ಸ್ಮಶಾನಕ್ಕಾಗಿ ಮೊರೆಯಿಟ್ಟ ಪುರವರ-ಹರಳಾಪುರ ಜನತೆ


Team Udayavani, Apr 17, 2022, 2:30 PM IST

Untitled-1

ಮಧುಗಿರಿ: ಸರ್ಕಾರ ಮೂಲಭೂತ ಸೌಕರ್ಯ ಜನರ ಮನೆಬಾಗಿಲಿಗೆ ತಲುಪಿಸಲು ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಎಂಬ ಕಾರ್ಯಕ್ರಮ ತಂದಿದ್ದು, ಶನಿವಾರ ಜನರು ಸ್ಮಶಾನಕ್ಕಾಗಿ ಮೊರೆಯಿಟ್ಟ ಘಟನೆ ನಡೆದಿದೆ.

ತಾಲೂಕಿನ ಪುರವರ ಹೋಬಳಿ ಕೊರಟಗೆರೆ ಮತ ಕ್ಷೇತ್ರದ ಹರಳಾಪುರದಲ್ಲಿ ಈ ಕಾರ್ಯಕ್ರಮ ನಡೆದಿದ್ದು, ಗ್ರಾಮಸ್ಥರು ಸಾಮೂಹಿಕವಾಗಿ ಸ್ಮಶಾನಕ್ಕಾಗಿ ಹಾಗೂ ಇರುವ ಸ್ಮಶಾನ ಒತ್ತುವರಿ ತೆರವಿಗಾಗಿ ಮೊರೆಯಿಟ್ಟರು. ಗ್ರೇಡ್‌-2 ತಹಶೀಲ್ದಾರ್‌ ಕಮಲಮ್ಮ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಹರಳಾಪುರದ ಗ್ರಾಮಸ್ಥರು ಸ್ಮಶಾನಕ್ಕಾಗಿ ಮನವಿ ಮಾಡಿದರು. ಗ್ರಾಮದ ಹನುಮಂತರಾಯಪ್ಪ ಮಾತನಾಡಿ, ನಮ್ಮ ವರು ಮೃತಪಟ್ಟರೆ ಹೂಳಲು ಸ್ಥಳವಿಲ್ಲ. ಈಗಾಗಲೇ ಹಲ ವರ ಮೃತರನ್ನು ಹೂತಿರುವುದು ರಸ್ತೆ ಬದಿಯಲ್ಲಿ ಕಳೆದ ಸಾಲಿನಲ್ಲಿ ರಸ್ತೆ ಅಭಿವೃದ್ಧಿ ಮಾಡುವಾಗ ಮೃತ ದೇಹದ ಮೂಳೆಗಳು ತೇಲಿ ಬಂದಿದ್ದು ಮನಸ್ಸನ್ನು ಕೆಡಿಸಿದೆ ಎಂದರು.

ಮತ್ತೂಬ್ಬ ಗ್ರಾಮಸ್ಥ ರಾಮಾನಾಯಕ ಮಾತ ನಾಡಿ, ನನ್ನ ಮಗ ಮೃತನಾಗಿದ್ದು, ರಸ್ತೆ ಬದಿಯಲ್ಲೇ ಹೂತಿದ್ದೇವೆ. ನಮಗೆ ಹೂಳಲು ಜಾಗವಿಲ್ಲ ಎಂದು ನೋವು ತೋಡಿಕೊಂಡರು. ಮತ್ತೂಂದು ಪ್ರಕರಣದಲ್ಲಿ ಪುರವರ ಸ.ನಂ.134/2 ರಲ್ಲಿ ಸ್ಮಶಾನದ ಜಾಗ ಒತ್ತುವರಿಯಾಗಿದ್ದು, ಸ.ನಂ.90ರಲ್ಲಿನ ಕಾಲೋನಿಯಲ್ಲಿನ ಸ್ಮಶಾ ನದ ಸರ್ವೆ ಕಾರ್ಯ ಮಾಡಬೇಕಿದೆ ಎಂದು ಪುರವರದ ಸಾಮಾಜಿಕ ಕಾರ್ಯಕರ್ತ ರಾಮಚಂದ್ರಪ್ಪ ಮನವಿ ಮಾಡಿದರು.

