ಅಕ್ರಮ ಪಡಿತರ ಚೀಟಿ ವಶಪಡಿಸಿಕೊಳ್ಳುತ್ತಾರಾ?

Team Udayavani, Apr 2, 2021, 2:34 PM IST

ಅಕ್ರಮ ಪಡಿತರ ಚೀಟಿ ವಶಪಡಿಸಿಕೊಳ್ಳುತ್ತಾರಾ?

ಚಿಕ್ಕನಾಯಕನಹಳ್ಳಿ: ಅನರ್ಹರು ಹೊಂದಿರುವ ಪಡಿತರ ಚೀಟಿಯನ್ನುಸ್ವಯಂ ಪ್ರೇರಿತರಾಗಿ ಹಿಂದುರು ಗಿಸಲು ಏ.15ರವರೆಗೆ ಕಾಲಾವಕಾಶ ನೀಡಲಾಗಿದ್ದು, ಒಂದು ವೇಳೆ ಯಾರೂ ಹಿಂದಿರುಗಿಸದಿದ್ದರೆ ಸಂಬಂಧಪಟ್ಟ ಅಧಿಕಾರಿಗಳು ಏನೂ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡ ಬೇಕಾಗಿದೆ.

2019ರಲ್ಲಿ ಇದೇ ರೀತಿ ಕಾಲಾವಕಾಶ ನೀಡಲಾಗಿತ್ತು. 109 ಪಡಿತರ ಚೀಟಿಗಳು ಸ್ವಯಂ ಪ್ರೇರಿತವಾಗಿ ವಾಪಸ್‌ ಬಂದಿದ್ದವು. ಧೈರ್ಯ ಮಾಡಿ ಹಿಂದುರಿಗಿಸದವರು ಎರಡು ವರ್ಷ ರೇಷನ್‌ ಪಡೆದುಕೊಂಡಿದ್ದಾರೆ. ಅಕ್ರಮವಾಗಿ ಹೊಂದಿದ್ದವರ ಮೇಲೆ ಯಾವ ಕ್ರಮವನ್ನು ಕೈಗೊಳ್ಳಲಿಲ್ಲ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮತ್ತೂಮ್ಮೆ ಕಾಲಾವಕಾಶ: ತಾಲೂಕಿನಲ್ಲಿ ಹಲವಾರು ಸುಳ್ಳುಮಾಹಿತಿ ನೀಡಿ ಇಲಾಖೆ ಮಾನದಂಡಗಳನ್ನು ಮರೆಮಾಚಿಪಡಿತರ ಚೀಟಿ ಪಡೆದಿರುವುದು ಕಂಡು ಬಂದಿದೆ.ಇಂತಹ ಅನರ್ಹರು ಹೊಂದಿರುವ ಪಡಿತರಚೀಟಿಗಳನ್ನು ಸ್ವಯಂ ಪ್ರೇರಿತರಾಗಿ ಹಿಂದುರುಗಿಸಲು ಮತ್ತೂಮ್ಮೆ ಕಾಲಾವಕಾಶ ನೀಡಲಾಗಿದೆ ಎಂದು ತಹಶೀಲ್ದಾರ್‌ ತೇಜಸ್ವಿನಿ ತಿಳಿಸಿದ್ದಾರೆ.

ಖಾಯಂ ನೌಕರರು ಅಂದರೆ ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಸಂಸ್ಥೆಯ , ಸರ್ಕಾರಿಪ್ರಯೋಜಿತ, ಸರ್ಕಾರಿ ಸೌಮ್ಯದ ಸಂಸ್ಥೆಗಳು, ಮಂಡಳಿಗಳು, ನಿಗಮಗಳು ಸ್ವಯುತ್ತ ಸಂಸ್ಥೆಗಳಲ್ಲಿ ನೌಕರಿಯಲ್ಲಿರುವವರು ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್‌, ವೃತ್ತಿ ತೆರಿಗೆಪಾವತಿಸುವ ಕುಟುಂಬಗಳು, ಗ್ರಾಮೀಣ ಪ್ರದೇಶದಲ್ಲಿ 3ಹೆಕ್ಟೇರ್‌ಗಿಂತ ಹೆಚ್ಚಿನ ಒಣ ಭೂಮಿ ಅಥವಾ ತತ್ಸಮಾನನೀರಾವರಿ ಭೂಮಿ ಹೊಂದಿರುವುದು ನಗರ ಪ್ರದೇಶದಲ್ಲಿ1,000 ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣ ಮನೆ ಹೊಂದಿರುವ ಕುಟುಂಬ, ಒಂದೇ ಮನೆಯಲ್ಲಿ ವಾಸವಿದ್ದು ಒಂದಕ್ಕಿಂತ ಹೆಚ್ಚು ಪಡಿತರ ಚೀಟಿ ಹೊಂದಿರುವ, ಕುಟುಂಬವು ಸದರಿ ವಿಳಾಸದಲ್ಲಿ ವಾಸವಿಲ್ಲದಿರುವುದು, ಮರಣ ಹೊಂದಿರುವ ಹೆಸರನ್ನು ಪಡಿತ ಚೀಟಿಯಿಂದ ತೆಗೆಯದೇ ಇರುವ ಮೇಲಿನ ಮಾನದಂಡ ಹೊಂದಿರುವ ಕುಟುಂಬಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ತಿಳಿಸಿದ್ದರು.

