ಮಧುಗಿರಿ ತಾಲೂಕಿನ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡುವೆ
Team Udayavani, Jun 1, 2021, 3:11 PM IST
ಮಧುಗಿರಿ: ಜಿಲ್ಲೆಯಲ್ಲಿ ಮಧುಗಿರಿ ಬರಪೀಡಿತವಾಗಿದ್ದು, ರೈತರ ಅಭಿವೃದ್ಧಿಗಾಗಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಸಂಸದ ಜಿ.ಎಸ್. ಬಸವರಾಜು ತಿಳಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ನೇತ್ರಾವತಿ 2ನೇ ತಿರುವು ಯೋಜನೆಯಡಿ ಕೆ.ಟಿ.ತಿಮ್ಮನಹಳ್ಳಿ ಕೆರೆಗೆ ನೀರು ಹರಿಸುವ ಕಾರ್ಯಕ್ರಮವಿದ್ದು, ಇದು ಸಾಕಾರಗೊಂಡರೆ ತಾಲೂಕು ಬರಪೀ ಡಿತ ಮುಕ್ತ ಕ್ಷೇತ್ರವಾಗುವುದು. ಇದರಿಂದ ರೈತರೂ ಅಭಿವೃದ್ಧಿ ಹೊಂದುವರು ಎಂದರು.
ತಾಲೂಕಿನಲ್ಲಿ ಕೋವಿಡ್ ಸೋಂಕುಇ ಳಿಮುಖವಾಗುತ್ತಿದ್ದು, ಅಧಿಕಾರಿಗಳು ಮತ್ತಷ್ಟು ಹೆಚ್ಚಿನ ಶ್ರಮ ಹಾಕಿ ನಿಯಂತ್ರಣ ಮಾಡಬೇಕು. ಪರೀಕ್ಷಾ ವರದಿ ಶೀಘ್ರನೀಡಲು ಕ್ರಮ ವಹಿಸಬೇಕಿದ್ದು, ಲಸಿಕೆಯನ್ನು ಎಲ್ಲರೂ ಪಡೆಯಬೇಕಿದೆ ಎಂದರು.
ಕಾಂಗ್ರೆಸ್‌ನವರು ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದ ಕಾರಣ 35 ಲಕ್ಷ ಡೋಸ್ ಲಸಿಕೆಯನ್ನು ಕೇಂದ್ರ ಆಫ್ರಿಕಾಗೆ ಕಳುಹಿಸಿತ್ತು. ಈಗ ರಾಜ್ಯದಲ್ಲೇ ಹೆಚ್ಚು ಲಸಿಕೆ ನೀಡಲಾಗಿದೆ ಎಂದರು.
ಮಧುಗಿರಿ ಪುನರ್ಜನ್ಮ ನೀಡಿದೆ: ರಾಜಕೀಯವಾಗಿ ಮಧುಗಿರಿ ಪುನರ್ಜನ್ಮ ನೀಡಿದ್ದು, ಯಾವುದೇ ಯೋಜನೆ ಬಂದರೂ ಮಧುಗಿರಿಗೆ ಮೊದಲ ಆದ್ಯತೆ ನೀಡುತ್ತೇನೆ. ಕೇಂದ್ರ ಸರ್ಕಾರದ ಜಲಜೀವನ್‌ಯೋಜನೆ ಜಾರಿಗೊಳಿಸುವ ಸಂಬಂಧ ಈಗಾಗಲೇ ಕಾರ್ಯ ಪ್ರವೃತ್ತನಾಗಿದ್ದು, 2 ವರ್ಷದ ಸಂಸದನ ಕಾಲಮಿತಿಯಲ್ಲಿ 1.5 ತಿಂಗಳು ಮಾತ್ರ ಅಧಿವೇಶನನಡೆದಿದೆ. ಪ್ರಸ್ತುತ ಜೂ.1 ರಿಂದ ಹೇಮಾವತಿ ನೀರು ಹರಿಸಲು ಕ್ರಮ ವಹಿಸಿದ್ದು, ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಲಾಗಿದೆ ಎಂದರು.
ಆಸ್ಪತ್ರೆಗೆ ಆಕ್ಸಿಜನ್ ಘಟಕ: ಜಿಲ್ಲಾ ಉಸ್ತುವಾರಿ ಸಚಿವರು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಆಸ್ಪತ್ರೆಗೆ ಆಕ್ಸಿಜನ್ ಘಟಕಕ್ಕಾಗಿ ವೈದ್ಯರು ಮನವಿ ಮಾಡಿದ್ದು, 0.5 ಕೆ ಯುನಿಟ್ ಆಕ್ಸಿಜನ್ ಘಟಕ ಮಂಜೂರಾಗಿದೆ. ಇದರಿಂದ ತುರ್ತು ಸಮಯದಲ್ಲಿ ರೋಗಿಗಳಿಗೆ ನೆರವಾಗಲಿದ್ದು, ಆಸ್ಪತ್ರೆ ಕೂಡ ಮೇಲ್ದರ್ಜೆಗೆ ಏರಲಿದೆ ಎಂದರು. ಉಪವಿಭಾಗಾಧಿ ಕಾರಿ ಸೋಮಪ್ಪ ಕಡಕೋಳ, ತಹಶೀಲ್ದಾರ್ ವೈ.ವಿ.ರವಿ, ಡಿವೈಎಸ್ಪಿ ರಾಮಕೃಷ್ಣ, ಯುವ ಕಾಂಗ್ರೆಸ್‌ಉಪಾಧ್ಯಕ್ಷ ಆರ್.ರಾಜೇಂದ್ರ, ತಾಪಂ ಮಾಜಿ ಅಧ್ಯಕ್ಷೆ ಇಂದಿರಾ, ಇಒ ದೊಡ್ಡಸಿದ್ದಯ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗೇಶ್‌ಬಾಬು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
Pavagada: ಟ್ರ್ಯಾಕ್ಟರ್ ಗೆ ಕ್ರೇನ್ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವು
Pavagada: ರಸ್ತೆ ಅಪಘಾತದಲ್ಲಿ ಮಂಡ್ಯ ಮೂಲದ ಬೊಲೆರೋ ಚಾಲಕ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.