ಕಲ್ಪತರು ನಾಡಿಗೆ ಹರ್ಷ ನೀಡುತ್ತಾ ಕೇಂದ್ರ ಬಜೆಟ್
Team Udayavani, Jul 5, 2019, 12:11 PM IST
ತುಮಕೂರು: ಕೈಗಾರಿಕಾ ಕ್ಷೇತ್ರದಲ್ಲಿ ಪ್ರಗತಿ ದಾಪು ಗಾಲು ಹಾಕುತ್ತಾ ದೇಶದ ಗಮನ ಸೆಳೆಯುತ್ತಿರುವ ತುಮಕೂರು ಜಿಲ್ಲೆಗೆ ಕೇಂದ್ರ ಸರ್ಕಾರ ಎಚ್ಎಎಲ್ ಮತ್ತು ಸೋಲಾರ್ ಪಾರ್ಕ್ ಹಾಗೂ ಸ್ಮಾರ್ಟ್‌ಸಿಟಿ, ಕೈಗಾರಿಕಾ ಕಾರಿಡಾರ್ ಘೋಷಣೆ ಮಾಡಿದೆ. ಈ ಮೂಲಕ ದೇಶದ ಗಮನ ಸೆಳೆದಿರುವ ಕಲ್ಪತರು ನಾಡಿಗೆ ಪ್ರಸಕ್ತ ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಹೊಸ ಯೋಜನೆ ಘೋಷಿಸುತ್ತಾರೆಯೇ, ಇಲ್ಲ ಹಳೆ ಯೋಜನೆಗೆ ಇನ್ನು ಹೆಚ್ಚಿನ ಹಣ ಬಿಡುಗಡೆ ಮಾಡಿ ಚಾಲನೆ ಒತ್ತು ನೀಡುತ್ತಾರೆಯೇ ಎಂಬುದು ನಿರೀಕ್ಷೆ ಹುಟ್ಟಿಸಿದೆ.
ಪ್ರತಿವರ್ಷ ಕೇಂದ್ರ ಬಜೆಟ್‌ನಲ್ಲಿ ರೈಲ್ವೆ ಬಜೆಟ್ ಮಂಡನೆಯಾದ ಮೇಲೆ ಸಾಮಾನ್ಯ ಬಜೆಟ್ ಮಂಡನೆಯಾಗುತ್ತಿತ್ತು. ಆದರೆ ಇದು 4ನೇ ಬಾರಿಗೆ ಸಾಮಾನ್ಯ ಬಜೆಟ್ ಜೊತೆಯಲ್ಲಿ ರೈಲ್ವೆ ಬಜೆಟ್ ಸೇರಿಸಿ ಮಂಡನೆಯಾಗುತ್ತಿದೆ. ಜಿಲ್ಲೆಗೆ ಕಳೆದ 2009-10 ರಲ್ಲಿ ಮಂಜೂರಾದ ಹಲವು ರೈಲ್ವೆ ಯೋಜನೆಗಳು ಇಂದಿಗೂ ಕಾರ್ಯಗತವಾಗಿಲ್ಲ. ಕಳೆದ ರೈಲ್ವೆ ಬಜೆಟ್‌ನಲ್ಲಿ ಮಂಡಿಸಿದ್ದ ಯೋಜನೆಗಳು ನಿಂತಲ್ಲೇ ನಿಂತಿವೆ. ಹೀಗಿರುವಾಗ ಈಗ ಮಂಡಿಸಲಿರುವ ಬಜೆಟ್‌ನಲ್ಲಿ ರೈಲ್ವೆ ಯೋಜನೆಯಲ್ಲಿ ಏನು ಕೊಡುಗೆ ನೀಡಬಹುದು ಎಂಬ ಕುತೂಹಲವಿದೆ.
