ಕೊರಟಗೆರೆ: ರೈತ, ಹಸುವಿನ ಮೇಲೆ ಕರಡಿ ದಾಳಿ
Team Udayavani, Jul 5, 2023, 9:57 PM IST
ಕೊರಟಗೆರೆ: ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಜೆಟ್ಟಿ ಅಗ್ರಹಾರ ಗ್ರಾಮದ ರೈತನ ಜಮೀನಿನಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಓರ್ವ ರೈತ ಮತ್ತು ಹಸುವಿನ ಮೇಲೆ ಕರಡಿ ದಾಳಿ ನಡೆಸಿದೆ.
ರೈತ ನರಸಿಂಹಮೂರ್ತಿ ಜಮೀನಿಗೆ ತೆರಳುವ ವೇಳೆ ಕರಡಿ ದಾಳಿ ಮಾಡಿದೆ. ನಂತರ ಗ್ರಾಮದೊಳಗೆ ಬಂದ ಕರಡಿ ರೈತರೊಬ್ಬರ ಮನೆಗೆ ನುಗ್ಗಿ ಹಸುವಿನ ಮೇಲೂ ದಾಳಿ ನಡೆಸಿದೆ.
ರೈತನ ಬೆನ್ನಿನ ಹಿಂಭಾಗಕ್ಕೆ ಪರಚಿದ ಗಾಯವಾಗಿದ್ದು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಿಯರ ಸಹಾಯದಿಂದ ಕೊರಟಗೆರೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಕೊರಟಗೆರೆಯ ವಲಯ ಅರಣ್ಯಾಧಿಕಾರಿ ಸುರೇಶ್ ಭೇಟಿ ನೀಡಿ ಮಾತನಾಡಿ ಕರಡಿಯಿಂದ ದಾಳಿಗೊಳಗಾದ ರೈತನಿಗೆ ಸರ್ಕಾರದಿಂದ ದೊರೆಯುವ ಸೂಕ್ತ ಪರಿಹಾರವನ್ನು ಕೊಡಿಸುವ ಭರವಸೆಯನ್ನು ನೀಡಿದ್ದಾರೆ.
ಕರಡಿಯನ್ನು ಸೆರೆ ಹಿಡಿಯುಲು ಸಿಬ್ಬಂದಿಯ ಸಹಾಯದಿಂದ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.ನಂತರ ಕರಡಿಯನ್ನು ಪಕ್ಷದ ಮಿಂಚುಕಲ್ಲು ಬೆಟ್ಟಕ್ಕೆ ಓಡಿಸಲಾಗಿದೆ.ಕರಡಿ ಸೆರೆ ಹಿಡಿಯಲು ಹೀಗಾಗಲೇ ಬೋನು ಇಟ್ಟಿದ್ದು ಕರಡಿಯು ಬೋನಿನ ಪಕ್ಕದಲ್ಲಿ ಹಾದು ಹೋಗಿರುವುದು ತಿಳಿದುಬಂದಿದೆ. ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಕಾರ್ಯ ಚರಣೆಯಲ್ಲಿ ಸಿಬಂದಿಗಳಾದ ವಿಜಯ ದೇವೇಂದ್ರಹಟ್ಟಿ, ನರಸಿಂಹಯ್ಯ,ಮಂಜುನಾಥ,ರಘು,ನರಸರಾಜು, ಚಾಂದ್ ಪಾಷಾ, ರಾಜಣ್ಣ ಇನ್ನಿತರು ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.