Koratagere: ಮಜ್ಜಿಗೆ ಫ್ಯಾಕ್ಟರಿಯ ಬಾಯ್ಲರ್ ಸ್ಪೋಟ; ಕಾರ್ಮಿಕನಿಗೆ ಗಂಭೀರ ಗಾಯ

ಪರವಾನಗಿ ಇಲ್ಲದ ಪ್ಯಾಕ್ಟರಿ

Team Udayavani, Jul 9, 2024, 7:12 PM IST

4-koratagere

ಕೊರಟಗೆರೆ: ತರಬೇತಿಯೇ ಇಲ್ಲದ ಕಾರ್ಮಿಕನೊಬ್ಬನನ್ನು ಬೆಣ್ಣೆ-ತುಪ್ಪ ತೆಗೆಯಲು ನೇಮಿಸಿದ ಫ್ಯಾಕ್ಟರಿ ಮಾಲಕನ ನಿರ್ಲಕ್ಷದಿಂದ ಮನೆಯ ಕಾಪೌಂಡಿನ ಆವರಣದಲ್ಲಿದ್ದ ಬಾಯ್ಲರ್ ಸ್ಪೋಟಗೊಂಡು ಓರ್ವ ಕಾರ್ಮಿಕನಿಗೆ ಗಂಭೀರ ಗಾಯಗಳಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಜು.9ರ ಮಂಗಳವಾರ ನಡೆದಿದೆ.

ಕೊರಟಗೆರೆ ಪಟ್ಟಣದ ಹೊಸಬಡಾವಣೆಯ ಸದಾಶಿವಯ್ಯ ಎಂಬಾತನ ಫ್ಯಾಕ್ಟರಿಯಲ್ಲಿ ಬೆಂಕಿಯ ಶಾಖ ಮತ್ತು ವಿದ್ಯುತ್ ಸ್ಪರ್ಶದಿಂದ ಸೋಮವಾರ ರಾತ್ರಿ 10 ಗಂಟೆಗೆ ಘಟನೆ ನಡೆದಿದೆ.

ಮಾಲಕನ ನಿರ್ಲಕ್ಷದಿಂದ ಬಾಯ್ಲರ್ ಸ್ಪೋಟಗೊಂಡು ಮಲ್ಲೇಶಪುರದ ಕಾರ್ಮಿಕ ಯತೀಶ್‌ಗೆ ತೀರ್ವ ಗಾಯಗಳಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಾಸದ ಮನೆಯಲ್ಲಿ 2016 ರಲ್ಲಿ ಪ್ರಾರಂಭವಾದ ಶ್ರೀಕಂಠೇಶ್ವರ ಎಂಟರ್‌ ಪ್ರೈಸಸ್ ಅಡಿಯಲ್ಲಿ ಶ್ರೀಕಂಠೇಶ್ವರ ಮಿಲ್ಕ್ ಡೈರಿ, ಪುಣ್ಯಕೋಟಿ ಮಜ್ಜಿಗೆ ಫ್ಯಾಕ್ಟರಿ, ಪೇಡಾ, ಜಾಮುನ್ ಸೇರಿ ಹಾಲಿನ ಉತ್ಪನ್ನಗಳ ಮಿನಿ ಕಾರ್ಖಾನೆಯೇ ಇದೆ.

ಫ್ಯಾಕ್ಟರಿಯಲ್ಲಿ ಭದ್ರತಾ ಮತ್ತು ಅಗ್ನಿ ಅವಘಡ ತಪ್ಪಿಸುವ ಯಾವುದೇ ಉಪಕರಣ ಇಲ್ಲದೇ ಹತ್ತಾರು ಯಂತ್ರೋಪಕರಣ ಅಳವಡಿಸಿದ್ದು ಇದು ಸೇರಿ 3ನೇ ಬ್ಲಾಸ್ಟಿಂಗ್ ಪ್ರಕರಣ ಬೆಳಕಿಗೆ ಬಂದಿದೆ.

