![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jan 31, 2022, 1:19 PM IST
ಕುಣಿಗಲ್: ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ವಾಹನದ ಮೇಲೆ ಆಹಾರಇಲಾಖಾಧಿಕಾರಿ ದಾಳಿ ಮಾಡಿ 80 ಮೂಟೆ ಅಕ್ಕಿ,ವಾಹನ ಹಾಗೂ ಚಾಲಕನನ್ನು ವಶಕ್ಕೆ ಪಡೆದಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ತುಮಕೂರು ಜಿಲ್ಲೆ ಹೆಬ್ಬೂರು ತಾಲೂಕುಬೊಮ್ಮನಹಳ್ಳಿ ಗ್ರಾಮದ ಹಾಲಿ ಕುಣಿಗಲ್ ತಾಲೂಕಿನಎಡೆಯೂರು ಹೋಬಳಿ ಚೊಟ್ಟನಹಳ್ಳಿ ಗ್ರಾಮದ ವಾಸಿವಾಹನ ಚಾಲಕ ಶ್ರೀನಿವಾಸ್ ಬಂಧಿತ ಆರೋಪಿ.ಪಟ್ಟಣದ ದೊಡ್ಡಪೇಟೆ ಕಡೆಯಿಂದ ಅಕ್ಕಿಯನ್ನುತುಂಬಿಕೊಂಡು ಬುಲೆರೋ ವಾಹನದಲ್ಲಿ ಮದ್ದೂರುಕಡೆಗೆ ಹೋಗುತ್ತಿರಬೇಕಾದರೆ ಆಹಾರ ಶಿರಸ್ತೇದಾರಮಲ್ಲಿಕಾರ್ಜುನಯ್ಯ, ಆಹಾರ ನಿರೀಕ್ಷಕ ಸಚಿನ್‌ಪ್ರಸಾದ್ ಚಿಕ್ಕಕೆರೆ ಏರಿ ಮೇಲೆ ದಾಳಿ ಮಾಡಿ 80 ಚೀಲಅಕ್ಕಿಯನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.ಆಹಾರ ನಿರೀಕ್ಷಕ ಸಚಿನ್ ಪ್ರಸಾದ್ ನೀಡಿದದೂರಿನನ್ವಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ.
ನ್ಯಾಯ ಬೆಲೆ ಅಂಗಡಿ ಕೈವಾಡ: ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬಕ್ಕೆ ನ್ಯಾಯ ಬೆಲೆ ಅಂಗಡಿ ಮೂಲಕ ಕೇಂದ್ರ ಹಾಗೂ ರಾಜ್ಯ ತಲಾ ಐದು ಕೆ.ಜಿ.ಅಕ್ಕಿಯನ್ನು ಒಬ್ಬ ವ್ಯಕ್ತಿಗೆ ಉಚಿತವಾಗಿನೀಡಲಾಗುತ್ತಿದೆ. ಇದನ್ನು ಪಡಿತದಾರರಿಗೆಸಮರ್ಪಕವಾಗಿ ನೀಡದೇ ಕಳ್ಳ ಸಾಗಾಣಿಕೆ ಮೂಲಕಅಕ್ಕಿಯನ್ನು ಸಾಗಿಸಿ ಮಾರಾಟ ಮಾಡುತ್ತಿರುವುದುಹಲವು ದಿನಗಳಿಂದ ನಡೆಯುತ್ತಿದೆ. ಇದರ ಹಿಂದೆನ್ಯಾಯ ಬೆಲೆ ಅಂಗಡಿಯ ಮಾಲೀಕರು ಹಾಗೂ ಅಧಿಕಾರಿಗಳ ಕೈವಾಡ ಇದೆ ಎನ್ನಲಾಗಿದೆ.
ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ ಕಾರ್ಯಕರ್ತ: ಶನಿವಾರ ಸಂಜೆ ಪಟ್ಟಣದ ದೊಡ್ಡಪೇಟೆಯಗೋಡನ್‌ವೊಂದರಲ್ಲಿ ಅಕ್ಕಿ ಮೋಟೆಯನ್ನು ಬುಲೆರೋ ವಾಹನದಲ್ಲಿ ತುಂಬಲಾಗುತ್ತಿತ್ತು. ಈಸಂಬಂಧ ಆಹಾರ ಇಲಾಖೆಯ ಅಧಿಕಾರಿ ಹಾಗೂತಹಶೀಲ್ದಾರ್ ಅವರಿಗೆ ಮೊಬೈಲ್ ಮೂಲಕಸಂಪರ್ಕಿಸಿ ವಿಷಯ ತಿಳಿಸಲಾಗಿತ್ತು.
