Koratagere: ಭೂಗಳ್ಳರ ಒತ್ತುವರಿಗೆ ಬಲಿಯಾದ ಧರ್ಮಸಾಗರ ಕೆರೆ
ಸಾಮಾಜಿಕ ಅರಣ್ಯದ 1500 ಗಿಡಗಳು ನಾಶ.. ಕೆರೆಯಲ್ಲಿ ಸೀಮೆಜಾಲಿ ಗಿಡಗಳ ಫೋಷಣೆ
Team Udayavani, Feb 7, 2024, 6:23 PM IST
ಕೊರಟಗೆರೆ: ಧರ್ಮಸಾಗರ ಕೆರೆಗೆ ಅನುದಾನ ಬರುತ್ತದೆ ಆದರೇ ಅಭಿವೃದ್ದಿ ಮಾತ್ರ ಆಗೋದಿಲ್ಲ, ಸಾಮಾಜಿಕ ಅರಣ್ಯದ 1500ಕ್ಕೂ ಗಿಡ ಭೂಗಳ್ಳರ ಹಾವಳಿಗೆ ರಾತ್ರೋರಾತ್ರಿ ಕಾಣೆ.. 250ಎಕರೇ ಕೆರೆಯಲ್ಲಿ ಸೀಮೆ ಗಿಡಗಳು ಬೆಳೆದು ಕೆರೆಯೇ ಮಾಯ.. 50ಎಕರೆಗೂ ಅಧಿಕ ಭೂಮಿ ಬೆಂಗಳೂರಿನ ಭೂಗಳ್ಳರ ಒತ್ತುವರಿಗೆ ಬಲಿ.. ಸರಕಾರಿ ಅಧಿಕಾರಿಗಳ ಮೌನವೇ ಭೂಮಾಫಿಯಾ ನಡೆಸಲು ಶ್ರೀರಕ್ಷೆ.
250ವರ್ಷಗಳ ಇತಿಹಾಸ ಇರುವ ಕೊರಟಗೆರೆಯ ಧರ್ಮಸಾಗರ ಕೆರೆಗೆ 426ಎಕರೆ ಭೂ ವಿಸ್ತೀರ್ಣವಿದೆ. ಕೆರೆಯ ಪುನಶ್ಚೇತನ ಮತ್ತು ಅಭಿವೃದ್ದಿ ಮಾಡಬೇಕಾದ ಸಣ್ಣ ನೀರಾವರಿ ಇಲಾಖೆಯೇ ಕೊರಟಗೆರೆಯಲ್ಲಿ ಇಲ್ಲ-ಸ್ಥಳೀಯ ಕ್ಯಾಮೇನಹಳ್ಳಿ ಗ್ರಾಪಂಗೆ ಕೆರೆಯ ರಕ್ಷಣೆ ಮತ್ತು ಅಭಿವೃದ್ದಿಯ ಕಾಳಜಿಯು ಇಲ್ಲದೇ ಭೂಗಳ್ಳರ ಹಾವಳಿಗೆ ಕೆರೆಯು ಬಲಿಯಾಗಿ ಅಂತರ್ಜಲ ಮಟ್ಟವು ಮತ್ತೆ ಪಾತಾಳಕ್ಕೆ ಕುಸಿದಿದೆ.
