Koratagere: ಮದ್ಯಪಾನದಿಂದ ಕುಟುಂಬದಲ್ಲಿ ದಿನ ಅಶಾಂತಿ ಉಂಟಾಗಿ ನೆಮ್ಮದಿ ಇಲ್ಲದಂತಾಗಿದೆ
Team Udayavani, Dec 24, 2024, 7:43 PM IST
ಕೊರಟಗೆರೆ: ಮನುಷ್ಯನು ಜೀವನದಲ್ಲಿ ವ್ಯಸನಗಳಿಂದಲೇ ಶಾಂತಿ, ನೆಮ್ಮದಿ, ಆರೋಗ್ಯ ಮತ್ತು ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದು, ಅದರಲ್ಲಿ ಮಧ್ಯಪಾನ ಸಹ ಪ್ರಮುಖವಾಗಿದೆ ಎಂದು ಎಲೆರಾಂಪುರದ ನರಸಿಂಹಗಿರಿ ಕ್ಷೇತ್ರದ ಡಾ. ಶ್ರೀ ಹುನಮಂತನಾಥಸ್ವಾಮಿ ತಿಳಿದರು.
ಅವರು ಎಲೆರಾಂಪುರದ ನರಸಿಂಹಗಿರಿ ಕ್ಷೇತ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಹಾಗೂ ಇತರ ಅಂಗಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 1898 ನೇ ಮಧ್ಯವರ್ಜನ ಶಿಬಿರದ ಸಮಾರೋಪ ಸಮಾರಂದಲ್ಲಿ ಮಾತನಾಡಿದರು.
ಸಮಾಜದಲ್ಲಿ ಎಷ್ಟೋ ಕುಟುಂಬಗಳು ಮದ್ಯ ಸೇವನೆಯಿಂದ ಹಾಳಾಗುತ್ತಿವೆ. ಅದರಲ್ಲಿ ಬಡ ಮತ್ತು ಮಧ್ಯಮ ವರ್ಗಗಳ ಕುಟುಂಬಗಳೇ ಹೆಚ್ಚಾಗಿದೆ. ಈ ಮದ್ಯಪಾನದಿಂದ ಕುಟುಂಬದಲ್ಲಿ ದಿನ ಅಶಾಂತಿ ಉಂಟಾಗಿ ನೆಮ್ಮದಿ ಇಲ್ಲದಂತಾಗಿದೆ. ಮಧ್ಯಪಾನದಿಂದ ಬಡ ಕುಟುಂಬಗಳು ಆರ್ಥಿಕ ನಷ್ಠ ಅನುಭವಿಸಿ ಅದು ಅವರ ಮಕ್ಕಳ ವಿದ್ಯಾಭ್ಯಾಸ ಮತ್ತು ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದರು.
ಮಧ್ಯ ಸೇವನೆ ಮಾಡಿ ವಾಹನಗಳಲ್ಲಿ ಸಂಚಾರ ಮಾಡುವಾಗ ಅಪಘಾತಗಳು ಉಂಟಾಗಿ ಪ್ರಾಣ ಕಳೆದುಕೊಂಡು ಕುಟುಂಬಗಳು ಬೀದಿಗೆ ಬಂದಿವೆ. ಇಂತಹ ಮಧ್ಯಪಾನ ವ್ಯಸನವನ್ನು ಮಧ್ಯವರ್ಜನ ಶಿಬಿರದಿಂದ ಬಿಡಿಸುವಂತಹ ಮಹತ್ತರ ಕಾರ್ಯವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಮಾಡುತ್ತಿದ್ದು, ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳ ಬಾಳಲ್ಲಿ ನೆಮ್ಮದಿಯನ್ನು ತಂದಿದೆ. ಮದ್ಯವರ್ಜನ ಶಿಬಿರಗಳನ್ನು ಇತರ ಖಾಸಗಿ ಸಂಸ್ಥೆಗಳು ಹಣ ಪಡೆದು ನಡೆಸುತ್ತಿದ್ದು, ಆ ಶಿಬರಿಗಳಲ್ಲಿ ಮಧ್ಯಪಾನೀಯರಿಗೆ ಹಿಂಸೆ ನೀಡಿ ಹಲವು ರಾಸಾಯನಿಕ ಮಿಶ್ರಿತ ಪದಾರ್ಥಗಳನ್ನು ಕುಡಿಸಿ ಬಿಡಿಸುವ ಕೆಲಸ ಮಾಡುತ್ತಾರೆ. ಅದರೆ ಧರ್ಮಸ್ಥಳ ಕ್ಷೇತ್ರದ ಮಧ್ಯವರ್ಜನ ಶಿಬಿರದಲ್ಲಿ ಯೋಗ, ಧ್ಯಾನ, ಮಾನಸಿಕ ಬಲವರ್ದತೆ, ಭಜನೆ, ದೇವರ ಕೀರ್ತನೆ, ನಿಜ ಬದುಕಿನ ಸ್ಥಿತಿಗಳ ಅರಿವು ಮೂಡಿಸುವ ಮೂಲಕ ಮದ್ಯಪಾನಿಯರನ್ನು ಮದ್ಯದಿಂದ ಮುಕ್ತಗೊಳಿಸುವ ಕೆಲಸ ಮಾಡುತ್ತಿರುವುದು ಪವಿತ್ರವಾದ ಕಾರ್ಯವಾಗಿದೆ ಎಂದರು.
