ಜೆಡಿಎಸ್ ಈಸ್ ಡೆಡ್ ಅಂದವರು ಈ ಜನರ ನೋಡಲಿ: ದೇವೇಗೌಡ
Team Udayavani, Jan 9, 2018, 6:30 AM IST
ಪಾವಗಡ(ತುಮಕೂರು): ಜೆಡಿಎಸ್ ಈಸ್ ಡೆಡ್ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತಿತರ ಕೆಲವರು ಹೋದಬಂದ ಕಡೆಯಲ್ಲೆಲ್ಲ ಟೀಕಿಸಿಕೊಂಡು ತಿರುಗುತ್ತಿದ್ದಾರೆ. ಅವರು ಈ ಜನರನ್ನು, ಅವರ ಅಭಿಮಾನವನ್ನು ನೋಡಬೇಕಿತ್ತು. ಆಗ ಅವರಿಗೆ ಜೆಡಿಎಸ್‌ನ ಶಕ್ತಿ ತಿಳಿಯುತ್ತಿತ್ತು ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.
ಪಾವಗಡದಲ್ಲಿ ಸೋಮವಾರ ನಡೆದ ಯುವ ಜೆಡಿಎಸ್ ಕಾರ್ಯಕರ್ತರ ಸಭೆ ಮತ್ತು ಮನೆಮನೆಗೆ ಕುಮಾರಣ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದೇವೇಗೌಡರು, ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಹೆಗಲ ಮೇಲೆ ಕೂರಿಸಿಕೊಂಡು ಹಂತಹಂತವಾಗಿ ರಾಜಕೀಯದ ಮೆಟ್ಟಿಲನ್ನು ಹತ್ತಿಸಿ ಉಪಮುಖ್ಯಮಂತ್ರಿವರೆಗೂ ಬೆಳೆಸಿದೆ. ಅಂತಹ ವ್ಯಕ್ತಿ ಇಂದು ಜೆಡಿಎಸ್ ಸತ್ತು ಹೋಗಿದೆ. ಇದ್ದರೆ ಕೇವಲ ಎರಡು ಜಿಲ್ಲೆಯಲ್ಲಿ ಜೀವಂತ ಇರಬಹುದು ಎನ್ನುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಈ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಜನತೆ ಆಶೀರ್ವಾದ ಮಾಡುತ್ತಾರೆ, ಶಕ್ತಿ ತುಂಬುತ್ತಾರೆ, ಜೆಡಿಎಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತದೆ. ಆಗ ನೀವು ಏನು ಎಂಬುದು ಜನತೆಗೆ ತಿಳಿಯುತ್ತದೆ ಎಂದರು.
ನನ್ನ ಮಗನನ್ನೇ ಮುಖ್ಯಮಂತ್ರಿ ಮಾಡಬೇಕೆಂದು ನನ್ನಲ್ಲಿ ಇದ್ದಿದ್ದರೆ ನಾನು ಸಿದ್ದರಾಮಯ್ಯರವರನ್ನೂ ಬೆಳೆಸುತ್ತಿರಲಿಲ್ಲ, ಇತರೆ ನಾಯಕರನ್ನೂ ಬೆಳೆಸುತ್ತಿರಲಿಲ್ಲ. ಸಿದ್ದರಾಮಯ್ಯ ಯಾಕೆ ತನ್ನ ಮಗನನ್ನು ಚುನಾವಣೆಗೆ ನಿಲ್ಲಿಸ್ತಾ ಇದ್ದಾರೆ, ಶಾಸಕನನ್ನಾಗಿ ಮಾಡಲು ಮಂತ್ರಿ ಮಾಡಲೆಂದೇ ಎಂಬುದು ಅವರಿಗೆ ತಿಳಿದಿಲ್ಲವೇ, ಮಾತನಾಡಬೇಕಾದರೆ ಯೋಚಿಸಬೇಕು ಎಂದ ದೇವೇಗೌಡರು, ದೀನದಲಿತರನ್ನು, ರಾಜಕೀಯವಾಗಿ ಅಲ್ಪಸಂಖ್ಯಾತರಾಗಿದ್ದವರನ್ನು ಅಧಿಕಾರಕ್ಕೆ ತರುವುದೇ ನನ್ನ ಗುರಿಯಾಗಿತ್ತು ಎಂದರು.
ರಾಜ್ಯದೆಲ್ಲೆಡೆ ಹೊಸ ಗಾಳಿ ಬೀಸುತ್ತಿದೆ. ರಾಜಕೀಯ ಪರಿವರ್ತನೆ ಆಗಲಿದೆ. ಪಕ್ಷ ಸಂಘಟಿಸಬೇಕು ಎಂಬುದೇ ನನ್ನ ಗುರಿ. ಅದಕ್ಕಾಗಿ ಒಂದು ಬಾರಿಯಲ್ಲಾ, ಎಷ್ಟೂ ಬಾರಿಯಾದರೂ ರಾಜ್ಯ ಸುತ್ತಲು ಸಿದ್ಧನಿದ್ದೇನೆ. ಪ್ರಾದೇಶಿಕ ಪಕ್ಷವೊಂದು ಅಧಿಕಾರ ಬರಬೇಕು. ಆ ಮೂಲಕ ರಾಜ್ಯ ಅಭಿವೃದ್ಧಿಯಾಗಬೇಕೆಂಬುದೇ ನನ್ನ ಗುರಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
Vijayapura: ಕುರಿಗಾಯಿ, ಕೂಲಿಕಾರ, ರೈತರ ಮಕ್ಕಳಿಗೆ ‘ಬಂಗಾರ’ದ ಕಳೆ…
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
MUST WATCH
ಹೊಸ ಸೇರ್ಪಡೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Sandalwood: ‘ಕೋರ’ ಚಿತ್ರದ ಟ್ರೇಲರ್ ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.