Koratagere: ಜೂ.9 ರಂದು ಉಚಿತ ಸಾಮೂಹಿಕ ವಿವಾಹ
Team Udayavani, May 7, 2024, 7:38 PM IST
ಕೊರಟಗೆರೆ: ಇನ್ಫೋಸಿಸ್ ನ ಡಾ.ಸುಧಾಮೂರ್ತಿ ಅವರ ಪ್ರೇರಣೆಯಂತೆ ಶ್ರೀ ಮಠದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದು ಈ ವರ್ಷದ ಜೂ.9 ರಂದು ಉಚಿತ ಸಮೂಹಿಕ ವಿವಾಹ ನಡೆಸಲಾಗುವುದು ಎಂದು ಶ್ರೀ ವೀರಭದ್ರಶಿವಾಚಾರ್ಯಸ್ವಾಮೀಜಿ ತಿಳಿಸಿದರು.
ಅವರು ಶ್ರೀ ಕ್ಷೇತ್ರ ಸಿದ್ದರ ಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದಲ್ಲಿ 18ನೇ ವಾರ್ಷಿಕೋತ್ಸವ ಹಾಗೂ ಉಚಿತ ಸಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಶ್ರೀ ಮಠ 17 ವರ್ಷಗಳಿಂದ ನೂರಾರು ವಿದ್ಯಾರ್ಥಿಗಳಿಗೆ ಆಶ್ರಯ ನೀಡಿ ವಿದ್ಯಾಭ್ಯಾಸ ನೀಡುವ ವ್ಯವಸ್ಥೆಯಾಗುತ್ತಿದೆ. ಇಲ್ಲಿ ಅನೇಕ ಬಡ ವಿದ್ಯಾರ್ಥಿಗಳು ವೇದ ಪಾಠ ಕಲಿತು ರಾಜ್ಯದ ಅನೇಕ ದೇವಾಲಯಗಳಲ್ಲಿ ಹಾಗೂ ಸಂಸ್ಕೃತ ಶಾಲೆಗಳಲ್ಲಿ ಉದ್ಯೋಗದೊಂದಿಗೆ ಜೀವನ ನಡೆಸುತ್ತಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವು ಶ್ರೀ ಮಠದಲ್ಲಿ ರಂಭಾಪುರಿಯ ಡಾ.ವೀರಸೋಮೇಶ್ವರ ರಾಜ ದೇಶಿ ಕೇಂದ್ರ ಶಿವಾಚಾರ್ಯಸ್ವಾಮೀಜಿಗಳ ದಿವ್ಯ ಸಾನಿದ್ಯದಲ್ಲಿ 18ನೇ ವಾರ್ಷಿಕೋತ್ಸವ ಹಾಗೂ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ನಡೆಸಲಾಗುವುದು ಎಂದರು.
ಈ ವಿವಾಹ ಮಹೋತ್ಸವದ ಪ್ರೇರಣೆಯು ಡಾ.ಸುಧಾಮೂರ್ತಿಯವರದ್ದಾಗಿದ್ದು ಕಾರ್ಯಕ್ರಮವೊಂದರಲ್ಲಿ ಅವರು ನೀಡಿದ ಸಲಹೆ ಮೇರೆಗೆ ಈ ವಿವಾಹ ಮಹೋತ್ಸವನ್ನು ನಡೆಸಿಕೊಂಡು ಬರುತ್ತಿದ್ದೇವೆ. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರ ಸಹಕಾರದಲ್ಲಿ ಹಾಗೂ ಹಲವು ಭಕ್ತರ ದೇಣಿಗೆಯಿಂದ ಈ ಕಾರ್ಯಕ್ರಮಗಳು ನಡೆದುಕೊಂಡು ಬರುತ್ತಿದ್ದು ವಿವಾಹ ಮಹೋತ್ಸವದಲ್ಲಿ ಮದುವೆಯಾಗುವ ದಂಪತಿಗಳು ಅವರ ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್‍ಗಳು ಸೇರಿದಂತೆ ಅವಶ್ಯಕ ದಾಖಲಾತಿಗಳನ್ನು ತಂದೆ-ತಾಯಿಗಳೊಂದಿಗೆ ಆಥವಾ ಪೋಷಕರೊಂದಿಗೆ ಶ್ರೀ ಮಠಕ್ಕೆ ಬಂದು ಅರ್ಜಿ ಸಲ್ಲಿಸುವಂತೆ ಮನವಿ ಮಾಡಿದರು.
