ಕೊರಟಗೆರೆ: ತೋವಿನಕೆರೆ ಗ್ರಾಮದಲ್ಲಿ ಹೆಚ್‌ಡಿಕೆ ಗ್ರಾಮ ವಾಸ್ತವ್ಯ
2023ರ ಚುನಾವಣೆಗೆ ಪಂಚರತ್ನ ರಥಯಾತ್ರೆ ದಿಕ್ಸೂಚಿ: ಸುಧಾಕರ ಲಾಲ್
Team Udayavani, Nov 30, 2022, 9:13 PM IST
ಕೊರಟಗೆರೆ: ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆಯು ಗ್ರಾಮೀಣ ಜನತೆಯ ಅಭಿವೃದ್ದಿಯ ದಿಕ್ಸೂಚಿ.ಶಿಕ್ಷಣ, ಆರೋಗ್ಯ, ರೈತಚೈತನ್ಯ, ವಸತಿ, ಯುವಮಾರ್ಗ ಮತ್ತು ಮಹಿಳಾ ಕ್ಷೇತ್ರದ ಅಭಿವೃದ್ದಿಯೇ ಕುಮಾರಣ್ಣನ ಬಹುದೊಡ್ಡ ಕನಸು.ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಕುಮಾರಣ್ಣ ಮಹಿಳೆಯರ ಸ್ತ್ರೀಶಕ್ತಿಸಾಲ ಸಂಪೂರ್ಣ ಮನ್ನಾ ಮಾಡುತ್ತಾರೆ ಎಂದು ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ತಿಳಿಸಿದರು.
ಕೊರಟಗೆರೆ ಪಟ್ಟಣದ ಕಾಮಧೇನು ಸಭಾಂಗಣದಲ್ಲಿ ಕೊರಟಗೆರೆ ಜಾತ್ಯತೀತ ಜನತಾದಳ ಪಕ್ಷದ ವತಿದಿಂದ ಬುಧವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ, ಶಿಕ್ಷಣವೇ ಆಧುನಿಕ ಶಕ್ತಿ, ಆರೋಗ್ಯವೇ ಸಂಪತ್ತು, ರೈತ ಚೈತನ್ಯ, ವಸತಿಯ ಆಸರೆ, ಯುವನವ ಮಾರ್ಗ ಮತ್ತು ಮಹಿಳಾ ಸಬಲೀಕರಣ ಪಂಚರತ್ನ ರಥಯಾತ್ರೆಯ ಪ್ರಮುಖ ಅಂಶವಾಗಿದೆ. ಕರ್ನಾಟಕ ರಾಜ್ಯದ ಪ್ರತಿಮನೆಗೂ ಸರಕಾರದ ಸೌಲಭ್ಯ ಕಲ್ಪಿಸುವುದು ಮತ್ತು ದುರ್ಬಲ ಸಮುಧಾಯದ ಒಳಿತು ಕಲ್ಪಿಸುವ ಮೂಲಕ ಕರ್ನಾಟಕ ಸಮಗ್ರ ಅಭಿವೃದ್ದಿಗೆ ಪರಿಪೂರ್ಣ ಪರಿಹಾರ ನೀಡುವುದೇ ಕುಮಾರಣ್ಣನ ಬಹುದೊಡ್ಡ ಕನಸಾಗಿದೆ ಎಂದರು.
ಕೊರಟಗೆರೆ ಜೆಡಿಎಸ್ ಕಾರ್ಯಧ್ಯಕ್ಷ ನರಸಿಂಹರಾಜು ಮಾತನಾಡಿ ಜೆಡಿಎಸ್ ಭದ್ರಕೋಟೆ ಕೊರಟಗೆರೆ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ಸಂಚರಿಸಲಿದೆ. 2023ರ ಕೊರಟಗೆರೆ ವಿಧಾನಸಭಾ ಚುನಾವಣೆಗೆ ರಥಯಾತ್ರೆ ಕಾರ್ಯಕ್ರಮವು ದಿಕ್ಸೂಚಿ ಆಗಲಿದೆ. ನವಕರ್ನಾಟಕ ನಿರ್ಮಾಣಕ್ಕಾಗಿ ಗ್ರಾಮೀಣ ಭಾಗದ ಯುವಜನತೆ ಕುಮಾರಣ್ಣನ ಕೈಬಲ ಪಡಿಸಬೇಕಾಗಿ ಮನವಿ ಮಾಡುತ್ತೇವೆ ಎಂದರು.