ಈಗ ಸ್ಮಾಶಾನವಿಲ್ಲದ ಹರಳಾಪುರ ಜನ ತೆಯ ಸಮಸ್ಯೆಯನ್ನು ಈ ಕಾರ್ಯಕ್ರಮ ನಿವಾರಿಸುತ್ತದೋ ಕಾದು ನೋಡಬೇಕು.

ಗ್ರಾಪಂ ಅಧ್ಯಕ್ಷೆಗೂ ತಟ್ಟಿದ ಸರ್ವೆ ಬಿಸಿ: ಸ್ವತಃ ಪುರವರ ಗ್ರಾಪಂ ಅಧ್ಯಕ್ಷೆ ಅಂಬಿಕಾ ಮಾತನಾಡಿ, ಪುರವರದ ಸ್ಮಶಾನಗಳ ಸರ್ವೆ ಮಾಡಿಕೊಡುವಂತೆ ಕಳೆದ ಸಾಲಿನಲ್ಲೇ ಮನವಿ ಮಾಡಿದರೂ, ಸರ್ವೆ ಇಲಾಖೆ ಕ್ರಮವಹಿಸಿಲ್ಲ. ಇನ್ನು ಜನಸಾಮಾನ್ಯರ ಪಾಡೇನು ಎಂದು ಅಸಮಾಧಾನ ಹೊರಹಾಕಿದ್ದು ಬೇಗ ಸರ್ವೆ ಮಾಡಿಸಿಕೊಡಲು ಎಡಿ ಎಲ್‌ಆರ್‌ ಏಕನಾಥ್‌ ಅವರಲ್ಲಿ ಮನವಿ ಮಾಡಿದರು.

ಆದರೆ, ಕಾರ್ಯಕ್ರಮದಲ್ಲಿ ಸರ್ವೆ ಇಲಾಖೆಯಲ್ಲಿ ಲಂಚಕ್ಕೆ ಬೇಡಿಕೆಯಿಡುತ್ತಾರೆ. ಖಾಸಗಿ ಸರ್ವೆ ಸಿಬ್ಬಂದಿ ಹೆಚ್ಚುವರಿ ಹಣ ನೀಡಿದರೆ ಮಾತ್ರ ಸರ್ವೆಗೆ ಮುಂದಾಗ್ತಾ ರೆಂದು ಸಾರ್ವಜನಿಕರು ದೂರಿದ್ದು ಅಂತಹ ಆರೋಪ ಗಳ ಬಗ್ಗೆ ಲಿಖೀತವಾಗಿ ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಏಕನಾಥ್‌ ಜಾರಿಕೊಂಡರು.

ಮಧ್ಯಾಹ್ನ ಬಂದ ತಹಶೀಲ್ದಾರ್‌: ಲೋಕಯುಕ್ತ ನ್ಯಾಯಾಲಯಕ್ಕೆ ಹೋಗಿದ್ದ ತಹಶೀಲ್ದಾರ್‌ ಸುರೇಶಾ ಚಾರ್‌ ಮಧ್ಯಾಹ್ನ ಕಾರ್ಯಕ್ರಮಕ್ಕೆ ಬಂದರು. ತಕ್ಷಣವೇ ಗ್ರಾಮದ ಮನೆ ಮನೆಗಳಿಗೆ ಭೇಟಿ ನೀಡಿದ ಅವರು, ಸಿದ್ಧವಿದ್ದ ಹಲವು ಸೌಲಭ್ಯಗಳ ವಿತರಣೆ ಮಾಡಿದರು. ಮತ್ತೆ ಯಾವುದೇ ಸಮಸ್ಯೆಯಿದ್ದರೂ ರಾತ್ರಿಯಿಡಿ ಗ್ರಾಮದಲ್ಲೇ ವಾಸ್ತವ್ಯ ಮಾಡುತ್ತಿದ್ದು, ನಿಮ್ಮ ಸಮಸ್ಯೆ ತಿಳಿಸಿ. ಕಾನೂನು ರೀತಿಯಲ್ಲಿ ಶೀಘ್ರ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.