ಜಯಮಂಗಲಿ ನದಿ ಪಾತ್ರದ ತೀತಾ ಜಲಾಶಯವು ಕಳೆದ ವರ್ಷ ಕೋಡಿ ಬಿದ್ದು ಧರ್ಮಸಾಗರ ಕೆರೆಯು ತುಂಬಿದ ವರ್ಷವೇ ಖಾಲಿ. ಕೆರೆಯ ಹಿಂಭಾಗದ 95 ಗ್ರಾಮದ ಅಂತರ್ಜಲ ಮಟ್ಟ ಸುಧಾರಣೆಗೆ ಮತ್ತೆ ಪೆಟ್ಟು ಬಿದ್ದಿದೆ. ತೀತಾ ಜಲಾಶಯದ ಬಲದಂಡೆ ನಾಲೆಯಿಂದ ವೆಂಕಟಾಪುರ, ಕಂಬದಹಳ್ಳಿ, ಕೋಡ್ಲಹಳ್ಳಿ ಮಾರ್ಗದ ಕಾಲುವೆಗೆ ಕಲ್ಲು-ಮಣ್ಣು ಹಾಕಿ ಮುಚ್ಚಿರುವ ಹಿನ್ನಲೆ ನೂರಾರು ರೈತರಿಗೆ ಸಂಕಷ್ಟ. ಮೀನುಗಾರಿಕೆ ಇಲಾಖೆಯು ಲಾಭಕ್ಕೆ ಮಾತ್ರ ಸೀಮಿತವಾಗಿದ್ದು ಕೆರೆಯ ಪುನಶ್ಚೇತನ ಮತ್ತು ಅಭಿವೃದ್ದಿಗೆ ಸರಕಾರ ಪ್ರಮುಖ ಆಧ್ಯತೆ ನೀಡಬೇಕಿದೆ.
138 ಎಕರೆಯ ದಾಖಲೆಯೇ ಇಲ್ಲ
ಧರ್ಮಸಾಗರ ಕೆರೆಯು ಮಾಳೇನಹಳ್ಳಿ ಸರ್ವೆ.15ರಲ್ಲಿ 31ಎಕರೇ, ಟಿ.ವೆಂಕಟಾಪುರ ಸರ್ವೆ ನಂ.25ರಲ್ಲಿ 108 ಎಕರೆ ಕೆ.ಜಿ.ಕಂಬದಹಳ್ಳಿ ಸರ್ವೆ ನಂ.6ರಲ್ಲಿ 29ಎಕರೆ ತುಂಬುಗಾನಹಳ್ಳಿ ಸರ್ವೆ ನಂ.13ರಲ್ಲಿ 89ಎಕರೇ, ಚಿಕ್ಕಾವಳ್ಳಿ ಸರ್ವೆ ನಂ.84ರಲ್ಲಿ 28ಎಕರೇ ಸೇರಿ 6ಗ್ರಾಮದ 288ಎಕರೆಯ ದಾಖಲೆ ಕಂದಾಯ ಬಳಿಯಿದೆ. ಧರ್ಮಸಾಗರ ಕೆರೆಯ ಇನ್ನೂಳಿದ 138ಎಕರೇ ಭೂ ವಿಸ್ತೀರ್ಣದ ದಾಖಲೆಯು ಕಂದಾಯ, ಗ್ರಾಪಂ, ಹೇಮಾವತಿ ಮತ್ತು ಸಣ್ಣ ನೀರಾವರಿ ಇಲಾಖೆಯ ಬಳಿಯು ಲಭ್ಯವಿಲ್ಲ.
ಅನುದಾನ ಬರುತ್ತೇ ಅಭಿವೃದ್ದಿ ಆಗಿಲ್ಲ
ಜಯಮಂಗಲಿ ನದಿ ಪಾತ್ರದ ಧರ್ಮಸಾಗರ ಕೆರೆಯು ತುಂಬಿ ಹರಿದರೇ 95ಗ್ರಾಮದ ರೈತರಿಗೆ ಅಂತರ್ಜಲದ ವರದಾನ. ಸಣ್ಣ ನೀರಾವರಿ ಮತ್ತು ಕ್ಯಾಮೇನಹಳ್ಳಿ ಗ್ರಾಪಂಯಿಂದ ಕೆರೆಯ ಅಭಿವೃದ್ದಿ ಶೂನ್ಯ. ಸರಕಾರದಿಂದ ಪ್ರತಿವರ್ಷವು ಅನುದಾನ ಬರುತ್ತೇ ಅಷ್ಟೇ, ಆದರೇ ಕಾಮಗಾರಿ ಆಗೋದೇ ಗೊತ್ತಾಗಲ್ಲ. ಇನ್ನೂ ನರೇಗಾ ಕಾಮಗಾರಿಯು ಗ್ರಾಪಂ ಸದಸ್ಯರ ಅನುಕೂಲಕ್ಕೆ ತಕ್ಕಂತೆ ಮಾಡ್ತಾರೇ. 250ಎಕರೇ ವಿಸ್ತೀರ್ಣದಲ್ಲಿ ಸೀಮೆಜಾಲಿಯ ಮರಗಳು ಬಿಟ್ಟರೇ ಅಭಿವೃದ್ದಿಯು ಶೂನ್ಯ.
