ಹಲ್ಲಿದ್ರೆ ಕಡ್ಲೆ ಇಲ್ಲ, ಕಡ್ಲೆ ಇದ್ರೆ ಹಲ್ಲಿಲ್ಲ ಎಂಬಂತಾಗಿದೆ ಇಲ್ಲಿನ ಸರ್ಕಾರಿ ನೌಕರರ ಪಾಡು


Team Udayavani, Jun 7, 2022, 11:43 PM IST

ಹಲ್ಲಿದ್ರೆ ಕಡ್ಲೆ ಇಲ್ಲ, ಕಡ್ಲೆ ಇದ್ರೆ ಹಲ್ಲಿಲ್ಲ… ಎಂಬಂತಾಗಿದೆ ಸರ್ಕಾರಿ ನೌಕರರ ಪಾಡು

ಕೊರಟಗೆರೆ : ಹಲ್ಲಿದ್ರೆ ಕಡ್ಲೆ ಇಲ್ಲ, ಕಡ್ಲೆ ಇದ್ರೆ ಹಲ್ಲಿಲ್ಲ’ ಎನ್ನುವ ಗಾದೆ ಮಾತಂತೆ ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಗ್ರಾಮದಲ್ಲಿನ ಸರಕಾರಿ ನೌಕರರಿಗೆ ಸೌಲಭ್ಯಗಳ ಕೊರತೆಯಿದ್ದು, ವಸತಿ ಸೌಲಭ್ಯ ಮರೀಚಿಕೆಯಾಗಿದೆ.

ತಾಲೂಕಿನ ಬಹಳಷ್ಟು ಊರುಗಳಲ್ಲಿ ಸರಕಾರಿ ವಸತಿ ಗೃಹಗಳಿಲ್ಲದೆ ಸಾಕಷ್ಟು ಮಂದಿ ನೌಕರರು ಬಾಡಿಗೆ ಮನೆಯನ್ನೇ ಅವಲಂಬಿಸಿದ್ದಾರೆ. ಆದರೆ ಹೊಳವನಹಳ್ಳಿ ಆರಕ್ಷಕ ಠಾಣೆ. ಆರೋಗ್ಯ ಇಲಾಖೆಯ ವೈದ್ಯರು ಮತ್ತು ಶುಶ್ರೂಶಕಿಯರು. ಕಂದಾಯ ಇಲಾಖೆಯ ವಸತಿ ಗೃಹಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ವಸತಿ ಗೃಹ ಹೀಗೆ . 20 – 25 ವರ್ಷದಿಂದ ಯಾರೂ ವಾಸಿಸದೇ. ಪಾಳು ಬಿದ್ದ ಕಾರಣ ಈ ಎಲ್ಲಾ ಅಧಿಕಾರಿಗಳು ತಮಗೆ ಯೋಗ್ಯವಾದ ಕಡೆ ಮತ್ತು ಜಿಲ್ಲೆಗಳಿಂದ ಬಸ್ ಮೂಲಕ ಕಛೇರಿಯ ಕೆಲಸಕ್ಕೆ ಬರುತ್ತಾರೆ.

ಇನ್ನು ಈ ಭಾಗದಲ್ಲಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮತ್ತು ಸರ್ಕಾರಿ ಪ್ರಾರ್ಥಮಿಕ ಶಾಲೆ ಹತ್ತಿರ ಇದ್ದ ಕಾರಣ ಪಾಳುಬಿದ್ದ ವಸತಿಗೃಹಗಳಿಂದ ವಿಷಕಾರಿ ಹಾವುಗಳು ಹೆಚ್ಚಾಗಿದ್ದು ಇಲ್ಲಿ ಓದಲು ಬರುವ ಮಕ್ಕಳು ಆಟವಾಡುವ ಸಮಯದಲ್ಲಿ ಇವುಗಳ ಕಾಟ ಹೆಚ್ಚಾದರೆ ಆ ಮಕ್ಕಳ ಪಾಡೇನು ಎಂಬುದು ನಾಗರೀಕರ ಪ್ರಶ್ನೆಯಾಗಿದೆ.

ಈ ವಸತಿ ಗೃಹದಲ್ಲಿ ಹಿಂದೆ ಶುಶ್ರೂಶಕಿಯರು ವಾಸಿಸುತ್ತಿದ್ದರು. ವಸತಿ ಗೃಹ ಶಿಥೀಲಗೊಂಡಿದ್ದು , ಈ ಕಟ್ಟಡಗಳನ್ನು ದುರಸ್ತಿಪಡಿಸದೆ. ದಿನೆ ದಿನೇ ಕಟ್ಟಡ ಶಿಥಿಲಗೊಳ್ಳುತ್ತಾ ಇದೆ. ಈಗ ಕುಸಿಯುವ ಹಂತದಲ್ಲಿವೆ. ವಸತಿ ಗೃಹಗಳ ಸುತ್ತ ಮುತ್ತ ಬೆಳೆದಿರುವ ಗಿಡಗಂಟಿಗಳನ್ನು , ದುರಸ್ತಿ ಮಾಡಲು ಸಂಬಂಧಿಸಿದ ಇಲಾಖೆ ಮುಂದಾಗುತ್ತಿಲ್ಲ. ಹೀಗಾಗಿ ಈ ಕಟ್ಟಡಗಳು ಕುಸಿಯುವ ಹಂತದಲ್ಲಿವೆ. ಅಲ್ಲದೇ ಪುಂಡ ಪೋಕರಿಗಳ ಅನೈತಿಕ ಚಟುವಟಿಕೆಗಳ ತಾಣವಾಗಿ ರೂಪುಗೊಂಡಿದೆ.

