ಕುಣಿಗಲ್: ಬೆಲೆ ಏರಿಕೆ ಖಂಡಿಸಿ ಜೆಡಿಎಸ್‌ನಿಂದ ಬೃಹತ್ ಎತ್ತಿನಗಾಡಿ ಜಾಥಾ
Team Udayavani, Apr 13, 2022, 6:16 PM IST
ಕುಣಿಗಲ್ : ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಹಾಗೂ ಕೋಮು ಸಾಮರಸ್ಯ ಕಾಪಾಡುವಲ್ಲಿ ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರ ವಿಫಲಗೊಂಡಿದೆ ಎಂದು ಆರೋಪಿಸಿ ತಾಲೂಕು ಜೆಡಿಎಸ್‌ನಿಂದ ಪಟ್ಟಣದಲ್ಲಿ ಬೃಹತ್ ಎತ್ತಿನಗಾಡಿ ಜಾಥಾ ನಡೆಯಿತು.
ದಿನ ಬಳಕೆ ವಸ್ತುಗಳಾದ ಪೆಟ್ರೋಲ್, ಡೀಸೆಲ್, ಗ್ಯಾಸ್, ಅಡಿಗೆ ಎಣ್ಣೆ, ಆಹಾರ ಪದಾರ್ಥ, ಕಟ್ಟಡ ನಿರ್ಮಾಣ ಸಾಮಾಗ್ರಿಗಳು, ರಸಗೊಬ್ಬರ ಬೆಲೆ ಏರಿಕೆ ಹಾಗೂ ಹಿಜಾಬ್, ಹಲಾಲ್, ಜಟ್ಕಾಕಟ್ ಹಂತಹ ವಿವಾದವನ್ನು ಕೋಮುಶಕ್ತಿಗಳು ಹುಟ್ಟು ಹಾಕುತ್ತಿರುವುದನ್ನು ಖಂಡಿಸಿ ಪಟ್ಟಣದ ಜೆಡಿಎಸ್ ಕಚೇರಿಯಿಂದ ತಾಲೂಕು ಕಚೇರಿವರೆಗೆ ಮಾಜಿ ಸಚಿವ ಡಿ.ನಾಗರಾಜಯ್ಯ, ಜೆಡಿಎಸ್ ತಾಲೂಕು ಆಧ್ಯಕ್ಷ ಬಿ.ಎನ್.ಜಗದೀಶ್ ಅವರ ನೇತೃತ್ವದಲ್ಲಿ ಬೃಹತ್ ಎತ್ತಿನಗಾಡಿ ಜಾಥಾ ನಡೆಸಿ, ತಾಲೂಕು ಕಚೇರಿ ಅವರಣದಲ್ಲಿ ಮಹಿಳೆಯರು ಗ್ಯಾಸ್ ಸಿಲಿಂಡರ್, ಸೌದೆ ಓಲೆಯನ್ನು ಇಟ್ಟು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿದರು.
ಮಾಜಿ ಸಚಿವ ಡಿ.ನಾಗರಾಜಯ್ಯ ಮಾತನಾಡಿ ಕೇಂದ್ರ, ರಾಜ್ಯ ಸರ್ಕಾರದ ದುರಾಡಳಿತ, ಬೆಲೆ ಏರಿಕೆಯಿಂದ ಜನ ಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ, ಪೆಟ್ರೋಲ್ 112 ರೂ, ಡಿಸೇಲ್ 105ರೂ, ಗ್ಯಾಸ್ 1100 ರೂ, ಕಬ್ಬಿಣ ಕೆಜಿಗೆ 82 ರೂ ಹಾಗೂ ರಸಗೊಬ್ಬರ ಬೆಲೆ ಶೇ 30 ರಿಂದ ಶೇ 40 ರಷ್ಟು ಏರಿಕೆಯಾಗಿದೆ, ಇದನ್ನು ಮುಚ್ಚಿ ಹಾಕಲು ಹಿಜಾಬ್, ಹಲಾಲ್, ಜಟ್ಕಾಕಟ್ ಎಂಬ ವಿವಾದವನ್ನು ಸೃಷ್ಠಿ ಮಾಡಿ, ಜನರಲ್ಲಿ ಧಾರ್ಮಿಕ ಭಾವನೆಯನ್ನು ತುಂಬಿ ಜನರನ್ನು ದಾರಿ ತಪ್ಪಿಸಲು ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಇಷ್ಟೇಲ್ಲಾ ಧರ್ಮ ಸಂಘರ್ಷವಿದ್ದರೂ ರಾಜ್ಯ ಸರ್ಕಾರ ಕೋಮುಶಕ್ತಿಗಳ ವಿರುದ್ದ ಕ್ರಮಕೈಗೊಳ್ಳದೇ ಇರುವುದು ಮೇಲ್ನೋಟಕ್ಕೆ ಸರ್ಕಾರದ ಕುಮ್ಮಕ್ಕು ಇದೇ ಎಂಬುದು ತೋರಿಸುತ್ತದೆ ಎಂದು ಟೀಕಿಸಿದರು, ಮಹಾತ್ಮಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ, ಬುದ್ಧರ ಈ ನಾಡಿನಲ್ಲಿ ಮತೀಯ ಶಕ್ತಿ ವಿಜೃಂಬಿಸುತ್ತಿದ್ದು, ರಾಷ್ಟ್ರಕವಿ ಕುವೆಂಪುರವರ ವಿಶ್ವ ಮಾನವ ಸಂದೇಶಕ್ಕೆ ಬೆಲೆಯಿಲ್ಲದಾಗಿದೆ, ಹಿಜಾಬ್, ಹಲಾಲ್, ಆಜಾನ್, ವ್ಯಾಪಾರ ನಿಷೇಧ ಮಾಡಿ ಅಲ್ಪ ಸಂಖ್ಯಾತ ಮುಸ್ಲಿಂಮರಿಗೆ ಮಾನಸಿಕವಾಗಿ ಹಿಂಸೆ ನೀಡಲಾಗುತ್ತಿದೆ, ಇದು ಸರಿಯಲ್ಲ ಎಂದರು.
ಸಂತೋಷ್ ಸಾವಿಗೆ ಬಿಜೆಪಿ ಕಾರಣ : ಬಿಜೆಪಿ ಕಾರ್ಯಕರ್ತ ಗುತ್ತಿಗೆದಾರ ಸಂತೋಷ್ ಸಾವಿಗೆ ಬಿಜೆಪಿಯೇ ನೇರ ಕಾರಣವೆಂದು ಗಂಭೀರ ಆರೋಪ ಮಾಡಿದ ಮಾಜಿ ಸಚಿವರು, ಸಂತೋಷ್ ಅವರು ಸಚಿವ ಈಶ್ವರಪ್ಪ ಅವರ ಅನುಮತಿ ಪಡೆದು ಗ್ರಾಮೀಣ ಪ್ರದೇಶದಲ್ಲಿ ನಾಲ್ಕು ಕೋಟಿ ರೂ ಖರ್ಚು ಮಾಡಿ 108 ರಸ್ತೆ ಕಾಮಗಾರಿ ಮಾಡಿದ್ದಾರೆ, ಕಾಮಗಾರಿ ಆದೇಶ ಹಾಗೂ ಬಿಲ್ ಮಾಡಲು ಶೇ 40 ರಷ್ಟು ಕಮಿಷನ್ ಕೊಡುವಂತೆ ಆತನ ಮೇಲೆ ಒತ್ತಡ ಏರಿದ್ದಾರೆ, ಈ ಸಂಬಂಧ ಪ್ರಧಾನಿ ಮೋದಿ, ಕೇಂದ್ರ ಸಚಿವರಾದ ಆಮಿತ್ ಷಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪತ್ರ ಬರೆದರು ಕ್ರಮಕೈಗೊಳ್ಳಲಿಲ್ಲ ಇದರಿಂದ ಸಾಲ ಮಾಡಿ ಹಾಗೂ ಹೆಂಡತಿಯ ವಡವೆಯನ್ನು ಅಡ ಇಟ್ಟಿ ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಇದಕ್ಕೆ ಬಿಜೆಪಿ ನಾಯಕರೇ ಕಾರಣ ಎಂದು ದೂರಿದರು.
