Koratagere; ರೈತರಿಂದ 26ರೂ.ಗೆ ಹಾಲು ಖರೀದಿಸಿ ಗ್ರಾಹಕರಿಗೆ 44ರೂ.ಗೆ ಮಾರಾಟ!
ಪ್ರತಿನಿತ್ಯ 300 ಲೀ. ಲೋಕಲ್‍ಸೇಲ್.. ಡೈರಿ ಕಾರ್ಯದರ್ಶಿ ವಿರುದ್ದ ಸಿಡಿದೆದ್ದ ಹೈನುಗಾರರು
Team Udayavani, Dec 9, 2024, 8:34 PM IST
ಕೊರಟಗೆರೆ: ನಮ್ಮಿಂದ 1ಲೀ ಹಾಲಿಗೆ 26ರೂನಂತೆ ಖರೀದಿಸಿ ನಮ್ಮ ಮುಂದೆಯೇ ನಮ್ಮೂರಿನ ಗ್ರಾಹಕರಿಗೆ 1ಲೀ ಹಾಲಿಗೆ 44ರೂಗೆ ಮಾರಾಟ ಮಾಡ್ತಾರೇ. ನಾವು ಪ್ರಶ್ನೆ ಮಾಡಿದ್ರೇ ನಿಮ್ಮ ಹಾಲಿನಲ್ಲಿ ಡಿಗ್ರಿ ಬರುತ್ತಿಲ್ಲ ಪ್ಯಾಟ್ ಕಡಿಮೆ ಇದೆ ನಿಮ್ಮ ಹಾಲು ಬೇಡ ಅಂತಾರೇ. ಡೈರಿ ಕಾರ್ಯದರ್ಶಿ ಸ್ವಾರ್ಥದಿಂದ ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ನಮಗೇ ಸೀಗುತ್ತಿಲ್ಲ ಎಂದು ಆರೋಪಿಸಿ ಸೋಮವಾರ(ಡಿ9) ರೈತರು ಕಿಡಿಕಾರಿದ ಘಟನೆ ನಡೆದಿದೆ.
ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಅರಸಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ನಾಗರಾಜು ವಿರುದ್ದ 150ಕ್ಕೂ ಅಧಿಕ ಹಾಲು ಉತ್ಪಾದಕ ರೈತರು ಹಾಲು ಹಾಕುವುದನ್ನೇ ನಿಲ್ಲಿಸಿ ಡೈರಿಗೆ ಮುತ್ತಿಗೆಹಾಕಿ ಪ್ರತಿಭಟನೆಯ ಮೂಲಕ ಆಕ್ರೋಶ ವ್ಯಕ್ತಪಡಿಸಿ ರೈತರಿಗೆ ಅನ್ಯಾಯ ಆಗದಂತೆ ಮೇಲಾಧಿಕಾರಿಗಳು ಕ್ರಮ ವಹಿಸಬೇಕಿದೆ ಎಂದು ಮನವಿ ಮಾಡಿದರು.
ಹಾಲು ಉತ್ಪಾದಕರ ಸಹಕಾರ ಸಂಘದ ಆದೇಶದಂತೆ ಅರಸಾಪುರದಲ್ಲಿ ಕಳೆದ 8ವರ್ಷದ ಹಿಂದೆ ಪ್ರಾರಂಭವಾದ ಡೈರಿಯು ಈಗ ಸಮಸ್ಯೆಯ ಸುಳಿಯಲ್ಲಿ ಸಿಲುಕಿದೆ. ಪರಿಶೀಲನೆ ನಡೆಸಬೇಕಾದ ಮೇಲ್ವಿಚಾರಕಿ ಮತ್ತು ಸೂಪರ್‍ವೈಸರ್ ಕೇಂದ್ರಸ್ಥಾನದಲ್ಲೇ ವಾಸವಿಲ್ಲ. ಉಸ್ತುವಾರಿ ವಹಿಸಬೇಕಾದ ನಿರ್ದೇಶಕರಿಗೆ ಇನ್ನೂ ಅಧಿಕಾರ ಸಿಕ್ಕಿಲ್ಲ. ಹಾಲಿನ ಜೊತೆ ಚೆಲ್ಲಾಟ ಆಡೋದು ಎಷ್ಟು ಸರಿ ಎಂಬುದು ಸ್ಥಳೀಯರ ಆಕ್ರೋಶವಾಗಿದೆ.
