ಕೊರಟಗೆರೆಯಲ್ಲಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾದ ಬಿಜೆಪಿ: ಜನಸಂಕಲ್ಪ ಯಾತ್ರೆ, ಬೃಹತ್ ಸಮಾವೇಶ
25 ಸಾವಿರ ಕಾರ್ಯಕರ್ತರು ಸೇರುವ ನಿರೀಕ್ಷೆ..
Team Udayavani, Dec 6, 2022, 7:21 PM IST
ಕೊರಟಗೆರೆ: ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳ ಅನುಷ್ಠಾನದ ಸಾಧನೆಯ ಅನಾವರಣವೇ ಜನಸಂಕಲ್ಪ ಯಾತ್ರೆ.. ಜನಸಂಕಲ್ಪ ಯಾತ್ರೆಯ ಬೃಹತ್ ವೇದಿಕೆಯ ಸಮಾವೇಶಕ್ಕೆ ಕೊರಟಗೆರೆ ಕ್ಷೇತ್ರದ 242 ಬೂತ್ ಮಟ್ಟದಿಂದ 25 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಆಗಮಿಸುವ ನಿರೀಕ್ಷೆ ಇದೆ. ಜನಸಂಕಲ್ಪ ಯಾತ್ರೆಯ ಸಮಾವೇಶ ಆಯೋಜನೆಯ ಮೂಲಕ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವು ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದೆ.
ಕೊರಟಗೆರೆ ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಜನಸಂಕಲ್ಪ ಯಾತ್ರೆಯ ಬೃಹತ್ ಸಮಾವೇಶದ ವೇದಿಕೆ ಕಾರ್ಯಕ್ರಮ ಡಿ. 7ರ ಬುಧವಾರ ನಡೆಯಲಿದೆ. ಬೃಹತ್ ವೇದಿಕೆಯಲ್ಲಿ 15 ಕ್ಕೂ ಅಧಿಕ ಕಾರ್ಯಕರ್ತರು ಕುಳಿತುಕೊಳ್ಳಲು ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವೇದಿಕೆಯ ಸುತ್ತಮುತ್ತಲು ನಾಯಕರ ಕಟೌಟ್‌ಗಳು ರಾರಾಜಿಸುತ್ತೀವೆ. ಕೊರಟಗೆರೆ ಪಟ್ಟಣದ ನಾಲ್ಕು ದಿಕ್ಕಿನಲ್ಲಿಯೂ ಪೊಲೀಸ್ ಪಹರೆಯ ಮೂಲಕ ವಿಶೇಷವಾದ ಬಂದೋಬಸ್ತ್ ಮಾಡಲಾಗಿದೆ.
ಸುದ್ದಿಗೋಷ್ಟಿಯಲ್ಲಿ ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿ, ಉಪಾಧ್ಯಕ್ಷ ಬಸವರಾಜು ಮಧುಗಿರಿ ಜಿಲ್ಲೆಯ ಪ್ರಭಾರಿ ವಿಕಾಸ್ ಪುತ್ತೂರು, ಜಿಲ್ಲಾಧ್ಯಕ್ಷ ಮಂಜುನಾಥ, ಕೊರಟಗೆರೆ ಮಂಡಲ ಅಧ್ಯಕ್ಷ ಪವನಕುಮಾರ್, ಜಿಲ್ಲಾ ಕಾರ್ಯದರ್ಶಿ ರವಿಕುಮಾರ್, ಯುವಮೋರ್ಚ ಕಾರ್ಯದರ್ಶಿ ಸ್ವಾಮಿ, ಮಂಡಲ ಕಾರ್ಯದರ್ಶಿ ಗುರುಧತ್, ಕೊರಟಗೆರೆ ಕ್ಷೇತ್ರದ ಆಕಾಂಕ್ಷಿತ ಅಭ್ಯರ್ಥಿಗಳಾದ ಬಿ.ಹೆಚ್.ಅನಿಲ್‌ಕುಮಾರ್, ಗಂಗಹನುಮಯ್ಯ, ವೈ.ಹೆಚ್.ಹುಚ್ಚಯ್ಯ, ಡಾ.ಲಕ್ಷ್ಮೀಕಾಂತ, ಕೆ.ಎಂ.ಮುನಿಯಪ್ಪ ಸೇರಿದಂತೆ ಇತರರು.