ಈವರೆಗೂ ರೈಲ್ವೆ ಬಜೆಟ್‌ನಲ್ಲಿ ಮಂಡನೆಯಾಗಿರುವ ಹಲವು ಯೋಜನೆಗಳು ಇನ್ನೂ ಪೂರ್ಣಗೊಂಡಿಲ್ಲ. ಕಳೆದ 2009-10ರಲ್ಲಿ ರೈಲ್ವೆ ಬಜೆಟ್‌ನಲ್ಲಿ ಘೋಷಣೆ ಯಾಗಿದ್ದ ತುಮಕೂರು-ದಾವಣಗೆರೆ ಮತ್ತು ತುಮಕೂರು-ರಾಯದುರ್ಗ ರೈಲು ಮಾರ್ಗಗಳು ಇನ್ನೂ ಮಂದಗತಿಯಲ್ಲಿಯೇ ಇದೆ.
ಕೇಂದ್ರ ಸರ್ಕಾರ ರೈಲ್ವೆ ಬಜೆಟ್‌ನಲ್ಲಿ ಹಲವಾರು ಯೋಜನೆಗಳನ್ನು ಘೋಷಣೆ ಮಾಡುತ್ತದೆ. ಆದರೆ, ಆ ಯೋಜನೆಗಳು ಎಷ್ಟರ ಮಟ್ಟಿಗೆ ಕಾರ್ಯಗತವಾಗಿವೆ ಎನ್ನುವುದಕ್ಕೆ ಜಿಲ್ಲೆಗೆ ಬಜೆಟ್‌ನಲ್ಲಿ ಮಂಜೂರಾಗಿರುವ ಯೋಜನೆಗಳೇ ಸಾಕ್ಷಿ.
ತುರುವೇಕೆರೆ-ಚಿಕ್ಕನಾಯಕನಹಳ್ಳಿ- ಹುಳಿಯಾರು ಮಾರ್ಗವಾಗಿ ಮಂಜೂರಾಗಿದ್ದ ರೈಲ್ವೆ ಯೋಜನೆ ಇನ್ನೂ ಯಾವುದೇ ಹಂತದಲ್ಲೂ ಕಾರ್ಯಾರಂಭ ವಾಗಿಲ್ಲ. ಜಿಲ್ಲೆಯ ಮಟ್ಟಿಗೆ ಅಗತ್ಯವಾಗಿದ್ದ ಯೋಜನೆಗಳು ಮಂಜೂರಾಗಿವೆ. ಆದರೆ, ಅವು ಕಾರ್ಯಗತವಾಗದೇ ಇರುವುದು ನಿರಾಶೆ ಮೂಡಿದ್ದು, ಈ ವರ್ಷದ ರೈಲ್ವೆ ಬಜೆಟ್‌ನಲ್ಲಿ ಯಾವ ಯೋಜನೆಗೆ ಯಾವ ರೀತಿ ಹಣ ಮೀಸಲಿಡುವರು, ಯಾವ ಯೋಜನೆ ಶೀಘ್ರ ಕಾರ್ಯಪ್ರವೃತ್ತಿಗೆ ಚಾಲನೆ ದೊರೆಯುವುದು ಕಾದು ನೋಡಬೇಕಾಗಿದೆ.