ವಿಷಯ ತಿಳಿಸಿಒಂದು ಗಂಟೆಯಾದರೂ ಯಾವೊಬ್ಬ ಅಧಿಕಾರಿಯೂಸ್ಥಳಕ್ಕೆ ಬರಲಿಲ್ಲ, ಬಳಿಕ ಅಕ್ಕಿ ತುಂಬಿದ ಬುಲೆರೋವಾಹನ ದೊಡ್ಡಪೇಟೆಯ ಗುಜ್ಜಾರಿ ಮೊಹಲ್ಲಾಮಾರ್ಗವಾಗಿ ರಾಜ್ಯ ಹೆದ್ದಾರಿ 33 ರ ಟಿ.ಎಂ ರಸ್ತೆಯಚಿಕ್ಕಕೆರೆ ಏರಿ ಮೇಲೆ ಹೋಗುತ್ತಿರ ಬೇಕಾದರೆ ನಾನುಮತ್ತು ನನ್ನ ಕಾರ್ಯಕರ್ತರು ವಾಹನ ತಡೆದುಅಧಿಕಾರಿಗಳಿಗೆ ಮತ್ತೆ ಫೋನ್ ಮಾಡಿ ತಿಳಿಸಿದೆವು.
ಆಗ ಅಲ್ಲಿಗೆ ಆಹಾರ ಶಿರಸ್ತೇದಾರ್‌ಮಲ್ಲಿಕಾರ್ಜುನಯ್ಯ, ಹಾರ ನಿರೀಕ್ಷಕ ಸಚಿನ್‌ಪ್ರಸಾದ್ ಬಂದು ಅಕ್ಕಿಯನ್ನು ವಶಕ್ಕೆ ಪಡೆದುಚಾಲಕನನ್ನು ಠಾಣೆಗೆ ಕರೆದ್ಯೋದರು ಎಂದುಮಾಹಿತಿ ಹಕ್ಕು, ಸಾಮಾಜಿಕ ಕಾರ್ಯಕರ್ತ ವೇದಿಕೆಯ ಎಚ್.ಜಿ.ರಮೇಶ್ ಪತ್ರಿಕೆಗೆ ತಿಳಿಸಿದರು.
ಆಹಾರ ನೀರಿಕ್ಷಕರು ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿ ಕೊಂಡುತನಿಖೆ ಕೈಗೊಳ್ಳಲಾಗಿದೆ. ತನಿಖೆ ಬಳಿಕಸತ್ಯಾಂಶ ಹೊರ ಬೀಳಲಿದೆ. ಅಕ್ಕಿ ಸಾಗಾಣಿಕೆದಂಧೆ ನಡೆದಿರುವುದು ಸತ್ಯ ಎಂದು ಕಂಡು ಬಂದಲ್ಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. –ಡಿ.ಎಲ್. ರಾಜು, ಸಿಪಿಐ ಕುಣಿಗಲ್
ಬುಲೆರೋ ವಾಹನದಲ್ಲಿ ಅಕ್ಕಿ ತುಂಬಿ ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ದೂರಿನ ಹಿನ್ನೆಲೆ, ಅಧಿಕಾರಿಗಳು ಸ್ಥಳಕ್ಕೆ ತೆರಳಿ ವಾಹನ ಹಾಗೂ ಅಕ್ಕಿ ವಶಪಡಿಸಿ ಕೊಂಡುಪೊಲೀಸರಿಗೆ ದೂರು ನೀಡಿದ್ದಾರೆ. ಈಸಂಬಂಧ ಠಾಣೆಯಲ್ಲಿ ಎಫ್‌ಐಆರ್ ಆಗಿದೆ. ತನಿಖೆ ನಂತರ ಸತ್ಯಾಂಶ ಹೊರ ಬರಲಿದೆ. –ಮಹಾಬಲೇಶ್ವರ, ತಹಶೀಲ್ದಾರ್
Congress: ಹೈಕಮಾಂಡ್ ಒಪ್ಪಿಗೆ ಮೇರೆಗೆ ಶೋಷಿತರ ಸಮಾವೇಶ: ಕೆ.ಎನ್.ರಾಜಣ್ಣ
Madhugiri: 90 ಲಕ್ಷದ ಬೆಳೆ ವಿಮೆ ಹಣ ಅಕ್ರಮ ತನಿಖೆಗೆ ಆಗ್ರಹ
Tumkur: ಪರಂ, ರಾಜಣ್ಣ ವರ್ಚಸ್ಸು ಕುಂದಿಸಲು ಸುರೇಶ್‌ಗೌಡ ಟೀಕೆ: ಗೌರಿಶಂಕರ್
Koratagere: ಗುಡಿಸಲಿಗೆ ಆಕಸ್ಮಿಕ ಬೆಂ*ಕಿ; 4 ಮೇಕೆಗಳು ಸಜೀವ ದಹನ; ಇಬ್ಬರಿಗೆ ಗಾಯ
Koratagere: ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಫಿಲ್ಲಿಂಗ್; ಓರ್ವ ಆರೋಪಿ ಬಂಧನ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.