ಇದನ್ನೂ ಓದಿ : ಪಾವಗಡ : ಟ್ರ್ಯಾಕ್ಟರ್ – ಬೈಕ್ ನಡುವೆ ಅಪಘಾತ , ಇಬ್ಬರು ಸ್ಥಳದಲ್ಲೇ ಸಾವು

ಹೊಳವನಹಳ್ಳಿ ಹೋಬಳಿ ಕೇಂದ್ರವಾಗಿದ್ದು, ಕಂದಾಯ ಇಲಾಖೆ ಸೇರಿದಂತೆ ನಾನಾ ಇಲಾಖೆಗಳು ಕೆಲಸ ಕಾರ್ಯ ನಿರ್ವಹಿಸುತ್ತಿವೆ. ನೂರಾರು ಸರಕಾರಿ ನೌಕರರು ಕೆಲಸ ಮಾಡುತ್ತಿದ್ದು, ಅವರಿಗೆ ವಸತಿ ಗೃಹ ಸೌಕರ್ಯ ಕಲ್ಪಿಸಿಲ್ಲ. ಹೀಗಾಗಿ ಅನೇಕರು ಬಾಡಿಗೆ ಮನೆಗಳಲ್ಲಿ ಅಧಿಕ ಬಾಡಿಗೆ ನೀಡಿ ವಾಸಿಸುವಂತಾಗಿದೆ.

ಬಾಡಿಗೆ ಮನೆ ಕೊರತೆ:

ಸಣ್ಣ ಪಟ್ಟಣವಾಗಿರುವುದರಿಂದ ಗ್ರಾಮದಲ್ಲಿ ಹೆಚ್ಚು ಬಾಡಿಗೆ ಮನೆಗಳಿಲ್ಲ. ಹೀಗಾಗಿ ಸರಕಾರಿ ಕಚೇರಿಗಳಲ್ಲಿ, ಶಾಲೆಯಲ್ಲಿ ಕೆಲಸ ಮಾಡುತ್ತಿರುವ ನೌಕಕರಿಗೆ ಮನೆ ಸಿಗದೇ ಅಕ್ಕಪಕ್ಕದ ಊರುಗಳಲ್ಲಿ ನೆಲೆಸಿದ್ದಾರೆ. ದುಬಾರಿ ಬಾಡಿಗೆ ಕೊಡುವುದಲ್ಲದೇ, ನಿತ್ಯ ಬಸ್‌ನಲ್ಲಿ ಪ್ರಯಾಣ ಮಾಡಿ ಕಚೇರಿಗೆ ಬರುವವರೂ ಇದ್ದಾರೆ. ದುಸ್ಥಿತಿಯಲ್ಲಿರುವ ಇಲ್ಲಿನ ವಸತಿ ಗೃಹಗಳನ್ನು ದುರಸ್ತಿ ಮಾಡಿಸಿ ನೌಕರರಿಗೆ, ಅಧಿಕಾರಿಗಳಿಗೆ ವಿತರಿಸಿದರೆ ಕೆಲವರಿಗಾದರೂ ಅನುಕೂಲವಾಗಲಿದೆ. ಈ ಬಗ್ಗೆ ಜನಪ್ರತಿ ನಿಧಿಗಳು, ಹಿರಿಯ ಅಧಿಕಾರಿಗಳು ಗಮನಹರಿಸಬೇಕಾಗಿದೆ.

ಈ ಪಾಳು ಬಿದ್ದ ವಸತಿ ಗೃಹಗಳನ್ನು ಸದ್ಯದಲ್ಲೇ ದುರಸ್ತಿಪಡಿಸಲಾಗುವುದು. ಹಾಗೆ ನಮ್ಮ ಇಲಾಖೆಯಿಂದ ಹೊಸದಾಗಿ ವಸತಿಗೃಹಗಳನ್ನು ನಿರ್ಮಿಸಿ ಕಾಂಪೌಂಡ್ ಮಾಡಲಾಗುವುದು.

– ಸಿದ್ದರಾಮೇಶ್ವರ ಸರ್ಕಲ್ ಇನ್ಸ್‌ಪೆಕ್ಟರ್ ಕೊರಟಗೆರೆ

ಕೊರಟಗೆರೆ ಮತ್ತು ಹೊಳವನಹಳ್ಳಿಯಲ್ಲಿ ಬಾಡಿಗೆ ಮನೆಗಳ ಕೊರತೆಯಿಂದ ನೌಕರರು ದೂರದ ಊರಿನಿಂದ ಬಸ್‌ನಲ್ಲಿ ಬರುತ್ತಿದ್ದಾರೆ. ಹೀಗಾಗಿ ಅವರು ಕಚೇರಿ ಸೇರುವುದು ವಿಳಂಬವಾಗುತ್ತಿದೆ. ಇದರಿಂದ ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆ. ಕೂಡಲೇ ವಸತಿಗೃಹವನ್ನು ಸರಿಪಡಿಸಿ ನೌಕರರಿಗೆ ವಿತರಿಸಿದರೆ ನೌಕರರಿಗೂ, ಸಾರ್ವಜನಿಕರಿಗೂ ಅನುಕೂಲವಾಗಲಿದೆ.