ಮೋದಿ ಸರ್ಕಾರದಲ್ಲಿ ಜಿಲ್ಲೆಯ ಜನರ ನಿರೀಕ್ಷೆಯೇನು?: ಈ ಹಿಂದೆ ಕೇಂದ್ರ ನರೇಂದ್ರ ಮೋದಿ ಸರ್ಕಾರದಲ್ಲಿ ಜಿಲ್ಲೆಗೆ ಸ್ಮಾರ್ಟ್ ಸಿಟಿ ಯೋಜನೆ ಬಂದು ಅದರ ಕೆಲಸ ಆರಂಭಗೊಂಡಿದೆ. ಪಾಸ್‌ಪೋರ್ಟ್ ಕಚೇರಿ ಆರಂಭಗೊಂಡಿದೆ. ತುಮಕೂರು ಎಚ್ಎಂಟಿ ಕೈ ಗಡಿಯಾರ ಕಾರ್ಖಾನೆ ಜಾಗವನ್ನು ಇಸ್ರೋಗೆ ನೀಡಲಾಗಿದೆ. ಅದರ ಕಾರ್ಯ ಚಟುವಟಿಕೆ ಆರಂಭವಾಗಿದೆ. ಜಿಲ್ಲೆಯ ಗುಬ್ಬಿ ತಾಲೂಕು ನಿಟ್ಟೂರು ಬಳಿ ಎಚ್ಎಎಲ್ ಎಲಿಕ್ಯಾಪ್ಟರ್ ಘಟಕ ಪ್ರಾರಂಭಕ್ಕೆ ಸಿದ್ಧತೆ ನಡೆದಿದೆ. ಹಲವು ರೈಲ್ವೆ ಯೋಜನೆಗಳು ಮತ್ತು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಹಣ ಬಿಡುಗಡೆಯಾಗಿ ಕಾಮಗಾರಿಗಳು ನಡೆಯುತ್ತಿವೆ. ಕೈಗಾರಿಕಾ ಕಾರಿಡಾರ್ ಯೋಜನೆಗೆ ಈ ಹಿಂದಿನ ಬಜೆಟ್‌ನಲ್ಲಿ ಘೋಷಣೆ ಯಾಗಿತ್ತು. ಅದು ಇನ್ನೂ ಅನುಷ್ಠಾನವಾಗಿಲ್ಲ. ಕೆಲವು ರೈಲ್ವೆ ಯೋಜನೆಗಳು ಘೋಷಣೆ ಆಗಿದ್ದರೂ ಅವುಗಳ ಕಾರ್ಯ ಆರಂಭ ವಾಗಿಲ್ಲ. ತುಮಕೂರು ಜಿಲ್ಲೆಯ ತೆಂಗು ಬೆಳೆಗಾರರು ಸಂಕಷ್ಟದಲ್ಲಿದ್ದು, ಈ ಬಜೆಟ್‌ನಲ್ಲಿ ತೆಂಗು ಬೆಳೆಗಾರರಿಗೆ ಅನುಕೂಲವಾಗುತ್ತಾ? ಏನೆಲ್ಲಾ ಬಜೆಟ್‌ನಲ್ಲಿ ಇರುತ್ತೆ ಎನ್ನುವುದೇ ಕುತೂಹಲ ಮೂಡಿದೆ.
ಹಲವು ಯೋಜನೆ ಬಗ್ಗೆ ಮಾಹಿತಿ ನೀಡಿದ್ದೇನೆ:
ಹಲವು ಯೋಜನೆಗಳ ಬಗ್ಗೆ ಮಾಹಿತಿ ನೀಡಿರುವೆ ತುಮಕೂರು ನಗರದಲ್ಲಿ ಏಮ್ಸ್ ಮಾದರಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಬೇಕು, ಏಷ್ಯಾ ಖಂಡ ದಲ್ಲಿಯೇ ಪ್ರಸಿದ್ಧಿ ಪಡೆದಿರುವ ಜಿಲ್ಲೆಯ ಮಧುಗಿರಿ ತಾಲೂಕಿನ ಏಕಾಶಿಲ ಬೆಟ್ಟದ ಪಕ್ಕ ಅಂತಾರಾಷ್ಟ್ರೀಯ ಪ್ರವಾ ಸೋದ್ಯಮ ವಿಶ್ವವಿದ್ಯಾಲಯ ಸ್ಥಾಪನೆ ಮಾಡಬೇಕು ಎಂದು ನೂತನ ಸಂಸದ ಜಿ.ಎಸ್.