ಗ್ರೇಡ್‌-2 ತಹಶೀಲ್ದಾರ್‌ ಕಮಲಮ್ಮ ಮಾತನಾಡಿದರು. ಉಪ ತಹಶೀಲ್ದಾರ್‌ ಜಯಲಕ್ಷ್ಮಮ್ಮ, ಗ್ರಾಪಂ ಅಧ್ಯಕ್ಷೆ ಅಂಬಿಕಾ, ಉಪಾಧ್ಯಕ್ಷೆ ರಾಧಿಕಾ, ಪಿಡಿಒ ಪುಂಡ ಲೀಕ, ಸಿಡಿಪಿಒ ಅನಿತಾ, ಟಿಎಚ್‌ಒ ಡಾ.ರಮೇಶ್‌ಬಾಬು, ರಾಮದಾಸ, ವಲಯ ಅರಣ್ಯಾಧಿಕಾರಿ ರವಿ, ಅಬಕಾರಿ ನಿರೀಕ್ಷಕ ರಾಮಮೂರ್ತಿ, ಆಹಾರ ನಿರೀಕ್ಷಕ ಗಣೇಶ್‌, ಸಹಾಯಕ ಕಾರ್ಯ ನಿರ್ವಾಹಕ ಅಧಿಕಾರಿ ವಿಶ್ವನಾಥ್‌ ಗೌಡ, ಹನುಮಂತರಾಯಪ್ಪ, ಲಕ್ಷ್ಮೀ ನರಸಯ್ಯ, ಗಿರೀಶ್‌ ಬಾಬು ರೆಡ್ಡಿ, ರಂಗಸ್ವಾಮಿ, ಟಿಎಸ್‌ಡಬ್ಲೂ ಹರೀಶ್‌, ಎಇಇ ರಾಜಗೋಪಾಲ್‌, ಸುರೇಶ್‌ರೆಡ್ಡಿ, ಕೃಷಿ ಇಲಾಖೆ ಎಒ ಶಿವಣ್ಣ, ಸರ್ವಜ್ಞ ವೇದಿಕೆಯ ಅಧ್ಯಕ್ಷ ವೆಂಕಟರವಣಪ್ಪ, ಕಂದಾ ಯಾಧಿಕಾರಿ ಸಿದ್ದರಾಜು, ಗ್ರಾಮಲೆಕ್ಕಿಗರಾದ ಶ್ರೀನಿವಾಸ್‌, ನಟರಾಜ್‌, ಶಿವರಾಂ, ಶ್ರೀಧರ್‌, ನಾಗಭೂಷಣ್‌, ಸುನೀಲ್‌, ಗಂಗರಾಜ್‌, ಹಾಗೂ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು, ಕಲಾವಿದ ರಾಮಚಂದ್ರಪ್ಪ, ಗ್ರಾಮಸ್ಥರು ಇದ್ದರು.

ಸರ್ಕಾರಕ್ಕೆ ಹಣಕಾಸಿನ ಸಮಸ್ಯೆಯಿಲ್ಲ. ನಮಗೆ 1 ತಿಂಗಳ ಪಡಿತರ ನೀಡದಿದ್ದರೂ ಪರವಾಗಿಲ್ಲ. ನಮ್ಮೂರಿಗೆ ಒಂದು ಸ್ಮಶಾನ ಮಂಜೂರು ಮಾಡಿಕೊಡಿ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ.-ಹನುಮಂತರಾಯಪ್ಪ, ಹರಳಾಪುರ ನಿವಾಸಿ

ಟಾಪ್ ನ್ಯೂಸ್

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು

Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

4-kunigal

Kunigal: ಕೆಂಪನಹಳ್ಳಿ ಗ್ರಾಮದಲ್ಲಿ ಸರಣಿ ಕಳ್ಳತನ

14-kunigal

Kunigal: ಟೈರ್ ಸ್ಪೋಟಗೊಂಡು ಕಾರು ಪಲ್ಟಿ: ಐಟಿ ಉದ್ಯೋಗಿ ದುರ್ಮರಣ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

4-siruguppa

Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್‌; ಎತ್ತು ಸಾವು

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.