ರಾಜಕೀಯ ಸ್ವಾರ್ಥಕ್ಕಾಗಿ ಮೂಕ ಪ್ರಾಣಿಗೆ ಶಿಕ್ಷೆ
ಎರಡು ದಿನದಿಂದ ಕುಣಿಗಲ್ ಪೊಲೀಸ್ ಠಾಣೆ ಗೋಡೆ ಪಕ್ಕದಲ್ಲಿ ಬಂಧಿಯಾದ ಬಸವಣ್ಣ
Team Udayavani, Apr 5, 2021, 4:17 PM IST
ಕುಣಿಗಲ್: ರಾಜಕೀಯ ಸ್ವಾರ್ಥಕ್ಕಾಗಿ ಮೂಕ ಪ್ರಾಣಿಯಾದ ಎತ್ತಿಗೆ ತಿನ್ನಲು ಆಹಾರ, ಕುಡಿಯಲು ನೀರಿಲ್ಲದೆ ಉರಿ ಬಿಸಿಲಿನಲ್ಲಿ ಉಪವಾಸದ ಶಿಕ್ಷೆ ಅನುಭವಿಸಿದ ಅಮಾನವೀಯ ಘಟನೆ ಪಟ್ಟಣದಲ್ಲಿ ನಡೆದಿದೆ.
ಯಾವ ತಪ್ಪೂ ಮಾಡದ ಮೂಕ ಪ್ರಾಣಿ ಎತ್ತಿಗೆ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ರಾಜಕೀಯ ಲಾಭಕ್ಕಾಗಿ ಪೊಲೀಸ್ ಠಾಣಾ ಮೆಟ್ಟಿಲು ಏರಿ ಪ್ರಕರಣ ದಾಖಲಿಸಿದ್ದಾರೆ. ತಾಲೂಕಿನ ಇತಿಹಾಸ ಪ್ರಸಿದ್ಧ ಬೆಟ್ಟದರಂಗನಾಥ ಸ್ವಾಮಿ ದೇವಾಲಯಕ್ಕೆ ಸೇರಿದ ಬಸವಣ್ಣ ಕಳೆದೆರಡು ದಿನಗಳಿಂದ ಕುಣಿಗಲ್ ಪಟ್ಟಣದ ಪೊಲೀಸ್ ಠಾಣೆಯ ಗೋಡೆ ಪಕ್ಕದಲ್ಲಿ ಬಂಧಿಯಾಗಿದ್ದನ್ನುಪೊಲೀಸರು ಭಾನುವಾರ ಮಧ್ಯಾಹ್ನ ತಾಲೂಕಿನ ಬಿದನಗೆರೆ ಬಸವೇಶ್ವರ ಮಠಕ್ಕೆ ಬಿಟ್ಟಿದ್ದಾರೆ.
ಮಡಿಕೆಹಳ್ಳಿ ತಾಪಂ ಸದಸ್ಯ ಗಂಗರಂಗಯ್ಯ ಅಲಿಯಾಸ್ ರಾಜು ಹಾಗೂ ಕುಮಾರ, ಲೋಕೇಶ್,ರೂಪೇಶ್, ಬೋರಯ್ಯ ಎಂಬುವರು ಬಸವಣ್ಣನನ್ನು ಮಡಿಕೆಹಳ್ಳಿ ಗ್ರಾಮದ ರೀಯಾಜ್ ಎಂಬ ವ್ಯಕ್ತಿಗೆ ಕದ್ದು ಮಾರಾಟ ಮಾಡಿ, ಹತ್ಯೆಗೆ ಯತ್ನಿಸಿದರು. ಇದನ್ನು ಪ್ರಶ್ನೆ ಮಾಡಿದಕ್ಕೆ ಆರೋಪಿಗಳು ಹಾಗೂ ಕುಮಾರನ ಪತ್ನಿಸುಶೀಲಮ್ಮ, ಲೋಕೇಶ್ ಪತ್ನಿ ಗಂಗಮ್ಮ, ಅಕ್ರಮ ಕೂಟಕಟ್ಟಿಕೊಂಡು ನನ್ನನು ಹಾಗೂ ನನ್ನ ಹೆಂಡತಿ, ಮಗಳನ್ನು ನಿಂದಿಸಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದುಕೊತ್ತಗೆರೆ ಹೋಬಳಿ ತಿರುಮಲಯ್ಯನಪಾಳ್ಯ ಗ್ರಾಮದ ಹುಚ್ಚೀರಯ್ಯ ಅಲಿಯಾಸ್ ರಾಜಣ್ಣ ಕುಣಿಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರತಿ ದೂರು: ಪೊಲೀಸ್ ಠಾಣೆಗೆ ಪ್ರತಿ ದೂರುನೀಡಿರುವ ಗಂಗಮ್ಮ ಹಾಗೂ ಲೋಕೇಶ್ ಬಸವಣ್ಣನನ್ನು ಕದ್ದು ಮಾರಾಟ ಮಾಡಿಲ್ಲ. ಬಸವ ಗ್ರಾಮದಲ್ಲಿನಹಸುಗಳಿಗೆ ಬಹಳ ದಿನಗಳಿಂದ ತೊಂದರೆ ನೀಡುತ್ತಿತ್ತು.ಹಾಗಾಗಿ ಅದನ್ನು ಕುಣಿಗಲ್‌ನ ಸಂತೇ ಮೈದಾನದಲ್ಲಿಬಿಡಲಾಗಿತ್ತು. ವಿನಃ ಮಾರಾಟ ಮಾಡಿಲ್ಲಹಾಗೂ ಹುಚ್ಚವೀರಯ್ಯ ಹಾಗೂ ಇತರರು ನನ್ನಮಾನಭಂಗಕ್ಕೆ ಯತ್ನಿಸಿ ಹಲ್ಲೆ ನಡೆಸಿದ್ದಾರೆ ಎಂದು ಪ್ರತಿ ದೂರಿನಲ್ಲಿ ತಿಳಿಸಿದ್ದಾರೆ.
