ಹೊರಗಿನಿಂದ ಬಂದವರಿಗೇ ಸೋಂಕು ಹೆಚ್ಚು
Team Udayavani, May 24, 2020, 6:49 AM IST
ತುಮಕೂರು: ಕಲ್ಪತರು ನಾಡಿನಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಲೇ ಇದೆ. ಪೊಲೀಸರ ಹದ್ದಿನ ಕಣ್ಣು ತಪ್ಪಿಸಿ ಹೊರ ರಾಜ್ಯದಿಂದ ಜಿಲ್ಲೆಗೆ ಕಳ್ಳದಾರಿಯಲ್ಲಿ ಬರು ತ್ತಲೇ ಇದ್ದಾರೆ. ನಗರದಲ್ಲಿದ್ದ ಸೋಂಕು ಹಳ್ಳಿ ಗಳತ್ತ ಮುಖ ಮಾಡಿದೆ. ಇನ್ನು ಸಮು ದಾಯದಲ್ಲಿ ಹರಡಿದರೆ ಏನು ಗತಿ ಎನ್ನುವ ಆತಂಕ ಜಿಲ್ಲೆಯ ಜನರಲ್ಲಿ ಹೆಚ್ಚಿದೆ.
ಹಳ್ಳಿಗಳತ್ತ ಕೋವಿಡ್ 19 ಮುಖ: ಹೊರ ರಾಜ್ಯ, ಜಿಲ್ಲೆಯಿಂದ ಬರುವವರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಜಿಲ್ಲೆಯ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ. ಆದರೂ ಜಿಲ್ಲೆಗೆ ಹೊರ ರಾಜ್ಯಗಳಿಂದ ಜಿಲ್ಲೆಗೆ ಗಡಿ ನುಸುಳಿ ಹಳ್ಳಿಗಳ ಮೂಲಕ ತಮ್ಮ ಗ್ರಾಮಗಳಿಗೆ ಬರುತ್ತಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ಕಾಣಿಸಿ ಕೊಂಡಿರುವುದು ರೋಗ ಹರಡುತ್ತಿರುವುದು ಬೇರೆ ಭಾಗದಿಂದ ಜಿಲ್ಲೆಗೆ ಬಂದಿರುವವರಿಂದಲೇ ಆಗಿದ್ದು, ಈಗ ಮೂಲ ನಿವಾಸಿಗಳಿಗೆ ಸೋಂಕು ಕಾಣಿಸಿ ಕೊಳ್ಳುತ್ತಿದೆ, ಇದರ ಜೊತೆಗೆ ಸೋಂಕಿನ ಸಂಪರ್ಕದಲ್ಲಿ ಇದ್ದವರಿಗೆ ಕೋವಿಡ್ 19 ತನ್ನ ಕಬಂದ ಬಾಹು ಚಾಚಿದೆ.
ದಿಢೀರನೇ ಸೋಂಕು ಹೆಚ್ಚು: ಸೋಂಕು ಪ್ರಕರಣಗಳು ಕಡಿಮೆ ಇದ್ದ ಜಿಲ್ಲೆಯಲ್ಲಿ ಈಗ ದಿಢೀರನೆ ಹೆಚ್ಚುತ್ತಿರುವುದು ಪ್ರತಿದಿನ ಹೊರ ರಾಜ್ಯಗಳಿಂದ ಜಿಲ್ಲೆಗೆ ಬಂದವರಿಗೆ ಸೋಂಕು ಕಾಣಿಸಿ ಕೊಳ್ಳುತ್ತಿರುವುದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.
