ಕೊರಟಗೆರೆ:ಪುಟ್ಟೇಶ್ವರ ಸ್ವಾಮಿ ಮಠದಲ್ಲಿ ಹೈಡ್ರಾಮಾ; ಪೀಠಾಧಿಪತಿಯ ಪಟ್ಟಾಭಿಷೇಕ

ಗ್ರಾಮಸ್ಥರು, ಭಕ್ತಾದಿಗಳ ಆಕ್ರೋಶ ; ಪೊಲೀಸ್ ಭದ್ರತೆಯಲ್ಲಿ ಪಟ್ಟ ನೀಡಿದ ಮುರುಘಾ ಶ್ರೀಗಳು

Team Udayavani, Jun 11, 2022, 12:27 PM IST

1-sd

ಕೊರಟಗೆರೆ : ತಾಲೂಕಿನ ಹೊಳವನಹಳ್ಳಿ ಹೊಬಳಿಯ ಸೋಂಪುರ ಗ್ರಾಮದ ಶ್ರೀ ಪುಟ್ಟೇಶ್ವರ ಸ್ವಾಮಿ ವಿರಕ್ತ ಮಠದ ಅಧಿಪತ್ಯಕ್ಕೆ ಮಠದ ಟಸ್ಟ್ ಭಕ್ತಾಧಿಗಳು, ಗ್ರಾಮಸ್ಥರು ಮತ್ತು ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಮಠದ ನಡುವೆ ಹೈಡ್ರಾಮಾ ನಡೆದ ಘಟನೆ ನಡೆದಿದೆ.

ತಾಲೂಕಿನ ಸೋಂಪುರದ ಪುಟ್ಟೇಶ್ವರ ಸ್ವಾಮಿಯ ವಿರಕ್ತ ಮಠದ (ದೊಡ್ಡ ಮಠ)ವನ್ನು ಹಲವು ವರ್ಷಗಳ ಹಿಂದೆ ಯಾರೂ ದಾನಿಗಳು 20 ಎಕರೆ ಭೂಮಿಯನ್ನು ಧಾನ ನೀಡಿ ಸ್ಥಾಪಿಸಿದ್ದರು. ಇಲ್ಲಿ ಸ್ಥಳೀಯ ಭಕ್ತರು ಚಂದ ವಸೂಲು ಮಾಡಿ ಪುಟ್ಟೇಶ್ವರ ದೇವಾಲಯದ ಹಳೆಯ ದೇವಾಲಯವನ್ನು ಕಟ್ಟಡವನ್ನು ಮತ್ತೆ ಹೊಸದಾಗಿ ಕಟ್ಟಿದರು, ಇಲ್ಲಿಗೆ ಪೂಜಾರಿಕಿಗೆ ಬಂದ್ದಿದ ಸ್ವಾಮೀಜಿ ಹಣ ಪಡೆದು ಅವರಿಗೆ ಹಕ್ಕಿಲ್ಲದ್ದಿದರೂ ಮುರಘಮಠಕ್ಕೆ ವಾರಸತ್ವನ್ನು ಪತ್ರದಲ್ಲಿ ನೀಡಿದ್ದಾರೆ ಎಂದು ಆ ಮಠದವರು ಹೇಳಿಕೊಂಡು ತಮಗೆ ಅನುಕೂಲಕರ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ಮಠದ ಆಸ್ತಿ ಕಬಳಿಸಲು ಹನ್ನಾರ ನಡೆಸಿದ್ದಾರೆ ಎಂದು ಗ್ರಾಮಸ್ಥರು, ಭಕ್ತಾದಿಗಳು ಆರೋಪಿಸಿದ್ದಾರೆ.

