2300 ಮಂದಿಗೆ ಉದ್ಯೋಗ
Team Udayavani, Dec 1, 2019, 12:23 PM IST
ಕೊರಟಗೆರೆ: ರೋಟರಿ ಸಿದ್ದರಬೆಟ್ಟ, ಬೆಂಗಳೂರು ರೋಟರಿ ಸಂಸ್ಥೆಗಳು ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ-ಯುವತಿಯರಿಗಾಗಿ ಉದ್ಯೋಗ ಮೇಳ ಆಯೋಜಿಸಿ 2300 ಮಂದಿಗೆ ಉದ್ಯೋಗದೊರೆಯುವಂತೆ ಮಾಡಿರುವುದು ಶ್ಲಾಘನೀಯ ಎಂದು ಸಿದ್ದರಬೆಟ್ಟ ರಂಭಾಪುರಿ ಖಾಸಾ ಶಾಖಾ ಮಠದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು
.40ಕ್ಕೂ ಹೆಚ್ಚು ಕಂಪನಿಗಳು ಭಾಗಿ: ಸಿದ್ದರಬೆಟ್ಟ ಶ್ರೀರಂಭಾಪುರಿ ಖಾಸಾ ಶಾಖಾ ಮಠದಲ್ಲಿ ರೋಟರಿ ಸಿದ್ದರ ಬೆಟ್ಟ ಸೇರಿ ರೋಟರಿ ಬೆಂಗಳೂರು ಪೀಣ್ಯ, ರೋಟರಿಬೆಂಗಳೂರು ಉದ್ಯೋಗ್, ರೋಟರಿ ನಂದಿನಿಬೆಂಗಳೂರು, ರೋಟರಿ ಬೆಂಗಳೂರು ರಾಜಾಜಿನಗರ, ರೋಟರಿ ಬೆಂಗಳೂರು ಜಾಲಹಳ್ಳಿ ರೋಟರಿ ಮಠಚಾರಿಟಬಲ್ಸ್ ಟ್ರಸ್ಟ್ ಹೆಬ್ಬೂರು, ಶ್ರೀ ರೇವಣ ಸಿದ್ದೇಶ್ವರಸೋಶಿಯಲ್ ವೆಲ್ಪೇರ್ ಟ್ರಸ್ಟ್ ಸಿದ್ದರಬೆಟ್ಟ ಆಯೋಜಿಸಿರುವ ರೋಟರಿ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿ, ವಿದ್ಯಾಭ್ಯಾಸಮುಗಿಸಿ ಮಾರ್ಗದರ್ಶನವಿಲ್ಲದೆ ಗ್ರಾಮಗಳಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ. ಇವರಿಗೆ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ರೋಟರಿಸಂಸ್ಥೆಗಳು ಸಾಮಾಜಿಕ ಸೇವಾ ಮನೋಭಾವದದೃಷ್ಟಿಯಿಂದ ಉದ್ಯೋಗ ಮೇಳ ಆಯೋಜಿಸಿ ಸುಮಾರು 40ಕ್ಕೂ ಹೆಚ್ಚು ವಿವಿಧ ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿರುವುದು ನಿರುದ್ಯೋಗಿಗಳಿಗೆ ಸಹಾಯವಾಗಿದೆ ಎಂದು ಹೇಳಿದರು.
ಮಠದ ಶ್ರಮ ಮರೆಯದಿರಿ: ರೋಟರಿ ನಂದಿನ ಬೆಂಗಳೂರು ಸಂಸ್ಥೆ ಅಧ್ಯಕ್ಷ ಮಧುಸೂದನ್ ಮತನಾಡಿ, ಶ್ರೀ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಧಾರ್ಮಿಕ ಕ್ಷೇತ್ರದೊಂದಿಗೆ ಸಾರ್ವಜನಿಕ ಸೇವೆಯಲ್ಲಿತೊಡಗಿದ್ದು, ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಶ್ರೀಗಳ ಮನವಿ ಮೇರೆಗೆ ಉದ್ಯೋಗಮೇಳ ಆಯೋಜಿಸಿದ್ದು, ಉದ್ಯೋಗ ದೊರೆತ ನಂತರ ಯುವಕ, ಯುವತಿಯರು ಮಠದ ಶ್ರಮ ಮರೆಯ ಬಾರದು. ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡುಶ್ರೀ ಮಠಕ್ಕೆ ಹೆಸರು ತರಬೇಕು. ನಮ್ಮ ರೋಟರಿ ನಂದಿನಿ ಸಂಸ್ಥೆಯಲ್ಲಿನ ಸದಸ್ಯರ ಕಂಪನಿಗಳಲ್ಲಿ ಸುಮಾರು500ಕ್ಕೂ ಹೆಚ್ಚು ಉದ್ಯೋಗ ನೀಡುವ ಭರವಸೆ ನೀಡಿದ್ದು, ಮುಂದಿನ ದಿನಗಳಲ್ಲಿ ಶ್ರೀಗಳು ಸೂಚಿಸುವ ಗ್ರಾಮೀಣ ಭಾಗದ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಭರವಸೆ ನೀಡಿದರು.
ರೋಟರಿ ಸಿದ್ಧರಬೆಟ್ಟ ಅಧ್ಯಕ್ಷ ಜಯಚಂದ್ರಾರಾಧ್ಯ, ಸಿದ್ದಬಸಪ್ಪ, ಗಂಗಾಧರಶಾಸ್ತ್ರಿ ಕಾರ್ಯದರ್ಶಿ ದೊಡ್ಡೆಗೌಡ, ಖಜಾಂಚಿ ಕೆ.ಎನ್.ರಘು, ಸದಸ್ಯರಾದ ವೈ.ವಿ. ಪಂಚಾಕ್ಷರಿ, ರಾಮಯ್ಯ, ಶಿವಕುಮಾರ್, ಗೋವಿಂದರಾಜು, ತುಮಕೂರು ರೋಟರಿಯ ಟಿ.ಆರ್. ಎಚ್.ಪ್ರಕಾಶ್, ಸಚಿನ್, ಬಸವರಾಜಪ್ಪ, ಬೂದುಗವಿ ಗ್ರಾಪಂ ಅಧ್ಯಕ್ಷ ರಂಗಸ್ವಾಮಿ, ಉಪಾಧ್ಯಕ್ಷ ಲಕ್ಷ್ಮೀ ದೇವಮ್ಮ, ಬೆಂಗಳೂರು ರೋಟರಿ ಸಂಸ್ಥೆ ಅಧ್ಯಕ್ಷರಾದ ಸುರೇಶ್, ರಂಗಸ್ವಾಮಿ, ಆರೀಫ್, ರಾಜೇಂದ್ರಪ್ರಸಾದ್, ಜಗದೀಶಾರಾದ್ಯ, ಓಂಪ್ರಕಾಶ್ ಇತರರಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.