ಕೊರಟಗೆರೆ: ಟಾರ್ ಆಯಿಲ್ ಸಿಡಿದು ತಾಯಿ, ಮಗಳ ಕಣ್ಣಿಗೆ ಹಾನಿ
ಗುತ್ತಿಗೆದಾರನ ನಿರ್ಲಕ್ಷದಿಂದ ಅನಾಹುತ
Team Udayavani, Jun 6, 2022, 5:11 PM IST
ಕೊರಟಗೆರೆ: ತಾಲ್ಲೂಕಿನ ಪಟ್ಟಣದ ವ್ಯಾಪ್ತಿಯಲ್ಲಿ ರಸ್ತೆ ಡಾಂಬರೀಕರಣದ ಉದ್ದೇಶಕ್ಕಾಗಿ ತಂದಿದ್ದ ಟಾರ್ ಟ್ರಾಕ್ಟರ್ ನಲ್ಲಿದ್ದ ಟಾರ್ ಆಯಿಲ್ ಸಿಡಿದು ತಾಯಿ ಮತ್ತು ಮಗಳ ಕಣ್ಣಿನ ದೃಷ್ಟಿಗೆ ಸಮಸ್ಯೆ ಎದುರಾಗಿರುವ ಘಟನೆ ಜರುಗಿದೆ.
ಗೊರವನಹಳ್ಳಿ ಗ್ರಾಮದ ಲಕ್ಷ್ಮಮ್ಮ ಮತ್ತು ಲಕ್ಷ್ಮೀ ಎಂಬುವರ ಕಣ್ಣಿಗೆ ಡ್ರಮ್ಮಿನಲ್ಲಿದ್ದ ಟಾರ್ ಆಯಿಲ್ ಸಿಡಿದಿದೆ. ಪಟ್ಟಣದ ಎಸ್ ಬಿಐ ಬ್ಯಾಂಕಿನ ಮುಂಭಾಗದ ಮುಖ್ಯರಸ್ತೆಯಲ್ಲಿ ದುರ್ಘಟನೆ ನಡೆದಿದೆ. ಟ್ರಾಕ್ಟರ್ ನಲ್ಲಿದ್ದ ಟಾರ್ ಆಯಿಲ್ ಬಿಸಿಮಾಡಲು ಕೆಳಗೆ ಇಳಿಸುವ ವೇಳೆ ಗುತ್ತಿಗೆದಾರ ಮುಂಜಾಗ್ರತಾ ಕ್ರಮ ಕೈಗೊಳ್ಳದ ಕಾರಣ ಪರಿಣಾಮ ಅನಾಹುತ ಉಂಟಾಗಿದೆ.
ಪಟ್ಟಣದ ಸಜ್ಜನರ ಬೀದಿಯಲ್ಲಿ ಡಾಂಬರೀಕರಣ ಕೆಲಸಕ್ಕಾಗಿ ತಂದಿದ್ದ ಟಾರ್ ಆಯಿಲ್ ಬ್ಯಾರಲ್ ಗಳು,ಟ್ರಾಕ್ಟರ್ ನಿಂದ ಆಯಿಲ್ ಕೆಳಗೆ ಇಳಿಸುವಾಗ ಆಟೋದಲ್ಲಿದ್ದ ಐದು ಜನರ ಮೇಲೆ ಬಿದ್ದು ಅನಾಹುತ ನಡೆದಿದೆ.ಇಬ್ಬರು ಪ್ರಯಾಣಿಕರ ಕಣ್ಣಿಗೆ ಗಂಭೀರ ಗಾಯವಾಗಿ ಕೊರಟಗೆರೆ ಪಟ್ಟಣದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ತುಮಕೂರು ಆಸ್ಪತ್ರೆಗೆ ರವಾನಿಸಲಾಗಿದೆ.
ಸ್ಥಳಕ್ಕೆ ತಹಶೀಲ್ದಾರ್ ನಾಹೀದಾ ಜಮ್ ಜಮ್ ಬೇಟಿ ನೀಡಿ ಪರಿಶೀಲಿಸಿ ಗುತ್ತಿಗೆದಾರನಿಂದ ಮಾಹಿತಿ ಪಡೆದು ಗಾಯಾಳುಗಳಿಗೆ ಚಿಕಿತ್ಸೆ ವೆಚ್ಚ ಭರಿಸುವಂತೆ ಗುತ್ತಿಗೆದಾರನಿಗೆ ಸ್ಥಳದಲ್ಲಿಯೇ ಸೂಚಿಸಿದರು . ಗುತ್ತಿಗೆದಾರನ ನಿರ್ಲಕ್ಷದಿಂದ ಅನಾಹುತ ನಡೆದಿದೆ. ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
Pavagada: ಟ್ರ್ಯಾಕ್ಟರ್ ಗೆ ಕ್ರೇನ್ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವು
Pavagada: ರಸ್ತೆ ಅಪಘಾತದಲ್ಲಿ ಮಂಡ್ಯ ಮೂಲದ ಬೊಲೆರೋ ಚಾಲಕ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.