ನಿಲ್ಲದ ಮೈಕ್ರೋ ಫೈನಾನ್ಸ್ ಕಿರುಕುಳ… 30 ಬಿಪಿ ಮಾತ್ರೆ ನುಂಗಿ ಮಹಿಳೆ ಆತ್ಮಹತ್ಯೆಗೆ ಯತ್ನ

Team Udayavani, Jan 29, 2025, 8:40 PM IST

ನಿಲ್ಲದ ಮೈಕ್ರೋ ಫೈನಾನ್ಸ್ ಕಿರುಕುಳ… 30 ಬಿಪಿ ಮಾತ್ರೆ ನುಂಗಿ ಮಹಿಳೆ ಆತ್ಮಹತ್ಯೆಗೆ ಯತ್ನ

ಕೊರಟಗೆರೆ: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ ನಿಲ್ಲುವ ಲಕ್ಷಣ ಕಾಣುತ್ತಿಲ್ಲ, ಕೊರಟಗೆರೆಯಲ್ಲಿ ಮೈಕ್ರೋ ಫೈನಾನ್ಸ್‌ ಸಿಬ್ಬಂದಿ ಕಿರುಕುಳಕ್ಕೆ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆಯೊಂದು ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಅಲ್ಲಾಳಸಂದ್ರ ಹನುಮಂತಪುರದಲ್ಲಿ ಬುಧವಾರ(ಜ.29) ಬೆಳಕಿಗೆ ಬಂದಿದೆ.

ಹನುಮಂತಪುರ ನಿವಾಸಿಯಾಗಿರುವ ಮಂಗಳಮ್ಮ(45) ಆತ್ಮಹತ್ಯೆಗೆ ಯತ್ನಿಸಿರುವ ಮಹಿಳೆ.

ಮಂಗಳಮ್ಮ ಒಂದು ವರ್ಷದ ಹಿಂದೆ ಹೋಟೆಲ್ ನಡೆಸಲು ಗ್ರಾಮೀಣಾ ಕೂಟದಲ್ಲಿ 2 ಲಕ್ಷ ಸಾಲ, ಎಲ್.ಎನ್ ಟಿ ಫೈನಾನ್ಸ್ ನಲ್ಲಿ 70 ಸಾವಿರ ‌ಹಾಗೂ ಆಶೀರ್ವಾದ ಫೈನಾನ್ಸ್ ನಲ್ಲಿ 80 ಸಾವಿರ ಸಾಲ ಪಡೆದಿದ್ದಾರೆ ಎನ್ನಲಾಗಿದೆ ಆದರೆ ಕಾರಣಾಂತರಗಳಿಂದ ಹೋಟೆಲ್ ಮುಚ್ಚಲಾಯಿತು ಇದಾದ ಬಳಿಕ ಸಾಲ ತೀರಿಸಲು ಮಂಗಳಮ್ಮ, ಗಂಡ ಬಸವರಾಜು, ಮಗ ಪುನೀತ್ ಹರಸಾಹಸ ಪಟ್ಟು ಗ್ರಾಮೀಣ ಕೂಟದಲ್ಲಿ 40 ಕಂತು ಕಟ್ಟಿದ್ದಾರೆ. ಇನ್ನೂ 42 ಕಂತು ಹಣ ಬಾಕಿ ಉಳಿದಿತ್ತು. ಆದರೆ ಕಳೆದ ಎರಡು ದಿನಗಳಿಂದ ಬ್ಯಾಂಕ್ ಸಿಬ್ಬಂದಿಗಳು ಮನೆಯ ಬಳಿ ಬಂದು ಬಾಕಿ ಕಟ್ಟುವಂತೆ ಕಿರುಕುಳ ನೀಡಿದ್ದಾರೆ ಅದರಂತೆ ಬ್ಯಾಂಕ್ ಸಿಬ್ಬಂದಿಗಳು ಇಂದು ಕೂಡಾ ಮನೆಯ ಬಳಿ ಬಂದು ಕಿರುಕುಳ ನೀಡುತ್ತಾರೆ ಎಂದು ಮರ್ಯಾದೆಗೆ ಅಂಜಿ ಮನೆಯಲ್ಲಿದ್ದ 30 ಬಿಪಿ ಮಾತ್ರಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಗಂಭೀರ ಸ್ಥಿತಿಯಲ್ಲಿದ್ದ ಮಂಗಳಮ್ಮ ಅವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಸದ್ಯ ತುಮಕೂರು ಜಿಲ್ಲಾಸ್ಪತ್ರೆಯ ಐಸಿಯು ಘಟಕದಲ್ಲಿ ಮಂಗಳಮ್ಮ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಈ ಕುರಿತು ಕೊರಟಗೆರೆ ತಾಲೂಕಿನ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್

