ಕೊರಟಗೆರೆ: ಡಿ ಗ್ರೂಪ್ ನೌಕರನ ನೇಮಕ ಅಂಚೆ ಇಲಾಖೆ ಅಧೀಕ್ಷಕರಿಗೆ ಗೊತ್ತಿಲ್ವಂತೆ !!
ನೌಕರನ ಖಾತೆಗೆ ಪ್ರತಿ ತಿಂಗಳು 15ಸಾವಿರ ಸಂಬಳ; ಸಿಸಿಟಿವಿ ಇಲ್ಲದೇ ಭದ್ರತೆಯೇ ಮರೀಚಿಕೆ
Team Udayavani, Dec 28, 2022, 10:48 PM IST
ಕೊರಟಗೆರೆ: ಸರಕಾರದ ಆದೇಶವೇ ಇಲ್ಲದೇ ಅಂಚೆ ಇಲಾಖೆಯಲ್ಲಿ ಅನಧಿಕೃತವಾಗಿ ಡಿ.ಗ್ರೂಪ್ ನೌಕರನ ನೇಮಕ.. ಪ್ರತಿ ತಿಂಗಳು ಈತನ ಬ್ಯಾಂಕ್ ಖಾತೆಗೆ 15ಸಾವಿರ ಸಂಬಳ ಜಮಾ.. ಕಳೆದ 3ವರ್ಷದಿಂದ ಈತನೇ ಕೊರಟಗೆರೆ ಪಟ್ಟಣದ ಅಂಚೆ ಇಲಾಖೆ ಕಚೇರಿಯ ಬಾಸ್. ಡಿ.ಗ್ರೂಪ್ ನೌಕರ(ಹೊರಗುತ್ತಿಗೆ ಸಿಬಂದಿ) ನೇಮಕದ ಬಗ್ಗೆ ತುಮಕೂರು ಅಂಚೆ ಇಲಾಖೆಯ ಜಿಲ್ಲಾ ಅಧಿಕ್ಷಕರಿಗೆ ಮಾಹಿತಿಯೇ ಇಲ್ವಂತೆ..!!
ಕೊರಟಗೆರೆ ಪಟ್ಟಣದ ಕೇಂದ್ರ ಸ್ಥಾನದಲ್ಲಿನ ಅಂಚೆ ಕಚೇರಿಯಲ್ಲಿ ಅಧಿಕೃತ ನೌಕರಗಿಂತ ಅನಧಿಕೃತ ಸಿಬ್ಬಂದಿಗಳ ದರ್ಬಾರು ಹೆಚ್ಚಾಗಿದೆ. ನೌಕರರ ಪ್ರತಿನಿತ್ಯದ ದಾಖಲಾತಿ ಪರಿಶೀಲನೆ ನಡೆಸಬೇಕಾದ ಅಂಚೆ ನಿರೀಕ್ಷಕರೇ ಕೊರಟಗೆರೆಗೆ ಬರೋದು ತುಂಬಾನೇ ಕಡಿಮೆ. ತುಮಕೂರು ಅಂಚೆ ಇಲಾಖೆಯ ಜಿಲ್ಲಾಮಟ್ಟದ ಅಧಿಕ್ಷಕರು ಮತ್ತು ಉಪ ಅಧಿಕ್ಷಕರ ನಿರ್ಲಕ್ಷದ ಜಾಣಮೌನವು ಕೊರಟಗೆರೆಯಲ್ಲಿ ಸಮಸ್ಯೆ ದ್ವಿಗುಣವಾಗಲು ಕಾರಣವಾಗಿದೆ.
ಡಿ.ಗ್ರೂಪ್ ನೌಕರ ಸುರೇಶ್ ಎಂಬಾತ ಪ್ರತಿನಿತ್ಯ ಬೆಳಿಗ್ಗೆ 8ಗಂಟೆಗೆ ಅಂಚೆ ಇಲಾಖೆಗೆ ಮೊದಲು ಬರ್ತಾನೇ. ಅಂಚೆ ಕಾಗದ, ಕ್ಯಾಸ್ ಕೌಂಟರ್, ಬ್ಯಾಗ್ ಕಟ್ಟೋದು ಸೇರಿದಂತೆ ಪ್ರಮುಖ ದಾಖಲೆಗಳಿಗೆ ಈತನೇ ಅಂಚೆ ಮುದ್ರೆ ಹಾಕ್ತಾನೇ. ಕಚೇರಿಯ ಬೀಗ ತೆಗೆಯುವ ಕೆಲಸದಿಂದ ಹಿಡಿದು ಸಂಜೆ ಕಚೇರಿಯ ಬಾಗಿಲು ಹಾಕುವ ಜವಾಬ್ದಾರಿಯು ಈತನದೇ. ಸಿಸಿಟಿವಿ ಇಲ್ಲದಿರುವ ಕಚೇರಿಯಲ್ಲಿ ಏನಾದರೂ ಅನಾಹುತ ಎದುರಾದರೇ ಜವಾಬ್ದಾರಿ ಯಾರು ಎಂಬುದೇ ಯಕ್ಷಪ್ರಶ್ನೆ.
