ಈ ರಸ್ತೆಯಲ್ಲಿ ಸಂಚರಿಸುವುದೇ ಒಂದು ನರಕ ಯಾತನೆ : ಹಿಡಿಶಾಪ ಹಾಕುತ್ತಿರುವ ಸವಾರರು
Team Udayavani, Oct 9, 2022, 4:20 PM IST
ಕೊರಟಗೆರೆ : ರಸ್ತೆಯುದ್ದಕ್ಕೂ ಹೊಂಡ ಗುಂಡಿಗಳು, ಗುಂಡಿಗಳಲ್ಲಿ ನೀರು ತುಂಬಿ ಓಡಾಟಕ್ಕೂ ಪರದಾಟ. ಈ ರಸ್ತೆಯಲ್ಲಿ ಒಂದು ಸಲ ಸಂಚರಿಸಿದರೆ ನರಕಯಾತನೆಯ ಅನುಭವ. ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಜನತಾ ಕಾಲೋನಿ ನಾಗರಕೆರೆ ಹಿಂಭಾಗ ರಸ್ತೆ. ಈ ರಸ್ತೆಯು ತುಮಕೂರು ಮತ್ತು ಗೌರಿಬಿದನೂರು ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ದುಃಸ್ಥಿತಿ ಇದಾಗಿದೆ.
ಹೌದು, ರಸ್ತೆಯುದ್ದಕ್ಕೂ ಬಿದ್ದಿರುವ ತಗ್ಗು- ಗುಂಡಿಗಳಿಂದ ಪ್ರಯಾಣಿಕರ ಸಂಚಾರಕ್ಕೆ ಕಂಟಕವಾಗಿವೆ. ಪ್ರತಿ ನಿಮಿಷಕ್ಕೆ ಎಂಬಂತೇ ಸಂಚರಿಸುವ ಬಸ್‌ಗಳು ಸಹ ಹದಗೆಟ್ಟ ರಸ್ತೆಯಲ್ಲಿ ಸಂಚರಿಸಿ ಕೆಟ್ಟು ಪರಿತಪಿಸಬೇಕಾದ ಸರದಿ.
ಕೆ.ಎಸ್.ಆರ್.ಟಿ.ಸಿ ಹಾಗೂ ಖಾಸಗಿ ವಾಹನಗಳ ಪರಿಸ್ಥಿತಿಯು ಇದಕ್ಕೆ ಹೊರತಾಗಿಲ್ಲ. ಈ ರಸ್ತೆಯಲ್ಲಿ ನಿತ್ಯ ಓಡಾಡುವ ಜನರು ರಸ್ತೆಯ ದುಃಸ್ಥಿತಿ ಕಂಡು ಹಿಡಿ ಶಾಪ ಹಾಕುತ್ತಿದ್ದಾರೆ.
ಈ ರಸ್ತೆಯಲ್ಲಿ ಕನಿಷ್ಠ ಪಕ್ಷ ತಗ್ಗು ದಿನ್ನೆಗಳಿಗೆ ಒಂದಷ್ಟು ಮಣ್ಣು ಹಾಕಿ ಮುಚ್ಚಿ ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಕೆಲಸವೂ ನಡೆದಿಲ್ಲ. ಪರಿಣಾಮ ದ್ವಿಚಕ್ರ ವಾಹನ ಸವಾರರ ಪ್ರಯಾಣವಂತು ದೇವರಿಗೆ ಪ್ರೀತಿ ಎನ್ನುವಂತಾಗಿದೆ. ನಿತ್ಯ ಸರ್ಕಸ್ ಮಾಡುತ್ತ ಈ ರಸ್ತೆಯಲ್ಲಿ ಸಂಚರಿಸುವಂತಾಗಿದೆ. ಈ ಭಾಗಕ್ಕೆ ಸಂಪರ್ಕಿಸುವ ರಸ್ತೆ ಹದಗೆಟ್ಟಿದರೂ ಸಂಬಂಧ ಪಟ್ಟ ಅಧಿಕಾರಿಗಳು ಇದಕ್ಕೂ ತಮಗೂ ಏನು ಸಂಬಂಧವಿಲ್ಲ ಎಂಬಂತೇ ವರ್ತಿಸುತ್ತಿರುವುದು ಸಾರ್ವಜನಿಕರ ಕಂಗೆಣ್ಣಿಗೆ ಗುರಿಯಾಗಿದೆ.
