ಕೊರಟಗೆರೆ: ಕನ್ನಡ ರಾಜ್ಯೋತ್ಸವ; 56 ಅಡಿ ಎತ್ತರದ ಕನ್ನಡ ಧ್ವಜಸ್ತಂಭ ಲೋಕಾರ್ಪಣೆ
16 ಜನ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ
Team Udayavani, Nov 1, 2022, 4:43 PM IST
ಕೊರಟಗೆರೆ: ಕರ್ನಾಟಕದ ಕನ್ನಡಿಗರಿಗೆ ನ.1 ಹೆಮ್ಮೆಯ ದಿನ. ರಾಜ್ಯದ ಪ್ರತಿ ಮನೆಯಲ್ಲಿ ಇಂದು ಹಬ್ಬದಂತೆ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿದ್ದಾರೆ. ರಾಜ್ಯ ಸರಕಾರದ ಕೋಟಿ ಕಂಠ ಗಾಯನ ಎನ್ನುವ ವಿಶಿಷ್ಟ ಕಾರ್ಯಕ್ರಮ ಕನ್ನಡಿಗರ ಗಮನ ಸೆಳೆದಿದೆ ಎಂದು ಕೊರಟಗೆರೆ ತಹಶೀಲ್ದಾರ್ ನಾಹೀದಾ ತಿಳಿಸಿದರು.
ಕೊರಟಗೆರೆ ಪಟ್ಟಣದ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಕೊರಟಗೆರೆ ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ 67ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ರಾಜ್ಯವು ಹತ್ತಾರು ವಿಸ್ಮಯ ಪ್ರಕೃತಿಯನ್ನು ಒಳಗೊಂಡಿದೆ. ನಮ್ಮ ನಾಡು ಶ್ರೀಗಂಧದ ಬೀಡು. ಹಚ್ಚಹಸುರಿನ ಸುಂದರ ಬೆಟ್ಟಗುಡ್ಡಗಳ ಗೂಡು. ಪವಿತ್ರ ಕಾವೇರಿ, ತುಂಗಾಭದ್ರೆ ನದಿಗಳು ಹರಿಯುವ, ಸಾಧು-ಸಂತರು, ದಾಸರು, ಶಿವ-ಶರಣರು, ಕವಿಗಳಿಂದ ಕಂಗೊಳಿಸುತ್ತಿರುವ ಕನ್ನಡ ನಾಡು ಎಂಬ ಹೆಸರೇ ಒಂದು ಧೀಮಂತ ಶಕ್ತಿ ಈ ನಾಡಿಗಿದೆ ಎಂದು ಹೇಳಿದರು.
ಕೊರಟಗೆರೆ ಪ.ಪಂ. ಅಧ್ಯಕ್ಷೆ ಕಾವ್ಯ ರಮೇಶ್ ಮಾತನಾಡಿ, ಆಲೂರು ವೆಂಕಟರಾವ್ 1905ರಲ್ಲಿ ಕರ್ನಾಟಕ ಏಕೀಕರಣ ಚಳುವಳಿಯೊಂದಿಗೆ ರಾಜ್ಯವನ್ನು ಏಕೀಕರಣಗೊಳಿಸುವ ಕನಸು ಕಂಡ ಮೊದಲ ವ್ಯಕ್ತಿ. 1950ರಲ್ಲಿ ಭಾರತ ದೇಶವು ಗಣರಾಜ್ಯವಾದ ನಂತರ ನಿರ್ಧಿಷ್ಟ ಪ್ರದೇಶದಲ್ಲಿ ಮಾತನಾಡುವ ಬಾಷೆಯ ಆಧಾರದ ಮೇಲೆ ದೇಶದಲ್ಲಿ ವಿವಿಧ ಪ್ರಾಂತ್ಯಗಳ ರಚನೆಯಾಗಿದೆ. ಈ ತರ್ಕಕ್ಕೆ ಅನುಗುಣವಾಗಿ 1973 ರ ನ.1 ರಂದು ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಕರ್ನಾಟಕ ಎಂದು ಬದಲಾವಣೆ ಮಾಡಿದ್ದಾರೆ ಎಂದು ತಿಳಿಸಿದರು.