ಪ್ಯಾಕ್ಟರಿಗೆ ಕಾರ್ಮಿಕ ನೀರಿಕ್ಷಕ ಮತ್ತು ಮಧುಗಿರಿ ವಲಯ ಅಧಿಕಾರಿ ಭೇಟಿ ನೀಡಿ ನೊಟೀಸ್ ಜಾರಿ ಮಾಡಿದ್ದಾರೆ. ಸ್ಥಳಕ್ಕೆ ಸಿಪಿಐ ಅನಿಲ್ ಮತ್ತು ಪಿಎಸ್‌ಐ ಚೇತನ್ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ಪರವಾನಗಿ ಮತ್ತು ಭದ್ರತೆಯೇ ಇಲ್ಲದೇ ಮನೆಯಲ್ಲಿಯೇ ಪ್ಯಾಕ್ಟರಿ ಮಾಡಿರುವ ಮಾಲೀಕನ ವಿರುದ್ದ ಕ್ರಮ ಕೈಗೊಂಡು ನೀಡಿರುವ ಲೇಸೆನ್ಸ್ ರದ್ದು ಮಾಡಬೇಕಿದೆ.

ಪರವಾನಗಿ ಅವಧಿಯೇ ಮುಕ್ತಾಯ: ಶ್ರೀಕಂಠೇಶ್ವರ ಎಂಟರ್‌ಪ್ರೈಸಸ್ ಮಾಲಕ ಸದಾಶಿವಯ್ಯ ಪ.ಪಂ.ನಿಂದ ಪಡೆದಿರುವ ಉದ್ದಿಮೆ ಪರವಾನಗಿ ಪತ್ರದ ಅವಧಿಯು 2024ರ ಮಾ.31ಕ್ಕೆ ಮುಕ್ತಾಯ. ಕಾರ್ಮಿಕ ಮತ್ತು ಆಹಾರ ಇಲಾಖೆಯಿಂದ ಪರವಾನಗಿ ಪಡೆದ ದಾಖಲೆಗಳೇ ಲಭ್ಯವಿಲ್ಲ. ಅಗ್ನಿಶಾಮಕ ಮತ್ತು ಬೆಸ್ಕಾಂ ಇಲಾಖೆಯ ಪರವಾನಗಿ ಜೊತೆ ಮುನ್ನೆಚ್ಚರಿಕೆ ಕ್ರಮದ ನಾಮಫಲಕಗಳೇ ಇಲ್ಲ. 3ನೇ ಸಲ ಅವಘಡ ನಡೆದರೂ ಮಾಲಕನ ನಿರ್ಲಕ್ಷವೇ ಮತ್ತೊಂದು ದುರ್ಘಟನೆಗೆ ಕಾರಣ.

ಕಾರ್ಮಿಕರ ಜೀವದ ಜೊತೆ ಚೆಲ್ಲಾಟ: ವಾಸಕ್ಕೆ ಕಟ್ಟಿಸಿದ ಮನೆಯಲ್ಲಿಯೇ ಅವೈಜ್ಞಾನಿಕವಾಗಿ ಪುಣ್ಯಕೋಟಿ ಪ್ಯಾಕ್ಟರಿ ಸ್ಥಾಪನೆ ಮಾಡಲಾಗಿದೆ. ಫ್ಯಾಕ್ಟರಿಯಲ್ಲಿ ಪ್ರತಿನಿತ್ಯ 8 ಜನ ಮಹಿಳೆಯರು ಮತ್ತು 4 ಜನ ಪುರುಷ ಕಾರ್ಮಿಕರು ಕೆಲಸ ಮಾಡ್ತಾರೇ. ಕಾರ್ಮಿಕರಿಗೆ ಸಂಬಳ, ಕೆಲಸದ ಅವಧಿ, ಇಎಸ್‌ಐ, ಪಿಎಫ್‌ನ ಅರಿವಿನ ಜೊತೆ ಭದ್ರತೆಯೇ ಯಕ್ಷಪ್ರಶ್ನೆ. ತಡರಾತ್ರಿ 11 ಗಂಟೆ ತನಕ ಕಾರ್ಮಿಕರಿಂದ ಕೆಲಸ ಮಾಡಿಸಿಕೊಂಡು ಮಾಲೀಕನ ದಬ್ಬಾಳಿಕೆಗೆ ಅಧಿಕಾರಿಗಳ ಕಡಿವಾಣವೇ ಇಲ್ಲದಂತಿದೆ.