ಸರಕಾರದ ಸಾಧನೆಗಳ ಅನಾವರಣ..
ಪರಿಶಿಷ್ಟರ ಮೀಸಲು ಏರಿಕೆ, ಬಡಮಕ್ಕಳ ಶಿಕ್ಷಣಕ್ಕೆ ವಿದ್ಯಾನಿಧಿ, ಬಡವರು ಮತ್ತು ರೈತರಿಗೆ ಸಂಜೀವಿನಿ ಯಶಸ್ವಿನಿ, ಅಮೃತ ಯೋಜನೆ, ಜನರ ಮನೆಬಾಗಿಲಿಗೆ ಸರಕಾರ ಗ್ರಾಮ ಒನ್, ಪೌರ ಕಾರ್ಮಿಕರ ಕಾಯಂ, ನಿಮ್ಮ ಆರೋಗ್ಯಕ್ಕೆ ನಮ್ಮ ಕ್ಲಿನಿಕ್, ಕೆಂಪೇಗೌಡರ ಪ್ರತಿಮೆ, ಅಕ್ರಮ ಮತಾಂತರಕ್ಕೆ ಪುಲ್‌ಸ್ಟಾಪ್, ಪುಣ್ಯಕೋಟಿ ದತ್ತು, ಕರೆ ಮಾಡಿದ್ರೆ ಮನೆಗೇ ಪಶು ತುರ್ತುವಾಹನ, ದಲಿತ ಯುವಕರಿಗೆ ಸ್ವಯಂ ಉದ್ಯೋಗ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಹತ್ತಾರು ಸಾಧನೆಯ ಅನಾವರಣ ಕಾರ್ಯಕ್ರಮವೇ ಜನ ಸಂಕಲ್ಪಯಾತ್ರೆ.
ಜನಸಂಕಲ್ಪ ಯಾತ್ರೆಗೆ ವಿಶೇಷ ಅತಿಥಿಗಳು..
ಸನ್ಮಾನ್ಯ ಸಿಎಂ ಬಸವರಾಜು ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಅರಗ ಜ್ಞಾನೇಂದ್ರ, ಕೆಂದ್ರ ಸಚಿವ ಎ.ನಾರಾಯಣಸ್ವಾಮಿ, ರಾಜ್ಯ ಸಚಿವರಾದ ಅಶ್ವತ್ಥನಾರಾಯಣ, ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜು, ಗೋವಿಂದ ಕಾರಜೋಳ, ಮಾಧುಸ್ವಾಮಿ, ಬಿ.ಸಿ.ನಾಗೇಶ್, ಸಂಸದ ಬಸವರಾಜು, ತುಮಕೂರು ಜಿಲ್ಲೆಯ ಹಾಲಿ ಶಾಸಕರು ಮತ್ತು ಮಾಜಿ ಶಾಸಕರು ಕೊರಟಗೆರೆಯ ಜನ ಸಂಕಲ್ಪ ಯಾತ್ರೆಯ ಸಮಾವೇಶಕ್ಕೆ ಆಗಮಿಸಲಿದ್ದಾರೆ.
242 ಬೂತ್‌ಗಳಿಗೆ 400 ವಾಹನ..
