ಹಲಸಿನ ಹಣ್ಣಿಗೆ ಹೆಚ್ಚಾದ ಬೇಡಿಕೆ: ಬೆಳೆಗಾರರಲ್ಲಿ ಸಂತಸ
ನೆಂಟರಿಷ್ಟರಿಗೆ ಉಚಿತವಾಗಿ ನೀಡುತ್ತಿದ್ದ ಹಣ್ಣಿನಿಂದ ಈಗ ಆರ್ಥಿಕ ಲಾಭ
Team Udayavani, Jul 26, 2019, 12:17 PM IST
ಕೊರಟಗೆರೆಯ ತೋವಿನಕೆರೆ ಗ್ರಾಮದಲ್ಲಿ ಮಾರಾಟಕ್ಕಿಟ್ಟಿರುವ ಹಲಸಿನ ಹಣ್ಣುಗಳ ರಾಶಿ.
ಕೊರಟಗೆರೆ: ಗ್ರಾಮೀಣ ಭಾಗದಲ್ಲಿ ಅಲಕ್ಷ್ಯಕ್ಕೆ ಒಳಗಾಗಿದ್ದ ಹಲಸಿನ ಹಣ್ಣಿಗೆ ಉತ್ತಮ ಬೇಡಿಕೆ ಬಂದಿದ್ದು ಬೆಳಗಾರರಲ್ಲಿ ಸಂತಸ ಮೂಡಿಸಿದೆ. ತಾಲೂಕಿನ ಚನ್ನರಾಯನದುರ್ಗಾ ಹೋಬಳಿಯ ತೋವಿನಕೆರೆ ಸುತ್ತಮುತ್ತಲಿನ ಪ್ರದೇಶ ಹಾಗೂ ಗುಬ್ಬಿ ತಾಲೂಕಿನ ಚೇಳ್ಳೋರು ಗ್ರಾಮದ ಸುತ್ತಮುತ್ತ ಅತಿಹೆಚ್ಚು ಹಲಸಿನ ಮರಗಳಿವೆ. ಈ ಭಾಗದ ಯಾದವ ಸಮುದಾಯವರ ಪ್ರತಿ ಜಮೀನಿನಲ್ಲೂ ಬದುವಿನ ಮೇಲೆ ಹಲಸಿನ ಮರಗಳು ಕಾಣ ಸಿಗುತ್ತವೆ. ಆದರೆ, ಬೆಳೆಗಾರರು ಎಂದಿಗೂ ಈ ಹಲಸಿನ ಹಣ್ಣನ್ನು ಆರ್ಥಿಕ ಬೆಳೆ ಎಂದು ನಂಬಿ ಕೊಂಡಿರಲಿಲ್ಲ. ಪ್ರತಿ ವರ್ಷ ಶೇ.40 ಭಾಗ ಹಣ್ಣು ಗಳು ನೆಲಕ್ಕೆ ಬಿದ್ದು ಹಾಳಾಗುತ್ತಿದ್ದ ಹಣ್ಣುಗಳನ್ನು ಕಿತ್ತು ಸಂಬಂಧಿಗಳಿಗೆ ಹಾಗೂ ಪರಿಚಯಸ್ಥರಿಗೆ ಉಚಿತವಾಗಿ ಕೊಟ್ಟು ಸಂತೋಷ ಪಡುವುದೇ ಹೆಚ್ಚಾಗಿ ಕಂಡು ಬರುತ್ತಿತ್ತು.
ಔಷಧೀಯ ಗುಣ ಹೊಂದಿದೆ:ಆದರೆ, ಹಲಸಿನ ಹಣ್ಣುಗಳ ವಿಷಯದಲ್ಲಿ ಈಗ ಸನ್ನಿವೇಶ ಸಂಪೂರ್ಣವಾಗಿ ಬದಲಾಗಿದೆ. ಕಳೆದ 5 ವರ್ಷಗಳಿಂದ ಹಲಸಿನ ಹಣ್ಣು ಔಷಧಿಗುಣವುಳ್ಳ ಹಾಗೂ ಆರೋಗ್ಯಕ್ಕೆ ಪೂರಕವಾಗಿದೆ ಎಂದು ತಿಳಿಯುತ್ತಿದ್ದಂತೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಣ್ಣು ಗಳು ರಾಜ್ಯದ ವಿವಿಧ ಕಡೆ ಮತ್ತು ಹೊರ ರಾಜ್ಯ ಗಳನ್ನು ತಲುಪುತ್ತಿವೆ. ತೋವಿನಕೆರೆಗೆ ಬಂದು ಖರೀದಿಸುವ ಪ್ರಕ್ರಿಯೆಗಳು ಪ್ರಾರಂಭವಾಗಿವೆ. ಕೇರಳ, ಚೆನ್ನೈ ಉದ್ಯಮಿಗಳು ಭೇಟಿ ನೀಡಿ ಬೆಳೆಗಾರರ ಹಾಗೂ ದಲ್ಲಾಳಿಗಳ ಜೊತೆ ಮಾತುಕತೆ ನಡೆಸಿ ಖರೀದಿಯಲ್ಲಿ ತೊಡಗುತ್ತಿದ್ದಾರೆ.