ರಸ್ತೆಗಳ ದುರಸ್ತಿಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರ ವಿವಿಧ ಯೋಜನೆಯಡಿ ಕೋಟ್ಯಾಂತರ ರೂ. ಅನುದಾನ ನೀಡುತ್ತಿದೆ. ಆದರೆ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕಾದ ಜನಪ್ರತಿನಿಧಿಗಳ ಇಚ್ಚಾ ಶಕ್ತಿ ಕೊರತೆ ಹಾಗೂ ಅಧಿಕಾರಿಗಳ ನಿಷ್ಕಾಳಜಿಯಿಂದ ರಸ್ತೆ ಮಾತ್ರ ಹಾಗೇ ಉಳಿಯುವಂತಾಗಿದೆ. ಒಟ್ಟಿನಲ್ಲಿ ಹದಗೆಟ್ಟ ರಸ್ತೆಯ ದುಃಸ್ಥಿತಿಯಿಂದ ಹೊಳವನಹಳ್ಳಿ ಸುತ್ತ ಮುತ್ತಲಿನ ಗ್ರಾಮಸ್ಥರು ನಿತ್ಯ ಹಿಡಿಶಾಪ ಹಾಕುತ್ತಾ ಓಡಾಡುವಂತಾಗಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳು ರಸ್ತೆ ಬಗ್ಗೆ ನಿರ್ಲಕ್ಷ್ಯತನ ಬಿಟ್ಟು ಶೀಘ್ರ ರಸ್ತೆ ನಿರ್ಮಾಣ ಕಾರ್ಯಕ್ಕೆ ಮುಂದಾಗಬೇಕಿದೆ.
ಸುಮಾರು ಮೂರು ತಿಂಗಳ ಹಿಂದೆ ಸುರಿದ ಮಳೆಗೆ ಈ ರಸ್ತೆ ಕೊಚ್ಚಿ ಹೋಗಿದ್ದು ಇದರ ಬೆನ್ನಲ್ಲಿಯೇ ಅಂಬುಲೆನ್ಸ್ ಕೂಡ ಓಡಾಡಬೇಕಾದ ಪರಿಸ್ಥಿತಿ. ಯಾರಿಗಾದರೂ ಅಪಾಯವಾದರೆ ಈ ರಸ್ತೆಯಲ್ಲಿ ಅಂಬುಲೆನ್ಸ್ ಹೋಗಬೇಕು. ಆಂಬುಲೆನ್ಸ್ ಬಂದು ಹೋಗುವ ಕ್ಷಣ ತಡವಾದರೂ ರೋಗಿಯ ಕಥೆ ಯಮನ ಪಾಲಾಗುವುದು ಖಚಿತ. ಜನಪ್ರತಿನಿಧಿಗಳ ಇಚ್ಚಾ ಶಕ್ತಿ ಕೊರತೆ ಹಾಗೂ ಅಧಿಕಾರಿಗಳ ನಿಷ್ಕಾಳಜಿಯಿಂದ ರಸ್ತೆ ಮಾತ್ರ ಹಾಗೇ ಉಳಿಯುವಂತಾಗಿದೆ.
