ಕೊರಟಗೆರೆ: ನಾಲ್ವರು ಅಂತರ್ ಜಿಲ್ಲಾ ಕುರಿ ಕಳ್ಳರ ಬಂಧನ
ಎರಡು ಬೈಕ್ ಸಹಿತ 80 ಸಾವಿರ ಮೌಲ್ಯದ ಆರು ಮೇಕೆಗಳು ವಶ
Team Udayavani, Jul 17, 2022, 6:45 PM IST
ಕೊರಟಗೆರೆ: ಅಂತರ್ಜಿಲ್ಲಾ ಮೇಕೆ, ಕುರಿ ಹಾಗೂ ಬೈಕ್ ಕಳ್ಳರನ್ನು ಪೊಲೀಸ್ ನವರು ನಿಖರ ಮಾಹಿತಿ ಮೇರೆಗೆ ಎರಡು ದ್ವಿಚಕ್ರ ವಾಹನ,6 ಮೇಕೆ ಸೇರಿದಂತೆ ನಾಲ್ಕು ಜನ ಆರೋಪಿಗಳನ್ನು ಮಾಲು ಸಮೇತ ಬಂಧಿಸುವಲ್ಲಿ ಕೊರಟಗೆರೆ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಲೂಕಿನ ತೋವಿನಕೆರೆ ಹೋಬಳಿಯ ಚಿಕ್ಕಸಂಜೀವೇ ಗೌಡನ ಪಾಳ್ಯದ 1 ಮೇಕೆ, ಮಾಗಡಿ ತಾಲೂಕಿನ ಮಾಯಸಂದ್ರ ಗ್ರಾಮದ 3 ಹಾಗೂ ಇದೇ ತಾಲೂಕಿನ ಯಲ್ಲಾಪುರದ 2 ಮೇಕೆ ಸೇರಿದಂತೆ ಒಟ್ಟು ಐದು ಮೇಕೆಗಳು ಹಾಗೂ ತಿಪಟೂರಿನ ಕಲ್ಪತರು ಗ್ರಾಂಡ್ ಹೋಟೆಲ್ ಬಳಿ 1 ಬೈಕ್, ಮಂಡ್ಯದ ಕಲ್ಯಾಣ ಮಂಟಪದ ಬಳಿ 1 ಬೈಕ್ ಕಳವು ಮಾಡಲಾದ ಅಂತರ್ ಜಿಲ್ಲಾ ನಾಲ್ವರು ಕಳ್ಳರನ್ನು ಕೊರಟಗೆರೆ ಪೊಲೀಸ್ ಇಲಾಖೆ ಮಾಲು ಸಹಿತ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
ಅಂತರ್ ಜಿಲ್ಲಾ ನಾಲ್ವರು ಕಳ್ಳರಲ್ಲಿ ಕೋಳಾಲ ಹೋಬಳಿಯ ಬೈರಗೊಂಡ್ಲು ಗ್ರಾಮದ ಇಬ್ಬರು ಆರೋಪಿಗಳಾದ ಹನುಮಂತ(19) , ರಮೇಶ(40) ,ತುಮಕೂರು ತಾಲೂಕಿನ ಕಸಬಾ ಹೋಬಳಿಯ ಒಕ್ಕೋಡಿ ಗೊಲ್ಲರಹಟ್ಟಿಯ ನಾಗಾರಾಜು( 45), ಮಂಡ್ಯ ಜಿಲ್ಲೆಯ ಶ್ರೀ ರಂಗ ಪಟ್ಟಣ ಕೆಆರ್ ಎಸ್ ತಾಲೂಕಿನ ಸಂತೆಮಾಳ ಗ್ರಾಮದ ಅನಿಲ್ (30) ಹಾಗೂ ಒಬ್ಬ ಬಾಲಾಪರಾಧಿಯನ್ನು ಬಂಧಿಸುವಲ್ಲಿ, 1,80,000 ಮೌಲ್ಯದ ಎರಡು ಬೈಕ್ ಗಳನ್ನು ಹಾಗೂ 80,000 ಮೌಲ್ಯದ ಆರು ಮೇಕೆಗಳನ್ನು ವಶಪಡಿಸಿ ಕೊಳ್ಳುವಲ್ಲಿ ಕೊರಟಗೆರೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕರಣದ ಪತ್ತೆಯಲ್ಲಿ ತುಮಕೂರು ಜಿಲ್ಲಾ ಅಡಿಷನಲ್ ಎಸ್ಪಿ ಉದೇಶ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ರಾಮಕೃಷ್ಣ ಕೆ.ಜಿ. ಆದೇಶದಂತೆ ಸೈಬರ್ ಕ್ರೈಂ ಇನ್ಸ್ಪೆಕ್ಟರ್ ಅವಿನಾಶ್ ಮಾರ್ಗದರ್ಶನದಂತೆ ಸಿಪಿಐ ಸಿದ್ದರಾಮೇಶ್ವರ, ಪಿಎಸ್ಐ ಮಂಜುಳಾ , ಪಿಎಸ್ಐ ನಾಗರಾಜು ಸೇರಿದಂತೆ ಕೊರಟಗೆರೆ ಕ್ರೈಂ ಸಿಬ್ಬಂದಿ ಈ ಪ್ರಕರಣ ಭೇದಿಸುವಲ್ಲಿ ಶ್ರಮಿಸಿದ್ದು, ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಕಳ್ಳತನ ಪ್ರಕರಣ ಭೇದಿಸಿದ ಪೊಲೀಸ್ ಸಿಬ್ಬಂದಿಗಳನ್ನು ಪೊಲೀಸ್ ಅಧೀಕ್ಷಕ ರಾಹುಲ್ ಕುಮಾರ್ ಶಹಾಪುರ್ ವಾಡ್ ಅಭಿನಂದಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere: ಗೃಹ ಸಚಿವರ ಸ್ವ ಕ್ಷೇತ್ರದಲ್ಲೇ ಮಲ ಹೊತ್ತ 10 ವರ್ಷದ ಬಾಲಕ!
Kunigal: ಬೈಕ್, ಕ್ಯಾಂಟರ್ ಮುಖಾಮುಖಿ ಢಿಕ್ಕಿ; ಇಬ್ಬರು ಸ್ಥಳದಲ್ಲೇ ಮೃತ್ಯು
Gubbi: ಮೀಟರ್ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಬೇಸತ್ತು ಪೌರ ಕಾರ್ಮಿಕ ಆತ್ಮಹತ್ಯೆ
Koratagere: ವೃದ್ದೆ ಮೇಲೆ ಕೆಎಸ್ಆರ್ಟಿಸಿ ಬಸ್ ಹರಿದು ಸಾವು
Hunasur: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ತಿಪಟೂರಿನ ಮಹಿಳೆ!
MUST WATCH
ಹೊಸ ಸೇರ್ಪಡೆ
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.