ದಕ್ಷಿಣ ವಿಯೆಟ್ನಾಂ ನಿಂದ ಬಂದ ವಿಜ್ಞಾನಿ ವ್ಯಾನ್ ಟ್ರೇ ಸ್ಥಳೀಯ ಹಲಸಿನ ಬಗ್ಗೆ ಮಾಹಿತಿ ಪಡೆದು ಕೊಂಡಿದ್ದಾರೆ. ತೋವಿನಕೆರೆಯಲ್ಲಿ ಸಂಗ್ರಹಣೆ ಮಾಡಿದ ಹಲಸಿನ ಹಣ್ಣುಗಳು ಪ್ರತಿ ಬುಧವಾರ ನಡೆಯುವ ಮಧುಗಿರಿ ಸಂತೆಗೆ ಹೋಗುತ್ತವೆ. ಅಲ್ಲಿಗೆ ಆಂಧ್ರ ಪ್ರದೇಶದ ಹಿಂದೂಪುರ, ಅನಂತ ಪುರ, ಕರ್ನೂಲು, ಹೈದರಾಬಾದ್ ಸೇರಿದಂತೆ ಗಡಿ ಭಾಗದವರು ಬಂದು ಖರೀದಿ ಮಾಡುತ್ತಾರೆ. ವಿಶೇಷವೆಂದರೆ ಖರೀದಿದಾರರಲ್ಲಿ ಹೆಚ್ಚಿನವರು ಬೀದಿಗಳಲ್ಲಿ ಹಣ್ಣು ಬಿಡಿಸಿ ಮಾರಾಟ ಮಾಡುವವರೇ ಆಗಿದ್ದಾರೆ.
ಆಂಧ್ರದ ವ್ಯಾಪಾರಿಗಳು ಆಗಮನ: ಕೆಲ ಸ್ಥಳೀಯರು ರೈತರಿಂದ ಖರೀದಿಸಿ ಇಲ್ಲಿಂದ ಹಿಂದೂಪುರಕ್ಕೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಾರೆ. ಹಲವು ವರ್ಷಗಳಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಾಬಸ್‌ಪೇಟೆ ಮಾರಾಟ ಗಾರರು ಬಂದು ಸ್ಥಳೀಯ ಮಧ್ಯವರ್ತಿಗಳ ನೆರವಿ ನಿಂದ ಉತ್ತಮ ಹಣ್ಣುಗಳನ್ನು ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದಾರೆ. ಅಕ್ಟೋಬರ್‌ನಿಂದ ಪ್ರಾರಂಭವಾಗಿ ಜನವರಿವರೆಗೂ ಪ್ರತಿ ದಿನ ಒಂದು ಟನ್ ಎಳೆಯ ಹಲಸಿನಕಾಯಿ ದೇಶದ ಬೇರೆ ಕಡೆಗಳಿಗೆ ಹೋಗುತ್ತದೆ. 300 ರಿಂದ 400 ವರೆಗೆ ಎಳೆಕಾಯಿಗಳು ಬಿಟ್ಟಿರುವ ಮರಗಳನ್ನು ಕರಡಿ ಕಾಟ ಎಂದು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ. ಮಧ್ಯವರ್ತಿಗಳು ಕಿತ್ತು ತೂಕದ ಲೆಕ್ಕದಲ್ಲಿ ಹೊರ ರಾಜ್ಯಗಳಿಗೆ ಕಳುಹಿಸಿ ಉತ್ತಮ ಲಾಭ ಗಳಿಸುತ್ತಿದ್ದಾರೆ.
● ಪದ್ಮನಾಭ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.