ಪತ್ರಿಕಾ ಸಂಘದ ಅಧ್ಯಕ್ಷರಾಗಿ ಕೆ.ಆರ್.ರಂಗನಾಥ್ ಅವಿರೋಧ ಆಯ್ಕೆ
Team Udayavani, Jul 19, 2022, 3:25 PM IST
ಕುಣಿಗಲ್: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕುಣಿಗಲ್ ತಾಲೂಕು ಘಟಕಕ್ಕೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಕೆ.ಆರ್.ರಂಗನಾಥ್ ಅವಿರೋಧ ಆಯ್ಕೆಯಾಗಿದ್ದಾರೆ.
ಮಂಗಳವಾರ ಪಟ್ಟಣದ ಕನ್ನಡ ಭವನದಲ್ಲಿ ಜಿಲ್ಲಾ ಸಂಘದ ಅಧ್ಯಕ್ಷ ಜಿ.ನಿ.ಪುರುಷೋತ್ತಮ್ ಅವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಕೆ.ಆರ್.ರಂಗನಾಥ್, ಉಪಾಧ್ಯಕ್ಷರಾಗಿ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿಯಾಗಿ ಮಹದೇವಸ್ವಾಮಿ, ಕಾರ್ಯದರ್ಶಿ ಶಂಕರ್‌ನಾಗ್, ಖಜಾಂಚಿಯಾಗಿ ದಲಿತ್ ನಾರಾಯಣ್, ಹಾಗೂ ನಿರ್ದೇಶಕರಾಗಿ ಕೆ.ಎನ್.ಲೋಕೇಶ್, ರಾಮಚಂದ್ರಯ್ಯ, ಕೆ.ಎ.ರವೀಂದ್ರಕುಮಾರ್, ಎಂ.ಡಿ.ಮೋಹನ್, ಶಂಕರ್, ರೇಣುಕಾ ಪ್ರಸಾದ್, ಹೆಚ್.ಕೆ.ನಾಗೇಂದ್ರ, ಎನ್.ಗೋಪಾಲ್, ಹೆಚ್.ಎಂ ಅಶೋಕ್, ಕೆ.ಎಸ್.ಕೃಷ್ಣ ಅವರು ಅವಿರೋಧವಾಗಿ ಆಯ್ಕೆಯಾದರು,
ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಮಾತನಾಡಿ ಕುಣಿಗಲ್ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರುಗಳು ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಎಲ್ಲಾ ಪತ್ರಕರ್ತರಿಗೆ ಪುರಸಭೆಯಿಂದ ಆರೋಗ್ಯ, ಅಪಘಾತ ವಿಮೆ, ಜಿಲ್ಲಾ ಮಟ್ಟದ ಕಾರ್ಯಗಾರ, ಪತ್ರಿಕಾ ದಿನಾಚರಣೆ ಹಾಗೂ ಮೃತ ಪತ್ರಕರ್ತ ಎ.ಫಯಾಜ್‌ಉಲ್ಲಾ ಅವರ ಕುಟುಂಬಕ್ಕೆ 1.80 ಲಕ್ಷ ರೂ ನೀಡುವ ಮೂಲಕ ಉತ್ತಮ ಕೆಲಸ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಯಾವುದೇ ಚುನಾವಣೆ ಇಲ್ಲದೆ ಎಲ್ಲಾ ಸದಸ್ಯರು ಒಗ್ಗೂಡಿ ಪದಾಧಿಕಾರಿಗಳು ಹಾಗೂ ನಿರ್ದೇಶಕರನ್ನಾಗಿ ಆಯ್ಕೆ ಮಾಡಿಕೊಂಡಿರುವುದು ಶ್ಲಾಘನೀಯ ಎಂದರು. ಮುಂದಿನ ದಿನದಲ್ಲಿ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕಾರ್ಯಕ್ರಮಗಳನ್ನು ತಾಲೂಕು ಪತ್ರಿಕಾ ಸಂಘದ ಸಹಕಾರದೊಂದಿಗೆ ನೆಡೆಸಲಾಗುವುದೆಂದು ಹೇಳಿದರು.
ಚುನಾವಣೆ ಪ್ರಕ್ರಿಯೆಯಲ್ಲಿ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಸಿದ್ದಲಿಂಗಸ್ವಾಮಿ, ಜಿಲ್ಲಾ ಪತ್ರಿಕಾ ಸಂಘದ ಪ್ರಧಾನ ಟಿ.ಇ.ರಘುರಾಮ್, ಉಪಾಧ್ಯಕ್ಷ ಚುನಾವಣಾಧಿಕಾರಿ ತಿಪಟೂರು ಕೃಷ್ಣ, ಕಾರ್ಯದರ್ಶಿ ಸತೀಶ್(ಹಾರೋಗೆರೆ), ನಿರ್ದೇಶಕರಾದ ಯಶಸ್.ಕೆ.ಪದ್ಮನಾಭ, ನಂದೀಶ್ ಪಾಲ್ಗೊಂಡಿದರು, ಹಿರಿಯ ಪತ್ರಕರ್ತರಾದ ಟಿ.ಹೆಚ್.ಗುರುಚರಣ್‌ಸಿಂಗ್, ವೈ.ಜಿ.ವೆಂಕಟೇಶಯ್ಯ, ಟಿ.ಹೆಚ್.ಆನಂದ್‌ಸಿಂಗ್, ಕಸಪಾ ಅಧ್ಯಕ್ಷ ಕಪನಿಪಾಳ್ಯ ರಮೇಶ್, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಎಲ್.ಕುಮಾರ್‌ಗೌಡ, ಮುಖಂಡ ಸಿದ್ದಗಂಗಯ್ಯ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಎಸ್‌ಎಸ್‌ಎಲ್‌ಸಿ ಫೇಲ್ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ
Fraud: ಡ್ರಗ್ಸ್ ಕೇಸ್ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.