ತುಮಕೂರು ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಅರಣ್ಯ ನಾಶ
Team Udayavani, Feb 3, 2021, 9:48 PM IST
ತುಮಕೂರು: ಇತ್ತೀಚೆಗೆ ಮೋಜಿಗಾಗಿ ಅರಣ್ಯಕ್ಕೆ ಬೆಂಕಿ ಹಚ್ಚುವುದು, ಪ್ರಾಣಿಗಳನ್ನು ಭೇಟೆಯಾಡಲು ರಾತ್ರಿ ವೇಳೆ ಬೆಂಕಿ ಹಾಕುವುದು ಹೆಚ್ಚಾಗಿದ್ದು, 2020 ಜನವರಿಯಿಂದ ಇಲ್ಲಿಯವರೆಗೆ ಕಾಡಿಗೆ ಬೆಂಕಿ ಹಚ್ಚುವ ಪ್ರಕರಣಗಳು 246 ಪ್ರಕರಣಗಳು ವರದಿಯಾಗಿವೆ.
ಸಾಮಾನ್ಯವಾಗಿ ಜಿಲ್ಲೆಯಲ್ಲಿ ನವೆಂಬರ್ ನಲ್ಲಿ ಮಳೆ ನಿಂತು ಹೋಗಿ, ಚಳಿಗಾಲ ಆರಂಭಾವಾಗುತ್ತದೆ. ಈ ಸಮಯದಲ್ಲಿ ಗುಡ್ಡಗಳಿಗೆ ಬೆಂಕಿ ಬೀಳುವುದು ಸಾಮಾನ್ಯ, ಈಗಾಗಲೇ ಅಲ್ಲಲ್ಲಿ ಬೆಟ್ಟಗುಡ್ಡಗಳಿಗೆ ಹೋದವರು ಬೆಂಕಿ ಹಚ್ಚುತ್ತಿರುವುದು ಕಂಡು ಬರುತ್ತಿರುವುದು ಒಂದೆಡೆಯಾದರೆ, ರಾತ್ರಿ ವೇಳೆ ಮೊಲ ಸೇರಿದಂತೆ ಇತರೆ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಹೋದವರು ಒಂದು ಭಾಗಕ್ಕೆ ಬೆಂಕಿ ಹಚ್ಚಿ ಇನ್ನೊಂದು ಭಾಗದಲ್ಲಿ ಬಲೆಹಾಕಿ ಪ್ರಾಣಿಗಳನ್ನು ಹಿಡಿದು ತರುವುದು ಇನ್ನೊಂದೆಡೆಯಾಗಿದೆ. ಇದಲ್ಲದೆ ಮಳೆಗಾಲದಲ್ಲಿ ದನಕರುಗಳಿಗೆ ಹೊಸ ಚಿಗುರು ಹುಲ್ಲುಬೇಕೆಂದರೆ ಮಳೆ ನಿಂತು ಕೆಲವು ದಿನಗಳಲ್ಲಿ ಬೆಟ್ಟಗುಡ್ಡ ಕಾಡಿನಲ್ಲಿ ಬಿಸಿಲಿನ ಝಳಕ್ಕೆ ಒಣಗುವ ಹುಲ್ಲಿಗೆ ಬೆಂಕಿ ಹಚ್ಚಿದರೆ ಹುಲ್ಲು ಸುಟ್ಟುಹೋಗಿ ಮಳೆಗಾಲದಲ್ಲಿ ಮಳೆಬಿದ್ದಾಗ ಹೊಸ ಹುಲ್ಲು ಚೆನ್ನಾಗಿ ಬಂದು ದನಕರುಗಳಿಗೆ ಒಳ್ಳೆಯ ಮೇವು ಸಿಗುತ್ತದೆ ಎನ್ನುವ ಕಾರಣವನ್ನೂ ಮುಂದುಡುವುದಿದೆ.