ತಾಲೂಕಿನ ಮೆಣಸೀನಹಳ್ಳಿ ಸೇರಿದಂತೆ ವಿವಿಧ ಗ್ರಾಮಸ್ಥರು ಬೆಟ್ಟದರಂಗನಾಥಸ್ವಾಮಿ ದೇವಾಲಯಕ್ಕೆಸೇರಿದ ಬಸವಣ್ಣನನ್ನು ಪೂಜಿಸುತ್ತಿದ್ದರು.ಆದರೆ, ಕೆಲ ವ್ಯಕ್ತಿಗಳು ಬಸವಣ್ಣನನ್ನು ಕದ್ದುಮಾರಾಟ ಮಾಡಿ ಹತ್ಯಗೆ ಯತ್ನಿಸಿದ್ದಾರೆ ಎಂದು ದೂರು ಕೇಳಿ ಬಂದಿದೆ. ಹಾಗಾಗಿ ಆವ್ಯಕ್ತಿಗಳ ವಿರುದ್ಧ ತನಿಖೆ ನಡೆಸಿ ಆರೋಪಿಯಾರೇ ಆಗಿರಲಿ ಅಂಥವರ ವಿರುದ್ಧ ಕಠಿಣ ಕ್ರಮ ಪೊಲೀಸರು ಕೈಗೊಳ್ಳಬೇಕು. ●ದಿಲೀಪ್‌ಗೌಡ, ಬಿಜೆಪಿ ಪ್ರಧಾನ ಕಾರ್ಯದರ್ಶಿ
ಹಿಂದುಗಳ ಆರಾಧ್ಯ ದೈವ ಬಸವಣ್ಣನನ್ನು ಕದ್ದು ಮಾರಾಟ ಮಾಡುವ ದುರ್ಗತಿ ನನ್ನಗೆ ಬಂದಿಲ್ಲ. ನನ್ನ ರಾಜಕೀಯ ಅಭಿವೃದ್ಧಿಯನ್ನು ಸಹಿಸಲಾರದ ಬಿಜೆಪಿಯ ಕೆಲ ವ್ಯಕ್ತಿಗಳು ರಾಜಕೀಯದುರುದ್ದೇಶದಿಂದ ನನ್ನ ವಿರುದ್ಧ ಠಾಣೆಗೆ ದೂರು ಕೊಡಿಸಿ ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯತ್ನಿಸಿದ್ದಾರೆ. ಕುಣಿಗಲ್‌ನಲ್ಲಿ ಬಿಡಲಾಗಿದ್ದ ಬಸವಣ್ಣನನ್ನು ನಮ್ಮವರು ಪೊಲೀಸರ ವಶಕ್ಕೆ ನೀಡಿದ್ದಾರೆ. ●ಗಂಗರಂಗಯ್ಯ, ತಾಪಂ ಸದಸ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಧುಗಿರಿ: ಕಚೇರಿಯಲ್ಲೇ DYSP ರಾಸಲೀಲೆ!!: ವಿಡಿಯೋ ಸೆರೆ
Minister ಸೋಮಣ್ಣ, ಸಿ.ಎಸ್. ಹೆಸರಲ್ಲಿ ನಕಲಿ ಸಹಿ, ಲೆಟರ್‌ಹೆಡ್: ಬಂಧನ
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ ಸಾವು
Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.