– ಶ್ರೀನಿವಾಸ್ ಹೆಚ್ ಎನ್ ಗ್ರಾಮಸ್ಥರು ಹೊಳವನಹಳ್ಳಿ.

ನಾಳೆಯೇ ಖುದ್ದಾಗಿ ಪಾಳುಬಿದ್ದ ವಸತಿ ಗೃಹಗಳನ್ನು ವೀಕ್ಷಣೆ ಮಾಡಿ ಸಂಭಂದಿಸಿದ ಇಲಾಖೆಗಳ ಗಮನಕ್ಕೆ ತರುತ್ತೇನೆ. ಮತ್ತು ಜಿಪಂ ಕಾರ್ಯನಿರ್ವಾಹಕ ಅಧಿಕಾರಿಯ ಗಮನಕ್ಕೆ ಪತ್ರದ ಮುಖೇನ ಶಿಪಾರಸ್ಸು ಮಾಡುತ್ತೇನೆ.

– ದೊಡ್ಡಸಿದ್ದಯ್ಯ, ತಾಪಂ ಕಾರ್ಯನಿರ್ವಣಾಧಿಕಾರಿ

– ಸಿದ್ದರಾಜು. ಕೆ ಕೊರಟಗೆರೆ

ಟಾಪ್ ನ್ಯೂಸ್

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌

Exam 2

CBSE; ಮುಂದಿನ ವರ್ಷ ಪಠ್ಯ ಶೇ. 15 ಕಡಿತಕ್ಕೆ ಚಿಂತನೆ

bjp-congress

BJP ಆಮಿಷ ನಿಜ: ಸಿಎಂ, ಡಿಸಿಎಂ ಹೇಳಿಕೆಗೆ ದನಿಗೂಡಿಸಿದ ಸಚಿವರು, ಶಾಸಕರು

1-vandaru-kamabala

Kambala; ವಂಡಾರು ಕಂಬಳ: ಇದು ಹರಕೆಯ ಸೇವೆ, ಇಲ್ಲಿ ಸ್ಪರ್ಧೆಯಿಲ್ಲ

vidhana-soudha

2025ರ ಸಾರ್ವತ್ರಿಕ ರಜೆ ಪಟ್ಟಿಗೆ ಸಂಪುಟ ಅಸ್ತು;19 ಸಾರ್ವತ್ರಿಕ,20 ಪರಿಮಿತ ರಜೆಗೆ ಅನುಮೋದನೆ

Vijayendra (2)

50 crores ಆಮಿಷ ಸುಳ್ಳಿನ ಕಂತೆ; ಸೂಕ್ತ ಸಾಕ್ಷಿ ನೀಡಿ ಇಲ್ಲವೇ ED ತನಿಖೆಗೊಪ್ಪಿಸಿ: ಬಿಜೆಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌

bjp-congress

BJP ಆಮಿಷ ನಿಜ: ಸಿಎಂ, ಡಿಸಿಎಂ ಹೇಳಿಕೆಗೆ ದನಿಗೂಡಿಸಿದ ಸಚಿವರು, ಶಾಸಕರು

vidhana-soudha

2025ರ ಸಾರ್ವತ್ರಿಕ ರಜೆ ಪಟ್ಟಿಗೆ ಸಂಪುಟ ಅಸ್ತು;19 ಸಾರ್ವತ್ರಿಕ,20 ಪರಿಮಿತ ರಜೆಗೆ ಅನುಮೋದನೆ

Vijayendra (2)

50 crores ಆಮಿಷ ಸುಳ್ಳಿನ ಕಂತೆ; ಸೂಕ್ತ ಸಾಕ್ಷಿ ನೀಡಿ ಇಲ್ಲವೇ ED ತನಿಖೆಗೊಪ್ಪಿಸಿ: ಬಿಜೆಪಿ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌

Exam 2

CBSE; ಮುಂದಿನ ವರ್ಷ ಪಠ್ಯ ಶೇ. 15 ಕಡಿತಕ್ಕೆ ಚಿಂತನೆ

bjp-congress

BJP ಆಮಿಷ ನಿಜ: ಸಿಎಂ, ಡಿಸಿಎಂ ಹೇಳಿಕೆಗೆ ದನಿಗೂಡಿಸಿದ ಸಚಿವರು, ಶಾಸಕರು

1-vandaru-kamabala

Kambala; ವಂಡಾರು ಕಂಬಳ: ಇದು ಹರಕೆಯ ಸೇವೆ, ಇಲ್ಲಿ ಸ್ಪರ್ಧೆಯಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.