ಕಾರ್ಮಿಕ, ಅಹಾರ ಮತ್ತು ಪಪಂ ಪರವಾನಗಿ ಪಡೆದು ಪುಣ್ಯಕೋಟಿ ಪ್ಯಾಕ್ಟರಿ ಪ್ರಾರಂಭ ಮಾಡಿದ್ದೇನೆ. ಪ್ರತಿನಿತ್ಯ 3 ರಿಂದ 4 ಜನ ದಿನಗೂಲಿ ಕೆಲಸಗಾರರು ಮುಂಜಾನೇ ಬಂದು ಸಂಜೆ ಹೋಗ್ತಾರೇ. ನನ್ನ ಮನೆಯಲ್ಲಿ ಬಾಯ್ಲರ್ ಸ್ಪೋಟಗೊಂಡು ಓರ್ವನಿಗೆ ಗಾಯವಾಗಿ ವಿಕ್ಟೋರಿಯಾ ಆಸ್ಪತ್ರೆಗೆ ನಾನೇ ಸೇರಿಸಿದ್ದೇನೆ. – ಸದಾಶಿವಯ್ಯ. ಪ್ಯಾಕ್ಟರಿ ಮಾಲೀಕ. ಕೊರಟಗೆರೆ

ಪುಣ್ಯಕೋಟಿ ಪ್ಯಾಕ್ಟರಿಗೆ ಉಪವಿಭಾಗ ಅಧಿಕಾರಿ ಜೊತೆ ಭೇಟಿ ನೀಡಿ ಕಾರ್ಮಿಕರಿಂದ ಮಾಹಿತಿ ಪಡೆಯಲಾಗಿದೆ. ಕಾರ್ಮಿಕರಿಗೆ ಭದ್ರತೆ ನೀಡುವುದು ಮಾಲೀಕನ ಕರ್ತವ್ಯ. ಪ್ರಕರಣ ತನಿಖೆಯ ಹಂತದಲ್ಲಿದ್ದು ಗಾಯಾಳು ಹೇಳಿಕೆ ಪಡೆಯಬೇಕಿದೆ. ಮಾಲೀಕನಿಗೆ ಕಾರ್ಮಿಕರ ಸಂಬಳ ಮತ್ತು ನಾಮಫಲಕದ ಮಾಹಿತಿಗೆ ನೊಟೀಸ್ ಜಾರಿ ಮಾಡಲಾಗಿದೆ. – ಶ್ರೀಕಾಂತ್. ಕಾರ್ಮಿಕ ನಿರೀಕ್ಷಕ, ಕೊರಟಗೆರೆ

 

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jeeda

Tumakuru: ದೇವರಾಯನದುರ್ಗದಲ್ಲಿ ಹೊಸ ಮಾದರಿ ಜೇಡ ಪತ್ತೆ

Kunigal: ಬೈಕ್ ಗೆ ಮಿನಿ ಗೂಡ್ಸ್ ವಾಹನ ಡಿಕ್ಕಿ… ಪಿಗ್ಮಿ ಸಂಗ್ರಹಗಾರ ಮೃತ್ಯು

Kunigal: ಬೈಕ್ ಗೆ ಮಿನಿ ಗೂಡ್ಸ್ ವಾಹನ ಡಿಕ್ಕಿ… ಪಿಗ್ಮಿ ಸಂಗ್ರಹಗಾರ ಮೃತ್ಯು

3-tumkur-dasara

Dasara: ಇದೇ ಮೊದಲ ಬಾರಿಗೆ ತುಮಕೂರು ಜಿಲ್ಲಾಡಳಿತದ ವತಿಯಿಂದ ಅದ್ಧೂರಿ ದಸರಾ ಆಚರಣೆ

12-koratagere

Koratagere: ಮೈಸೂರು ದಸರಾದಲ್ಲಿ ಸಿದ್ದರಬೆಟ್ಟ ಸ್ತಬ್ದಚಿತ್ರ

4

Koratagere: ಕುಸಿದು ಬಿದ್ದು ವಿದ್ಯಾರ್ಥಿ ಸಾವು; ಹೃದಯಾಘಾತ ಶಂಕೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.