ಜಿಲ್ಲೆಯಲ್ಲಿ 2020ರಿಂದ ಇಲ್ಲಿಯವರೆಗೆ 264 ಬೆಂಕಿ ಪ್ರಕರಣಗಳು ದಾಖಲಾಗಿವೆ. ದೇವರಾಯನದುರ್ಗದ ನಾಮದ ಚಿಲುಮೆ ಸೇರಿದಂತೆ ತುಮಕೂರು ತಾಲೂಕಿನಲ್ಲಿ 15 ಸಾವಿರಕ್ಕೂ ಹೆಚ್ಚು ಅರಣ್ಯ ಪ್ರದೇಶವಿದ್ದು, ಕಳೆದ ವರ್ಷ ಬಿದ್ದ ಬೆಂಕಿಯಿಂದ 200 ಎಕರೆಗೂ ಹೆಚ್ಚು ಪ್ರದೇಶ ಅರಣ್ಯ ನಾಶವಾಗಿರುವುದು ಇಲಾಖೆಯ ಅಂಕಿ ಅಂಶಗಳಿಂದ ತಿಳಿದುಬಂದಿದೆ.
ತಿಳಿವಳಿಕೆ ಕೊರತೆ: ತಾಲೂಕಿನ ಪ್ರಸಿದ್ಧ ಪ್ರವಾಸಿ ಕೇಂದ್ರ ದೇವರಾಯನದುರ್ಗದ ಬೆಟ್ಟವೂ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಬೆಂಕಿ ಪ್ರಕರಣಗಳು ಕಂಡು ಬಂದಿದೆ. ಈ ಭಾಗದ ಅರಣ್ಯದಲ್ಲಿ ಕಾಡ್ಗಿಚ್ಚು ಉಂಟಾಗುವುದಿಲ್ಲ. ಆದರೆ ಜನರ ತಿಳಿವಳಿಕೆ ಕೊರತೆಯಿಂದ ಅರಣ್ಯದಲ್ಲಿ ಬೆಂಕಿ ಹಚ್ಚಿ ಅಮೂಲ್ಯ ಸಂಪತ್ತನ್ನು ನಾಶ ಮಾಡುತ್ತಿದ್ದಾರೆ. ಸರ್ಕಾರ ಪ್ರತಿವರ್ಷ ಅರಣ್ಯ ಸಂಪತ್ತನ್ನು ಉಳಿಸಲು ಗಿಡ ಮರ ಬೆಳೆಸಲೆಂದು ಕೋಟ್ಯಂತರ ರೂ ಹಣವನ್ನು ಖರ್ಚು ಮಾಡುತ್ತಿದೆ. ಸ್ವಾಂತಂತ್ರÂ ಬಂದಾಗಿನಿಂದಲೂ ಪ್ರತಿವರ್ಷ ಗಿಡ ಮರ ಪೋಷಿಸಲು ಕೋಟಿ ಕೋಟಿ ಹಣ ಬಿಡುಗಡೆಯಾಗಿದೆ. ಅರಣ್ಯಕ್ಕಾಗಿ ಖರ್ಚು ಮಾಡಿರುವ ಹಣ ಲೆಕ್ಕ ನೋಡಿದರೆ ಎಲ್ಲಡೆ ಅರಣ್ಯ ಸಂಪತ್ತು ಹೆಚ್ಚಬೇಕಾಗಿತ್ತು. ಆದರೆ, ಇದರ ವಿರುದ್ಧ ಪ್ರತಿಕೂಲ ಪರಿಣಾಮ ಬೀರಿದೆ.
ಇದನ್ನೂ ಓದಿ :ಅಂಡಮಾನ್ ಕೋವಿಡ್ ಮುಕ್ತ ಪ್ರದೇಶ? ಹೊಸದಾಗಿ ದೃಢವಾಗದ ಸೋಂಕು ಪ್ರಕರಣ
ಜನರಲ್ಲಿ ತಿಳಿವಳಿಕೆ ಮೂಡಿಸುವುದರ ಜತೆಗೆ ಸಿಬ್ಬಂದಿಯನ್ನು ಹೆಚ್ಚು ನಿಯೋಜಿಸಿ ಕಾಡನಲ್ಲಿ ಬೆಂಕಿ ಹಚ್ಚುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಶಿಸ್ತು ಕ್ರಮ ಜರುಗಿಸದಿದ್ದರೆ ಅರಣ್ಯ ನಾಶ ನಿರಂತರವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.