ವಿವಿಧ ಕ್ಷೇತ್ರದ 16 ಸಾಧಕರಿಗೆ ಸನ್ಮಾನ
ಕೃಷಿ ಕ್ಷೇತ್ರದಿಂದ ಬರಕ ಗ್ರಾಮದ ರೈತ ದೊಡ್ಡಯ್ಯ, ಚಿಕ್ಕನಹಳ್ಳಿಯ ಶಿವಣ್ಣ, ಮಾದ್ಯಮ ಕ್ಷೇತ್ರದಿಂದ ಸಿದ್ದರಾಜು.ಕೆ, ನಾಗೇಂದ್ರ.ಟಿ.ಸಿ., ಸರಕಾರಿ ನೌಕರ ಕ್ಷೇತ್ರದಿಂದ ಬೊಕ್ಕಪಟ್ಟಣ ಕಾಂತರಾಜು, ಕನ್ನಡ ಪರ ಹೋರಾಟ ಕ್ಷೇತ್ರದಿಂದ ಪ್ರಸನ್ನ ಕುಮಾರ್, ಖಲೀಂವುಲ್ಲಾ, ಕ್ರೀಡಾ ಕ್ಷೇತ್ರದಿಂದ ವಿಜಯಲಕ್ಷ್ಮೀ, ರಾಮಚಂದ್ರ ಶರ್ಮ, ಸಾಹಿತ್ಯ ಕ್ಷೇತ್ರದಿಂದ ಮಧುಸೂಧನ, ತಿಮ್ಮರಾಜು, ಸಮಾಜ ಸೇವೆಯಿಂದ ರಮೇಶ್, ರಂಗಭೂಮಿ ವೆಂಕಟಪ್ಪ, ಮಾವತ್ತೂರು ಜಯಶ್ರೀ, ರವಿಕುಮಾರ್, ನರೇಂದ್ರರವರನ್ನು ಕೊರಟಗೆರೆ ಆಡಳಿತದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪ.ಪಂ. ಉಪಾಧ್ಯಕ್ಷೆ ಭಾರತಿ, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎನ್.ನಟರಾಜ್, ಸದಸ್ಯರಾದ ಬಲರಾಮಯ್ಯ, ಹುಸ್ನಾ ಫಾರಿಯಾ, ತಾ.ಪಂ. ಇಓ ಡಾ.ಡಿ.ದೊಡ್ಡಸಿದ್ದಯ್ಯ, ಬಿಇಓ ಸುಧಾಕರ್, ಪ.ಪಂ. ಮುಖ್ಯಾಧಿಕಾರಿ ಭಾಗ್ಯಮ್ಮ, ಸಿಡಿಪಿಓ ಅಂಬಿಕಾ, ಅಬಕಾರಿ ಇಲಾಖೆಯ ಶ್ರೀಲತಾ, ಅರಣ್ಯ ಇಲಾಖೆಯ ಸುರೇಶ್, ಸಿಪಿಐ ಸುರೇಶ್.ಕೆ, ಪಿಎಸೈ ಚೇತನ್ ಸೇರಿದಂತೆ ಇತರರು ಇದ್ದರು.