ಕೋಳಾಲ ಜಿಪಂ ಮಾಜಿ ಸದಸ್ಯ ಶಿವರಾಮಯ್ಯ ಮಾತನಾಡಿ ಕೊರಟಗೆರೆ ಕ್ಷೇತ್ರದ ಪುರವರದಿಂದ ಪ್ರಾರಂಭವಾಗುವ ಪಂಚರತ್ನ ರಥಯಾತ್ರೆ ಹೊಳವನಹಳ್ಳಿ, ಕೋಳಾಲ, ಕೊರಟಗೆರೆ ಪಟ್ಟಣದಿಂದ ತೋವಿನಕೆರೆಯ ಮೂಲಕ ರಥಯಾತ್ರೆ ಸಾಗಲಿದೆ. ರೈತನಾಯಕ ಕುಮಾರಣ್ಣ ಬೆಂಬಲಿಸಲು ಸಾವಿರಾರು ಸಂಖ್ಯೆಯಲ್ಲಿ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಪ್ರಸ್ತುತ ನವಕರ್ನಾಟಕ ನಿರ್ಮಾಣಕ್ಕಾಗಿ ಪಂಚರತ್ನ ಯೋಜನೆ ರೂಪಿಸಿದ್ದಾರೆ. ಇತಿಹಾಸದ ಮೊದಲಸಲ ಸ್ತ್ರೀಶಕ್ತಿ ಸಂಘದ ಸಾಲಮನ್ನಾ ಮಾಡುವ ಭರವಸೆ ನೀಡಿದ್ದಾರೆ. ಪಂಚರತ್ನ ರಥಯಾತ್ರೆಯು ಕೊರಟಗೆರೆ ಕ್ಷೇತ್ರದ 2023ರ ಚುಣಾವಣೆಗೆ ದಿಕ್ಸೂಚಿ ಆಗಲಿದೆ. ಕುಮಾರಣ್ಣ ಮಾಡಿರುವ ರೈತಪರ ಅಭಿವೃದ್ದಿ ಕೆಲಸಗಳೇ ನನಗೇ ಶ್ರೀರಕ್ಷೆ ಆಗಲಿದೆ ಎಂದರು.
ತೋವಿನಕೆರೆ ಗ್ರಾಮದಲ್ಲಿ ಗ್ರಾಮವಾಸ್ತವ್ಯ
ಕೊರಟಗೆರೆ ಕ್ಷೇತ್ರದ ಪುರವರಕ್ಕೆ ಪಂಚರತ್ನ ರಥಯಾತ್ರೆ ಡಿ.೩ರ ಶನಿವಾರ ಬೆ.೧೦ಗಂಟೆಗೆ ಆಗಮಿಸಲಿದೆ. ಪುರವರದಿಂದ ಬೈರೇನಹಳ್ಳಿ, ಹೊಳವನಹಳ್ಳಿ, ಕೋಳಾಲ ಮಾರ್ಗವಾಗಿ ಕೊರಟಗೆರೆ ಪಟ್ಟಣದ ಮೂಲಕ ತೋವಿನಕೆರೆ ತಲುಪಲಿದೆ. ತೋವಿನಕೆರೆ ಗ್ರಾಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಗ್ರಾಮವಾಸ್ತವ್ಯ ಮಾಡಲಿದ್ದಾರೆ. ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಕೊರಟಗೆರೆ ಕ್ಷೇತ್ರದ ಜನತೆಯ ಜೊತೆ ಸಮಾಲೋಚನೆ ನಡೆಸುತ್ತಾರೆ.
ಡಿ.1ರಿಂದ ಡಿ.6 ರವರೇಗೆ ತುಮಕೂರು ಜಿಲ್ಲೆಯಲ್ಲಿ ಪಂಚರತ್ನ ರಥಯಾತ್ರೆ ಅದ್ದೂರಿಯಾಗಿ ಸಂಚಾರ ನಡೆಸಲಿದೆ. ಮೊದಲ ಹಂತದಲ್ಲಿ ತುಮಕೂರು ನಗರ, ಮಧುಗಿರಿ, ಕೊರಟಗೆರೆ, ಪಾವಗಡ, ಶಿರಾ ಮತ್ತು ಗುಬ್ಬಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಣ್ಣ ಗ್ರಾಮವಾಸ್ತವ್ಯ ಮಾಡಲಿದ್ದಾರೆ. 2023 ರ ವಿಧಾನಸಭಾ ಚುನಾವಣೆಗೆ ನವ ಕರ್ನಾಟಕ ನಿರ್ಮಾಣದ ಪಂಚರತ್ನ ರಥಯಾತ್ರೆಯು ದಿಕ್ಸೂಚಿ ಆಗಲಿದೆ ಎಂದು
ತುಮಕೂರು ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಮಹಾಲಿಂಗಪ್ಪ ಹೇಳಿಕೆ ನೀಡಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಜೆಡಿಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೀರಕ್ಯಾತರಾಯ, ಕೊರಟಗೆರೆ ಕಾರ್ಯದರ್ಶಿ ಲಕ್ಷ್ಮಣ್, ವಕ್ತಾರ ಲಕ್ಷ್ಮೀಶ್, ಯುವಾಧ್ಯಕ್ಷ ವೆಂಕಟೇಶ್, ತಾಪಂ ಮಾಜಿ ಸದಸ್ಯರಾದ ಪ್ರಕಾಶ್, ಸಾಕರಾಜು, ರಾಮಣ್ಣ, ಮುಖಂಡರಾದ ಕಾಂತರಾಜು, ಕಾಮರಾಜು, ಸಿದ್ದಮಲ್ಲಪ್ಪ, ಲಕ್ಷ್ಮೀನಾರಾಯಣ್, ರಮೇಶ್, ಸಂತೋಷಗೌಡ, ಲಕ್ಷ್ಮೀನರಸಯ್ಯ, ಬಸವರಾಜು, ಕಾಳಿಚರಣ್, ಅಮರ್ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.