Kunigal; ತುಂಡಾಗಿ ಬಿದ್ದ 11 ಕೆ.ವಿ ವಿದ್ಯುತ್ ತಂತಿ: ತಪ್ಪಿದ ಭಾರಿ ಅನಾಹುತ
ಭಾರಿ ಶಬ್ದ... ನಿಟ್ಟುಸಿರು ಬಿಟ್ಟ ಜನ
Team Udayavani, Jan 31, 2024, 5:58 PM IST
ಕುಣಿಗಲ್ : ಹಳೇ ರಾಷ್ಟ್ರೀಯ ಹೆದ್ದಾರಿ 48 ರ ಬೆಂಗಳೂರು, ಮಂಗಳೂರು ರಸ್ತೆಯ ಹಾದು ಹೋಗಿರುವ 11 ಕೆ.ವಿ ವಿದ್ಯುತ್ ಲೈನ್ ತುಂಡಾಗಿ ಬಿದ್ದ ಘಟನೆ ಬುಧವಾರ ಪಟ್ಟಣದ ಬೆಸ್ಕಾಂ ಕಚೇರಿ ಮುಂದೆ ಸಂಭವಿಸಿದ್ದು, ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ.
ಬೆಸ್ಕಾಂ ವಿತರಣಾ ಕೇಂದ್ರದಿಂದ ಎಫ್ -2 ತಾಲೂಕಿನ ಬಿಳಿದೇವಾಲಯ, ಬೋರಲಿಂಗನಪಾಳ್ಯ, ಕೆಂಕೆರೆ, ದೊಂಬರಹಟ್ಟಿ, ಲಕ್ಷ್ಮಿದೇವಿ ಹಂತ, ಚೊಟ್ಟನಹಳ್ಳಿ ಸೇರಿದಂತೆ ಮೊದಲಾದ ಗ್ರಾಮಗಳಿಗೆ 11 ಕೆ.ವಿ ವಿದ್ಯುತ್ ತಂತಿ ಮೂಲಕ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ, ಆದರೆ ಬುಧವಾರ ಮಧ್ಯಾಹ್ನ ಲೈನ್‌ನಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಓವರ್ ಲೋಡ್ ಆಗಿ, ಉಷ್ಣಾಂಶ ಹೆಚ್ಚಾಗಿ ವಿದ್ಯುತ್ ತಂತಿ ತುಂಡಾಗಿ ಪೊಲೀಸ್ ಠಾಣೆ ಮತ್ತು ಬೆಸ್ಕಾಂ ಕಚೇರಿಯ ಹೆದ್ದಾರಿಗೆ ಬಿದ್ದಿದೆ.
ಭಾರಿ ಶಬ್ದ
ವಿದ್ಯುತ್ ತಂತಿ ತುಂಡಾಗಿ ಬೀಳುತ್ತಿದಂತೆ ಭಾರಿ ಶಬ್ದ ಕೇಳಿಸಿದೆ, ಪೊಲೀಸ್ ಠಾಣೆಯಲ್ಲಿ ಇದ್ದ ಪೊಲೀಸರು, ತಾಲೂಕು ಕಚೇರಿಯ ಸಿಬಂದಿಗಳು ಬೆಸ್ಕಾಂ ಕಚೇರಿಯ ನೌಕರರು ಅಕ್ಕ ಪಕ್ಕದ ಅಂಗಡಿ ಮುಂಗಟ್ಟಿನ ವರ್ತಕರು ಭಯಗೊಂಡು ಅಂಗಡಿ ಮತ್ತು ಕಚೇರಿಗಳಿಂದ ಹೊರಗೆ ಓಡಿ ಬಂದರು, ಬಳಿಕ ರಸ್ತೆಯಲ್ಲಿ ನೋಡಲಾಗಿ 11 ಕೆ.ವಿ ವಿದ್ಯುತ್ ತಂತಿ ಕಟ್ಟಾಗಿ ಬಿದ್ದತು ಆದರೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿರಲಿಲ್ಲ, ವಿಚಾರ ತಿಳಿದ ಬೆಸ್ಕಾಂ ಅಧಿಕಾರಿಗಳು ತತ್ ಕ್ಷಣ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದರು.
ತಪ್ಪಿದ ಅನಾಹುತ
ಸದಾ ವಾಹನ ಹಾಗೂ ಜನ ನಿಬಿಡ ಪ್ರದೇಶವಾದ ಪಟ್ಟಣದ ಹಳೇಯ ರಾಷ್ಟ್ರೀಯ ಹೆದ್ದಾರಿ ೪೮ ರ ಬೆಸ್ಕಾಂ ಮತ್ತು ಪೊಲೀಸ್ ಠಾಣಾ ಸಮೀಪ ನಿತ್ಯ ನೂರಾರು ವಾಹನಗಳು ಹಾಗೂ ನಾಗರಿಕರು ಸಂಚರಿಸುತ್ತಿರುವುದು ಸಾಮಾನ್ಯ ಆದರೆ ವಿದ್ಯುತ್ ತಂತಿ ತುಂಡಾಗಿ ಬಿದ್ದ ವೇಳೆ ಈ ಮಾರ್ಗದಲ್ಲಿ ಬಸ್ ಆಗಲಿ ಕಾರಾಗಲಿ ಮತ್ತೆ ಯಾವುದೇ ವಾಹನಗಳು ಬರಲಿಲ್ಲ, ಈ ವೇಳೆ ಏನಾದರೂ ಬಸ್ ಬಂದಿದ್ದರೇ ವಿದ್ಯುತ್ ತಂತಿ ತಗುಲಿ ಭಾರಿ ಅನಾಹುತ ಸಂಭವಿಸುತ್ತಿತ್ತು.
ವಿದ್ಯುತ್ ತಂತಿ ತುಂಡಾಗಿ ಬೀಳುತ್ತಿದಂತೆ ಪೊಲೀಸರು ತತ್ ಕ್ಷಣ ಕಾರ್ಯ ಪ್ರವೃತ್ತರಾಗಿ ರಸ್ತೆಗೆ ಬ್ಯಾರಿಕೇಡ್ ಹಾಕಿ ವಾಹನಗಳನ್ನು ಮತ್ತು ಜನರ ಸಂಚಾರವನ್ನು ನಿರ್ಬಂಧಿಸಿದರು, ತುಂಡಾಗಿ ಬಿದ್ದ ತಂತಿಯನ್ನು ತೆರವುಗೊಳಿಸಿದ ಬಳಿಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.