“ರಾಜಣ್ಣ ಆಸೆಪಟ್ಟರೆ ತಪ್ಪಿಲ್ಲ’:ಸಚಿವ ದಿನೇಶ್‌ ಗುಂಡೂರಾವ್‌

Mangaluru: “ರಾಜಣ್ಣ ಆಸೆಪಟ್ಟರೆ ತಪ್ಪಿಲ್ಲ’:ಸಚಿವ ದಿನೇಶ್‌ ಗುಂಡೂರಾವ್‌

Arrest-kar

Fraud Case ಮಡಿಕೇರಿ: ಸ್ಕೀಂ ವಂಚನೆ; ಐವರ ಬಂಧನ

Puttur Temple: ತೆಂಗಿನ ಮರ ತೆರವು ವೇಳೆ ಕಾರ್ಮಿಕನಿಗೆ ಗಾಯ

Puttur Temple: ತೆಂಗಿನ ಮರ ತೆರವು ವೇಳೆ ಕಾರ್ಮಿಕನಿಗೆ ಗಾಯ

Udupi: ಗಾಂಜಾ ಮಾರಾಟಕ್ಕೆ ಯತ್ನ: ಮೂವರ ಸೆರೆ

Udupi: ಗಾಂಜಾ ಮಾರಾಟಕ್ಕೆ ಯತ್ನ: ಮೂವರ ಸೆರೆ

Vinay-kulkarni1

Dharawad: ಜಲ ಜೀವನ್ ಮಿಷನ್‌ ಕಳಪೆ ಕಾಮಗಾರಿಗೆ ಗರಂ; ಕೆಟ್ಟ ಯೋಜನೆ ಎಂದ ವಿನಯ್ ಕುಲಕರ್ಣಿ

Hun-PDO-GP

Hunasuru: ಗ್ರಾಮ ಪಂಚಾಯಿತಿಯಲ್ಲಿ ಗಲಾಟೆ; ಚಪ್ಪಲಿಯಿಂದ ಬಡಿದುಕೊಂಡ ಪಿಡಿಒ!

1-w-w-we

GBS Outbreak; ಸಾಂಕ್ರಾಮಿಕ ರೋಗದ ಬಗ್ಗೆ ಬೆಳಗಾವಿಯಲ್ಲಿ ಮುನ್ನೆಚ್ಚರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vinay-kulkarni1

Dharawad: ಜಲ ಜೀವನ್ ಮಿಷನ್‌ ಕಳಪೆ ಕಾಮಗಾರಿಗೆ ಗರಂ; ಕೆಟ್ಟ ಯೋಜನೆ ಎಂದ ವಿನಯ್ ಕುಲಕರ್ಣಿ

1-w-w-we

GBS Outbreak; ಸಾಂಕ್ರಾಮಿಕ ರೋಗದ ಬಗ್ಗೆ ಬೆಳಗಾವಿಯಲ್ಲಿ ಮುನ್ನೆಚ್ಚರಿಕೆ

BR-patil1

ಸಿಎಂ ರಾಜಕೀಯ ಸಲಹೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿ.ಆರ್‌.ಪಾಟೀಲ್‌ಗೆ ಹೊಸ ಹುದ್ದೆ!

Vinaya-kulakarni

ಮಾರ್ಚ್ ಬಳಿಕ ಸಂಪುಟ ಪುನರ್ ರಚನೆ; ನನಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತೆ: ವಿನಯ್ ಕುಲಕರ್ಣಿ

1-sidda

Siddaramaiah; ಮಾರ್ಚ್ 3 ರಿಂದ ವಿಧಾನಸಭೆ ಅಧಿವೇಶನ, ಬಜೆಟ್ ದಿನಾಂಕ ತಿಳಿಸಿದ ಸಿಎಂ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

“ರಾಜಣ್ಣ ಆಸೆಪಟ್ಟರೆ ತಪ್ಪಿಲ್ಲ’:ಸಚಿವ ದಿನೇಶ್‌ ಗುಂಡೂರಾವ್‌

Mangaluru: “ರಾಜಣ್ಣ ಆಸೆಪಟ್ಟರೆ ತಪ್ಪಿಲ್ಲ’:ಸಚಿವ ದಿನೇಶ್‌ ಗುಂಡೂರಾವ್‌

Congress: ಸದ್ಯ ಸಮಾವೇಶದ ಚಿಂತನೆ ಇಲ್ಲ: ಸತೀಶ್ ಜಾರಕಿಹೊಳಿ

Congress: ಸದ್ಯ ಸಮಾವೇಶದ ಚಿಂತನೆ ಇಲ್ಲ: ಸತೀಶ್ ಜಾರಕಿಹೊಳಿ

Kasaragod: ಕೋರಿಕಂಡ ಅಂಗನವಾಡಿಗೆ ಕನ್ನಡ ಬಲ್ಲ ಶಿಕ್ಷಕಿ ನೇಮಿಸಲು ತೀರ್ಪು

Kasaragod: ಕೋರಿಕಂಡ ಅಂಗನವಾಡಿಗೆ ಕನ್ನಡ ಬಲ್ಲ ಶಿಕ್ಷಕಿ ನೇಮಿಸಲು ತೀರ್ಪು

Arrest-kar

Fraud Case ಮಡಿಕೇರಿ: ಸ್ಕೀಂ ವಂಚನೆ; ಐವರ ಬಂಧನ

13

Malpe: ತೊಟ್ಟಂ ಹೊಟೇಲಿನ ವೈಟರ್‌ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.