ನಡೆದೇ ಹೋಯ್ತು ಪಟ್ಟಾಭಿಷೇಕ
ಜೂನ್ 10  ಶುಕ್ರವಾರ ಸೋಂಪುರ ದೊಡ್ಡಮಠವನ್ನು ಮುರಘಾ ಮಠದ ಶಾಖಾ ಮಠವನ್ನಾಗಿ ಮಾಡಿಕೊಳ್ಳಲು ಮತ್ತು ನೂತನ ಸ್ವಾಮೀಜಿಯನ್ನು ನೇಮಿಸಲು ಶಿವಮೂರ್ತಿ ಮುರುಘಾ ಶರಣ ಸ್ವಾಮೀಜಿಗಳು ಚಿತ್ರದುರ್ಗದಿಂದ ಬೆಳಗ್ಗೆ 11  ಗಂಟೆಗೆ ಬಗಿ ಪೊಲೀಸ್ ವ್ಯವಸ್ಥೆಯೊಂದಿಗೆ ಆಗಮಿಸಿದರು, ಸ್ವಾಮೀಜಿಗೂ ಸ್ವಲ್ಪ ಮುಂಚಿತವಾಗಿ ಮಠದ ನೂತನ ಪೀಠಾಧ್ಯಕ್ಷರಾಗಲು ಬಂದ ಬಸವಕಿರಣ ಸ್ವಾಮಿಗಳು ಹಾಗೂ ಮುರುಘಾ ಮಠದ ಕೆಲ ಬೆಂಬಲಿಗರು ಮಠಕ್ಕೆ ಬಂದ್ದಿದರು. ಅಲ್ಲಿಗೆ ಬಂದ ನೂರಾರು ಭಕ್ತರು ಸ್ವಾಮಿಜಿಯವರನ್ನು ಪೀಠಾರೋಹಣ ಕಾರ್ಯ ನಿಲ್ಲಿಸುವಂತೆ ಕೋರಿದರೂ ಪ್ರಯೋಜನವಾಗದೇ ಇದ್ದಾಗ ಕೂಗಾಡಿದರು. ಪೊಲೀಸರು ಅವರನ್ನು ಹೊರಹಾಕಿದರು.

ಈ ನಡುವೆ ಶಿವಮೂರ್ತಿ ಮುರುಘಾ ಶರಣ ಶ್ರೀಗಳು ತರಾತುರಿಯಲ್ಲಿ ಬಸವಕಿರಣ ಸ್ವಾಮಿಜಿಗಳಿಗೆ ಪೀಠಾಧಿಪತಿಯಾಗಿ ಪಟ್ಟಾಭಿಷೇಕ ಮಾಡಿದರು ಇದಕ್ಕೆ ಇಬ್ಬರು ಸ್ವಾಮಿಜಿಗಳು ಸಾಕ್ಷಿಯಾಗಿದ್ದರು, ಅಲ್ಲಿಯವರಿಗೂ ಬನ್ನಿ ಮಾತನಾಡೋಣ ಎನ್ನುತ್ತಿದ್ದ ಶಿವಮೂರ್ತಿ ಶ್ರೀಗಳು ಕಾರ್ಯಕ್ರಮ ಮುಗಿದ ಮೇಲೆ ಚಿತ್ರದುರ್ಗಕ್ಕೆ ಬನ್ನಿ ಎಂದು ಹೇಳಿ ಪೋಲೀಸ್ ಬಂದೋಬಸ್ತ್ ನಡುವೆ ಮರಳಿದರು. ನಂತರ ನೂತನ ಸ್ವಾಮಿಜಿ ಮತ್ತು ಭಕ್ತರ ಮುಂದೆ ಪಂಚಪೀಠ ಮತ್ತು ಬಸವತತ್ವದ ವಾದ ವಿವಾದಗಳು ನಡೆದವು.

ಪೊಲೀಸರ ಹರ ಸಾಹಸ

ಈ ಘಟನೆಯಲ್ಲಿ ಮಧುಗಿರಿ ಡಿವೈಎಸ್‌ಬಿ ರಾಮಕೃಷ್ಣ ಮತ್ತು ಕೊರಟಗೆರೆ ಸಿಪಿಐ ಸಿದ್ದರಾಮೇಶ್ವರರ ಪೊಲೀಸ್ ತಂಡವು ಭಕ್ತರನ್ನು ತಡೆಯಲು ಹರ ಸಾಹಸ ಪಟ್ಟಿತು. ನೂಕು ತಳ್ಳಾಟದ ಮದ್ಯೆ ಜನರನ್ನು ಸಮಾಧಾನ ಪಡಿಸಲು ಸಾಕಷ್ಟು ಶ್ರಮವಹಿಸಿ ಭಕ್ತರ ಆಕ್ರೋಶ ತಡೆಯಲು ಶಕ್ತಿ ಮೀರಿ ಪ್ರಯತ್ನಿಸಿದರು.

