ಕೊರಟಗೆರೆ: ಸರಕಾರ ನೀಡಿರುವ ತುರ್ತುವಾಹನ ನಿರ್ವಹಣೆ ಸಂಪೂರ್ಣ ವಿಫಲ; ಮಾಜಿ ಶಾಸಕ ಆರೋಪ
ತುರ್ತುವಾಹನ ನಿರ್ವಹಣೆಗೆ ಮಾಜಿ ಶಾಸಕ ಆಗ್ರಹ
Team Udayavani, Dec 11, 2022, 4:51 PM IST
ಕೊರಟಗೆರೆ: ಬಡಜನರ ತುರ್ತು ಸೇವೆಗಾಗಿ ಸರಕಾರ ನೀಡಿರುವ ತುರ್ತುವಾಹನದ ನಿರ್ವಹಣೆ ವಿಫಲವಾಗಿದೆ. ಆರೋಗ್ಯ ಸಚಿವರು ತಕ್ಷಣ ತುರ್ತುವಾಹನದ ಅವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಬೇಕಿದೆ. ರಾಜ್ಯ ಸರಕಾರ ಗ್ರಾಮೀಣ ಪ್ರದೇಶದ ಬಡಜನರ ಆರೋಗ್ಯಕ್ಕೆ ತಕ್ಷಣ ರಕ್ಷಣೆ ನೀಡಬೇಕಿದೆ ಎಂದು ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ಆಗ್ರಹ ಮಾಡಿದರು.
ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ಚಿರತೆ ದಾಳಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತೀರುವ ವಯೋವೃದ್ದ ರೈತ ಮತ್ತು ಇಬ್ಬರು ಮಕ್ಕಳ ಆರೋಗ್ಯ ವಿಚಾರಿಸಿದ ನಂತರ ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ನಂತರ ಚರ್ಚಿಸಿ ಮಾತನಾಡಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ೩ತುರ್ತುವಾಹನ, ತೋವಿನಕೆರೆ ಮತ್ತು ಕೋಳಾಲದಲ್ಲಿ ತಲಾ ಒಂದು ತುರ್ತುವಾಹನದ ಸೌಲಭ್ಯವಿದೆ. ತುರ್ತುವಾಹನ ಲಭ್ಯವಿದ್ದರೂ ಸಹ ಅಧಿಕಾರಿಗಳ ನಿರ್ವಹಣೆ ವಿಫಲತೆಯಿಂದ ಬಡಜನರಿಗೆ ಸಮಸ್ಯೆ ಸೃಷ್ಟಿಯಾಗಿದೆ. ಆರೋಗ್ಯ ಸಚಿವರು ತಕ್ಷಣ ತುರ್ತುಸೇವೆಯ ಬಗ್ಗೆ ಮಾಹಿತಿ ಪಡೆದು ಕ್ರಮ ಕೈಗೊಳ್ಳಬೇಕಿದೆ ಎಂದು ಒತ್ತಾಯ ಮಾಡಿದರು.
ಅಪಘಾತ ಆದಾಗ ತುರ್ತುವಾಹನ ಬರೋದಿಲ್ಲ. ಗರ್ಭೀಣಿಯರ ಹೆರಿಗೆ ವೇಳೆಯು ಸಹಾಯಕ್ಕೆ ತುರ್ತಾಗಿ ವಾಹನ ಸೀಗೋದಿಲ್ಲ. ಈಗ ಚಿರತೆ ದಾಳಿ ಆದಾಗಲೂ ತುರ್ತುವಾಹನ ಸೀಗದೇ ಖಾಸಗಿ ವಾಹನದಲ್ಲಿ ರೈತರು ಮತ್ತು ಮಕ್ಕಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ರಾಜ್ಯ ಸರಕಾರ ಮತ್ತು ಆರೋಗ್ಯ ಇಲಾಖೆಯ ಮೌನವು ಹತ್ತಾರು ಅನುಮಾನಗಳಿಗೆ ಕಾರಣವಾಗಿದೆ ಎಂದು ಆರೋಪ ಮಾಡಿದರು.