ಭೂಗಳ್ಳರ ಹಾವಳಿಗೆ ಗಿಡಗಳ ನಾಶ
ಪರಿಸರ ಮತ್ತು ಅಂತರ್ಜಲ ರಕ್ಷಣೆಗಾಗಿ ಸಾಮಾಜಿಕ ವಲಯ ಅರಣ್ಯದಿಂದ ಕಳೆದ 10ವರ್ಷಗಳಿಂದ ಸಂರಕ್ಷಣೆ ಮಾಡಿದ್ದ 1500ಕ್ಕೂ ಹೆಚ್ಚು ಹಕ್ರ್ಯೂಲೇಸ್, ಸೀಮೆತುಂಗಡಿ, ಹೊಂಗೆ ಮರಗಳು ಭೂಗಳ್ಳರ ಹಾವಳಿಯಿಂದ ರಾತ್ರೋರಾತ್ರಿ ಕರಗಿವೆ. ಲಕ್ಷಾಂತರ ರೂ ಬೆಲೆ ಬಾಳುವ ಮರಗಿಡ ನಾಶ ಆಗಿರುವ ಮಾಹಿತಿಯೇ ಗ್ರಾಪಂ ಮತ್ತು ಅರಣ್ಯ ಇಲಾಖೆಗೂ ಗೊತ್ತಿಲ್ಲ. ಬೆಂಗಳೂರಿನ ಭೂಗಳ್ಳರಿಗೆ ಅಧಿಕಾರಿ ವರ್ಗದ ಮೌನದ ಶ್ರೀರಕ್ಷೆಯು ಅರಣ್ಯ ನಾಶಕ್ಕೆ ಬಲನೀಡಿದೆ.
ಸರ್ವೆಗೆ ತಹಶೀಲ್ದಾರ್ ಖಡಕ್ ಆದೇಶ
ರೈತಸಂಘ ಕಳೆದ 10ವರ್ಷದಿಂದ ಧರ್ಮಸಾಗರ ಕೆರೆಯ ಸರ್ವೆಗೆ ಮನವಿ ಮಾಡಿದ್ರು ಪ್ರಯೋಜನ ಆಗಿರಲಿಲ್ಲ. ರೈತಸಂಘದ ದೂರಿನ ಅನ್ವಯ ಕೊರಟಗೆರೆ ತಹಶೀಲ್ದಾರ್ ಮಂಜುನಾಥ.ಕೆ ರೈತರ ಜೊತೆ ಗೂಡಿ ಕೆರೆಯ ನಾಲ್ಕುದಿಕ್ಕಿನ ಮಾಹಿತಿ ಕಲೆಹಾಕಿದ್ದಾರೆ. ಕೆರೆಯ ಭೂಮಿ ಯಾರೇ ಒತ್ತುವರಿ ಮಾಡಿದ್ದರೂ ಮುಲಾಜಿಲ್ಲದೇ ತೆರವು ಮಾಡಿಸ್ತೇನೆ. ಕಂದಾಯ ಮತ್ತು ಸರ್ವೆ ಇಲಾಖೆ ಜಂಟಿಯಾಗಿ ಸರ್ವೆ ನಡೆಸುವಂತೆ ಕೆರೆಯಲ್ಲಿಯೇ ಅಧಿಕಾರಿಗಳಿಗೆ ಖಡಕ್ ಆದೇಶ ಮಾಡಿರುವ ಘಟನೆ ನಡೆದಿದೆ.
