ಕೊರಟಗೆರೆ : ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತ ಸಾವು, ಮುಗಿಲು ಮುಟ್ಟಿದ ಆಕ್ರಂದನ
Team Udayavani, Aug 23, 2022, 9:25 AM IST
ಕೊರಟಗೆರೆ : ತಾಲೂಕಿನ ಕೋಳಾಲ ಹೋಬಳಿಯ ಬೆಸ್ಕಾಂ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತನೋರ್ವ ಸಾವನ್ನಪ್ಪಿರುವ ಘಟನೆ ಕ್ಯಾತಗಾನಹಳ್ಳಿಯಲ್ಲಿ ನಡೆದಿದೆ
ರೈತ ಮಹೇಶ್ ತೋಟದ ಕಡೆ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ ಸಂಜೆ 6ಗಂಟೆಗೆ ಮನೆಯಿಂದ ಹೊರಟಿದ್ದಾನೆ. ತೋಟಕ್ಕೆ ಹೋದವನು ರಾತ್ರಿ 8ಗಂಟೆಯಾದರೂ ಮನೆಗೆ ಬಾರದೇ ಇರುವುದನ್ನು ಕಂಡ ಮನೆಯವರು ಫೋನ್ ಮಾಡಿದ್ದಾರೆ. ಎಷ್ಟು ಬಾರಿ ಫೋನ್ ಮಾಡಿದರೂ ಉತ್ತರಿಸದೇ ಇದ್ದಾಗ ಗಾಬರಿಗೊಂಡ ಮಹೇಶ್ ಮನೆಯವರು ಹುಡುಕಾಡಲು ಪ್ರಯತ್ನಿಸಿದ್ದಾರೆ ತೋಟದ ಬಳಿ ಹೋಗಿ ನೋಡಿದಾಗ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿರುವುದನ್ನು ಕಂಡುಬಂದಿದೆ.
ಕೂಡಲೇ ಬೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿದರೂ ಸ್ಥಳಕ್ಕೆ ಬಾರದೇ ಇರುವ ಬೆಸ್ಕಾಂ ಇಲಾಖೆಯ ಅಧಿಕಾರಿಗಳ ವಿರುದ್ಧ ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಸ್ಕಾಂ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಒಬ್ಬ ರೈತನ ಸಾವು ಆಗಿದೆ ಎಂದು ಸ್ಥಳೀಯ ರೈತರು ಹಾಗೂ ಅವರ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಕೋಳಾಲ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸ್ಐ ಮಹಾಲಕ್ಷ್ಮಮ್ಮ ಹೆಚ್.ಎನ್ ತನಿಖೆ ಕೈಗೊಂಡಿದ್ದಾರೆ.
ಮೃತ ಮಹೇಶ್ ಮನೆಯಲ್ಲಿ ಆಕ್ರಂದನ ಮುಗಿಲುಮುಟ್ಟಿದೆ.
ಇದನ್ನೂ ಓದಿ : ಸ್ಪೋಕನ್ ಇಂಗ್ಲಿಷ್ಗೆ ತರಬೇತುದಾರರ ಕೊರತೆ : ಹಾಸ್ಟೆಲ್ಗಳಲ್ಲೂ ಸಮಸ್ಯೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.