ಇಡೋ ಸ್ಪ್ಯಾನಿಷ್ ಕಾರ್ಖಾನೆಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ: ಸಾಹಿತಿಗಳ ಸಮಾಗಮ

ಪರಿಶುದ್ದ ಕನ್ನಡ ಬಳಕೆಯಾಗಲಿ: ಡಾ.ಕಪನಿಪಾಳ್ಯ ರಮೇಶ್

Team Udayavani, Nov 19, 2023, 2:05 PM IST

8–kunigal

ಕುಣಿಗಲ್: ಸಾಧನೆಯ, ಸಾಧಕರ, ಸಾಹಿತಿಗಳ, ದಿಗ್ಗಜ ಸಮಾಗಮ ಅಲ್ಲಿ ನಲೆಸಿತ್ತು, ಎಲ್ಲಿ ನೋಡಿದರೂ ಅರಿಶಿಣ, ಕುಂಕುಮ, ಬಣ್ಣ ಬಣ್ಣದ ರಂಗೋಲಿ, ತಳಿರುತೋರಣ ಕಂಗೋಳಿಸುತ್ತಿತು.

ಮಹಿಳೆಯರ ಅಮೋಘ ನೃತ್ಯ, ವಾಚಕರ ವಾಣಿ ಅದ್ಬುತವಾಗಿತ್ತು. ಇಷ್ಟೇಲ್ಲಾ ಕಾರ್ಯಕ್ರಮ ಇಡೋ ಸ್ಪ್ಯಾನಿಷ್ ಟೇಸ್ಟಿ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆ ತೃತೀಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯ.

ತಾಲೂಕಿನ ಅಂಚೇಪಾಳ್ಯ ಕೈಗಾರಿಕ ವಸಾಹತು ಪ್ರದೇಶದಲ್ಲಿನ ಇಡೋ ಸ್ಪ್ಯಾನಿಷ್ ಟೇಸ್ಟಿ ಫುಡ್ಸ್ ಪ್ರೈ ವೇಟ್  ಲಿಮಿಟೆಡ್ ಕಾರ್ಖಾನೆಯಲ್ಲಿ ಇಡೀ ದಿನ ರಾಜ್ಯೋತ್ಸವ ಹಬ್ಬದ ವಾತಾವರಣವೇ ನೆಲೆಸಿತ್ತು.

ಮಹಿಳಾ ಕಾರ್ಮಿಕರು, ಪುರುಷ ಕಾರ್ಮಿಕರ ಮಕ್ಕಳು ವಿವಿಧ ಮಾದರಿಯ ಸಾಂಪ್ರದಾಯಕ ವಸ್ತ್ರಗಳನ್ನು ಧರಿಸಿದರು, ಕನ್ನಡ ಭಾವುಟ ಬೀಸಿ ಸಾಧಕರನ್ನು, ಸಾಹಿತಿಗಳನ್ನು, ನಾಗರೀಕರನ್ನು ಕಾರ್ಖಾನೆಗೆ ಸ್ವಾಗತಿಸಿದ ದೃಷ್ಯ ಸಾಮಾನ್ಯವಾಗಿತ್ತು.

ಕಾರ್ಖಾನೆಯಲ್ಲಿ ಮಹಿಳೆಯರು ಸೇರಿದಂತೆ ಸುಮಾರು 400 ಮಂದಿ ಕಾರ್ಮಿಕರು ದಿನವಿಡಿ ದುಡಿಯುತ್ತಿದ್ದಾರೆ. ಅವರಲ್ಲಿ ಇರುವ ಕಲೆ ಸಾಹಿತ್ಯವನ್ನು ಹೊರತರುವ ಹಾಗೂ ಅವರಲ್ಲಿ ಕನ್ನಡಾಭಿಮಾನ ಮೂಡಿಸಬೇಕು. ಕನ್ನಡ ಸಾಹಿತ್ಯ ಕಲೆಯನ್ನು ಪರಿಚಯಿಸಬೇಕೆಂಬ ನಿಟ್ಟಿನಲ್ಲಿ ಕಾರ್ಖಾನೆಯ ಆಡಳಿತ ಮಂಡಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಕಾರ್ಮಿಕರಿಗೆ ಕಾರ್ಯಕ್ರಮದ ರಸದೌತನ ಉಣ ಬಡಿಸಿತು.

