ಕೃಷ್ಣಪ್ಪರಿಂದ ಕೀಳು ಮಟ್ಟದ ರಾಜಕೀಯ
Team Udayavani, Jun 27, 2020, 5:44 AM IST
ತುರುವೇಕೆರೆ: ತಾಲೂಕಿನ ಮುನಿಯೂರು ಗ್ರಾಮದಲ್ಲಿ ನಿವೇಶನ ವಿಚಾರದಲ್ಲಿ ನಡೆದ ಹಲ್ಲೆ ಘಟನೆಯೊಂದಿಗೆ ಶಾಸಕ ಮಸಾಲ ಜಯರಾಮ್ ಹೆಸರನ್ನು ರಾಜಕೀಯ ದುರುದ್ದೇಶಕ್ಕಾಗಿ ಥಳಕು ಹಾಕುವ ಮೂಲಕ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಕೀಳು ಮಟ್ಟದ ರಾಜಕೀಯಕ್ಕೆ ಮುಂದಾಗಿದ್ದಾರೆ ಎಂದು ಬಿ. ಜೆ.ಪಿ.ಮುಖಂಡ ವಿ.ಬಿ.ಸುರೇಶ್ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮುನಿಯೂರು ಹಲ್ಲೆ ಘಟನೆಯನ್ನು ನೆಪವಾಗಿಸಿ ಕೊಂಡು ಮೆರವಣಿಗೆ ಮೂಲಕ ಸಾರ್ವಜನಿಕವಾಗಿ ತನ್ನ ಇರುವಿಕೆಯನ್ನು ಪ್ರದರ್ಶಿಸಲು ಮುಂದಾಗಿದ್ದಾರೆ. ತಾಲೂಕಿನಲ್ಲಿ ವೈಯಕ್ತಿಕ ದ್ವೇಷ, ಜಮೀನು ವಾದ ಘಟನೆಗಳಿಗೆ ಶಾಸಕರ ಹೆಸರು ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಮುನಿಯೂರು ನಿವೇಶನ ವಿವಾದ ಸುಮಾರು 10 ವರ್ಷ ಹಳೆಯದಾಗಿದ್ದು, ಆ ವೇಳೆ ಶಾಸಕರಾಗಿದ್ದ ಎಂ.ಟಿ.ಕೃಷ್ಣಪ್ಪ ವಿವಾದ ಇತ್ಯರ್ಥಕ್ಕೆ ಯಾಕೆ ಮುಂದಾಗಲಿಲ್ಲ. 15 ವರ್ಷ ಶಾಸಕರಾಗಿದ್ದ ಅವಧಿಯಲ್ಲಿ ಇಂತಹ ಘಟನೆಗಳು ನಡೆದಿಲ್ಲವೇ ಎಂದು ಪ್ರಶ್ನಿಸಿದರು. ಮುನಿಯೂರು ರಸ್ತೆಗೆ ಕಾಯಕಲ್ಪ ನೀಡಲಾಗದವರು ನಿವೇಶನ ವಿಚಾರದಲ್ಲಿ ಹಲ್ಲೆ ನಡೆಸಿದವರು ಬಿಜೆಪಿ ಕಾರ್ಯಕರ್ತ ಎಂದು ಹಣೆ ಪಟ್ಟಿ ಅಂಟಿಸಿ ಜನರ ಓಲೈಕೆಗೆ ಹೋರಾಟದ ಗಿಮಿಕ್ ನಡೆಸಿದ್ದಾರೆ.
ಕ್ಷೇತ್ರದ ಅಭಿವೃದಿಗೆ ಶ್ರಮಿಸುತ್ತಿರುವ ಶಾಸಕ ಮಸಾಲಜಯರಾಮ್ ಅವರ ಏಳಿಗೆಯನ್ನು ಸಹಿಸದೇ ಮಾಜಿ ಶಾಸಕ ಕೃಷ್ಣಪ್ಪ ಸಲ್ಲದ ಪಿತೂರಿ ನಡೆಸುತ್ತಿದ್ದಾರೆ ಎಂದು ದೂರಿದರು. ಎಪಿಎಂಸಿ ಸದಸ್ಯ ವಿ.ಟಿ.ವೆಂಕಟರಾಮ್, ಪಪಂ ಸದಸ್ಯ ಚಿದಾನಂದ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೆಡಗೀಹಳ್ಳಿ ವಿಶ್ವನಾಥ್, ಗಣೇಶ್, ನಾಗಲಾಪುರ ಮಂಜಣ್ಣ, ಹೇಮಚಂ ದ್ರು, ಗ್ರಾಪಂ ಮಾಜಿ ಅಧ್ಯಕ್ಷ ಲಿಂಗರಾಜ್, ಮಾಜಿ ಸದಸ್ಯ ಕೀರ್ತಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kunigal: ಬೈಕ್, ಕ್ಯಾಂಟರ್ ಮುಖಾಮುಖಿ ಢಿಕ್ಕಿ; ಇಬ್ಬರು ಸ್ಥಳದಲ್ಲೇ ಮೃತ್ಯು
Gubbi: ಮೀಟರ್ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಬೇಸತ್ತು ಪೌರ ಕಾರ್ಮಿಕ ಆತ್ಮಹತ್ಯೆ
Koratagere: ವೃದ್ದೆ ಮೇಲೆ ಕೆಎಸ್ಆರ್ಟಿಸಿ ಬಸ್ ಹರಿದು ಸಾವು
Hunasur: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ತಿಪಟೂರಿನ ಮಹಿಳೆ!
Kunigal: ಅಪ್ರಾಪ್ತೆಯ ಅಪಹರಣ, ಲೈಂಗಿಕ ದೌರ್ಜನ್ಯ; ಗುಜರಾತ್ ನಲ್ಲಿ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.