109 ಪಡಿತರ ಚೀಟಿ ಹಿಂದಿರುಗಿಸಲಾಗಿತ್ತು: ಆ. 23, 2019ರಂದು ಎರಡು ವರ್ಷಗಳ ಹಿಂದೆ ತಾಲೂಕು ಆಡಳಿತ ಅಕ್ರಮವಾಗಿ ಪಡಿತರ ಚೀಟಿ ಹೊಂದಿರುವವರು ಸ್ವಯಂ ಪ್ರೇರಿತವಾಗಿ ಹಿಂದಿರುಗಿಸಲು ಕಾಲಾವಕಾಶ ನೀಡಿತ್ತು. ಇದರ ಅನ್ವಯ 109 ಪಡಿತರ ಚೀಟಿಗಳು ಸ್ವಯಂ ಪ್ರೇರಿ ತವಾಗಿ ತಾಲೂಕು ಆಡಳಿತಕ್ಕೆ ನೀಡಲಾಗಿತ್ತು. ಆದರೆ, ಎರಡು ವರ್ಷಗಳು ಕಳೆದರೂ ತಾಲೂಕು ಆಡಳಿತ ಯಾವ ತನಿಖೆ

ಮಾಡಿ ಒಂದೇ ಒಂದು ಪಡಿತರ ಚೀಟಿಯನ್ನು ವಶ ಪಡಿಸಿಕೊಂಡಿಲ್ಲ. ಮತ್ತೂಮ್ಮೆ ಅಕ್ರಮ ಪಡಿತರ ಚೀಟಿಯನ್ನು ಸ್ವಯಂ ಪ್ರೇರಿತವಾಗಿ ಹಿಂದಿರುಗಿಸಲು ಮತ್ತೆ ಅವಕಾಶ ನೀಡಿ  ದೆ. ಈ ಹೇಳಿಕೆಗೆ ಈ ಬಾರಿಯಾದರು ಶಕ್ತಿ ಬರುತ್ತದೆಯಾ? ಅಧಿಕಾರಿಗಳ ಹೇಳಿಕೆ ಪತ್ರಿಕೆಯ ಪ್ರಕಟಣೆಗೆ ಮಾತ್ರ ಸೀಮಿತವಾಗದೆ, ನಿಷ್ಪಕ್ಷಪಾತವಾಗಿ ಅಕ್ರಮವಾಗಿ ಪಡೆದ ಪಡಿತರ ಚೀಟಿ  ವಶಪಡಿಸಿಕೊಳ್ಳುತ್ತಾರಾ ಕಾದು ನೋಡಬೇಕಾಗಿದೆ.

ಚೇತನ್‌

ಟಾಪ್ ನ್ಯೂಸ್

Karnataka Lokayukta: ನಾಲ್ವರಿಗೆ ಲೋಕಾ ಶಾಕ್‌: 27 ಕೋಟಿ ರೂ. ಆಸ್ತಿ ಪತ್ತೆ

Karnataka Lokayukta: ನಾಲ್ವರಿಗೆ ಲೋಕಾ ಶಾಕ್‌: 27 ಕೋಟಿ ರೂ. ಆಸ್ತಿ ಪತ್ತೆ

ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ

Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು

Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

4-kunigal

Kunigal: ಕೆಂಪನಹಳ್ಳಿ ಗ್ರಾಮದಲ್ಲಿ ಸರಣಿ ಕಳ್ಳತನ

14-kunigal

Kunigal: ಟೈರ್ ಸ್ಪೋಟಗೊಂಡು ಕಾರು ಪಲ್ಟಿ: ಐಟಿ ಉದ್ಯೋಗಿ ದುರ್ಮರಣ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Karnataka Lokayukta: ನಾಲ್ವರಿಗೆ ಲೋಕಾ ಶಾಕ್‌: 27 ಕೋಟಿ ರೂ. ಆಸ್ತಿ ಪತ್ತೆ

Karnataka Lokayukta: ನಾಲ್ವರಿಗೆ ಲೋಕಾ ಶಾಕ್‌: 27 ಕೋಟಿ ರೂ. ಆಸ್ತಿ ಪತ್ತೆ

PCB

PCB; ಚಾಂಪಿಯನ್ಸ್‌ ಟ್ರೋಫಿಗೆ ಅಧಿಕಾರಿಯ ನೇಮಕ

1-sehwag

Cooch Behar Trophy: ಸೆಹವಾಗ್‌ ಪುತ್ರನಿಂದ ದ್ವಿಶತಕ

1-tt

Pro Kabaddi; ವಿಜಯ್‌ ಮಲಿಕ್‌ ಅಮೋಘ ಆಟ: ತೆಲುಗು ಟೈಟಾನ್ಸ್‌ ಗೆ ಗೆಲುವು

ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ

Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.