ಬೆಂಗಳೂರು ಪ್ರದೇಶಿಕ ನಿರ್ದೇಶಕ ಶೀನಪ್ಪ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಆಲೋಚನೆ ಮತ್ತು ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಇಲ್ಲಿಯವೆರೆಗೂ 1898 ಮಧ್ಯವರ್ಜನ ಶಿಬಿರಗಳನ್ನು ನಡೆಸಿ ಸಾವಿರಾರು ಕುಟುಂಬಗಳಿಗೆ ನೆಮ್ಮದಿಯ ಬದುಕನ್ನು ನೀಡಲಾಗಿದೆ. ಇಂದು ಹನುಮಂತನಾಥಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ 8 ದಿನಗಳ ಕಾಲ ನಮ್ಮ ಸಂಸ್ಥೆಯ ಪದಾಧಿಕಾರಿಗಳು ಸ್ವಯಂ ಸೇವಕರು ಯೋಗ ಶಿಕ್ಷಣದವರು ಶ್ರಮವಹಿಸಿ ಈ ಮಧ್ಯ ವರ್ಜನ ಶಿಬಿರವನ್ನು ಯಶ್ವಸ್ವಿಗೊಳಿಸಿ ಈ ಶಿಬಿರದಲ್ಲಿ 63 ಮಂದಿಗೆ ಮದ್ಯ ವ್ಯಸನವನ್ನು ಬಿಡಿಸಿ ಕುಟುಂಬಗಳಿಗೆ ನೆಮ್ಮದಿ ನೀಡುವ ಕಾರ್ಯವನ್ನು ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಿಬಿರದ ಅಧ್ಯಕ್ಷ ಉಮೇಶ್‍ಚಂದ್ರ, ಮಾಜಿ ಜಿ.ಪಂ. ಸದಸ್ಯ ಶಿವರಾಮಯ್ಯ, ಪ.ಪಂ.ಸದಸ್ಯ ಪ್ರದೀಪ್ ಕುಮಾರ್, ಎಲ್.ರಾಜಣ್ಣ, ಆರ್.ಎಸ್.ರಾಜಣ್ಣ, ರಾಮಸ್ವಾಮಿ, ಜಗದೀಶ್, ಮಮತಾ, ದಿನೇಶ್, ಅನಿತಾ, ದೇವಿಪ್ರಸಾದ್, ತಿಮ್ಮನಾಯ್ಕ, ಶೃತಿ, ಉಮೇಶ್, ವಿರೋಪಾಕ್ಷ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere: ವಿದ್ಯೆಯ ಸಾಧನೆಗೆ ಸಾಧಿಸುವ ಗುರಿ ಒಂದೇ ಮುಖ್ಯ
ಜಟ್ಟಿ ಅಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಗಂಗಾದೇವಿ ಅಧ್ಯಕ್ಷೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC U19 ವನಿತಾ ಟಿ20 ವಿಶ್ವಕಪ್: ಭಾರತಕ್ಕೆ ನಿಕಿ ಪ್ರಸಾದ್ ನಾಯಕಿ
Maharashtra: ಬಾಸ್ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.