150ಜನ ರೈತರಿಂದ 1200ಲೀ ಹಾಲು
ಅರಸಾಪುರ, ಮಾದೇನಹಳ್ಳಿ, ಅಗ್ರಹಾರ, ಅರಸಾಪುರ ತಾಂಡ, ಮಾದೇನಹಳ್ಳಿ ತಾಂಡ, ಹೊಸಪಾಳ್ಯ ಸೇರಿ 8ಗ್ರಾಮದ 150ಕ್ಕೂ ಅಧಿಕ ರೈತರಿಂದ ಪ್ರತಿನಿತ್ಯ 1200ಲೀ ಹಾಲು ಶೇಖರಣೆ ಆಗುತ್ತೇ. ಮುಂಜಾನೆ ಬಂದ್ರು 5ಗಂಟೆಯಿಂದ 7ಗಂಟೆವರೇಗೆ ರೈತರು ಸರತಿ ಸಾಲಿನಲ್ಲಿ ನಿಲ್ಲುವ ದುಸ್ಥಿತಿಯಿದೆ. ಡೈರಿಯ ಸಿಬ್ಬಂಧಿ ಕೊರತೆಯ ಬಗ್ಗೆ ಮೇಲ್ವಿಚಾರಕಿ ಅಥವಾ ಸೋಪರ್ ವೈಸರ್‍ನಿಂದ ಪರಿಶೀಲನೆ ನಡೆಯದೇ ಲೋಪವಾಗಿದೆ.
300ಲೀ ಹಾಲು ನಿತ್ಯ ಲೋಕಲ್‍ಸೇಲ್
ಅರಸಾಪುರ ಡೈರಿಯಲ್ಲಿ ಪ್ರತಿನಿತ್ಯ 1200ಲೀ ಹಾಲು ಶೇಖರಣೆ ಆಗುತ್ತೇ. ಅದರಲ್ಲಿ ಬೆಳಿಗ್ಗೆ 150ಲೀ ಮತ್ತು ಸಂಜೆ 150ಲೀ ಹಾಲು ಲೋಕಲ್‍ಸೇಲ್ ರೂಪದಲ್ಲಿ ಗ್ರಾಹಕರಿಗೆ ಮಾರಾಟ ಮಾಡ್ತಾರೇ. ಇದರಿಂದ ಡೈರಿಗೆ ಪ್ರತಿನಿತ್ಯ 8ರಿಂದ 9ಲಕ್ಷ ಆದಾಯ ಬರ್ತಿದೆ. ಲೋಕಲ್‍ಸೇಲ್ ಮಾರಾಟದಿಂದ ಬರುವ ಆಧಾಯದಲ್ಲಿ ರೈತರಿಗೆ ನಯಾಪೈಸೆಯು ಬರ್ತೀಲ್ಲ ಎಂಬುದು ಹಾಲು ಉತ್ಪಾದಕರ ಆರೋಪ.
ಡೈರಿ ಕಟ್ಟಡ ಉದ್ಘಾಟನೆಗೆ ಮೀನಮೇಷ..
ತುಮಕೂರು ಹಾಲು ಒಕ್ಕೂಟದಿಂದ 5ಲಕ್ಷ, ಕರ್ನಾಟಕ ಹಾಲು ಮಹಾಮಂಡಳಿಯಿಂದ 5ಲಕ್ಷ, ಧರ್ಮಸ್ಥಳ ಸಂಘದಿಂದ 2ಲಕ್ಷ ಹಾಗೂ ಅರಸಾಪುರ ಹಾಲು ಉತ್ಪಾದಕರ ಸಂಘದಿಂದ 6ಲಕ್ಷ ಸೇರಿ 18ಲಕ್ಷದಲ್ಲಿ ನೂತನ ಡೈರಿಯ ಕಟ್ಟಡ ನಿರ್ಮಾಣ ಆಗಿದೆ. ಡೈರಿಯ ಕಾರ್ಯದರ್ಶಿ ಮತ್ತು ಆಡಳಿತ ಮಂಡಳಿಯ ದಿವ್ಯನಿರ್ಲಕ್ಷದಿಂದ ಕಾಮಗಾರಿ ಸ್ಥಗೀತವಾಗಿ 2ತಿಂಗಳು ಕಳೆದಿದೆ. 500ರೂ ಬಾಡಿಗೆ ಕಟ್ಟಡದಲ್ಲಿ ಹಾಲಿನ ವಹಿವಾಟು ನಡೆಯುತ್ತಿದ್ದು ಪ್ರತಿನಿತ್ಯ ರೈತರಿಗೆ ಸಂಕಟದ ಹಿಂಸೆಯಾಗಿದೆ.