ಕಸಾಪ ಅಧ್ಯಕ್ಷ ಡಾ.ಕಪನಿಪಾಳ್ಯ ರಮೇಶ್ ಮಾತನಾಡಿ, ಪರಿಶುದ್ದ ಕನ್ನಡ ಬಳಕೆಯಾಗಲಿ. ನಿಮ್ಮ ನಡೆ, ನುಡಿ ಕನ್ನಡವಾಗಿರಲಿ ಕನ್ನಡ ಸಾಹಿತ್ಯವನ್ನು ಓದುವ ಅವ್ಯಾಸ ಬೆಳೆಸಿಕೊಳ್ಳಿ ಮನೆ ಮತ್ತು ಮನದಲ್ಲಿ ಕನ್ನಡ ಪೀಠವನ್ನು ಪ್ರತಿಷ್ಟಾಪಿಸಿ, ಕನ್ನಡ ಪುಸ್ತಕ ಓದುವ ಸಂಕಲ್ಪ ಮಾಡಿ ನಮ್ಮ ಸಾವಿರಾರು ವರ್ಷಗಳ ಭಾಷೆಯನ್ನು ಉಳಿಸಿ ಬೆಳೆಸಿ ಅದರ ಸಾರ್ವಭೌಮತ್ವವನ್ನು ಉತ್ತಂಗಕ್ಕೆ ಏರಿಸಿ ಎಂದರು.

ಮಕ್ಕಳಿಗೆ ಅಮ್ಮ, ಅಪ್ಪ ಎನ್ನುವ ಸಂಸ್ಕೃತಿ ಕಲಿಸಿ ಮಮ್ಮಿ, ಡ್ಯಾಡಿ ಎಂಬ ಆಂಗ್ಲ ಭಾಷೆಯ ಸಂಸ್ಕೃತಿಯನ್ನು ಮನೆಯಿಂದ ಹೊರಗೆ ಕಳಿಸಿ. ಪರಭಾಷೆ, ಪರದೇಶ ವಸ್ತ್ರಗಳಿಗೆ ನಮ್ಮ ಯುವ ಜನಾಂಗ ಒಳಗಾಗಿ ಉತ್ತಮ ಬಟ್ಟೆ ಧರಿಸುವ ಶಕ್ತಿ ಇದ್ದರೂ ಹರಿದ ಬಟ್ಟೆ ಧರಿಸುತ್ತಿರುವುದು ಇದೆಂತಹಾ ಸಂಸ್ಕೃತಿ ಎಂದರು.

ಕನ್ನಡ ಸಹಾಕಯ ಪ್ರಾಧ್ಯಾಪಕ ಡಾ.ಎಂ.ಗೋವಿಂದರಾಯ ಮಾತನಾಡಿ, ದೇಶದಲ್ಲಿಯೇ ನಮ್ಮ ಕರಿಯನಾಡು, ಕನ್ನಡ ನಾಡು ಕರ್ನಾಟಕ ರಾಜ್ಯದ ಭೂಮಿ ಅತೀ ಶ್ರೇಷ್ಠವಾದದ್ದು, ಪರಿಶುದ್ದವಾದದ್ದು. ಇಲ್ಲಿ ಬಸವ, ಅಕ್ಕಮಹದೇವಿ, ಕೃಷ್ಣದೇವರಾಯ, ರನ್ನ, ಪಂಪ, ಕುವೆಂಪು ಸೇರಿದಂತೆ ರಾಜ ಮಹರಾಜರು, ಪಾಳೇಗಾರರು ಮೊದಲಾದ ಮಹನೀಯರು ಈ ನಾಡನ್ನು ಕಟ್ಟಿ ಭಾಷೆ, ಸಂಸೃತಿ, ಸಾಹಿತ್ಯ, ಶಿಲ್ಪಕಲೆಯನ್ನು ಶ್ರೀಮಂತಗೊಳಿಸಿ ವಿಶ್ವವು ಇತ್ತಕಡೆ ನೋಡುವಂತೆ ಮಾಡಿದ್ದಾರೆ ಎಂದು ಹೇಳಿದರು.