ಬಸವ ರಾಜ್ ಕೇಂದ್ರ ಸರ್ಕಾರವನ್ನು ಮನವಿ ಮಾಡಿದ್ದಾರೆ. ರಾಜ್ಯದ 29360 ಗ್ರಾಮ ಗಳಿಗೂ ಕುಡಿಯು ನೀರಿನ ಪೈಲಟ್ ಯೋಜನೆ, ಜಿಲ್ಲೆಯ ತಿಪಟೂರು ತಾಲೂಕಿನಲ್ಲಿ ತೆಂಗು ವಿಶೇಷ ಆರ್ಥಿಕ ವಲಯ ಸ್ಥಾಪನೆ, ತುಮಕೂರು ಕೇಂದ್ರ ಸ್ಥಾನವನ್ನಾಗಿ ಮಾಡಿ ಹಲಸು ಬೋರ್ಡ್ ಸ್ಥಾಪನೆ, ರಾಜ್ಯದ ರಾಜಧಾನಿ ಬೆಂಗಳೂರಿನಿಂದ ವಸಂತ ನರಸಪುರದ ನಿಮ್ಸ್ ವರೆಗೆ ಮೆಟ್ರೋ ಯೋಜನೆ, 2022 ರೊಳಗೆ ರೈತರ ಆದಾಯ ದುಪ್ಪಟ್ಟು ಗೊಳಿಸಲು ಜಿಲ್ಲೆ ಯಲ್ಲಿ ರೈತರ ಉತ್ಪನ್ನಗಳ ಫಾರ್ವರ್ಡ್ ಮತ್ತು ಲಿಂಕೇಜ್‌ಗಾಗಿ ಎಂಪಿಸಿಎಸ್ ಮಾದರಿಯಲ್ಲಿ ಸಹಕಾರಿ ಒಕ್ಕೂಟ ಸ್ಥಾಪಿ ಸುವ ಪೈಲಟ್ ಯೋಜನೆ ರೂಪಿಸಬೇಕು ಎಂದಿದ್ದಾರೆ. ಹಾಗೆಯೇ ಕೊರಟಗೆರೆ ತಾಲೂಕಿನ ಸಿದ್ದರಬೆಟ್ಟದಲ್ಲಿ ರಾಷ್ಟ್ರೀಯ ಮಟ್ಟದ ಆಯುಷ್ ಪಾರ್ಕ್, ತುರುವೇ ಕೆರೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹೈನೋದ್ಯಮ ಹಬ್, ಚಿಕ್ಕನಾಯಕನಹಳ್ಳಿ ಅಥವಾ ಶಿರಾ ತಾಲೂಕಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಮಿಲ್ಲೆಟ್ಸ್ ಪಾರ್ಕ್ ಸ್ಥಾಪನೆ ಮಾಡಲು ಮತ್ತು ಹಳೆ ರೈಲ್ವೆ ಯೋಜನೆಗಳ ಕಾಮಗಾರಿಗಳ ಚುರುಕು ಗೊಳಿಸಲು ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
● ಚಿ.ನಿ. ಪುರುಷೋತ್ತಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere: ವಿದ್ಯೆಯ ಸಾಧನೆಗೆ ಸಾಧಿಸುವ ಗುರಿ ಒಂದೇ ಮುಖ್ಯ
ಜಟ್ಟಿ ಅಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಗಂಗಾದೇವಿ ಅಧ್ಯಕ್ಷೆ
Koratagere: ಮದ್ಯಪಾನದಿಂದ ಕುಟುಂಬದಲ್ಲಿ ದಿನ ಅಶಾಂತಿ ಉಂಟಾಗಿ ನೆಮ್ಮದಿ ಇಲ್ಲದಂತಾಗಿದೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
Covid: ಎನ್-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ
Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ
Koteshwar: ಬೀಜಾಡಿಯ ಯೋಧ ಅನೂಪ್ ಪೂಜಾರಿ ಮೃತ್ಯು
Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್ ಸಿಂಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.