ಸ್ಥಳಕ್ಕೆ ತಹಶೀಲ್ದಾರ್ ನಾಹಿದಾ ಜಮ್ ಜಮ್,ವಲಯ ಅರಣ್ಯ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ್, ಆರೋಗ್ಯ ಇಲಾಖೆಯ ಮುಖ್ಯಾಧಿಕಾರಿ ಪುಪ್ಪಲತಾ ಸೇರಿದಂತೆ ಇತರರು ಬೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಇದನ್ನೂ ಓದಿ: ಅಯೋಧ್ಯೆ 2031 ಮಾಸ್ಟರ್ ಪ್ಲಾನ್ ಗೆ ಸಿಎಂ ಯೋಗಿ ಆದಿತ್ಯನಾಥ್ ಅನುಮೋದನೆ
ಚಿರತೆ ದಾಳಿಯಿಂದ 4 ಜನರಿಗೆ ಗಾಯ..
ಐ.ಕೆ.ಕಾಲೋನಿಯ ಬಳಿಯ ಬಸ್‌ನಿಲ್ದಾಣದ ಸಮೀಪ ಶ್ರೀನಿವಾಸ್(60), ರಾಜು(47) ಮೇಲೆ ಚಿರತೆ ದಾಳಿ ನಡೆಸಿದೆ. ನಂತರ ದನದ ಕೊಟ್ಟಿಗೆಯಲ್ಲಿ ಹಾಲು ಕರೆಯುತ್ತೀದ್ದ ಧನುಷ್(13), ಚೇತನ್(15) ಎಂಬುವರ ಮೇಲೆ ಚಿರತೆ ದಾಳಿ ನಡೆಸಿದೆ. ಕಳೆದ ವಾರದಿಂದ ನಾಲ್ಕೈದು ಸಲ ಚಿರತೆಯು ಕಾಣಿಸಿಕೊಂಡು ರೈತರನ್ನು ಭಯಗೊಳಿಸಿದೆ.
ಹಾಲು ಕರೆಯುತ್ತೀದ್ದ ನನ್ನ ಮಕ್ಕಳ ಮೇಲೆ ಚಿರತೆಯು ದಾಳಿ ನಡೆಸಿದೆ. ಗಾಯಗೊಂಡ ಮಕ್ಕಳನ್ನು ಆಸ್ಪತ್ರೆ ರವಾನಿಸಲು ತುರ್ತುವಾಹನಕ್ಕೆ ಅರ್ಧಗಂಟೆ ಕಾದರೂ ಬರಲಿಲ್ಲ. ಆಸ್ಪತ್ರೆಯ ಮುಂದೆ ೩ತುರ್ತುವಾಹನ ವ್ಯರ್ಥವಾಗಿ ನಿಂತಿವೆ. ನಾನು ಪ್ರಶ್ನಿಸಿದರೇ ನಮಗೆ ಆದೇಶ ಬರಬೇಕು ಅಂತಾರೇ. ಅರಣ್ಯ ಇಲಾಖೆ ತಕ್ಷಣ ಚಿರತೆಯನ್ನು ಹಿಡಿಯಬೇಕಿದೆ.
– ಕೆಂಪರಾಜು. ರೈತ. ಐ.ಕೆ.ಕಾಲೋನಿ
ಕೊರಟಗೆರೆಯಲ್ಲಿ ತುರ್ತುವಾಹನ ಸೌಲಭ್ಯವಿದ್ದರೂ ನಿರ್ವಹಣೆ ವಿಫಲ ಆಗಿದೆ. ಚಿರತೆ ದಾಳಿಯಿಂದ ಗಾಯಗೊಂಡ ೪ ಜನರಿಗೆ ತುರ್ತುವಾಹನ ಸೌಲಭ್ಯ ದೊರೆಯುತ್ತಿಲ್ಲ. ತುರ್ತುವಾಹನ ನಿರ್ವಹಣೆಯಲ್ಲಿ ಆರೋಗ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ. ಅರಣ್ಯ ಇಲಾಖೆ ತಕ್ಷಣ ಚಿರತೆಯನ್ನು ಸೆರೆಹಿಡಿದು ರೈತರಿಗೆ ಅನುಕೂಲ ಕಲ್ಪಿಸಬೇಕಿದೆ.
– ಪಿ.ಆರ್. ಸುಧಾಕರಲಾಲ್. ಮಾಜಿ ಶಾಸಕ. ಕೊರಟಗೆರೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.