Koratagere: ಕಂದಾಯ ಇಲಾಖೆ ಯಡವಟ್ಟಿಗೆ ದಲಿತರ ಪರದಾಟ

ಸಸ್ಯಕ್ಷೇತ್ರ ಉಳಿಸಲು ಅರಣ್ಯ ಇಲಾಖೆ ಕಾದಾಟ.. ಶ್ಮಶಾನದ ಭೂಮಿಗಾಗಿ ದಲಿತರ ಪರದಾಟ..

Team Udayavani, Oct 25, 2023, 9:17 PM IST

1-sadsadsad

ಕೊರಟಗೆರೆ: ಕಂದಾಯ ಮತ್ತು ಸರ್ವೆ ಇಲಾಖೆ ಅಧಿಕಾರಿಗಳ ಯಡವಟ್ಟು. ಸಸ್ಯಕಾಶಿಯ ಜಮೀನು ಉಳಿಸಿಕೊಳ್ಳಲು ಸಾಮಾಜಿಕ ಅರಣ್ಯ ಇಲಾಖೆಯ ಕಸರತ್ತು. ಮಂಜೂರಾದ ಜಮೀನು ಬೀಡದೇ ದಲಿತ ಕುಟುಂಬದ ಪರದಾಟ. ಯುವಕನ ಮೃತದೇಹ ಅಂತ್ಯ ಸಂಸ್ಕಾರಕ್ಕೆ ಸರಕಾರಿ ಅಧಿಕಾರಿಗಳ ಜೊತೆ ಬೈಚಾಪುರ ಗ್ರಾಮಸ್ಥರ ಕಸರತ್ತು. ಪಟ್ಟುಬೀಡದೇ ಸಸ್ಯಕಾಶಿಯಲ್ಲೇ ಯುವಕನ ಅಂತ್ಯಸಂಸ್ಕಾರ ನಡೆಸಿರುವ ಘಟನೆ ಬುಧವಾರ ನಡೆದಿದೆ.

ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಬೈಚಾಪುರ ಗ್ರಾಮದ ಸಮೀಪದ ಸಸ್ಯಕ್ಷೇತ್ರದಲ್ಲಿ ಘಟನೆ ಜರುಗಿದೆ. ಬೈಚಾಪುರ ಗ್ರಾಮದ ಸರ್ವೇ ನಂ.43 ರಲ್ಲಿ 1 ಎಕರೇ 07 ಗುಂಟೆ ಸರಕಾರಿ ಭೂಮಿಯಿದೆ.1983 ರಿಂದ ಸಾಮಾಜಿಕ ವಲಯ ಅರಣ್ಯ ಇಲಾಖೆಯ ನೇಡುತೋಪು ಹೆಸರಿನಲ್ಲೇ ಪಹಣಿ ಬರುತ್ತಿದೆ. 2019 ರಲ್ಲಿ ಏಕಾಏಕಿ ಕಂದಾಯ ಮತ್ತು ಸರ್ವೆ ಇಲಾಖೆ ಸ್ಥಳ ಪರಿಶೀಲನೆ ನಡೆಸದೇ 20ಗುಂಟೆ ಭೂಮಿಯನ್ನು ಬೈಚಾಪುರದ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಸಾಮಾನ್ಯ ಜನತೆಯ ಶ್ಮಶಾನಕ್ಕೆ ಮೀಸಲಿಟ್ಟು ಮಂಜೂರು ಮಾಡಿದೆ.

ಬೈಚಾಪುರದ ದಲಿತ ಯುವಕ ಸುರೇಶ್(24) ಮಂಗಳವಾರ ತಡರಾತ್ರಿ ಅನಾರೋಗ್ಯದ ಹಿನ್ನಲೇ ಮೃತಪಟ್ಟು ಅಂತ್ಯಸಂಸ್ಕಾರಕ್ಕೆ ಸಸ್ಯಕ್ಷೇತ್ರಕ್ಕೆ ಗುಂಡಿ ತೆಗೆಯಲು ಹೋದ ವೇಳೆ ಅರಣ್ಯ ಇಲಾಖೆಯ ಸಿಬ್ಬಂದಿವರ್ಗ ಮತ್ತು ಗ್ರಾಮಸ್ಥರ ನಡುವೆ ವಾಗ್ವಾದ ನಡೆದಿದೆ. ಘಟನೆಯ ವಾಸ್ತವತೆ ಅರಿತ ಕಂದಾಯ ಮತ್ತು ಸರ್ವೇ ಇಲಾಖೆ ಅಧಿಕಾರಿವರ್ಗ ಸ್ಥಳಕ್ಕೆ ಬಂದು ಗ್ರಾಮಸ್ಥರ ಮನವೂಲಿಸುವ ಪ್ರಯತ್ನಪಟ್ರು ಪಟ್ಟುಬೀಡದೇ ಸಸ್ಯಕ್ಷೇತ್ರದಲ್ಲೇ ಯುವಕನ ಅಂತ್ಯಸಂಸ್ಕಾರ ನಡೆಸಿರುವ ಘಟನೆ ನಡೆದಿದೆ.