ಶಾಸಕರಿಂದ ಶೇ 30 ರಷ್ಟು ಕಮಿಷನ್ : ತಾಲೂಕಿನಲ್ಲಿ ಸರ್ಕಾರದಿಂದ ನಡೆಯುವ ಯಾವುದೇ ಕಾಮಗಾರಿಗೆ ಗುತ್ತಿಗೆದಾರರು ಶೇ 30 ರಷ್ಟು ಕಮಿಷನ್ ಶಾಸಕ ಡಾ.ರಂಗನಾಥ್ ಅವರಿಗೆ ಕೊಡಬೇಕಾಗಿದೆ ಎಂದು ದೂರು ಕೇಳಿ ಬರುತ್ತಿದೆ, ಇದು ಹೀಗೆ ಮುಂದುವರೆದರೆ ತಾಲೂಕಿನ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವಲ್ಲಿ ಸಂಶಯವಿಲ್ಲ ಎಂದು ನಾಗರಾಜಯ್ಯ ಹೇಳಿದರು, ಶಾಸಕರು ಸರ್ಕಾರದಿಂದ ಹೊಸದಾಗಿ ಯಾವುದೇ ಅನುದಾನ ಮಂಜೂರು ಮಾಡಿಸಿಲ್ಲ, ನನ್ನ ಅಧಿಕಾರ ಅವಧಿಯಲ್ಲಿ ಮಂಜೂರಾಗಿದ್ದ ಕಾಮಗಾರಿ ಶಾಸಕರು ಗುದ್ದಲಿಪೂಜೆ ಮಾಡುತ್ತಿದ್ದಾರೆ, ಸಂಸದ ಡಿ.ಕೆ.ಸುರೇಶ್ ಕೇಂದ್ರ ಸರ್ಕಾರದಿಂದ ಒಂದು ನಾಯಾ ಪೈಸೆ ತಾಲೂಕಿನ ಅಭಿವೃದ್ದಿಗೆ ವಿನಿಯೋಗಿಸಿಲ್ಲ ಎಂದರು.
ಜಿ.ಪಂ ಮಾಜಿ ಅಧ್ಯಕ್ಷ ಡಾ.ರವಿ ಮಾತನಾಡಿ ಬಿಜೆಪಿ ಸರ್ಕಾರ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದೆ, ಕೋಮು ಗಲಬೆಯನ್ನು ಹತ್ತಿಕ್ಕುವಲ್ಲಿ ವಿಫಲಗೊಂಡಿದೆ, ಬಡವರಿಗೆ ರಕ್ಷಣೆ ಇಲ್ಲದಂತ್ತಾಗಿದೆ, ಕೋಮು ಸೌಹಾರ್ಧ ಹಾಗೂ ಜಾತಿಗೆ ಬಣ್ಣ ಕಟ್ಟುವ ಕೆಲಸವಾಗುತ್ತಿದೆ, ಕೆಲ ಸಂಘಟನೆಗಳು ಧರ್ಮ, ಧರ್ಮಗಳ ನಡುವೆ, ಜಾತಿ ಜಾತಿಗಳ ನಡುವೆ, ಜಾತಿಯ ವಿಷ ಬೀಜ ಭಿತ್ತಿ ಕೋಮುಗಲಬೆಗೆ ಪ್ರಚೋದನೆ ನೀಡುತ್ತಿದೆ, ಇದು ಹೀಗೆ ಮುಂದುವರೆದರೆ ದೇಶ ಎರಡನೇ ತಾಲಿಬಾನ್ ಆಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.
ಇದೇ ವೇಳೆ ಮೃತ ಸಂತೋಷ್ ಕೆ.ಪಾಟೀಲ್ ಅವರಿಗೆ ಸಂತಾಪ ಸೂಚಿಸಲಾಯಿತು, ತಹಶೀಲ್ದಾರ್ ಮಹಬಲೇಶ್ವರ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ತಾ.ಪಂ ಮಾಜಿ ಅಧ್ಯಕ್ಷ ಹರೀಶ್‌ನಾಯ್ಕ್, ಗ್ರಾ.ಪಂ ಸದಸ್ಯರಾದ ತರಿಕೆರೆ ಪ್ರಕಾಶ್, ಎಡಿಯೂರು ದೀಪು, ಪುರಸಭಾ ಮಾಜಿ ಅಧ್ಯಕ್ಷರಾದ ಕೆ.ಎಸ್.ಹರೀಶ್, ಆಯಿಷಾ ಬಿ, ಸದಸ್ಯ ಅನ್ಸಾರ್‌ಪಾಷ, ಮುಖಂಡರಾದ ತಮ್ಮಣ್ಣ, ನಯಾಜ್ ಅಹಮದ್, ಬೆನವಾರ ಶೇಷಾದ್ರಿ, ವೈ.ಹೆಚ್.ರಂಗಸ್ವಾಮಿ ಮತ್ತಿತರರು ಭಾಗವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.