ಜೂ.9 ರಂದು ನಡೆಯುವ ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ, ಜಗಜ್ಯೋತಿ ಬಸವೇಶ್ವರ ಜಯಂತೋತ್ಸವ, ವೀರಶೈವ ವಟುಗಳಿಗೆ ಉಚಿತ ದೀಕ್ಷಾ ಸಂಸ್ಕಾರ, ಉಚಿತ ಸಾಮೂಹಿತ ಆದರ್ಶ ವಿವಾಹ ಹಾಗೂ ಜನಜಾಗೃತಿ ಸಮಾವೇಶ ನಡೆಸಲಾಗುವುದು. ಬರಗಾಲದ ಹಿನ್ನೆಲೆ ಕಾರ್ಯಕ್ರಮ ಸರಳವಾಗಿ ಮಾಡುವ ಸಲಹೆಗಳು ಬಂದರೂ ಸಾಮೂಹಿಕ ವಿವಾಹ ಬಡ ಜೋಡಿಗಳಿಗೆ ಜೀವನದಲ್ಲಿ ಒಮ್ಮೆ ನಡೆಯುವುದರಿಂದ ಅದರಲ್ಲಿ ಯಾವುದೇ ಕೊರತೆಯಾಗದಂತೆ ನಡೆಸಲಾಗುವುದು. ಇದಕ್ಕೆ ಎಲ್ಲರ ಸಹಕಾರ ಸೇವಾ ಮನೋಭಾವ ಅಗತ್ಯ ಎಂದರು.
ವಿವಾಹ ನೋಂದಣಿ ಪ್ರಾರಂಭವಾಗಿದ್ದು, ವಿವಾಹವಾಗುವ ಜೋಡಿಗಳು ಶ್ರೀ ಮಠಕ್ಕೆ ಬಂದು ನೊಂದಾಯಿಸುವಂತೆ ಕೋರಿದರು.
ಪೂರ್ವ ಭಾವಿ ಸಬೆಯಲ್ಲಿ ಕೃಷ್ಣಪ್ಪ, ವಾಗೀಶ್, ಮೋಹನ್‍ಕುಮಾರ್ ಪಾಟೀಲ್, ಆರ್.ಎಸ್.ರಾಜಣ್ಣ, ತರಕಾರಿ ಶಿವಕುಮಾರ್, ರಘು, ಕೆ.ಬಿ.ಲೋಕೇಶ್, ದರ್ಶನ್, ಹೆಚ್.ವಿ.ಪಾಳ್ಯ ಮಂಜುನಾಥ್, ಗೀತಾನಾಗರಾಜು, ಸಿದ್ದಪ್ಪ, ಅಂಖರಾಧ್ಯ, ಶಿವಶಂಕರ್, ಪರ್ವತಯ್ಯ, ತೋಟದಪ್ಪ, ಸೋಮಣ್ಣ ಸೇರಿದಂತೆ ಇನ್ನಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
Pavagada: ಟ್ರ್ಯಾಕ್ಟರ್ ಗೆ ಕ್ರೇನ್ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವು
Pavagada: ರಸ್ತೆ ಅಪಘಾತದಲ್ಲಿ ಮಂಡ್ಯ ಮೂಲದ ಬೊಲೆರೋ ಚಾಲಕ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
Digital Arrest: ಡಿಜಿಟಲ್ ಅರೆಸ್ಟ್ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು
Emotions: ಭಾವನೆಗಳ ಬಸ್ ನಿಲ್ದಾಣ
Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.