ಕೊರಟಗೆರೆ ಪಟ್ಟಣದ ಅಂಚೆ ಕಚೇರಿಯಲ್ಲಿ ಡಿ.ಗ್ರೂಪ್ ನೌಕರನಾಗಿದ್ದ ಶಣ್ಮುಕ ಆಚಾರ್ಯ ಕಳೆದ 3ವರ್ಷದ ಹಿಂದೆ ಮೃತಪಟ್ಟ ನಂತರ ಪಾವಗಡದ ಸುರೇಶ್ ಎಂಬಾತನಿಗೆ ಕಚೇರಿಯ ಪೊಸ್ಟ್ ಮಾಸ್ಟರ್ ಜೀವನ್ ಪ್ರಕಾಶ್ ಮತ್ತು ಅಂಚೆ ನಿರೀಕ್ಷಕ ಹರ್ಷನ ಎಂಬಾತನ ಕೃಪಕಟಾಕ್ಷದಿಂದ ನೇಮಕವಾಗಿ ಸಂಬಳವು ಬರುತ್ತೀದೆ. ಅನಧಿಕೃತ ಡಿ.ಗ್ರೂಪ್ ನೌಕರ(ಹೊರಗುತ್ತಿಗೆ ಸಿಬ್ಬಂದಿ) ಸುರೇಶ್ ನೇಮಕಾತಿಯನ್ನು ತಕ್ಷಣ ತನಿಖೆ ನಡೆಸಬೇಕಿದೆ.
ಸಿಸಿಟಿವಿಯೇ ಇಲ್ಲದಿರುವ ಅಂಚೆ ಕಚೇರಿಯ ನಗದು ಹಣ ಅಥವಾ ದಾಖಲೆಗಳು ಮಾಯವಾದರೇ ಪೊಸ್ಟ್ ಮಾಸ್ಟರ್ ಜೀವನ್‍ಪ್ರಕಾಶ್ ಮತ್ತು ಅಂಚೆ ನಿರೀಕ್ಷಕ ಹರ್ಷರವರೇ ನೇರವಾಗಿ ಜವಾಬ್ದಾರಿ ಆಗ್ತಾರೇ. ತುಮಕೂರು ಜಿಲ್ಲಾ ಸಹಾಯಕ ಅಧಿಕ್ಷಕರಾದ ಉಮಾ ಮತ್ತು ಜಿಲ್ಲಾ ಅಧಿಕ್ಷಕರಾದ ಗೋವಿಂದರಾಜು ತಕ್ಷಣ ಪರಿಶೀಲನೆ ನಡೆಸಿ ಅನಧಿಕೃತ ನೌಕರನ ನೇಮಕದ ತನಿಖೆ ನಡೆಸಿ ತಕ್ಷಣ ಕಚೇರಿಗೆ ಸಿಸಿಟಿವಿಯ ವ್ಯವಸ್ಥೆ ಮಾಡಬೇಕಿದೆ.
ಸಿಸಿಟಿವಿಯೇ ಇಲ್ಲದೇ ಅಂಚೆ ಕಚೇರಿ..
ಸರಕಾರಿ ಕಚೇರಿಯಲ್ಲಿ ಸಿಸಿಟಿವಿ ಕಡ್ಡಾಯ ಅಳವಡಿಕೆಗೆ ಸರಕಾರವೇ ಆದೇಶ ಮಾಡಿದೆ. ಅತಿಸೂಕ್ಷ್ಮ ಮತ್ತು ಗೌಪ್ಯತೆಯ ಅಂಚೆ ಕಚೇರಿಯಲ್ಲಿ ಸಿಸಿಟಿವಿ ಅಳವಡಿಕೆಗೆ ಅಧಿಕಾರಿಗಳ ನಿರ್ಲಕ್ಷವೇಕೆ. ಕಚೇರಿ ವೇಳೆ ಅಂಚೆ ಅಧಿಕಾರಿಗಳಿಗೆ ಸಮಸ್ಯೆ ಆದರೇ ಹೊಣೆಯಾರು. ರಾತ್ರಿವೇಳೆ ಕಚೇರಿಯಲ್ಲಿನ ಹಣ ಅಥವಾ ದಾಖಲೆಗಳು ಕಳ್ಳತನ ಆದರೇ ಅದಕ್ಕೆ ಜವಾಬ್ದಾರಿ ಯಾರು. ಸಿಸಿಟಿವಿ ಅಳವಡಿಕೆ ನಿರ್ಲಕ್ಷಕ್ಕೆ ಮೇಲಾಧಿಕಾರಿಗಳ ಜವಾಬ್ದಾರಿ ಏನು ಎಂಬುದೇ ಪ್ರಶ್ನೆ.
ಅಂಚೆ ನಿರೀಕ್ಷಕರಿಂದ ಉಡಾಫೆ ಉತ್ತರ..
