶ: ಮುಂಬೈ, ಕರ್ನಾಟಕ ಹಾಗೂ ಗೋವಾ ರಾಜ್ಯಗಳಲ್ಲಿ ಹಾದು ಹೋಗುವರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಹಾಳಾಗಿರುವಅರಣ್ಯ ನಾಶದ ಪರ್ಯಾಯವಾಗಿ ಅರಣ್ಯ ಬೆಳೆಸಲುಬುಕ್ಕಾಪಟ್ಟಣ ಅರಣ್ಯ ಇಲಾಖೆಗೆ ಲಕ್ಷಾಂತರ ರೂ.ಬಿಡುಗಡೆಯಾಗಿದೆ. ಈ ಹಣವನ್ನು ಖರ್ಚು ಮಾಡುವ ಸಲುವಾಗಿ ಈಗಾಗಲೇ ಸರ್ವೆ ನಂಬರ್104ರಲ್ಲಿ ಹಿಟಾಚಿ ಯಂತ್ರದಿಂದ ಸಾವಿರಾರುಮರಗಳನ್ನು ನೆಲಕ್ಕೆ ಉರುಳಿಸಿದ್ದಾರೆ ಎಂದು ಚಿತ್ರ ಸಹಿತ ಗ್ರಾಪಂ ಸದಸ್ಯ ಗುರುವಾಪುರ ಶ್ರೀನಿವಾಸ್ ಆರೋಪಿಸಿದ್ದಾರೆ.
ಜನಪ್ರತಿನಿಧಿಗಳು ಮತ್ತು ಮೇಲಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಕಠಿಣ ಕ್ರಮ ಕೈಗೊಳ್ಳದಿದ್ದರೆ,ಉಳಿದಿರುವ ಮರಗಳನ್ನೂ ಕಡಿದು ನೆಲಸಮಮಾಡುತ್ತಾರೆ. ಹೀಗಾಗಿ ಎಚ್ಚೆತ್ತು ಇಂತಹ ಕೃತ್ಯನಡೆಸಿರುವ ಬುಕ್ಕಾಪಟ್ಟಣ ವಲಯ ಅರಣ್ಯ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮರ ಉರುಳಿಸಿ ಸಸಿ ನೆಡುವುದು ಸರಿಯೇ? :
ಬುಕ್ಕಾಪಟ್ಟಣ ಅರಣ್ಯ ಪ್ರದೇಶಲ್ಲಿ ಅರಣ್ಯೀಕರಣಗೊಳಿಸಲು ಸಾಕಷ್ಟು ಅರಣ್ಯ ಪ್ರದೇಶವಿದ್ದರೂ ಮರಗಳನ್ನು ಕಡಿದು ಪುನಃ ಅದೇ ಸ್ಥಳದಲ್ಲಿ ನೆಡಲು ಹೊರಟಿರುವುದರ ಹಿಂದಿರುವ ರಹಸ್ಯವಾದರೂ ಏನು. ಅರಣ್ಯೀಕರಣ ಮಾಡುವ ಮೊದಲು ಸ್ಥಳೀಯ ಸಭೆ ನಡೆಸಬೇಕಿದೆ. ಆದರೆ, ಬುಕ್ಕಾಪಟ್ಟಣ ವಲಯ ಅರಣ್ಯಾಧಿಕಾರಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ. ಈಗಾಗಲೇ ಹುಲುಸಾಗಿ ಬೆಳೆದಿರುವ ಮರಗಳನ್ನು ತೆರವುಗೊಳಿಸಿ ಮತ್ತೆ ಗಿಡಗಳನ್ನು ನೆಡಲು ತೀರ್ಮಾನಿಸಿರುವುದು ಆಕ್ಷೇಪಾರ್ಹ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಹಿಟಾಚಿ ಓಡಾಡುವಾಗ ಮುರಿದಿವೆ :
ಕುಂದಾಪುರ, ಹೊನ್ನಾವರದ ಮಾರ್ಗದಲ್ಲಿ ಅರಣ್ಯ ಜಾಗ ಬಿಟ್ಟುಕೊಡಲಾಗಿತ್ತು. ಅದಕ್ಕೆ ಪರ್ಯಾಯವಾಗಿ ಜಿಲ್ಲೆಯಲ್ಲಿ 300 ಹೆಕ್ಟೇರ್ ಅರಣ್ಯೀಕರಣ ಮಾಡಲು 2010ರಲ್ಲಿ ನಿರ್ಧರಿಸಿ ದಸೂಡಿ ಭಾಗದ 120 ಹೆಕ್ಟೇರ್ ಅನ್ನು ಆಯ್ಕೆ ಮಾಡಲಾಗಿತ್ತು. ಈಗ ಅನುಮೋದನೆ ದೊರೆತಿದ್ದು ಹೊಸ ಸಸಿ ನೆಡಲು ಟ್ರಂಚ್ ತೆಗೆಯಲು ಹಿಟಾಚಿ ಬಳಸಲಾಗಿತ್ತು. ಟ್ರಂಚ್ ತೆಗೆಯಲು ಹಿಟಾಚಿ ಓಡಾಡುವಾಗ ಕೆಲ ಉದಯದ ಗಿಡಗಳು ಮುರಿದಿವೆಯೇ ವಿನಃ ಉದ್ದೇಶ ಪೂರ್ವಕವಾಗಿ ಗಿಡಗಳನ್ನು ಕೀಳಲಾಗಿಲ್ಲ. ಇದನ್ನು ಗಮನಿಸಿ ಕೆಲಸ ನಿಲ್ಲಿಸಿದ್ದು ಹಿಟಾಚಿ ಸಹ ಅಲ್ಲಿಯೇ ನಿಲ್ಲಿಸಲಾಗಿದೆ. ಪಂಚಾಯ್ತಿಯವರು ಬಯಲು ಸ್ಥಳದಲ್ಲಿ ಕೂಲಿಯವರಿಂದ ಕೆಲಸ ಮಾಡಿಸಿ ಸಸಿ ನೆಡಲುತಿಳಿಸಿದ್ದಾರೆ. ಮೇಲಧಿಕಾರಿಗಳ ಅನುಮತಿಪಡೆದು ಮುಂದಿನ ಹೆಜ್ಜೆ ಇಡಲಾಗುವುದು ಎಂದು ಬುಕ್ಕಾಪಟ್ಟಣ ವಲಯ ಅರಣ್ಯಾಧಿಕಾರಿ ಮಲ್ಲಿಕಾರ್ಜುನಯ್ಯ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.