ಪುಂಡರ ಕಡಿವಾಣಕ್ಕೆ ಮಫ್ತಿವೇಷ ಹಾಕಿದ ಕೊರಟಗೆರೆ ಪಿಎಸೈ: 10ಕ್ಕೂ ಅಧಿಕ ಬೈಕ್ ವಶಕ್ಕೆ

ಪಿಎಸೈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಅಪಾರ ಮೆಚ್ಚುಗೆ

Team Udayavani, Jan 18, 2023, 10:06 PM IST

ಪುಂಡರ ಕಡಿವಾಣಕ್ಕೆ ಮಫ್ತಿವೇಷ ಹಾಕಿದ ಕೊರಟಗೆರೆ ಪಿಎಸೈ: 10ಕ್ಕೂ ಅಧಿಕ ಬೈಕ್ ವಶಕ್ಕೆ

ಕೊರಟಗೆರೆ: ಪುಂಡರಿಂದ ರಾಗಿಂಗ್ ಮತ್ತು ವಿನಾಕಾರಣ ಹಾರನ್ ಕಿರಿಕಿರಿ ಕಡಿವಾಣಕ್ಕೆ ಮಫ್ತಿಯಲ್ಲಿಯೇ ರಸ್ತೆಗಿಳಿದ ಕೊರಟಗೆರೆ ಪಿಎಸೈ ಚೇತನ್‌ಗೌಡ.. ಶಾಲಾ-ಕಾಲೇಜು ಪ್ರಾರಂಭಕ್ಕೂ ಮುನ್ನಾ ಮತ್ತು ಮುಕ್ತಾಯದ ನಂತರ ಸಾವಿರಾರು ವಿದ್ಯಾರ್ಥಿಗಳ ನಡುವೆ ಸಾಮಾನ್ಯರಂತೆ ನಿಂತು ಸಾರ್ವಜನಿಕ ಪ್ರದೇಶದಲ್ಲಿ ಮಫ್ತಿಯ ವೇಷದಲ್ಲಿ ಪೊಲೀಸರ ಕಾರ್ಯಚರಣೆ ನಡೆದಿದೆ.

ಕೊರಟಗೆರೆ ಪಟ್ಟಣದ ಸರಕಾರಿ ಬಸ್ ನಿಲ್ದಾಣ, ಸಂತೆ ಮೈದಾನ, ಬಾಲಕಿಯರ ಪ್ರೌಢಶಾಲೆ, ಪ್ರಥಮದರ್ಜೆ ಕಾಲೇಜು, ಸರಕಾರಿ ಪದವಿಪೂರ್ವ ಕಾಲೇಜು, ಖಾಸಗಿ ಬಸ್ ನಿಲ್ದಾಣ, ಟೀ ಅಂಗಡಿ ಮತ್ತು ಸಾರ್ವಜನಿಕ ಪ್ರದೇಶದಲ್ಲಿ ಕೆಲಸವೇ ಇಲ್ಲದೇ ವಿನಾಕಾರಣ ತಿರುಗಾಡುವ ಪುಂಡರಿಗೆ ಬಿಸಿಮುಟ್ಟಿಸುವ ಕೆಲಸವನ್ನು ಕೊರಟಗೆರೆ ಪಿಎಸೈ ಚೇತನ್‌ಗೌಡ ನೇತೃತ್ವದ ಪೊಲೀಸರ ತಂಡ ಮಾಡಿದೆ.

ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿ ಬೈಕ್ ವಿಲಿಂಗ್ ಮಾಡೋದು. ವಿದ್ಯಾರ್ಥಿಗಳಿಗೆ ರಸ್ತೆ ಬೀಡದೇ ಅಡ್ಡಾದಿಡ್ಡಿ ವಾಹನ ಚಲಾಯಿಸುವುದು. ಹೆಣ್ಣು ಮಕ್ಕಳನ್ನು ಹಿಂದೆಯಿಂದ ಚುಡಾಯಿಸುವ ಕೆಲಸ. ಜೋರಾಗಿ ಹಾರನ್ ಹೊಡೆದು ಕಿರಿಕಿರಿ ಉಂಟು ಮಾಡೋದು. ರಸ್ತೆಯ ಮಧ್ಯೆ ಕಾದು ಕುಳಿತು ಸಮಸ್ಯೆ ಸೃಷ್ಟಿಸೋದು ಸೇರಿದಂತೆ ಹತ್ತಾರು ದೂರುಗಳು ಪೊಲೀಸರ ಗಮನಕ್ಕೆ ಬಂದಾಕ್ಷಣವೇ ಪೊಲೀಸರು ಪೀಲ್ಡಿಗಿಳಿದು ಕಾರ್ಯಚರಣೆ ನಡೆಸಿದ್ದಾರೆ.

