![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Apr 18, 2024, 8:59 PM IST
ಕೊರಟಗೆರೆ: ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದ್ರೇ ಸಂವಿಧಾನ ಬದಲಿಸುತ್ತಾರೆ.ಬಿಜೆಪಿ ನಾಯಕರೇ ಹೇಳುತ್ತಾರೆ ಸಂವಿಧಾನ ಬದಲಾಗುತ್ತದೆ ಎಂದು. ನಮ್ಮ ದೇಶದ ಪ್ರಜಾಪ್ರಭುತ್ವ ಉಳಿಬೇಕಾ ಅಥವಾ ಅಳಿಸಬೇಕಾ ನೀವೇ ಯೋಚಿಸಿ. ಜನರಿಂದ ಆರಿಸಿದ ಸಿಎಂರನ್ನು ಜೈಲಿಗೆ ಕಳಿಸುತ್ತಾರೆ.
ಇದನ್ನ ಪ್ರಜಾಪ್ರಭುತ್ವ ಅನ್ನುತ್ತೀರಾ ಎಂದು ಪ್ರಧಾನಿ ನರೇಂದ್ರಮೋದಿ ವಿರುದ್ದ ಗೃಹಸಚಿವ ಡಾ.ಜಿ.ಪರಮೇಶ್ವರ ಗುಡುಗಿದರು.
ಕೊರಟಗೆರೆ ವಿಧಾನಸಭಾ ಕ್ಷೇತ್ರದ ಪುರವಾರ, ಕಸಬಾ, ಹೊಳವನಹಳ್ಳಿ, ಕೋಳಾಲ, ತೋವಿನಕೆರೆ ಮತ್ತು ಕೋರಾ ಹೋಬಳಿ ವ್ಯಾಪ್ತಿಯ 40ಕ್ಕೂ ಅಧಿಕ ಗ್ರಾಮಗಳಲ್ಲಿ ಕಾಂಗ್ರೇಸ್ ಪಕ್ಷದಿಂದ ಗುರುವಾರ ಏರ್ಪಡಿಸಲಾಗಿದ್ದ ಪ್ರಚಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಾಜಿ ಪ್ರಧಾನಿ ದೇವೇಗೌಡರು ಹೇಳುತ್ತಾರೆ ಎಲೆಕ್ಷನ್ ಆದ ತತ್ ಕ್ಷಣವೇ ಸರಕಾರ ಬಿದ್ದೋಗುತ್ತೇ ಎಂದು. ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಕಾದುಕೊಂಡು ಕುಳಿತುಕೊಳ್ಳಲಿ. ಕೇಂದ್ರ ಸರಕಾರದಿಂದ ಬಡರೈತರ ಸಾಲಮನ್ನಾ ಆಗೋದಿಲ್ಲ ಆದರೇ ಹಣವಂತರ ಸಾವಿರಾರು ಕೋಟಿ ರಾತ್ರೋರಾತ್ರಿ ಮನ್ನಾ ಆಗುತ್ತದೆ. ನಮ್ಮ ದೇಶದ ಇಡೀ ಸಂಪತ್ತು ಈಗಾ ಅಂಬಾನಿ ಮತ್ತು ಅದಾನಿ ಕೈಯಲ್ಲಿದೆ ಎಂದು ಹೇಳಿದರು.
ನಮ್ಮ ರಾಜ್ಯ ನೋಡುತ್ತಿದೆ ಕೊರಟಗೆರೆ ಕ್ಷೇತ್ರದಲ್ಲಿ ಡಾ.ಜಿ.ಪರಮೇಶ್ವರ್ ಏನ್ ಮಾಡುತ್ತಾರೆ ಎಂದು. ತುಮಕೂರು ಜಿಲ್ಲೆಯ ಜವಾಬ್ದಾರಿ ನನ್ನ ಹೆಗಲ ಮೇಲೆ ಹಾಕಿದ್ದಾರೇ. ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುವ ಜವಾಬ್ದಾರಿ ನಿಮ್ಮದಾಗಿದೆ. ಪ್ರತಿ ಗ್ರಾಪಂ ಮತ್ತು ಬೂನ್‌ನಲ್ಲಿ ಹೆಚ್ಚಿನ ಲೀಡ್ ಬರಬೇಕಿದೆ. ಕಾರ್ಯಕರ್ತರು ಕೊರಟಗೆರೆ ಕ್ಷೇತ್ರವನ್ನು ಕಾಂಗ್ರೆಸ್ ಭದ್ರಕೋಟೆ ಎಂಬುದಾಗಿ ಮತ್ತೊಮ್ಮೆ ಸಾಬೀತು ಮಾಡಬೇಕಿದೆ ಎಂದರು.
