ಪೇದೆಗೆ ಸೋಂಕು: ಠಾಣೆ ಸೀಲ್‌ಡೌನ್
Team Udayavani, Jul 6, 2020, 6:55 AM IST
ಕುಣಿಗಲ್: ಪಟ್ಟಣದ ಪೊಲೀಸ್ ಠಾಣೆಯ ಪೇದೆಯೊಬ್ಬರಿಗೆ ಕೋವಿಡ್ 19 ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆ, ಪೊಲೀಸ್ ವಸತಿ ಗೃಹ ಹಾಗೂ ಅಂದಾನಯ್ಯ ಬಡಾವಣೆಗೆ ಹೋಗುವ ರಸ್ತೆಯನ್ನು ತಾಲೂಕು ಆಡಳಿತ ಭಾನುವಾರ ಸೀಲ್‌ಡೌನ್ ಮಾಡಿದೆ. ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಯಲ್ಲಿ ಕೋವಿಡ್ 19 ಕರ್ತವ್ಯ ನಿರ್ವಹಿಸುತ್ತಿದ್ದ ಪೇದೆಗೆ ಕೋವಿಡ್ 19 ಸೋಂಕು ಪತ್ತೆಯಾಗಿದೆ.
ಇದರಿಂದ ಇಡೀ ಪೊಲೀಸ್ ಇಲಾಖೆ ಸಿಬ್ಬಂದಿ ಭಯಭೀತರಾಗಿ ರಾತ್ರೋ ರಾತ್ರಿ ಪೊಲೀಸ್ ವಸತಿ ಗೃಹದಲ್ಲಿದ್ದ ಪೊಲೀಸ್ ಕåಟುಂಬಗಳು ತುಮಕೂರು ಹಾಗೂ ತವರಿಗೆ ಸ್ಥಳಾಂತರಗೊಂಡಿದ್ದಾರೆ. ಠಾಣೆಯನ್ನು ಸೀಲ್‌ಡೌನ್ ಮಾಡಿರುವ ಕಾರಣ ತಾಲೂಕು ಕಚೇರಿ ಆವರಣದಲ್ಲಿರುವ ಕಂದಾಯ ಭವನಕ್ಕೆ ಠಾಣೆ ಸ್ಥಳಾಂತರ ಮಾಡಲಾಗಿದೆ.
ಹೋಂ ಕ್ವಾರಂಟೈನ್: ಸೋಂಕಿತ ಪೇದೆಯೊಂದಿಗೆ ಸಂಪರ್ಕದಲ್ಲಿದ್ದ ಸಿಪಿಐ, ಪಿಎಸ್‌ಐ, ಪೇದೆಗಳು ಸೇರಿದಂತೆ 20 ಮಂದಿಯನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಪೊಲೀಸ್ ಅಧಿಕಾರಿಗಳ ಹೋಂ ಕ್ವಾರಂಟೈನ್‌ನಿಂದಾಗಿ ಇಡೀ ಠಾಣೆಯ ಜವಾಬ್ದಾರಿ ಡಿವೈಎಸ್‌ಪಿ ವಹಿಸಿಕೊಂಡು ನಿರ್ವಹಿಸುತ್ತಿದ್ದಾರೆ.
ಮಹಿಳೆಯರಿಗೆ ಸೋಂಕು: ಪಟ್ಟಣದ ಕೋಟೆ ಪ್ರದೇಶದ ಮಹಿಳೆ, ಸಿದ್ದಾರ್ಥ ಕಾಲೋನಿಯ ಮಹಿಳೆಗೆ ಸೋಂಕು ಪತ್ತೆಯಾಗಿದೆ. ಎರಡೂ ಬಡಾವಣೆಯನ್ನು ತಾಲೂಕು ಆಡಳಿತ ಸೀಲ್‌ಡೌನ್ ಮಾಡಿದೆ. ತಾಲೂಕಿನಲ್ಲಿ ಈ ವರೆಗೆ 23 ಕೋವಿಡ್ 19 ಪ್ರಕರಣ ಪತ್ತೆಯಾಗಿವೆ. ಸೋಮವಾರದಿಂದ ಬೆಳಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಅಗತ್ಯ ವಸ್ತುಗಳ ವ್ಯಾಪಾರಕ್ಕೆ ಅವಕಾಶ ನೀಡಿ ಉಳಿದಂತೆ ತಾಲೂಕಾ ದ್ಯಂತ ಲಾಕ್‌ಡೌನ್ ಮಾಡಲು ತಾ. ಆಡಳಿತ ಆದೇಶ ಹೊರಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.