ಕೊರಟಗೆರೆ: ಅನಧಿಕೃತ ನಾಡ ಬಂದೂಕು ಹೊಂದಿದ್ದ ಇಬ್ಬರ ಬಂಧನ
Team Udayavani, Aug 4, 2022, 7:16 PM IST
ಕೊರಟಗೆರೆ: ಲೈಸೆನ್ಸ್ ಇಲ್ಲದೆ ನಾಡ ಬಂದೂಕು ಹೊಂದಿದ್ದ ಇಬ್ಬರನ್ನು ಕೊರಟಗೆರೆ ಪೋಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಬೆಂಡೋಣೆ ಗ್ರಾಮದ ಮಂಜೇಶ್ ಬಿ.ಎಸ್(22) ಮತ್ತು ನರಸಿಂಹಮೂರ್ತಿ(40) ಎನ್ನುವವರಾಗಿದ್ದಾರೆ. ಬಂಧಿತರಿಂದ ಎರಡು ನಾಡ ಬಂದೂಕು ಮತ್ತು 15 ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಡೋಣೆ ಗ್ರಾಮದ ಮಂಜೇಶ್ ಮನೆಯಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮ ಬಂದೂಕು ಮತ್ತು ಸಿಡಿ ಮದ್ದುಗಳನ್ನು ಹೊಂದಿರುವ ಬಗ್ಗೆ ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆ ನಡೆಸಲಾಗಿದೆ.
ಸಿಪಿಐ ಸಿದ್ದರಾಮೇಶ್ವರ ಪಿಎಸ್ಐ ನಾಗರಾಜು.ಬಿ ಮತ್ತು ಸಿಬ್ಬಂದಿಗಳಾದ ಧರ್ಮ ಪಾಲನಾಯಕ್, ಮೋಹನ್, ನಜರುಲ್ಲಾ, ದಯಾನಂದ್, ಗಂಗಾಧರಪ್ಪ, ನರಸಿಂಹಮುರ್ತಿ, ಸೈಯದ್, ದೊಡ್ಡಲಿಂಗಯ್ಯ ದಾಳಿನಡೆಸಿ ಆರೋಪಿಗಳನ್ನು ಬಂಧಿಸಿದ್ದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinner Meeting: ಸಭೆ ಮಾಡಬೇಡಿ ಎನ್ನಲು ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ?: ಸಚಿವ
Tumakuru: ಬಾಲ ಹಿಡಿದು ಚಿರತೆ ಸೆರೆ ಹಿಡಿದ ಯುವಕ; ಅರಣ್ಯ ಸಿಬ್ಬಂದಿ ಶಾಕ್!
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Koratagere; ಲಾರಿ- ಕಾರಿನ ನಡುವೆ ಭೀಕರ ಅಪಘಾ*ತ: ಯುವಕರಿಬ್ಬರ ಸಾ*ವು
ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ವಾಹನ ಪಲ್ಟಿಯಾದ ಪ್ರಕರಣ: ಇಬ್ಬರು ಶಿಕ್ಷಕರು ಅಮಾನತು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.