ಬೆಂಗಳೂರಿನ ಭೂಗಳ್ಳರ ಹಾವಳಿಗೆ ಚಿಕ್ಕಾವಳ್ಳಿಯ ಧರ್ಮಸಾಗರ ಕೆರೆಯ 50ಎಕರೇ ಭೂಮಿ ಕರಗಿದೆ. ಅರಣ್ಯದಿಂದ ಬೆಳೆಸಿದ ಮರಗಿಡ ಮಾಯವಾಗಿ ಎಸ್ಟೇಟ್ ತಲೆ ಎತ್ತಿವೆ. 95ಗ್ರಾಮದ ರೈತರ ಜೀವನಾಡಿಯ ಕೆರೆಗೆ ರಕ್ಷಣೆ ಮತ್ತು ನಿರ್ವಹಣೆಯೇ ಯಕ್ಷಪ್ರಶ್ನೆ. ರೈತಸಂಘದ ದೂರಿನ ಅನ್ವಯ ತಹಶೀಲ್ದಾರ್ ಸರ್ವೆಗೆ ಆದೇಶ ಮಾಡಿರುವುದು ಸಂತಷದ ವಿಚಾರ.
-ಸಿದ್ದರಾಜು. ಅಧ್ಯಕ್ಷ, ರೈತಸಂಘ ಕೊರಟಗೆರೆ
ಅನುಧಾನ ಬರುತ್ತೇ ಆದರೇ ಅಭಿವೃದ್ದಿ ಮಾತ್ರ ಆಗೋದಿಲ್ಲ. ಧರ್ಮಸಾಗರ ಕೆರೆ ತುಂಬಿದ್ರು ಒಂದೇ ವರ್ಷಕ್ಕೆ ಖಾಲಿ ಆಯ್ತು. ಧರ್ಮಸಾಗರ ಕೆರೆಯ 250ಎಕರೇಯಲ್ಲಿ ಸೀಮೆಜಾಲಿ ಗಿಡಗಳು ಬೆಳೆದು ನಿಂತಿವೆ. ಸಣ್ಣ ನೀರಾವರಿ ಇಲಾಖೆಯಿಂದ ಅಭಿವೃದ್ದಿ ಆಗಿಲ್ಲ. ನರೇಗಾ ಯೋಜನೆಯು ಗ್ರಾಪಂ ಸದಸ್ಯರಿಗೆ ಮಾತ್ರ ಅನುಕೂಲ ಅಷ್ಟೆ.
-ರಾಜಗೋಪಾಲ್. ರೈತ, ಕೋಡ್ಲಹಳ್ಳಿ
ಚಿಕ್ಕಾವಳ್ಳಿಯ ಧರ್ಮಸಾಗರ ಕೆರೆ ತುಂಬಿದ್ರೇ ಅಂತರ್ಜಲ ಅಭಿವೃದ್ದಿ ಆಗುತ್ತೇ. ಕೆರೆಗಳ ಒತ್ತುವರಿ ಮಾಡಿ ತೋಟ ಕಟ್ಟಿದ್ರೇ ಮತ್ತೇ ಪಶ್ಚಾತಾಪ ಪಡ್ತಾರೇ. ರೈತರ ಜೊತೆ ಬೇಟಿನೀಡಿ ಪರಿಶೀಲನೆ ನಡೆಸಿದ್ದೇನೆ. ಕಂದಾಯ ಮತ್ತು ಸರ್ವೆ ಇಲಾಖೆ ಜಂಟಿಯಾಗಿ ಸರ್ವೆ ನಡೆಸಿ ಒತ್ತುವರಿ ತೆರವು ಮಾಡ್ತೀವಿ.
– ಮಂಜುನಾಥ.ಕೆ. ತಹಶೀಲ್ದಾರ್. ಕೊರಟಗೆರೆ
ವರದಿ: ಸಿದ್ದರಾಜು. ಕೆ ಕೊರಟಗೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
Pavagada: ಟ್ರ್ಯಾಕ್ಟರ್ ಗೆ ಕ್ರೇನ್ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವು
Pavagada: ರಸ್ತೆ ಅಪಘಾತದಲ್ಲಿ ಮಂಡ್ಯ ಮೂಲದ ಬೊಲೆರೋ ಚಾಲಕ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.