56 ಅಡಿ ಎತ್ತರದ ಕನ್ನಡ ಧ್ವಜಸ್ತಂಭ ಲೋಕಾರ್ಪಣೆ
ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ರಣಧೀರರ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ಶೆಟ್ಟಿ), ಕನ್ನಡ ಪ್ರತಿಷ್ಠಾನ(ರಿ) ಮತ್ತು ಕನ್ನಡ ಪರ ಸಂಘಟನೆಗಳ ಒಕ್ಕೂಟದಿಂದ ಕೊರಟಗೆರೆ ಪಟ್ಟಣದ ಸರಕಾರಿ ಬಸ್ ನಿಲ್ದಾಣದ ಮುಂಭಾಗ ನಿರ್ಮಾಣ ಮಾಡಿರುವ 56 ಅಡಿ ಎತ್ತರದ ಕನ್ನಡ ಧ್ವಜಸ್ತಂಭವನ್ನು ಪ.ಪಂ. ಅಧ್ಯಕ್ಷೆ ಕಾವ್ಯ ರಮೇಶ್, ಕರವೇ ಅಧ್ಯಕ್ಷ ಕೆ.ಎನ್.ನಟರಾಜ್, ದೇವರಾಜು.ಕೆ.ಎನ್, ಹರೀಶ್.ಬಿ.ಸಿ, ಡಾಡಿ ವೆಂಕಟೇಶ್ ಲೋಕಾರ್ಪಣೆ ಮಾಡಿ 7 ಅಡಿ ಅಗಲ 13 ಅಡಿ ಉದ್ದದ ಕನ್ನಡ ಬಾವುಟವನ್ನು ಆಕಾಶದ ಎತ್ತರಕ್ಕೆ ಹಾರಿಸುವ ಮೂಲಕ ನೂರಾರು ಕನ್ನಡ ಪರ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.
ಪ್ರಕೃತಿಯ ಮಡಿಲಲ್ಲಿ ಕನ್ನಡ ರಾಜ್ಯೋತ್ಸವ
ಕೊರಟಗೆರೆ ಪಟ್ಟಣದ ಗಂಗಾಧರೇಶ್ವರ ಸ್ವಾಮಿಯ ಬೆಟ್ಟದ ಪ್ರಕೃತಿಯ ಮಡಿಲಿನಲ್ಲಿ ಮಾಜಿ ಶಾಸಕ ಪಿ.ಆರ್.ಸುಧಾಕರ ಲಾಲ್, ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಮಹಾಲಿಂಗಪ್ಪ ಮತ್ತು ಪ.ಪಂ. ಸದಸ್ಯರ ನೇತೃತ್ವದಲ್ಲಿ ನೂರಾರು ಜನ ಕನ್ನಡ ಪರ ಕಾರ್ಯಕರ್ತರು ಹಾಗೂ ಜೆಡಿಎಸ್ ಮುಖಂಡರು ಜೊತೆಗೂಡಿ ಧ್ವಜಸ್ತಂಭ ಪ್ರತಿಷ್ಟಾಪನೆ ಮಾಡುವುದರ ಜೊತೆ ಕನ್ನಡ ಬಾವುಟವನ್ನು ಹಾರಿಸುವ ಮೂಲಕ ಸಂಭ್ರಮಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere: ಗೃಹ ಸಚಿವರ ಸ್ವ ಕ್ಷೇತ್ರದಲ್ಲೇ ಮಲ ಹೊತ್ತ 10 ವರ್ಷದ ಬಾಲಕ!
Kunigal: ಬೈಕ್, ಕ್ಯಾಂಟರ್ ಮುಖಾಮುಖಿ ಢಿಕ್ಕಿ; ಇಬ್ಬರು ಸ್ಥಳದಲ್ಲೇ ಮೃತ್ಯು
Gubbi: ಮೀಟರ್ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಬೇಸತ್ತು ಪೌರ ಕಾರ್ಮಿಕ ಆತ್ಮಹತ್ಯೆ
Koratagere: ವೃದ್ದೆ ಮೇಲೆ ಕೆಎಸ್ಆರ್ಟಿಸಿ ಬಸ್ ಹರಿದು ಸಾವು
Hunasur: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ತಿಪಟೂರಿನ ಮಹಿಳೆ!
MUST WATCH
ಹೊಸ ಸೇರ್ಪಡೆ
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.