ಪ್ರತಿನಿತ್ಯದ ಹಾಲಿನ ಚೀಟಿ ಕೇಳಿದ್ರೇ ಡೈರಿ ಕಾರ್ಯದರ್ಶಿ ನೀಡೊದಿಲ್ಲ. ನಾವು 15ದಿನ ಹಾಕಿದ ಹಾಲಿನ ಮಾಹಿತಿ ಕೇಳಿದ್ರೇ ಕೋಡೊದಿಲ್ಲ. 1ಲೀ ಹಾಲಿಗೆ ನಮಗೇ 26ರೂ ನೀಡ್ತಾರೇ ನಮ್ಮ ಮುಂದೆಯೇ 44ರೂಗೆ ಮಾರಾಟ ಮಾಡ್ತಾರೇ. ನಾವು ಪ್ರಶ್ನೆ ಮಾಡಿದ್ರೇ ಹಾಲಿ ಪ್ಯಾಟ್ ಬರ್ತೀಲ್ಲ ಎಂದು ಹಿಂದಕ್ಕೆ ಕಳಿಸ್ತಾರೇ. ಸೂಪರ್‍ವೈಸರ್ ಮತ್ತು ಮೇಲ್ವಿಚಾರಕಿಗೆ ಕರೆ ಮಾಡಿದ್ರೇ ಉಢಾಪೆ ಉತ್ತರ ನೀಡ್ತಾರೇ.
ರಂಜಿತ್. ಹಾಲು ಉತ್ಪಾದಕ ರೈತ. ಅರಸಾಪುರ.
ಡೈರಿಯಲ್ಲಿ ಸ್ಥಳೀಯವಾಗಿ ಹಾಲು ಮಾರಾಟಕ್ಕೆ ಅವಕಾಶ ಇಲ್ಲ. ಅರಸಾಪುರ ರೈತರ ಹಿತದೃಷ್ಟಿಯಿಂದ ಪ್ರತಿನಿತ್ಯ 150ಲೀ ಲೋಕಲ್‍ಸೇಲ್ ಹೋಗುತ್ತೆ. ಹಾಲಿನ ಪ್ಯಾಟ್‍ನಲ್ಲಿ ವ್ಯತ್ಯಾಸ ಆದ್ರೇ ಡೈರಿ ಮತ್ತು ರೈತರಿಗೆ ನಷ್ಟ ಆಗುತ್ತೇ. ಹಾಲಿನ ಪ್ಯಾಟ್ ವಿಚಾರದಲ್ಲಿ ಕಾರ್ಯದರ್ಶಿ ಮತ್ತು ರೈತರ ನಡುವೆ ಗಲಾಟೆ ಆಗಿರೋದು ಸತ್ಯ. ನೂತನ ಡೈರಿ ಕಟ್ಟಡದ ಉದ್ಘಾಟನೆಗೆ ತಯಾರಿ ನಡೆದಿದೆ.
ಪುಪ್ಪಲತಾ. ಮೇಲ್ವಿಚಾರಕಿ. ಕೊರಟಗೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere: ಕಾರು-ಬೈಕ್ ಭೀಕರ ಅಪಘಾತ: ಓರ್ವ ಸವಾರ ಸ್ಥಳದಲ್ಲೇ ಸಾವು
Dinner Meeting: ಸಭೆ ಮಾಡಬೇಡಿ ಎನ್ನಲು ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ?: ಸಚಿವ
Tumakuru: ಬಾಲ ಹಿಡಿದು ಚಿರತೆ ಸೆರೆ ಹಿಡಿದ ಯುವಕ; ಅರಣ್ಯ ಸಿಬ್ಬಂದಿ ಶಾಕ್!
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Koratagere; ಲಾರಿ- ಕಾರಿನ ನಡುವೆ ಭೀಕರ ಅಪಘಾ*ತ: ಯುವಕರಿಬ್ಬರ ಸಾ*ವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.