ವಿಜಯನಗರದಲ್ಲಿ ರತ್ನ, ಮುತ್ತುಗಳ ಮಾರಾಟದ ಕೇಂದ್ರವೇ ಆಗಿತ್ತು. ಇಂತಹ ಸುವರ್ಣ ಭೂಮಿ ಎಲ್ಲಿ ನೋಡಲು ಸಾಧ್ಯವಿಲ್ಲ. ನಮ್ಮ ಭಾಷೆ ಸಂಸ್ಕೃತಿಗೆ ಎರಡು ಸಾವಿರಕ್ಕೂ ಅಧಿಕ ವರ್ಷಗಳ ಹಿಂದೆಯೇ ಕಾಣ ಬಹುದ್ದಾಗಿತ್ತು, ನಾಡಿನಲ್ಲಿ ಜಲ, ಕನಿಜ ಸಂಪತ್ತು ಸಂಮೃದ್ದಿಯಾಗಿತ್ತು, ಮಹಾತ್ಮಗಾಂಧೀಜಿ ಅವರು ಬೆಳಗಾವಿಗೆ ಬಂದ ಸಂದರ್ಭದಲ್ಲಿ, ಕನ್ನಡನಾಡಿಗೆ ನಿಮ್ಮ ಸಂದೇಶ ಏನೆಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಬಸವಣ್ಣ ನವರು ನೆಲೆಸಿರುವ ನಾಡಿನಲ್ಲಿ ಸಾಹಿತ್ಯ, ವಚನಗಳ ಬಂಡಾರವೇ ಅಡಗಿದೆ, ಮಹನೀಯರು ಈ ರಾಜ್ಯಕ್ಕೆ ಅಲ್ಲ ಇಡೀ ಸಮಾಜಕ್ಕೆ ಕೊಟ್ಟಂತಹ  ಸಂದೇಶದ ಮುಂದೆ ನಾನೇನು ಸಂದೇಶ ನೀಡಲಿ ಎಂದರು ಹಾಗಾಗಿ ನಮ್ಮ ನಾಡಿಗೆ ಇತಿಹಾಸದ ಪರಂಪರೆ ಇದೆ ಅದನ್ನು ಉಳಿಸಿ ಬೆಳೆಸುವ ಜಬಾವ್ದಾರಿ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಪುರಸಭಾ ಮಾಜಿ ಅಧ್ಯಕ್ಷ ರಂಗಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಖಾನೆ ನಿರ್ದೇಶಕ ಪಿ.ಶಿವರಾಮ್ ಅಧ್ಯಕ್ಷತೆ ವಹಿಸಿದರು. ಹವ್ಯಾಸಿ ಬರಹಗಾರ ಮಂಜುನಾಥ್ ಕುಣಿಗಲ್ ಟು ಕಂದಹಾರ್ ಪುಸ್ತಕದ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಸಪ್ತಗಿರಿ ಆಸ್ಪತ್ರೆಯ ಡಾ.ಕುಮಾರ್, ನಿವೃತ್ತ ಪ್ರಾಚಾರ್ಯ ರಾಮಣ್ಣ, ಪತ್ರಿಕಾ ಸಂಘದ ಅಧ್ಯಕ್ಷ, ರಾಜ್ಯ ಪ್ರಶಸ್ತಿ ಪುರಸ್ಕೃತ ಕೆ.ಆರ್.ರಂಗನಾಥ್, ಜಿಲ್ಲಾ ನಿರ್ದೇಶಕ ಕೆ.ಎರವೀಂದ್ರಕುಮಾರ್, ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ಕಸಾಪ ಮಾಜಿ ಅಧ್ಯಕ್ಷ ದಿನೇಶ್‌ಕುಮಾರ್, ಕರವೇ ಅಧ್ಯಕ್ಷ ಮಂಜುನಾಥ್, ಕಾರ್ಖಾನೆಯ ಜಗದೀಶ್‌ನಾಯ್ಕ್ ಮತ್ತಿತರರು ಇದ್ದರು.

ಟಾಪ್ ನ್ಯೂಸ್

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

1-crick

T20; ಸ್ಯಾಮ್ಸನ್‌ ಸತತ 2ನೇ ಶತಕ:ದಕ್ಷಿಣ ಆಫ್ರಿಕಾ ಎದುರು ಭಾರತಕ್ಕೆ ಅಮೋಘ ಜಯ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

koratagere

Koratagere: ಗೃಹ ಸಚಿವರ ಸ್ವ ಕ್ಷೇತ್ರದಲ್ಲೇ ಮಲ ಹೊತ್ತ 10 ವರ್ಷದ ಬಾಲಕ!

Accident-logo

Kunigal: ಬೈಕ್, ಕ್ಯಾಂಟರ್ ಮುಖಾಮುಖಿ ಢಿಕ್ಕಿ; ಇಬ್ಬರು ಸ್ಥಳದಲ್ಲೇ ಮೃತ್ಯು 

2-gubbi

Gubbi: ಮೀಟರ್ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಬೇಸತ್ತು ಪೌರ ಕಾರ್ಮಿಕ ಆತ್ಮಹತ್ಯೆ

4

Koratagere: ವೃದ್ದೆ ಮೇಲೆ ಕೆಎಸ್ಆರ್ಟಿಸಿ ಬಸ್ ಹರಿದು ಸಾವು

Hunasuru-Women

Hunasur: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ತಿಪಟೂರಿನ ಮಹಿಳೆ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

1-rb

ATP Finals Doubles; ಬೋಪಣ್ಣ ಜೋಡಿಗೆ 6ನೇ ಶ್ರೇಯಾಂಕ

1-weewq

Ranji; ಬಂಗಾಲ ಬಿಗಿ ಹಿಡಿತ : ಇನ್ನಿಂಗ್ಸ್‌ ಜಯದತ್ತ ಮುಂಬಯಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.