– ಹನುಮಯ್ಯ, ಗೌರವ ಅಧ್ಯಕ್ಷ ಚಿಗುರು ಜನ ಸೇವಾ ಟ್ರಸ್ಟ್
ಕೊರಟಗೆರೆ ಮತ್ತು ಗೌರಿಬಿದನೂರು ಮಾರ್ಗದ ಹೊಳವನಹಳ್ಳಿ ನಾಗರ ಕೆರೆಯ ಹಿಂಭಾಗದ ಮುಖ್ಯ ರಸ್ತೆ ಸುಮಾರು ದಿನದಿಂದ ಸುರಿದ ಮಳೆಯಿದ ನಾಗರಕೆರೆತುಂಬಿ ಕೋಡಿಯದ ಪರಿಣಾಮ ನೀರಿನ ರಾಭಸ ಹೆಚ್ಚಗಿದ್ದು ರಸ್ತೆ ಕಳಪೆ ಕಾಮಗಾರಿಯಾದ ಪರಿಣಾಮ ನೀರಿನ ಪ್ರಮಾಣ ಅತಿಯಾಗಿ ಹರಿದ ಕಾರಣ ರಸ್ತೆ ಹಾಳಾಗಿದೆ ಕೂಡಲೇ ಸರಿಯಾದ ಪ್ರಮಾಣದಲ್ಲಿ ರಸ್ತೆ ನಿರ್ಮಾಣ ಮಾಡಬೇಕು.
– ನಾಗರಾಜು ಅರಳಾಪುರ, ಗ್ರಾಮಸ್ಥ
ಈಗ ತಾನೇ ಹೊಳವನಹಳ್ಳಿ ಜನತಾ ಕಾಲೋನಿ ನಾಗರ ಕೆರೆ ಹಿಂಭಾಗದ ರಸ್ತೆಯನ್ನು ಪರಿಶೀಲಿಸಿದ್ದೇನೆ ಆದಷ್ಟು ಬೇಗ ರಸ್ತೆಯನ್ನು ನಿರ್ಮಾಣ ಮಾಡಿ ಸುರಕ್ಷಿತವಾಗಿ ವಾಹನ ಸಂಚಾರ ಮಾಡಲು ಅರಿವು ಮಾಡಿಕೊಡುತ್ತೇನೆ .
– ಮಲ್ಲಿಕಾರ್ಜುನ್ ಡಬ್ಲ್ಯೂಡಿ ಅಧಿಕಾರಿಗಳು
ಸಾರ್ವಜನಿಕ ಆಸ್ಪತ್ರೆ ಕೊರಟಗೆರೆ
ತಾಲ್ಲೂಕು ಗಡಿಭಾಗ ಸುಮಾರು 25 ಕಿ ಮೀ. ದೂರವಿದೆ ಯಾವುದೇ ಅಪಘಾತವಾದರೂ ಅಥವಾ ಹೆರಿಗೆ ಸಂಭವಿಸಿದರು ಆಂಬುಲೆನ್ಸ್ ಇದೇ ರಸ್ತೆ ಮಾರ್ಗವಾಗಿ ಸಂಚರಿಸಬೇಕಾಗುತ್ತದೆ ಈ ಆಂಬುಲೆನ್ಸ್ ಅಲ್ಲಿಗೆ ಹೋಗುವುದು ಸ್ವಲ್ಪ ತಡವಾದರೂ ರೋಗಿಯ ಕಥೆ ಹೇಳತೀರದು. ಅಥವಾ ಆಂಬುಲೆನ್ಸ್ ನಲ್ಲಿ ಕುಳಿತು ಬರುವಾಗ ಇದೇ ಮಾರ್ಗವಾಗಿ ವಾಪಸ್ ಬರಬೇಕಾಗುತ್ತದೆ ಉಳಿದಂತಹ ಜೀವ ಇಲ್ಲಿಯವರೆಗೂ ಬರುವವರೆಗೂ ಇರುತ್ತದೋ ಇಲ್ಲವೋ ತಿಳಿಯದು ಎಂಬುದು ಇಲ್ಲಿನ ವಿದ್ಯಾವಂತರ ಅಭಿಪ್ರಾಯ
– ಸಿದ್ದರಾಜು. ಕೆ.ಕೊರಟಗೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.