ಜನಸಂಕಲ್ಪ ಯಾತ್ರೆಯ ಸಮಾವೇಶ ಯಶಸ್ವಿಗಾಗಿ ಬಿಜೆಪಿ ಪಕ್ಷದಿಂದ ಕೊರಟಗೆರೆ ಕ್ಷೇತ್ರದ 242 ಬೂತ್‌ಗಳಿಗೆ 400 ಕ್ಕೂ ಅಧಿಕ ಬಸ್ ಮತ್ತು ಕಾರಿನ ಸೌಲಭ್ಯ ಕಲ್ಪಿಸಲಾಗಿದೆ. ಸಮಾವೇಶ ಯಶಸ್ವಿಗಾಗಿ ಮಧುಗಿರಿಯ ಮಂಡಲ ಜಿಲ್ಲಾಧ್ಯಕ್ಷ ಮಂಜುನಾಥ, ಕೊರಟಗೆರೆ ಅಧ್ಯಕ್ಷ ಪವನ್‌ಕುಮಾರ್ ನೇತೃತ್ವದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ತಂಡ ಸ್ಥಳದಲ್ಲಿಯೇ ಮೊಕ್ಕಾಂ ಹೂಡುವ ಮೂಲಕ ಸಮಾವೇಶ ಯಶಸ್ವಿಗೆ ಹಗಲುರಾತ್ರಿ ಪ್ರಯತ್ನಿಸಿದ್ದಾರೆ.
ಮಧುಗಿರಿ ಸಂಘಟನಾ ಜಿಲ್ಲೆಯ 4 ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ. ಅದರಲ್ಲಿ ಕೊರಟಗೆರೆ ಕ್ಷೇತ್ರವು ನಮಗೆ ಅತಿಮುಖ್ಯವಾದ ಕ್ಷೇತ್ರ. ಕೇಂದ್ರ ಮತ್ತು ರಾಜ್ಯ ಸರಕಾರದ ಸಾಧನೆಯನ್ನು ಮನೆಮನೆಗೆ ತಲುಪಿಸುವ ಜವಾಬ್ದಾರಿ ನಮ್ಮದಾಗಿದೆ. ಕೊರಟಗೆರೆಯಲ್ಲಿ ನಡೆಯುವ ಡಿ. 7ರ ಜನಸಂಕಲ್ಪ ಯಾತ್ರೆಗೆ 25 ಸಾವಿರ ಬಿಜೆಪಿ ಕಾರ್ಯಕರ್ತರು ಸೇರುವ ನಿರೀಕ್ಷೆ ಇದೆ.
– ಬಿ.ಕೆ.ಮಂಜುನಾಥ. ಜಿಲ್ಲಾಧ್ಯಕ್ಷ. ಮಧುಗಿರಿ ಸಂಘಟನಾ ಜಿಲ್ಲೆ.
ಜನಸಂಕಲ್ಪ ಯಾತ್ರೆಗೆ ರಾಜ್ಯದ ಜನರಿಂದ ಉತ್ತಮ ಸ್ಪಂಧನೆ ಸಿಕ್ಕಿದೆ. ಡಿ. 7 ರಂದು ತುಮಕೂರು ಜಿಲ್ಲೆಯ ಕುಣಿಗಲ್ ಮತ್ತು ಕೊರಟಗೆರೆಯಲ್ಲಿ ಜನಸಂಕಲ್ಪ ಯಾತ್ರೆಯ ಬೃಹತ್ ಸಮಾವೇಶ ನಡೆಯಲಿದೆ. ತುಮಕೂರು ಜಿಲ್ಲೆಯ 11 ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಧ್ಯರ್ಥಿಗಳೇ ಗೆಲ್ತಾರೇ. 2023 ರ ಚುನಾವಣೆ ಎದುರಿಸಲು ತಳಮಟ್ಟದಿಂದ ಬಿಜೆಪಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಬೃಹತ್ ಪಡೆಯು ಈಗಾಗಲೇ ಸಜ್ಜಾಗಿದೆ.
– ಕೆ.ಎಸ್.ನವೀನ್. ಪ್ರಭಾರಿ. ದಾವಣಗೆರೆ ವಿಭಾಗ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ
Excise: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್
Gadaga: ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!
MUST WATCH
ಹೊಸ ಸೇರ್ಪಡೆ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.