ಅಭ್ಯರ್ಥಿ ಮುದ್ದಹನುಮೇಗೌಡ ಮಾತನಾಡಿ, ನನ್ನ ಅವಧಿಯಲ್ಲಿ ತುಮಕೂರು ಜಿಲ್ಲೆಗೆ ಪಾಸ್‌ಪೋರ್ಟ್ ಕಚೇರಿ ಬಂದಿದೆ. ವಿಶ್ವ ಭೂಪಟದಲ್ಲಿ ಇಸ್ರೋಗೆ ಬೇಕಾದ ಉಪಗ್ರಹ ಘಟಕ ತುಮಕೂರಿಗೆ ಬಂದಿದೆ. 3200 ಕೋಟಿ ವೆಚ್ಚದ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ದಿ ಆಗಿವೆ. ತುಮಕೂರು-ರಾಯದುರ್ಗ ರೈಲ್ವೆ ಯೋಜನೆ ಪ್ರಾರಂಭ ಆಯ್ತು. ೫೦ಕ್ಕೂ ಅಧಿಕ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿದ್ದೇನೆ. ನಮ್ಮ ಜಿಲ್ಲೆಯ ಹೆಸರನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿದಿದ್ದೇನೆ ಎಂದು ತಿಳಿಸಿದರು.
ತುಮಕೂರು ಜಿಲ್ಲೆಯ ಅಭಿವೃದ್ದಿಗೆ ಹಾಲಿ ಸಂಸದರ ಕೊಡುಗೆ ಏನು. ಕೊರಟಗೆರೆ ಕ್ಷೇತ್ರಕ್ಕೆ ಬಸವರಾಜು ಯಾವ ಅಭಿವೃದ್ದಿ ಯೋಜನೆ ಕೊಟ್ಟಿದ್ದಾರೆ. ಬಡಜನರಿಗೆ ಏನು ಅನುಕೂಲ ಮಾಡಿದಾರೇ ಹೇಳಿ ಆಮೇಲೆ ಮತ ಕೇಳಿ. ನಿಮ್ಮ ವಿಶ್ವಾಸಕ್ಕೆ ನಾನು ದ್ರೋಹ ಬರದ ರೀತಿಯಲ್ಲಿ ಅಭಿವೃದ್ದಿ ಮಾಡಿ ನಿಮ್ಮ ಜೊತೆಯಲ್ಲೇ ಇರುತ್ತೇನೆ. ದಯವಿಟ್ಟು ಹಸ್ತದ ಗುರುತಿಗೆ ಮತ ನೀಡಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಮುರುಳಿಧರ ಹಾಲಪ್ಪ, ಕೆಪಿಸಿಸಿ ಸದಸ್ಯ ದಿನೇಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ, ಕೊರಟಗೆರೆ ಬ್ಲಾಕ್ ಅಧ್ಯಕ್ಷ ಅರಕೆರೆಶಂಕರ್, ಅಶ್ವತ್ಥನಾರಾಯಣ್, ಮುಖಂಡರಾದ ಎಂಎನ್‌ಜೆ ಮಂಜುನಾಥ, ವಾಲೇಚಂದ್ರಯ್ಯ, ಜಯರಾಮು, ರವಿಕುಮಾರ್, ಕವಿತಾ, ಬಲರಾಮಯ್ಯ, ಜಯಮ್ಮ, ಮಹಾಲಿಂಗಪ್ಪ, ಮೈಲಾರಪ್ಪ, ಉಮೇಶ್, ಅರವಿಂದ್ ಸೇರಿದಂತೆ ಇತರರು ಇದ್ದರು.
Congress: ಹೈಕಮಾಂಡ್ ಒಪ್ಪಿಗೆ ಮೇರೆಗೆ ಶೋಷಿತರ ಸಮಾವೇಶ: ಕೆ.ಎನ್.ರಾಜಣ್ಣ
Madhugiri: 90 ಲಕ್ಷದ ಬೆಳೆ ವಿಮೆ ಹಣ ಅಕ್ರಮ ತನಿಖೆಗೆ ಆಗ್ರಹ
Tumkur: ಪರಂ, ರಾಜಣ್ಣ ವರ್ಚಸ್ಸು ಕುಂದಿಸಲು ಸುರೇಶ್‌ಗೌಡ ಟೀಕೆ: ಗೌರಿಶಂಕರ್
Koratagere: ಗುಡಿಸಲಿಗೆ ಆಕಸ್ಮಿಕ ಬೆಂ*ಕಿ; 4 ಮೇಕೆಗಳು ಸಜೀವ ದಹನ; ಇಬ್ಬರಿಗೆ ಗಾಯ
Koratagere: ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಫಿಲ್ಲಿಂಗ್; ಓರ್ವ ಆರೋಪಿ ಬಂಧನ
You seem to have an Ad Blocker on.
To continue reading, please turn it off or whitelist Udayavani.