ಸೋಂಪುರ ದೊಡ್ಡಮಠವು ನೂರಾರು ವರ್ಷಗಳಿಂದ ಮುರಘರಾಜೇಂದ್ರ ಮಠದ ಆಸ್ತಿಯಾಗಿದೆ, ಅದಕ್ಕೆ ನಮ್ಮ ಹತ್ತಿರ ದಾಖಲೆಗಳಿವೆ ಎಲ್ಲರೂ ಒಟ್ಟಾಗಿ ಬಂದರೆ ನಡೆಸಿಕೊಂಡು ಹೋಗಬಹುದು, ಕಾನೂನಿಗೆ ಎಲ್ಲರೂತಲೆ ಬಾಗಬೇಕು-ಶಿವಮೂರ್ತಿ ಮುರುಘಾ ಶರಣ ಶ್ರೀಗಳು.

ಹಲವು ವರ್ಷಗಳ ಹಿಂದೆ ಪುಟ್ಟೇಶ್ವರ ಸ್ವಾಮಿಗೆ ಭೂಮಿ ದಾನ ಮಾಡಿದ ಭಕ್ತರ ಜಾಗವನ್ನು ಮಠವನ್ನು,ಪೂಜಾರಿಕಗೆ ಬಂದವರಿಂದ ಹಣ ನೀಡಿ ಪತ್ರ ಬರೆಸಿಕೊಂಡು ಸುಳ್ಳು ದಾಖಲೇ ಸೃಷ್ಟಿಸಿಕೊಂಡದ್ದಾರೆ, ತಮ್ಮ ರಾಜಕೀಯ, ಪೋಲೀಸ್ ಬಲ ಬಳಸಿ ಬಂದ ಆಸ್ತಿಯನ್ನು ಕಬಳಿಸಲು ಮರುಘ ಮಠವು ಪ್ರಯತ್ನಿಸುತ್ತಿದೆ, ನಾವು ಕಾನೂನು ಹೋರಾಟ ಮಾಡುತ್ತೇವೆ, ಸತ್ಯ ನಮ್ಮ ಕಡೆ ಇದೆ.- ತ್ರಿಯಂಭಕ ಆರಾಧ್ಯ ಭಕ್ತರು

ಕಾರ್ಯಕ್ರಮದಲ್ಲಿ ನಾಗೇಂದ್ರ ಸ್ವಾಮಿಗಳು ಉಪಸ್ಥಿತರಿದ್ದರು. ಶ್ರೀ ಪುಟ್ಟೇಶ್ವರ ಸ್ವಾಮಿ ವಿರುಕ್ತ ಮಠದ ಭಕ್ತಾದಿಗಳಾದ ಪುಟೇಶ್ವರ ಸ್ವಾಮಿ ಟ್ರಸ್ಟ್ ಅಧ್ಯಕ್ಷರಾದ ದಿನೇಶ್, ಕಾರ್ಯದರ್ಶಿ ಶಿವರುದ್ರಯ್ಯ, ಪರ್ವತಯ್ಯ, ಹೆಚ್.ಎಂ.ರುದ್ರಪ್ರಸಾದ್, ತ್ರಯಾಂಬಕ ಆರಾಧ್ಯ, ವೀರಯ್ಯ, ಉಮಾಶಂಕರ್, ಪುಟ್ಟರಾಜು, ವಿಜಯಶಂಕರ್, ಜಿ.ಎಂ.ಶಿವಾನಂದ್ , ಮಲ್ಲೇಶ್, ಹುಚ್ಚಣ್ಣ ಸೇರಿದಂತೆ ಇತರರು ಹಾಜರಿದ್ದರು.

ಟಾಪ್ ನ್ಯೂಸ್

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

24-pavagada

Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ

10-tumkur

Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ

Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ

Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ

suicide (2)

Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು

ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್

ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.