Irrigation Development: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ: ವಿ.ಸೋಮಣ್ಣ
ಮೂರು ಜಿಲ್ಲೆಗಳ ಬರಪೀಡಿತ ತಾಲೂಕಿನ ಜನರಿಗೆ ಅನುಕೂಲ: ಕೇಂದ್ರ ಜಲಶಕ್ತಿ ರಾಜ್ಯ ಸಚಿವ
Team Udayavani, Jan 10, 2025, 11:08 PM IST
ಮಧುಗಿರಿ(ತುಮಕೂರು): ಬರಪೀಡಿತ ಜಿಲ್ಲೆಗಳ ಜನರ ಬಹುದಿನಗಳ ಬೇಡಿಕೆಗೆ ಕೊಟ್ಟ ಮಾತಿನಂತೆ ಭದ್ರಾ ಮೇಲ್ದಂಡೆ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅನುದಾನ ನೀಡಿದ್ದು, ಇದರಿಂದ ಬಯಲು ಸೀಮೆಯ ರೈತರಿಗೆ ವರದಾನವಾಗಲಿದೆ ಎಂದು ಕೇಂದ್ರ ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.
ತಾಲೂಕಿನ ಕೊಡಿಗೇನಹಳ್ಳಿ-ಐಡಿಹಳ್ಳಿ ಹೋಬಳಿಯಲ್ಲಿ ಕೇಂದ್ರ ಸರ್ಕಾರದಿಂದ ವಿವಿಧ ಸವಲತ್ತು ವಿತರಿಸಿ ಮಾತನಾಡಿ, ಕಾಂಗ್ರೆಸ್ನವರು ಭದ್ರಾ ಮೇಲ್ದಂಡೆಗೆ ಬಿಜೆಪಿ ಅನುದಾನ ಘೋಷಣೆ ಮಾಡಿದರೂ ಹಣ ನೀಡುತ್ತಿಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದರು. ಅನುದಾನ ನೀಡುವ ಮೂಲಕ ಅವರಿಗೆ ಉತ್ತರ ನೀಡಲಾಗಿದೆ ಎಂದರು.
ಕಳೆದ ಬಾರಿ ಬಿಜೆಪಿ ಭದ್ರಾ ಮೇಲ್ದಂಡೆಗೆ 5,300 ಕೋಟಿ ಅನುದಾನ ಬಜೆಟ್ ನಲ್ಲಿ ಘೋಷಿಸಿತು. ಆದ್ರೆ ಅನುಮತಿ ಕೊಡುವ ಮುನ್ನವೇ ಕಾಂಗ್ರೆಸ್ ನಾಯಕರು ಇದು ಸುಳ್ಳು ಯೋಜನೆಯೆಂದು ಪ್ರಚಾರ ಮಾಡಿದ್ದರು. ಆದರೆ ಪ್ರಧಾನಿ ಮೋದಿ ಅದನ್ನು ಸುಳ್ಳಾಗಿಸಿದ್ದು ಭದ್ರಾ ಮೇಲ್ದಂಡೆ ಯೋಜನೆಗೆ ಒಪ್ಪಿಗೆ ಕೊಡುವ ಮೂಲಕ ರಾಜ್ಯದ ರೈತರ ಪರವಾಗಿ ಬಿಜೆಪಿ ನಿಂತಿದೆ ಎಂದು ಸಾಬೀತು ಮಾಡಿದ್ದಾರೆ. ಇದರಿಂದ 3 ಜಿಲ್ಲೆಗಳ ಬರಪೀಡಿತ ತಾಲೂಕಿನ ಜನರಿಗೆ ಅನುಕೂಲವಾಗಲಿದೆ. ಅಲ್ಲದೆ ಈಗಾಗಲೇ 2.25 ಲಕ್ಷ ಕೋಟಿ ಕೇಂದ್ರದಿಂದ ಅನುದಾನ ನೀಡಲಿದ್ದು, 27 ಸಾವಿರ ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ ಎಂದರು.
ಮನೆ, ನಿವೇಶನ ಹಾಗೂ ನರೇಗಾ ಕಾಮಗಾರಿ ನೀಡುವ ವಿಚಾರದಲ್ಲಿ ಇಲ್ಲಿನ ಪಿಡಿಒಗಳು ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಎಂದು ಪಕ್ಷಭೇದ ಮಾಡುವುದು ಗಮನಕ್ಕೆ ಬಂದಿದೆ. ಅಯ್ಯಾ ಅಧಿಕಾರಿಗಳೇ ನರೇಗಾ ಯೋಜನೆ ನಮ್ಮದು. ನಾವೇ ಅದಕ್ಕೆ ಶೇ. 60 ರಷ್ಟು ಅನುದಾನ ಕೊಡ್ತೀವಿ. ನೀವು ಹೀಗೆಲ್ಲ ಮಾಡಿದರೆ ಎಲ್ಲಿ ಬಟನ್ ಒತ್ತಬೇಕೋ ಅಲ್ಲಿ ಒತ್ತುತ್ತೀನಿ. ಬೇಡ ಇವೆಲ್ಲ ಜನರ ಕೆಲಸವನ್ನು ನಾವೆಲ್ಲ ಸೇರಿ ಮಾಡೋಣ, ಯಾವುದೇ ಬಡವ ಕೆಲಸ ಮಾಡಿಕೊಡಿ ಎಂದು ಕಚೇರಿಗೆ ಬಂದರೆ ಅವನ ಕೆಲಸ ಮಾಡಿಕೊಡಿ. ಇಲ್ಲವಾದ್ರೆ ಎಲ್ಲರೂ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Power Prayers: ಡಿಸಿಎಂ ಟೆಂಪಲ್ ರನ್ ವಿಚಾರ; ಎಚ್ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.