ಬೈಚಾಪುರ ಗ್ರಾಮದ ಸ್ಮಶಾನಕ್ಕೆ ಮಂಜೂರಾದ 20ಗುಂಟೆ ಜಾಗವೇ ಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾದರೆ ಅಭಿವೃದ್ದಿ ಆಗಿರುವ ಸಸ್ಯಕ್ಷೇತ್ರದ ಉಳಿಸಿಕೊಳ್ಳಲು ಅರಣ್ಯ ಇಲಾಖೆಯಿಂದ ಪ್ರಯತ್ನ ನಡೆದಿದೆ. ಕಂದಾಯ ಮತ್ತು ಸರ್ವೆ ಇಲಾಖೆ ಅಧಿಕಾರಿವರ್ಗ ಬೈಚಾಪುರ ಗ್ರಾಮದ ಸರ್ವೆ.೫೮ರಲ್ಲಿ ಸರಕಾರಿ ಗೋಮಾಳ ಗುರುತಿಸಿ ಸ್ಮಶಾನದ ಜಾಗವನ್ನು ಸ್ಥಳಾಂತರ ಮಾಡಿಕೊಡ್ತಿವಿ ಅಂತಾರೇ. ಒಟ್ಟಾರೇ ಕಂದಾಯ ಇಲಾಖೆ ಯಡವಟ್ಟಿನಿಂದ ಸ್ಮಶಾನದ ಜಾಗಕ್ಕೆ ಸಮಸ್ಯೆ ಎದುರಾಗಿದೆ.

ಬೈಚಾಪುರ ಸಮೀಪದ ಸಸ್ಯಕ್ಷೇತ್ರಕ್ಕೆ ಆಪತ್ತು..
ಸಾಮಾಜಿಕ ವಲಯ ಅರಣ್ಯ ಇಲಾಖೆಯು 1983 ರಲ್ಲಿ ಪ್ರಾರಂಭವಾದ ವೇಳೆಯೇ ಬೈಚಾಪುರದಲ್ಲಿ ಸಸ್ಯಕ್ಷೇತ್ರ ಪ್ರಾರಂಭ. 40 ವರ್ಷದಿಂದ ಸಸ್ಯಕ್ಷೇತ್ರಕ್ಕೆ ಅವಶ್ಯಕತೆ ಇರುವ ೪ಕೊಳವೆಬಾವಿ, ಓವರ್‌ಹೇಟ್ ಟ್ಯಾಂಕು, ಭದ್ರತಾ ಕೊಠಡಿ, ನೀರಿನ ತೊಟ್ಟಿ, ಪೈಪ್‌ಲೈನ್, ಶೌಚಾಲಯ, ತಂತಿಬೇಲಿ ಅವವಡಿಕೆ ಮಾಡಲಾಗಿದೆ. ಪ್ರತಿವರ್ಷ ಸಸ್ಯಕ್ಷೇತ್ರದಲ್ಲಿ ಸಾಮಾಜಿಕ ವಲಯ ಅರಣ್ಯ ಇಲಾಖೆಯಿಂದ ೧ಲಕ್ಷಕ್ಕೂ ಅಧಿಕ ಸಸಿಗಳ ಪೋಷಣೆ ಮಾಡಿ ರೈತರಿಗೆ ವಿತರಣೆ ಮಾಡ್ತಾರೇ. ೪೦ವರ್ಷದಿಂದ ಸಾಮಾಜಿಕ ವಲಯ ಅರಣ್ಯ ಇಲಾಖೆಯ ಹೆಸರಿನಲ್ಲಿ ಇರುವ ಸಸ್ಯಕ್ಷೇತ್ರದ ಭೂಮಿಯು ಕಂದಾಯ ಇಲಾಖೆಯ ಯಡವಟ್ಟಿನಿಂದ ಆಪತ್ತು ಎದುರಾಗಿದೆ.

