Koratagere: ಇರಕಸಂದ್ರ ಕಾಲೋನಿಯ 8 ಅಂಗಡಿಯಲ್ಲಿ ಸರಣಿ ಕಳ್ಳತನ
ಪೊಲೀಸ್ ಚೌಕಿ ಎದುರಿನಲ್ಲೇ ಕಳ್ಳತನ
Team Udayavani, Dec 28, 2023, 10:22 PM IST
ಕೊರಟಗೆರೆ : ತಾಲೂಕಿನ ಕೋಳಾಲ ಹೋಬಳಿ ವ್ಯಾಪ್ತಿಯ ಇರಕಸಂದ್ರ ಕಾಲೋನಿಯ ಎಂಟು ಅಂಗಡಿಗಳಲ್ಲಿ ಸರಣಿ ಕಳ್ಳತನ ನಡೆದಿದೆ.
ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು,ಕೊರಟಗೆರೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ NH4 ಬೆಂಗಳೂರು- ಪಾವಗಡ ರಸ್ತೆ ಇರಕ್ಸಂದ್ರ ಕಾಲೋನಿಯ ಬಸ್ ಸ್ಟ್ಯಾಂಡ್ ಹಿಕ್ಕೆರಲಿನಲ್ಲಿರುವ 8 ಅಂಗಡಿಗಳಲ್ಲಿ ಸರಣಿ ಕಳ್ಳತನವಾಗಿದ್ದು, ಸುಮಾರು 10 ಸಾವಿರಕ್ಕೂ ಹೆಚ್ಚು ನಗದು ಕಳ್ಳತನ ಮಾಡಿದ್ದಾರೆ ಎಂದು ಹೇಳಲಾಗಿದೆ. ಅದು ಪೊಲೀಸ್ ಚೌಕಿ ಎದುರಿನಲ್ಲೇ ಕಳ್ಳತನ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
ಸರಣಿ ಕಳ್ಳತನ ನಡೆಯುವ ಸಂದರ್ಭದಲ್ಲಿ, ಸಿ ಸಿ ಕೆಮರಾ ಗಳನ್ನು ಮರೆಮಾಚಿ ಬೇರೆ ಕಡೆ ತಿರುಗಿಸಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದು, ಶಿವಶಕ್ತಿ ಬ್ಯಾಂಕ್ ಬಳಿ ಕೊನೆಯಲ್ಲಿ ಕಳ್ಳತನ ಮುಕ್ತಾಯ ಮಾಡುವ ಸಂದರ್ಭದಲ್ಲಿ ಕಬ್ಬಿಣದ ಶಟರ್ ಹಾಗೂ ಕಬ್ಬಿಣದ ಬೀಗಗಳನ್ನು ಒಡೆಯಲು ಬಳಸಲಾದ ಕಬ್ಬಿಣದ ರಾಡನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ.
ಇರಕ್ಸಂದ್ರ ಕಾಲೋನಿಯಲ್ಲಿ ಸತತವಾಗಿ ಇದೇ ಮಾದರಿಯಲ್ಲಿ ಎರಡು ಮೂರು ವರ್ಷಗಳಿಂದ ಖತರ್ನಾಕ್ ಕಳ್ಳರು ತಮ್ಮ ಕೈಚಳಕವನ್ನು ತೋರಿಸುತ್ತಿದ್ದಾರೆ. ಹೊಸ ವರ್ಷ ಆಸುಪಾಸಿನ ಸಂದರ್ಭದಲ್ಲಿ ಈ ಕಳ್ಳತನ ನಡೆಯುತ್ತಿದ್ದು, ಈ ಹಿಂದೆ ಇದೇ ವರ್ಷದಲ್ಲಿ ಜನವರಿ ಆಸು ಪಾಸಿನಲ್ಲಿ 8 ಅಂಗಡಿಗಳ ಕಳ್ಳತನ ನಡೆದಿದ್ದು, ಈಗ ಮತ್ತೆ ಸರಣಿ ಅಂಗಡಿಗಳ ಕಳ್ಳತನ ಜರುಗಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಇರಕಸಂದ್ರ ಕಾಲೋನಿಯಲ್ಲಿ ಕಳ್ಳತನ ಪ್ರಕ್ರಿಯೆ ಬುಧವಾರ ಮಧ್ಯರಾತ್ರಿ 1 ಗಂಟೆ ಅಥವಾ 2 ಗಂಟೆ ಆಸು ಪಾಸಿನಲ್ಲಿ ಜರುಗಿರುವ ಸಾಧ್ಯತೆಯಿದ್ದು, ಪೊಲೀಸ್ ಚೌಕ ಮುಂಭಾಗದಲ್ಲಿ ಕಳ್ಳತನ ನಡೆದಿದ್ದು, 1.35 ಗಂಟೆ ಆಸು ಪಾಸಿನಲ್ಲಿ ಪೊಲೀಸ್ ಬಿಟ್ ನವರು ಇಲ್ಲಿಯೇ ಕೆಲವೊಂದು ಕಾರುಗಳ ತಪಾಸಣೆ ನಡೆಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೆಳಗ್ಗೆ 5:30ರ ಸಂದರ್ಭದಲ್ಲಿ ಮಾಲೀಕರು ಅಂಗಡಿ ತೆರೆಯುವಾಗ ಗಮನಕ್ಕೆ ಬಂದಿದ್ದು ನಂತರ ಪೊಲೀಸರಿಗೆ ವಿಚಾರ ತಿಳಿಸಿದಾಗ 112 ಪೋಲಿಸ್ ನವರು ಒಂದು ಸ್ಥಳ ಪರಿಶೀಲನೆ ನಡೆಸಿ ಕೋಳಾಲ ಪಿಎಸ್ಐ ರೇಣುಕಾ ಯಾದವ್ ಸೇರಿದಂತೆ ಇತರರು ತಪಾಸಣೆಗೆ ತೆರಳಿ ಸಿಸಿ ಟಿವಿ ವಿಡಿಯೋ ಪುಟೇಜ್ ವೀಕ್ಷಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.