ಶಾಲಾ-ಕಾಲೇಜು ಆವರಣ, ಟೀಅಂಗಡಿ, ಚಿಲ್ಲರೇ ಅಂಗಡಿ, ಹೊಟೇಲ್‌ನ ಮುಂದೆ ಕಾರಣವೇ ಇಲ್ಲದೇ ಕಾರು, ಆಟೋ ಮತ್ತು ದ್ವಿಚಕ್ರ ವಾಹನ ನಿಲ್ಲಿಸಬಾರದು. ಕಾಲೇಜು ಆಡಳಿತ ಮಂಡಳಿ ಮತ್ತು ಪೋಷಕರು ತಮ್ಮ ಮಕ್ಕಳ ಬಗ್ಗೆ ಜಾಗೃತಿ ವಹಿಸಬೇಕಿದೆ. ವಿದ್ಯಾರ್ಥಿಗಳಿಗೆ ಏನೇ ಸಮಸ್ಯೆ ಆದ್ರು ತಕ್ಷಣ ಪೊಲೀಸರ ಗಮನಕ್ಕೆ ತರಬಹುದಾಗಿದೆ ಎಂದು ಕೊರಟಗೆರೆ ಪಿಎಸೈ ಚೇತನ್‌ಗೌಡ ಜನರಲ್ಲಿ ಮನವಿ ಮಾಡಿರುವ ಘಟನೆಯು ನಡೆದಿದೆ.

ವಾಹನಗಳ ಪತ್ತೆ ಹಚ್ಚಿ ಕಾರ್ಯಚರಣೆ..
ಕಾಲೇಜು ಸಮಯದಲ್ಲಿ ಅತಿವೇಗದ ಚಾಲನೆ ಮತ್ತು ವಿನಾಕಾರಣ ತಿರುಗಾಡುವ ದ್ವಿಚಕ್ರವಾಹನ, ಆಟೋ ಮತ್ತು ಕಾರುಗಳ ಮಾಹಿತಿಯನ್ನು ಎರಡು ದಿನದ ಮುಂಚೆಯೇ ಕೊರಟಗೆರೆ ಪೊಲೀಸರ ತಂಡ ಪತ್ತೆ ಹಚ್ಚಿದ್ದಾರೆ. ಮಾರನೇಯ ದಿನವೇ ಪಿಎಸೈ ಚೇತನ್‌ಗೌಡ ನೇತೃತ್ವದ ಪೊಲೀಸರ ತಂಡ ಬೀಸಿದ ಬಲೆಗೆ ದ್ವಿಚಕ್ರ ವಾಹನ ಸಮೇತ ಪುಂಡರು ಬಿದ್ದಿದ್ದಾರೆ. 10ಕ್ಕೂ ಅಧಿಕ ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಪುಂಡ ಯುವಕರಿಗೆ ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಯುವ ವಿದ್ಯಾರ್ಥಿಗಳ ಬಗ್ಗೆ ಕಾಲೇಜು ಆಡಳಿತ ಮಂಡಳಿ ಜಾಗೃತೆ ವಹಿಸಬೇಕಿದೆ. ೧೮ವರ್ಷದ ಒಳಗಿನ ಮಕ್ಕಳಿಗೆ ಪೋಷಕರು ದ್ವಿಚಕ್ರ ವಾಹನ ನೀಡಬಾರದು. ವಿದ್ಯಾಥಿಗಳಿಗೆ ಏನೇ ಸಮಸ್ಯೆ ಇದ್ದರೂ ನೇರವಾಗಿ ಬಂದು ಠಾಣೆಗೆ ದೂರುನೀಡಿ. ಟೀಅಂಗಡಿ ಮತ್ತು ಹೊಟೇಲ್ ಮಾಲೀಕರು ಪುಂಡರಿಗೆ ವಿನಾಕಾರಣ ಕುಳಿತುಕೊಳ್ಳಲು ಅವಕಾಶ ಮಾಡಿಕೊಟ್ಟರೇ ತಕ್ಷಣ ನಾನೇ ಸ್ಥಳಕ್ಕೆ ಬರುತ್ತೇನೆ.

– ಚೇತನ್‌ಗೌಡ. ಪಿಎಸೈ. ಕೊರಟಗೆರೆ

ಇದನ್ನೂ ಓದಿ: ಪುತ್ತೂರು: ಯುವತಿಗೆ ಚೂರಿ ಇರಿತ ಪ್ರಕರಣ… ಘಟನೆ ನಡೆದ 24 ತಾಸಿನೊಳಗೆ ಆರೋಪಿ ಸೆರೆ

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.