ನಿಮ್ಮದು ಏನೇ ದೂರು ಇದ್ರು ತುಮಕೂರು ಅಂಚೆ ಅಧೀಕ್ಷಕರಿಗೆ ದೂರು ನೀಡಿ. ಅವರು ನನಗೇ ಆದೇಶ ಮಾಡಿದರೇ ನಾನು ತನಿಖೆ ಮಾಡುತ್ತೇನೆ. ನಾನು ಯಾರಿಗೂ ಅಂಚೆ ಇಲಾಖೆಯ ಮಾಹಿತಿ ನೀಡೋದಿಲ್ಲ. ನಾನು ಯಾರ ಪ್ರಶ್ನೆಗೂ ಉತ್ತರಿಸುವ ಅವಶ್ಯಕತೆಯು ಇಲ್ಲ. ಕೊರಟಗೆರೆ ಏನೇ ಸಮಸ್ಯೆ ಇದ್ರು ನೇರವಾಗಿ ಅಧೀಕ್ಷಕರ ಕಚೇರಿಗೆ ಬೇಟಿನೀಡಿ ಎಂದು ಕೊರಟಗೆರೆಗೆ ನೇಮಕ ಆಗಿರುವ ಅಂಚೆ ನಿರೀಕ್ಷಕ ಹರ್ಷ ಉಢಾಫೆಯ ಉತ್ತರ ನೀಡಿದ್ದಾರೆ.
ಪಾವಗಡದ ಸುರೇಶ್ ಎಂಬಾತ ನಮ್ಮಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾನೆ. ಅಂಚೆ ಇಲಾಖೆಯ ಅಧಿಕಾರಿಗಳ ಸೂಚನೆಯಂತೆ ನೇಮಕವಾಗಿದೆ. ಪ್ರತಿತಿಂಗಳು ಆತನ ಬ್ಯಾಂಕು ಖಾತೆಗೆ 15ಸಾವಿರ ಸಂಬಳ ಬರಲಿದೆ. ನಿಮಗೇ ಹೆಚ್ಚಿನ ಮಾಹಿತಿ ಬೇಕಾದರೇ ಅಧೀಕ್ಷಕರಿಗೆ ಕೇಳಿ. ಡಿ.ಗ್ರೂಪ್ ನೌಕರನ ಬಗ್ಗೆ ಹೆಚ್ಚೇನು ನನಗೇನು ಗೋತ್ತಿಲ್ಲ.-ಜೀವನ್‍ಪ್ರಕಾಶ್. ಪೊಸ್ಟ್ ಮಾಸ್ಟರ್
ಅಂಚೆ ಇಲಾಖೆಯಿಂದ ಅಧಿಕೃತವಾಗಿ ಡಿ.ಗ್ರೂಪ್ ನೌಕರರ ನೇಮಕ ಮಾಡಿಲ್ಲ. ಕೊರಟಗೆರೆ ಪಟ್ಟಣದ ಅಂಚೆ ಕಚೇರಿಯ ಸಿಬ್ಬಂದಿಗಳ ಕರ್ತವ್ಯದ ಬಗ್ಗೆ ಈಗಾಗಲೇ ದೂರು ಬಂದಿದೆ. ಈಗಾಗಲೇ ಕೊರಟಗೆರೆ ಅಂಚೆ ಇಲಾಖೆಯ ಬಗ್ಗೆ ಪೂಸ್ಟ್ ಮಾಸ್ಟರ್‍ಗೆ ನೇಮಕಾತಿಯ ಮಾಹಿತಿ ಕೇಳಿದ್ದೇವೆ. ಸಿಬಂದಿ ನೇಮಕಾತಿ ವಿಚಾರದಲ್ಲಿ ಲೋಪ ಕಂಡಬಂದರೇ ತಕ್ಷಣ ಕ್ರಮ ಕೈಗೊಳ್ಳುತ್ತೇನೆ.-ಗೋವಿಂದರಾಜು. ಅಧೀಕ್ಷಕ. ಅಂಚೆ ಇಲಾಖೆ. ತುಮಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere: ವಿದ್ಯೆಯ ಸಾಧನೆಗೆ ಸಾಧಿಸುವ ಗುರಿ ಒಂದೇ ಮುಖ್ಯ
ಜಟ್ಟಿ ಅಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಗಂಗಾದೇವಿ ಅಧ್ಯಕ್ಷೆ
Koratagere: ಮದ್ಯಪಾನದಿಂದ ಕುಟುಂಬದಲ್ಲಿ ದಿನ ಅಶಾಂತಿ ಉಂಟಾಗಿ ನೆಮ್ಮದಿ ಇಲ್ಲದಂತಾಗಿದೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
Living together; ವಿಚ್ಛೇದನ ತಡೆಯಲು ಲಿವಿಂಗ್ ಟುಗೆದರ್ ಸಹಕಾರಿಯೇ?
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.