ದಲಿತರಿಗೆ ನದಿ-ಕೆರೆಕಟ್ಟೆಗಳೇ ಶ್ಮಶಾನ
ಬೈಚಾಪುರ ಗ್ರಾಮದಲ್ಲಿ 125 ಕ್ಕೂ ಅಧಿಕ ದಲಿತ ಕುಟುಂಬಗಳಿವೆ. 50 ವರ್ಷದಿಂದ ಬೈಚಾಪುರದ ದಲಿತರಿಗೆ ಶ್ಮಶಾನವೇ ಮರೀಚಿಕೆ ಆಗಿದೆ. ಜಯಮಂಗಲಿ ನದಿಯ ದಡ ಮತ್ತು ಕೆರೆಕಟ್ಟೆಗಳಲ್ಲಿ ಮೃತವ್ಯಕ್ತಿಗಳ ಅಂತ್ಯಸಂಸ್ಕಾರ ನಡೆಸುತ್ತಾರೆ. ಮಳೆಯಾದರೆ ನದಿಯು ರಭಸವಾಗಿ ಹರಿದು ಸಮಾಧಿಗಳೇ ಕೊಚ್ಚಿಹೋಗುತ್ತಿವೆ. ಬೈಚಾಪುರ ಗ್ರಾಮದ ಅಕ್ಕಪಕ್ಕದಲ್ಲಿ ಸರಕಾರಿ ಜಮೀನೇ ಇಲ್ಲದಾಗಿದೆ. 3 ಕೀಮೀ ದೂರಕ್ಕೆ ಮೃತದೇಹ ಸಾಗಿಸಲು ನಮ್ಮಿಂದ ಆಗೋದಿಲ್ಲ. ಸರಕಾರ ನಮಗೇ ಮಂಜೂರು ಮಾಡಿರುವ ಜಾಗವೇ ನಮಗೇ ಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಬೈಚಾಪುರದ ದಲಿತರಿಗೆ50 ವರ್ಷದಿಂದ ಸ್ಮಶಾನವೇ ಇಲ್ಲದೇ ನದಿ-ಕೆರೆಯಲ್ಲಿ ಅಂತ್ಯಸಂಸ್ಕಾರ ಮಾಡುತ್ತಾರೆ.30 ವರ್ಷದ ಹೋರಾಟ ಫಲವಾಗಿ ನಮ್ಮ ಗ್ರಾಮಕ್ಕೆ ಶ್ಮಶಾನದ ಜಾಗ ಮಂಜೂರು ಆಗಿದೆ. ಸರಕಾರ ನಮಗೇ ಮಂಜೂರು ಮಾಡಿದ 20 ಗುಂಟೆ ಜಮೀನೇ ಸಾಕು. ಸಾಮಾಜಿಕ ವಲಯ ಅರಣ್ಯ ಇಲಾಖೆಯು ಬೈಚಾಪುರದ ಸಸ್ಯಕ್ಷೇತ್ರವನ್ನ ಬೇರೆಕಡೆ ಸ್ಥಳಾಂತರ ಮಾಡಲಿ.
ವೆಂಕಟಾರೆಡ್ಡಿ, ಗ್ರಾಪಂ ಸದಸ್ಯ. ಬೈಚಾಪುರ

ಬೈಚಾಪುರದ ಸಸ್ಯಕ್ಷೇತ್ರಕ್ಕೆ ೪೦ವರ್ಷದ ಇತಿಹಾಸ ಇದೆ. ಲಕ್ಷಾಂತರ ರೂ ವೆಚ್ಚದಲ್ಲಿ ಮೂಲಸೌಲಭ್ಯ ಅಭಿವೃದ್ದಿ ಪಡಿಸಲಾಗಿದೆ. ಸಸ್ಯಕ್ಷೇತ್ರದಲ್ಲಿ ಪ್ರತಿವರ್ಷ ೧ಲಕ್ಷ ಸಸಿ ಪೋಷಣೆ ಮಾಡಿ ರೈತರಿಗೆ ಮಾಡಲಾಗುತ್ತೇ. ಸಸ್ಯಕ್ಷೇತ್ರದ ಭೂಮಿ ಉಳಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಕಂದಾಯ ಇಲಾಖೆ ಪರಿಶೀಲನೆ ನಡೆಸಿ ಸಸ್ಯಕ್ಷೇತ್ರದ ಉಳಿಸಲು ಅನುಕೂಲ ಕಲ್ಪಿಸಬೇಕಿದೆ.
ಶಿಲ್ಪಾ.ಎನ್.ಇ. ಸಾಮಾಜಿಕ ವಲಯ ಅರಣ್ಯಾಧಿಕಾರಿ. ಕೊರಟಗೆರೆ

ಬೈಚಾಪುರ ಸರ್ವೆ ನಂ. 43ರಲ್ಲಿ ಸ್ಮಶಾನಕ್ಕೆ20 ಗುಂಟೆ ಜಮೀನು ನೀಡಲಾಗಿದೆ. ಸಸ್ಯಕ್ಷೇತ್ರದ ನಿರ್ವಹಣೆಯ ಜಮೀನು ಮಂಜೂರು ಮಾಡಿರುವ ಪರಿಣಾಮ ಸಮಸ್ಯೆ ಅಗಿದೆ. ಮಂಜೂರು ಮಾಡುವ ವೇಳೆ ಕೆಲವು ನ್ಯೂನತೆ ಆಗಿರುವುದು ಸತ್ಯ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ. ಸ್ಮಶಾನಕ್ಕೆ ಪ್ರತ್ಯೇಕ ಜಮೀನು ಗುರುತಿಸಿ ಸಸ್ಯಕ್ಷೇತ್ರದ ಜಮೀನು ಉಳಿಸಲು ಜಿಲ್ಲಾಧಿಕಾರಿಗೆ ಪತ್ರ ಬರೆಯುತ್ತೇವೆ.
ರಂಜಿತ್.ಕೆ.ಆರ್. ಪ್ರಭಾರ ತಹಶೀಲ್ದಾರ್

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು

Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

1-ewew

ಸಂಗೀತ ವಿವಿಯಲ್ಲಿ ಕೋರ್ಸ್‌ ಆರಂಭ: ಕುಲಪತಿ ನಾಗೇಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.