ಮುಂಬೈ ನಂಟು: ಮುಂಬೈನಿಂದ ಬಂದಿದ್ದ ಪಿ-1401, 28 ವರ್ಷದ ಮಹಿಳೆ, 1402, 30 ವರ್ಷದ ಮಹಿಳೆ, ಪಿ-1403, 10 ವರ್ಷದ ಹುಡುಗ, ಪಿ-1404, 12 ವರ್ಷದ ಹುಡುಗಿ ಗೆ ಕಾಣಿಸಿ ಕೊಂಡಿತ್ತು. ಇವರೆಲ್ಲರೂ ಮುಂಬೈ ನಿಂದ ಬಂದವರೇ ಆಗಿದ್ದರು. ಈಗ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ತುಮಕೂರಿನ ಖಾದರ್ ನಗರ ನಿವಾಸಿ ಲಾರಿ ಚಾಲಕ ಪಿ.1561 ಮುಂಬೈಗೆ ಹೋಗಿ ಬಂದು ಮನೆ ಸೇರಿದ್ದ ಆತನನ್ನು ಪತ್ತೆ ಹಚ್ಚಿ ಪರೀಕ್ಷಿಸಿದಾಗ ಕೋವಿಡ್ 19 ಇರುವುದು ದೃಢವಾಗಿದೆ. ಇನ್ನೂ 1,243 ಜನರ ಮಾದರಿ ವರದಿ ಲ್ಯಾಬ್ ನಿಂದ ಬರಬೇಕಾಗಿದ್ದು, ಈ ವರದಿಯಲ್ಲಿ ಇನ್ನೂ ಎಷ್ಟು ಜನರಿಗೆ ಸೋಂಕು ಇದೆಯೋ ಎನ್ನುವ ಆತಂಕ ಜಿಲ್ಲೆಯ ಜನರನ್ನು ಕಾಡುತ್ತಿದೆ.
ಆಂಧ್ರದಿಂದ 133 ಮಂದಿ ಆಗಮನ: ಈವರೆಗೂ ಹೊರ ರಾಜ್ಯಗಳಿಂದ 462 ಮಂದಿ ಜಿಲ್ಲೆಗೆ ಬಂದಿದ್ದು, ಇವರಲ್ಲಿ ಆಂಧ್ರಪ್ರದೇಶದಿಂದಲೇ ಅತಿ ಹೆಚ್ಚು 133 ಮಂದಿ, ಮಹಾರಾಷ್ಟ್ರದಿಂದ 113, ತಮಿಳು ನಾಡಿನಿಂದ 103 ಜನರು ಬಂದಿದ್ದಾರೆ. ಹೊರ ರಾಜ್ಯದಿಂದ ಬಂದವರೆಲ್ಲರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸ ಲಾಗಿದ್ದು, ವರದಿ ಬರಬೇಕಾಗಿದೆ. ಹೊರ ರಾಜ್ಯಗಳಿಂದ ಬಂದವರನ್ನು ಕ್ವಾರಂಟೈನ್ ಮಾಡಲಾಗಿದೆ . ಈ ವರೆಗೆ 8,417 ಜನರ ಗಂಟಲು ದ್ರವ ಪರೀಕ್ಷೆ ನಡೆದಿದೆ, ಅದರಲ್ಲಿ 7,112 ಜನರ ವರದಿ ನೆಗೆಟಿವ್ ಎಂದು ಬಂದಿದೆ, ಈಗ 2,049 ಜನರನ್ನು ಹೋಂ ಕ್ವಾರಂಟೈನ್ ಮಾಡಲಾಗಿದ್ದು, 900 ಜನ ಐಸೋಲೇಷನ್ ನಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.
ನಗರದ ಪಿಎಚ್ ಕಾಲೋನಿಯನ್ನು ನಿಯಂತ್ರಿತ ವಲಯ ಕಂಟೈನ್ಮೆಂಟ್ ಜೋನ್ ನಿಂದ ತೆರವುಗೊಳಿಸಲಾಗಿದೆ. ಕಳೆದ 28 ದಿನಗಳಿಂದ ಪಿಎಚ್ ಕಾಲೋನಿಯಲ್ಲಿ ಯಾವುದೇ ಕೋವಿಡ್-19 ಪ್ರಕರಣ ವರದಿಯಾಗದೆ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.
-ಡಾ.ಕೆ.ರಾಕೇಶ್‌ಕುಮಾರ್, ಜಿಲ್ಲಾಧಿಕಾರಿ
* ಚಿ.ನಿ.ಪುರುಷೋತ್ತಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.